ಪಂಜಾಬ್‌ ಚುನಾವಣೆ | ಸಿದ್ಧತೆಯಲ್ಲಿ ಕಾಂಗ್ರೆಸ್‌; 66 ನಾಯಕರಿಗೆ ದೆಹಲಿಯಲ್ಲಿ ಡ್ರಿಲ್!

Date:

ಪಂಜಾಬ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಈಗಾಗಲೇ ಸಿದ್ಧತೆ ಆರಂಭಿಸಿದೆ. ಪಂಜಾಬ್‌ ಕಾಂಗ್ರೆಸ್‌ ಘಟಕದಲ್ಲಿನ ಆಂತರಿಕ ಬಿಕ್ಕಟ್ಟು, ಬಣ ರಾಜಕಾರಣ ಹಾಗೂ ಬಂಡಾಯದ ಪ್ರವೃತ್ತಿಗೆ ಬ್ರೇಕ್ ಹಾಕಲು ಪಕ್ಷದ ಹೈಕಮಾಂಡ್‌ ಮುಂದಾಗಿದೆ. ಪಕ್ಷವು ತನ್ನ ಪ್ರಮುಖ 66 ನಾಯಕರನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚನೆ ನಡೆಸುತ್ತಿದೆ. ಪಕ್ಷದ ಏಕತೆಯನ್ನು ಮರುಸ್ಥಾಪಿಸುವ ಮತ್ತು ಪಂಜಾಬ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮರಳಿ ಪಡೆಯುವ ಕಸರತ್ತು ನಡೆಸಿದೆ.

- Advertisement -

ಪಂಜಾಬ್ ಕಾಂಗ್ರೆಸ್‌ನಲ್ಲಿ ದೀರ್ಘಕಾಲದಿಂದಲೂ ಆಂತರಿಕ ವಿಭಜನೆಗಳು ಮತ್ತು ನಾಯಕತ್ವದ ಸುತ್ತಲಿನ ಸ್ಪರ್ಧೆಗಳು ಬಿಕ್ಕಟ್ಟಾಗಿ ಮುಂದುವರಿದಿವೆ. 2022ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ ನಂತರವೂ ಈ ಬಿಕ್ಕಟ್ಟು ಮುಂದುವರಿದಿವೆ. ಪ್ರಸ್ತುತ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PPCC) ಅಧ್ಯಕ್ಷರಾಗಿರುವ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ನಡುವಿನ ಬಣ ಸಂಘರ್ಷವು ಹೈಕಮಾಂಡ್‌ಗೆ ತಲೆ ನೋವಾಗಿದೆ. ಜೊತೆಗೆ ಶಾಸಕರ ಸಂಘದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಸುಖಜಿಂದರ್ ಸಿಂಗ್ ರಂಧಾವಾ ಹಾಗೂ ವಿಜಯ್ ಇಂದರ್ ಸಿಂಗ್ಲಾ ಮುಂತಾದ ಹಿರಿಯ ನಾಯಕರ ನಡುವಿನ ಸಂಬಂಧಗಳು ಸಹ ಸಂಕೀರ್ಣವಾಗಿವೆ. ಈ ಆಂತರಿಕ ಕಲಹಗಳು ಚುನಾವಣಾ ಸಿದ್ಧತೆಗಳಿಗೆ ಅಡ್ಡಿಯಾಗುತ್ತಿವೆ ಎಂಬ ಆತಂಕ ಹೈಕಮಾಂಡ್‌ಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಇದೇ ಕಾರಣದಿಂದಾಗಿಯೇ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ ಕಳಪೆ ಪ್ರದರ್ಶನ ನೀಡಿತು ಎಂಬ ವಿಮರ್ಶೆಗಳೂ ಇವೆ. ವಾರಿಂಗ್ ಅವರ ಗಿಡ್ಡರ್‌ಬಾಹಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೇವಲ 2 ವಾರ್ಡ್‌ಗಳಲ್ಲಿ ಮಾತ್ರ ಗೆದ್ದರೆ, ಎಎಪಿ 17 ವಾರ್ಡ್‌ಗಳನ್ನು ಗೆದ್ದುಕೊಂಡಿತು. ಇದಕ್ಕೆ ವ್ಯತಿರಿಕ್ತವಾಗಿ ಚನ್ನಿ ಅವರ ಚಮ್ಕೌರ್ ಸಾಹಿಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿತು. ಈ ಫಲಿತಾಂಶಗಳು ಪಕ್ಷದೊಳಗೆ ತೀವ್ರ ಚರ್ಚೆ ಮತ್ತು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾದವು. ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯಲ್ಲಿ ಈ ವಿಷಯಗಳು ಚರ್ಚೆಗೆ ಬಂದು, ಸಭೆಯಲ್ಲಿ ಅಸಮಾಧಾನ ಭುಗಿಲೆದ್ದಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, 2026ರ ಜೂನ್‌ನಲ್ಲಿ ಪಕ್ಷದ ಹೈಕಮಾಂಡ್ ಇನ್ನಷ್ಟು ತೀವ್ರ ಕ್ರಮಕ್ಕೆ ಇಳಿದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು AICC ಖಜಾಂಚಿ ಅಜಯ್ ಮಾಕನ್ ನೇತೃತ್ವದಲ್ಲಿ ಮೀನಾಕ್ಷಿ ನಟರಾಜನ್ ಮತ್ತು ಭಜನ್ ಲಾಲ್ ಜಟಾವ್ ಅವರನ್ನೊಳಗೊಂಡ ಮೂರು ಸದಸ್ಯರ ಎಐಸಿಸಿ ಸಮಿತಿಯನ್ನು ನೇಮಿಸಿದ್ದಾರೆ. ಈ ಸಮಿತಿಯು ಪಂಜಾಬ್‌ನ ರಾಜಕೀಯ ಪರಿಸ್ಥಿತಿ, ಆಂತರಿಕ ಕಚ್ಚಾಟ ಮತ್ತು 2027 ಚುನಾವಣೆಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸಿದ್ದಪಡಿಸಲಿದೆ.

