ಪುದುಚೇರಿ ಚುನಾವಣೆ: BJP ಪ್ರಣಾಳಿಕೆ ಬಿಡುಗಡೆ; ವರ್ಷಕ್ಕೆ 2.5 ಲಕ್ಷ ಉದ್ಯೋಗ ಸೃಷ್ಠಿ ಭರವಸೆ

Date:

ಏಪ್ರಿಲ್ 9ರಂದು ನಡೆಯಲಿರುವ ಪುದುಚೇರಿ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ನಾವು ಬಡವರ ಅಭಿವೃದ್ಧಿ ಮತ್ತು ಉದ್ಧಾರಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಹೇಳಿದೆ.

- Advertisement -

ಪುದುಚೇರಿಯಲ್ಲಿ ಕೇಂದ್ರ ಸಚಿವ, ಪುದುಚೇರಿ ಬಿಜೆಪಿ ಚುನಾವಣಾ ಉಸ್ತುವಾರಿ ಮನ್ಸುಖ್ ಮಾಂಡವೀಯ ಮತ್ತು ಪುದುಚೇರಿ ಬಿಜೆಪಿ ರಾಜ್ಯಾಧ್ಯಕ್ಷ ವಿ.ಪಿ ರಾಮಲಿಂಗಂ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಮಾಂಡವೀಯ, “ಕಳೆದ ಐದು ವರ್ಷಗಳಿಂದ ಪುದುಚೇರಿಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಮುಂದಿನ ಚುನಾವಣೆಯಲ್ಲೂ ಎನ್‌ಡಿಎ ಮತ್ತೆ ಸರ್ಕಾರ ರಚಿಸಲಿದೆ. ಇಲ್ಲಿ ಮತ್ತೊಮ್ಮೆ ‘ಡಬಲ್ ಇಂಜಿನ್’ ಸರ್ಕಾರ ರಚನೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪ್ರಣಾಳಿಕೆಯ ಪ್ರಮುಖ ಅಂಶಗಳು;

  • ಮಹಿಳೆಯರಿಗೆ ವಾರ್ಷಿಕ ಉಚಿತ ಎರಡು LPG ಸಿಲಿಂಡರ್‌ಗಳು
  • ವಿದ್ಯಾರ್ಥಿನಿಯರಿಗೆ ಉಚಿತ ಇ-ಸ್ಕೂಟರ್‌ಗಳು.
  • ವರ್ಷಕ್ಕೆ 2.5 ಲಕ್ಷ ಉದ್ಯೋಗಗಳ ಸೃಷ್ಠಿ
  • ರಸ್ತೆಗಳು, ವಿದ್ಯುತ್, ನೀರು ಸರಬರಾಜು, ಬಂದರು ಮತ್ತು ಪರಿಸರ ಸುಧಾರಣೆಯಂತಹ ಮೂಲಸೌಕರ್ಯ ಅಭಿವೃದ್ಧಿ.
  • ಕೇಂದ್ರ ಸರ್ಕಾರದ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನ.
  • ಬಡವರ ಉನ್ನತಿ ಮತ್ತು ಕಲ್ಯಾಣಕ್ಕೆ ವಿಶೇಷ ಒತ್ತು.

ಪ್ರಣಾಳಿಕೆ ಬಿಡುಗಡೆಗೂ ಮುನ್ನ ಎಕ್ಸ್‌ನಲ್ಇ ಟ್ವೀಟ್‌ ಮಾಡಿದ್ದ ಮೋದಿ, “ಎನ್‌ಡಿಎ ಮೈತ್ರಿಕೂಟವು ಪುದುಚೇರಿಯನ್ನು ಅತ್ಯುತ್ತಮವಾಗಿಸಲು ಶ್ರಮಿಸುತ್ತಿದೆ. ಆದರೆ, ಪ್ರತಿಪಕ್ಷಗಳಿಗೆ ಇಲ್ಲಿನ ಅಭಿವೃದ್ಧಿಯ ಬಗ್ಗೆ ಯಾವುದೇ ಸ್ಪಷ್ಟ ದೃಷ್ಟಿಕೋನವಿಲ್ಲ. ಅವರು ಪುದುಚೇರಿಯನ್ನು ಕೇವಲ ಒಂದು ‘ಎಟಿಎಂ’ ಆಗಿ ಬಳಸಿಕೊಳ್ಳಲು ಬಯಸುತ್ತಿದ್ದಾರೆ. ಜನರ ಇಚ್ಛೆಯಂತೆ ಆಡಳಿತ ನಡೆಸುವ ಬದಲು ದೆಹಲಿಯ ಹೈಕಮಾಂಡ್ ಮೂಲಕ ಆಡಳಿತ ನಡೆಸಲು ಅವರು ಮುಂದಾಗಿದ್ದಾರೆ” ಎಂದು ಆರೋಪಿಸಿದ್ದರು.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್‌ನ 50 ವರ್ಷಗಳ ವನವಾಸ!

ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದವನ್ನು ಉಲ್ಲೇಖಿಸಿದ್ದ ಮೋದಿ, “ಪ್ರತಿಪಕ್ಷಗಳ ಅಜೆಂಡಾ ಪುದುಚೇರಿಯನ್ನು ದುರ್ಬಲ ಮಾಡುವುದಾಗಿದೆ. ಅವರ ಪ್ರಕಾರ ‘WEAK’ ಎಂದರೆ: W – Worst Governance (ಅತ್ಯಂತ ಕಳಪೆ ಆಡಳಿತ), E – End of Development (ಅಭಿವೃದ್ಧಿಯ ಅಂತ್ಯ), A – Against People (ಜನವಿರೋಧಿ) ಹಾಗೂ K – Kill Economy (ಆರ್ಥಿಕತೆಯ ನಾಶ)” ಎಂದಿದ್ದಾರೆ.

2021ರ ಚುನಾವಣೆಯಲ್ಲಿ ಒಟ್ಟು 30 ಸ್ಥಾನಗಳ ಪೈಕಿ ಎಐಎನ್‌ಆರ್‌ಸಿ 10 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಡಿಎಂಕೆ, ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 6 ಸ್ಥಾನಗಳನ್ನು ಗೆದ್ದಿದ್ದವು. ಎಐಎನ್‌ಆರ್‌ಸಿ ಮತ್ತು ಬಿಜೆಪಿ ಮೈತ್ರಿಕೂಟವು ಸರ್ಕಾರ ರಚಿಸಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...