ಅದಾನಿ ವಹಿವಾಟಿನ ವರದಿ ಬರೆಯುತ್ತಿದ್ದ ಪತ್ರಕರ್ತ ರವಿ ಮನೆ ಮೇಲೆ ಪೊಲೀಸ್ ದಾಳಿ; ಫೋನ್, ಲ್ಯಾಪ್‌ಟಾಪ್ ವಶ

Date:

ಅದಾನಿ ಸಮೂಹದ ವಹಿವಾಟಿನ ಕುರಿತು ವರದಿ ಬರೆಯುತ್ತಿದ್ದ ಸ್ವತಂತ್ರ ಪತ್ರಕರ್ತ ರವಿ ನಾಯರ್ ಅವರ ದೆಹಲಿ ನಿವಾಸದ ಮೇಲೆ ಗುಜರಾತ್ ಪೊಲೀಸರು ದಾಳಿ ನಡೆಸಿದ್ದು, ಮೂರು ಲ್ಯಾಪ್‌ಟಾಪ್‌, ಎರಡು ಮೊಬೈಲ್‌ ಫೋನ್‌ಗಳು ಹಾಗೂ ಒಂದು ಐಪ್ಯಾಡ್‌ ಅನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸಾಧನಗಳಲ್ಲಿ ನಾಯರ್ ಅವರ ಪುತ್ರ ಹಾಗೂ ಸಹೋದ್ಯೋಗಿಗೆ ಸೇರಿದ ಸಾಧನಗಳೂ ಸೇರಿವೆ ಎಂದು ತಿಳಿದುಬಂದಿದೆ.

- Advertisement -

ಅದಾನಿ ಸಮೂಹಕ್ಕೆ ಸಂಬಂಧಿಸಿದ ವರದಿ ಹಾಗೂ ‘ಎಕ್ಸ್‌’ನಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಅಹಮದಾಬಾದ್‌ನಲ್ಲಿ ನಾಯರ್ ವಿರುದ್ಧ ಮಾನಹಾನಿ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಅಹಮದಾಬಾದ್‌ ಡಿಟೆಕ್ಷನ್‌ ಆಫ್‌ ಕ್ರೈಂ ಬ್ರಾಂಚ್‌ (DCB) ಮೇ 29ರಂದು ನಾಯರ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ‘ದಿ ವಾಷಿಂಗ್ಟನ್ ಪೋಸ್ಟ್‌’ನಲ್ಲಿ 2025ರ ಅಕ್ಟೋಬರ್ 24ರಂದು ಪ್ರಕಟವಾದ ವರದಿಯನ್ನು ಆಧರಿಸಿ ಪ್ರಕರಣ ದಾಖಲಾಗಿತ್ತು. ಎಲ್‌ಐಸಿ ಸಂಸ್ಥೆಗೆ ಅದಾನಿ ಸಮೂಹದ ಕಂಪನಿಗಳಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವಂತೆ ಸೂಚಿಸಲಾಗಿತ್ತು ಎಂದು ಆ ವರದಿಯಲ್ಲಿ ಆರೋಪಿಸಲಾಗಿತ್ತು.

ಅದಾನಿ ಪೋರ್ಟ್ಸ್ ಆ್ಯಂಡ್‌ ಸ್ಪೆಷಲ್ ಎಕನಾಮಿಕ್ ಝೋನ್‌ಸ್ ಲಿಮಿಟೆಡ್‌ (APSEZ) ಪರವಾಗಿ ಕಾರ್ಯನಿರ್ವಹಿಸುವ ದುಷ್ಯಂತ್ ವಿಜಯ್‌ಭಾಯ್ ಜೋಶಿ ದೂರು ಸಲ್ಲಿಸಿದ್ದರು. ಪ್ರಕರಣ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸುವಂತೆ ನಾಯರ್ ಸಲ್ಲಿಸಿದ್ದ ಅರ್ಜಿಯನ್ನು ಆಗಸ್ಟ್‌ 11ರಂದು ಗುಜರಾತ್ ಹೈಕೋರ್ಟ್ ತಿರಸ್ಕರಿಸಿತ್ತು.