ಈ ಲೇಖನ ಓದಿದ್ದೀರಾ?: SIR ಪೆಡಂಭೂತ | ಕೇರಳ ಮಾದರಿ ಅನುಸರಿಸಿದರೆ ನಮ್ಮ ಮತಗಳು ಸೇಫ್!

ಈ ನಡುವೆ, ಪಂಜಾಬ್‌ನ ಪಕ್ಷದ 66 ಮುಖ್ಯ ನಾಯಕರನ್ನು — ಸಿಡಬ್ಲ್ಯೂಸಿ ಸದಸ್ಯರು, ಮಾಜಿ ರಾಜ್ಯ ಅಧ್ಯಕ್ಷರು, ಶಾಸಕ ಸಂಘದ ನಾಯಕರು, ಸಂಸದರು, ಶಾಸಕರು, ಮಾಜಿ ಮಂತ್ರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು — ದೆಹಲಿಗೆ ಕರೆಸಲಾಗಿದೆ. ಅವರೊಂದಿಗೆ ಜೂನ್ 16ರಂದು 17ರಂದು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಸಮಿತಿಯು ಪಂಜಾಬ್‌ ನಾಯಕರ ಅಭಿಪ್ರಾಯಗಳನ್ನು ಆಲಿಸುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಯಾವ ವಿಷಯಗಳನ್ನು ಮುಂದಿಡಬೇಕು, ಎಎಪಿ ಸರ್ಕಾರದ ವಿರುದ್ಧ ಯಾವ ಆರೋಪಗಳನ್ನು ಮಾಡಬೇಕು, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಹೇಗೆ ಕಾಪಾಡಬೇಕು ಎಂಬ ವಿಷಯಗಳ ಮೇಲೆ ಗಮನಹರಿಸುತ್ತಿದೆ. ಕೆಲವು ನಾಯಕರು ಚುನಾವಣೆಯನ್ನು ಮುಂಗಡವಾಗಿ ನಡೆಸುವ ಸಾಧ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ನಾಯಕತ್ವದ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆದಿದೆ. ಜೊತೆಗೆ, ಮುಂದಿನ ಚುನಾವಣೆಯಲ್ಲಿ ಜಾಟ್‌ ಸಿಖ್ ನಾಯಕನನ್ನು ಮುಖ್ಯಮಂತ್ರಿ ಮುಖವಾಗಿ ಪ್ರಕ್ಷೇಪಿಸುವ ಕುರಿತೂ ಕೆಲವು ಸಲಹೆಗಳು ಬಂದಿವೆ ಎಂದು ವರದಿಗಳು ಹೇಳುತ್ತಿವೆ.

2022ರ ಪಂಜಾಬ್‌ ಚುನಾವಣೆಗೂ ಮುನ್ನ 2021ರಲ್ಲಿ ಇದೇ ರೀತಿಯ ಸಮಿತಿಯನ್ನು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಚಿಸಲಾಗಿತ್ತು. ಆದರೆ, ಆಗಿನ ಆಂತರಿಕ ಕಲಹಗಳು ಬಗೆಹರಿಯದೇ ಹೋಗಿದ್ದರಿಂದ ಪಕ್ಷ ಸೋಲುಣ್ಣಬೇಕಾಯಿತು. ಈ ಬಾರಿ ಅದೇ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಹೈಕಮಾಂಡ್‌ನ ಗುರಿಯಾಗಿದೆ.

ಸದ್ಯಕ್ಕೆ, ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ಘಟಕವನ್ನು ಮರುಸಂಘಟಿಸುವ ಮತ್ತು ಚುನಾವಣಾ ಯುದ್ಧಕ್ಕೆ ಸಿದ್ಧಪಡಿಸುವ ಗಂಭೀರ ಪ್ರಯತ್ನದಲ್ಲಿದೆ. ಈ ದೆಹಲಿ ಸಮಾಲೋಚನೆಗಳು ಮತ್ತು ಸಮಿತಿ ವರದಿಯು ಪಕ್ಷದ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರದ ವಿರುದ್ಧ ಜನಾಕ್ರೋಶವನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಹಿಂತಿರುಗುವ ಆಕಾಂಕ್ಷೆ ಹೊಂದಿದೆ. ಆದರೆ, ಅದು ಆಂತರಿಕ ಏಕತೆಯ ಮೇಲೆ ಅವಲಂಬಿತವಾಗಿದೆ. ಹೈಕಮಾಂಡ್ ಈಗ ತೆಗೆದುಕೊಳ್ಳುತ್ತಿರುವ ಕ್ರಮಗಳು ಪಕ್ಷವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಸಾಲದ ಹೊರೆ : ಬಾವಿಗೆ ಹಾರಿ ರೈತ ಆತ್ಮಹತ್ಯೆ

ಸಾಲದ ಹೊರೆಯಿಂದ ರೈತರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಔರಾದ್...

ರಷ್ಯಾ ಇಂಧನ ಖರೀದಿಸಿದರೆ ಭಾರತಕ್ಕೆ ಶೇ 100ರಷ್ಟು ಸುಂಕ: ಮಸೂದೆಗೆ ಅಮೆರಿಕ ಸಂಸತ್ತು ಅಸ್ತು

ರಷ್ಯಾದಿಂದ ತೈಲ ಮತ್ತು ಅನಿಲ ಇಂಧನಗಳನ್ನು ಖರೀದಿಸುತ್ತಿರುವ ಭಾರತ ಹಾಗೂ ಇತರ...