ಆಫ್ರಿಕಾದ ಕಾಂಗೋ ಸೇರಿದಂತೆ 13 ದೇಶಗಳಲ್ಲಿ ಮಂಕಿಪಾಕ್ಸ್ ಕಾಯಿಲೆ ವೇಗವಾಗಿ ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ.
ಮಂಕಿಪಾಕ್ಸ್‌ನಿಂದಾಗಿ 500ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ವೈರಸ್ ಹರಡುವುದನ್ನು ತಡೆಯಲು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಕರೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಮಂಕಿಪಾಕ್ಸ್ ಹೆಚ್ಚಳದ ಕುರಿತು ಮಾಹಿತಿ ನೀಡಿದರು.
The emergence of a new clade of #mpox, its rapid spread in eastern #DRC, and the reporting of cases in several neighbouring countries are very worrying.
— Tedros Adhanom Ghebreyesus (@DrTedros) August 14, 2024
On top of outbreaks of other mpox clades in DRC and other countries in Africa, it’s clear that a coordinated international… pic.twitter.com/u2DSV6fitj
ಇದನ್ನು ಓದಿದ್ದೀರಾ? ವಿಶ್ವಸಂಸ್ಥೆ ನಮಗೆ ಪಾಠ ಹೇಳುವ ಅಗತ್ಯವಿಲ್ಲ: ವಿದೇಶಾಂಗ ಸಚಿವ ಜೈಶಂಕರ್
“ಕಾಂಗೋ ಮತ್ತು ಆಫ್ರಿಕಾದ ಇತರ ದೇಶಗಳಲ್ಲಿ ಮಂಕಿಪಾಕ್ಸ್‌ನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ತುರ್ತು ಸಭೆಯನ್ನು ಕರೆದು ಈಗ ಅಂತಾರಾಷ್ಟ್ರೀಯ ಕಾಳಜಿಯ ದೃಷ್ಟಿಯಿಂದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸುವ ಅನಿವಾರ್ಯತೆ ಉಂಟಾಗಿದೆ ಎಂದು ಸಮಿತಿ ನನಗೆ ಸಲಹೆ ನೀಡಿದೆ. ಆ ಸಲಹೆ ಸ್ವೀಕರಿಸಿದ್ದೇನೆ” ಎಂದು ತಿಳಿಸಿದರು.
ಏನಿದು ಮಂಕಿಪಾಕ್ಸ್, ಲಕ್ಷಣಗಳೇನು?
ಮಂಕಿಪಾಕ್ಸ್ ಕೂಡಾ ಸಿಡುಬಿನ ಒಂದು ಪ್ರಭೇಡವಾಗಿದೆ. ಸಾಮಾನ್ಯ ಸಿಡುಬುಗಳಲ್ಲಿ ಬರುವಂತೆ ಇದರಲ್ಲಿಯೂ ಜ್ವರ, ತಲೆನೋವು, ಮೈ-ಕೈ ನೋವು, ಬೆನ್ನು ನೋವು, ಸುಸ್ತು ಕಾಣಿಸಿಕೊಳ್ಳುತ್ತದೆ. ಚರ್ಮ ಕೆಂಪಾಗಿ ಬೊಕ್ಕೆಗಳು ಶರೀರದ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಎರಡರಿಂದ ನಾಲ್ಕು ವಾರಗಳಲ್ಲಿ ಚಿಕಿತ್ಸೆ ಇಲ್ಲದಿದ್ದರೂ ಕಡಿಮೆಯಾಗುತ್ತದೆ. ಆದರೆ ಕ್ಯಾನ್ಸರ್, ಮಧುಮೇಹ ಇರುವವರು, ನವಜಾತ ಶಿಶುಗಳಿಗೆ ಮಂಕಿಪಾಕ್ಸ್ ಪ್ರಾಣಕ್ಕೆ ಕುತ್ತಾಗಬಹುದು.