ಈ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಹೊರಡಿಸಿದ್ದ ಶೋಧನಾ ವಾರಂಟ್‌ ಆಧರಿಸಿ ದೆಹಲಿಯಲ್ಲಿರುವ ನಾಯರ್‌ ಅವರ ನಿವಾಸದಲ್ಲಿ ಶೋಧ ನಡೆಸಲಾಗಿದೆ ಎಂದು ಗುಜರಾತ್ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಜರಾತ್ ಪೊಲೀಸರ ತಂಡಕ್ಕೆ ದೆಹಲಿ ಪೊಲೀಸರೂ ಸಹಕರಿಸಿದ್ದರು. ಶೋಧ ನಡೆದ ಸಂದರ್ಭದಲ್ಲಿ ನಾಯರ್‌ ಮನೆಯಲ್ಲಿ ಇರಲಿಲ್ಲ.

ಸೋಮವಾರ ಮಧ್ಯಾಹ್ನ 2.40ರ ಸುಮಾರಿಗೆ ಪೊಲೀಸರು ಮನೆಗೆ ಬಂದಾಗ ತಾವು ನಾಯರ್‌ ಅವರ ಪುತ್ರನೊಂದಿಗೆ ಅಲ್ಲಿದ್ದೆವು ಎಂದು ಅವರ ಸಹೋದ್ಯೋಗಿ ತಿಳಿಸಿದ್ದಾರೆ. ಪೊಲೀಸರು ಶೋಧನಾ ವಾರಂಟ್‌ ತೋರಿಸಿ ಮೂರು ಲ್ಯಾಪ್‌ಟಾಪ್‌, ಬೀರುವಿನಲ್ಲಿದ್ದ ಎರಡು ಹಳೆಯ ಮೊಬೈಲ್‌ಗಳು ಹಾಗೂ ಒಂದು ಐಪ್ಯಾಡ್‌ ತೆಗೆದುಕೊಂಡು ಹೋದರು ಎಂದು ಅವರು ಹೇಳಿದ್ದಾರೆ.

ವಶಪಡಿಸಿಕೊಂಡ ಲ್ಯಾಪ್‌ಟಾಪ್‌ಗಳ ಪೈಕಿ ಒಂದು ತಮ್ಮದು ಹಾಗೂ ಮತ್ತೊಂದು ನಾಯರ್‌ ಅವರ ಪುತ್ರನಿಗೆ ಸೇರಿದ್ದು ಎಂದು ಅವರು ತಿಳಿಸಿದ್ದಾರೆ. ನಾಯರ್‌ ಅವರ ಪುತ್ರ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಶೋಧದ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ದಾಖಲಿಸಿಕೊಂಡಿದ್ದು, ಸಂಜೆ 6.40ರ ಸುಮಾರಿಗೆ ತೆರಳುವ ಮುನ್ನ ಕೆಲವು ದಾಖಲೆಗಳಿಗೆ ಸಹಿ ಹಾಕುವಂತೆ ಸೂಚಿಸಿದರು ಎಂದು ಅವರು ಹೇಳಿದ್ದಾರೆ.

‘ರವಿ ನಾಯರ್ ತನಿಖೆಗೆ ಸಹಕರಿಸುತ್ತಿದ್ದಾರೆ. ಆದರೆ ಅವರ ಪುತ್ರ ಅಥವಾ ನಾನು ಈ ಪ್ರಕರಣದಲ್ಲಿ ಆರೋಪಿಗಳಲ್ಲ. ಹೀಗಿರುವಾಗ ನಮ್ಮ ಸಾಧನಗಳನ್ನು ಏಕೆ ವಶಕ್ಕೆ ಪಡೆದಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ರವಿ ಅವರ ಸಹೋದ್ಯೋಗಿ ಪ್ರಶ್ನಿಸಿದ್ದಾರೆ.

ನಾಯರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್‌ 318(4), 336(2), 336(4) ಮತ್ತು 340(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇವು ವಂಚನೆ, ಮೌಲ್ಯಯುತ ದಾಖಲೆಗಳನ್ನು ಬದಲಾಯಿಸುವುದು ಅಥವಾ ನಾಶಪಡಿಸುವುದು, ಹಾನಿ ಉಂಟುಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸುವುದು ಹಾಗೂ ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಅಸಲಿಯೆಂದು ಬಳಕೆ ಮಾಡುವಂತಹ ಆರೋಪಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳಾಗಿವೆ.

ನಾಯರ್‌ ‘ಎಕ್ಸ್‌’ನಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ಅದಾನಿ ಸಮೂಹದಲ್ಲಿ 3.9 ಬಿಲಿಯನ್ ಡಾಲರ್‌ ಹೂಡಿಕೆ ಮಾಡಲು ನಿರ್ಧರಿಸಿದ್ದರು ಎಂದು ಹೇಳಿಕೊಂಡಿದ್ದರು ಎಂಬ ಆರೋಪವೂ ಎಫ್‌ಐಆರ್‌ನಲ್ಲಿದೆ.

ಇದನ್ನೂ ಓದಿ: ಮೋದಿ ಟೆಲಿಪ್ರಾಂಪ್ಟರ್‌ ಇಲ್ಲದೆ ಸಂಪೂರ್ಣ ʼವಂದೇ ಮಾತರಂʼ ಹಾಡಿದರೆ ಸನ್ಮಾನಿಸುತ್ತೇನೆ: ಸಂಜಯ್ ಸಿಂಗ್

ವರದಿಯಲ್ಲಿನ ಆರೋಪಗಳಿಗೆ ಎಲ್‌ಐಸಿ ಅಥವಾ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಹೊರಡಿಸಲಾಗಿದೆ ಎನ್ನಲಾದ ದಾಖಲೆಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿತ್ತು. ಆದರೆ ಅಂತಹ ಯಾವುದೇ ದಾಖಲೆಗಳನ್ನು ತಾವು ನೀಡಿಲ್ಲ ಹಾಗೂ ಅದಾನಿ ಸಮೂಹದ ಯಾವುದೇ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಎಲ್‌ಐಸಿ ನಿರಾಕರಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಮೌಖಿಕ ಆದೇಶದಲ್ಲಿ ಗುಜರಾತ್ ಹೈಕೋರ್ಟ್, ಈ ದಾಖಲೆಗಳು ನಿಜವಾಗಿಯೂ ಅಸ್ತಿತ್ವದಲ್ಲಿದ್ದವೆಯೇ ಎಂಬುದರ ಬಗ್ಗೆ ಅನುಮಾನವಿದೆ ಮತ್ತು ಮೇಲ್ನೋಟಕ್ಕೆ ಅವು ನಕಲಿ ದಾಖಲೆಗಳಂತೆ ಕಂಡುಬರುತ್ತವೆ ಎಂದು ಹೇಳಿದೆ. ಆದರೆ ಈ ದಾಖಲೆಗಳ ಸತ್ಯಾಸತ್ಯತೆಯನ್ನು ತನಿಖಾ ಸಂಸ್ಥೆಯೇ ಪತ್ತೆಹಚ್ಚಬೇಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸ್ವತಂತ್ರ ತನಿಖಾ ಪತ್ರಕರ್ತ ರವಿ ನಾಯರ್ ಅವರು OCCRP (Organised Crime and Corruption Reporting Project) ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳು, ರಾಜಕೀಯ, ಆಡಳಿತ, ಭ್ರಷ್ಟಾಚಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಹೊಣೆಗಾರಿಕೆಗಳ ಕುರಿತು ವರದಿ ಮಾಡುತ್ತಾರೆ. ಅದಾನಿ ಸಮೂಹದ ವ್ಯವಹಾರಗಳು ಮತ್ತು ಸರ್ಕಾರದೊಂದಿಗೆ ಅದರ ಸಂಬಂಧಗಳ ಕುರಿತು ನಿರಂತರವಾಗಿ ಹಲವು ವರದಿ ಮಾಡಿದ್ದಾರೆ. ಅದಾನಿ ಸಮೂಹಕ್ಕೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ 2026ರ ಫೆಬ್ರವರಿಯಲ್ಲಿ ಗುಜರಾತ್‌ನ ನ್ಯಾಯಾಲಯ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ The Washington Post ವರದಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಗುಜರಾತ್ ಪೊಲೀಸರು ಅವರ ನಿವಾಸಗಳಲ್ಲಿ ಶೋಧ ನಡೆಸಿ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...