SIR ಪೆಡಂಭೂತ | ಕೇರಳ ಮಾದರಿ ಅನುಸರಿಸಿದರೆ ನಮ್ಮ ಮತಗಳು ಸೇಫ್!

Date:

ಮತದಾರರ ಪಟ್ಟಿಯ ಪರಿಷ್ಕರಣೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಎಸ್‌ಐಆರ್‌ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಉದ್ದೇಶದಿಂದಲೇ ರಚನೆಯಾಗಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಎಸ್‌ಐಆರ್ ನಡೆದ ರಾಜ್ಯಗಳಲ್ಲಿ ಆರು ಕೋಟಿಗೂ ಅಧಿಕ ಮತದಾರರ ಹಕ್ಕು ಕಿತ್ತುಕೊಳ್ಳಲಾಗಿದೆ. ಆದಾಗ್ಯೂ, ಈ ಎಸ್‌ಐಆರ್‌ನಿಂದ ಅತಿ ಕಡಿಮೆ ಬಾಧಿತ ಏಕೈಕ ರಾಜ್ಯ ಕೇರಳ. ಇಲ್ಲಿ ಎಸ್‌ಐಆರ್ ಆರಂಭವಾಗುವ ಮುಂಚೆ 2.79 ಕೋಟಿ ಮತದಾರರು ಇದ್ದರು. ಎಸ್‌ಐಆರ್ ನಂತರ 2.70 ಕೋಟಿ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಇಲ್ಲಿ ಡಿಲೀಟ್ ಆದ ಮತದಾರರ ಸಂಖ್ಯೆ ಸುಮಾರು 9 ಲಕ್ಷ. ಇದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅತಿ ಕಡಿಮೆ.

- Advertisement -

ಇದು ಹೇಗೆ ಸಾಧ್ಯವಾಯಿತು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...
  1. ಸಾಕ್ಷರತೆ: ಕೇರಳ ಅತಿ ಹೆಚ್ಚು ಸುಶಿಕ್ಷತರು ಇರುವ ರಾಜ್ಯ. ಅವರಿಗೆ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳುವ ಪ್ರಾಮುಖ್ಯತೆ ಗೊತ್ತಿತ್ತು. ಹಾಗಾಗಿ, ಅವರು ಎಸ್‌ಐಆರ್ ಕುರಿತು ಎಚ್ಚರ ವಹಿಸಿದರು.
  2. ಸರ್ಕಾರದಿಂದ ದಾಖಲೆ ವಿತರಣೆ: ಕೇರಳದ ಹೆಚ್ಚಿನ ಮತದಾರರ ಬಳಿ ದಾಖಲೆಗಳು ಇದ್ದವು. ಆದರೂ ಸ್ಪೆಲ್ಲಿಂಗ್ ಮಿಸ್ಟೇಕ್ ಇತ್ಯಾದಿ ಕಾರಣಕ್ಕೆ ಆಯೋಗ 36.88 ಲಕ್ಷ ಜನರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚಿಸಿತು. ಆಗ ಕೇರಳದ ಎಲ್‌ಡಿಎಫ್ ಸರ್ಕಾರವು ರಾಜ್ಯದ ಪ್ರತಿ ಮನೆ ಮನೆಗೂ ‘ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್’ಅನ್ನು ಒದಗಿಸಿತು. ಇದು ಆಯೋಗ ಸೂಚಿಸಿದ 11 ದಾಖಲೆಗಳಲ್ಲಿ ಒಂದಾಗಿತ್ತು. ಹಾಗಾಗಿ 36 ಲಕ್ಷಕ್ಕೂ ಅಧಿಕ ಜನ ಆ ದಾಖಲೆಯನ್ನು ಆಯೋಗಕ್ಕೆ ಕೊಟ್ಟ ಪರಿಣಾಮ ಅವರೆಲ್ಲರನ್ನೂ ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಯಿತು. ವಿಚಾರಣೆಗೆ ಹಾಜರಾಗದ 53,229 ಜನರನ್ನು ಮಾತ್ರ ಅಂತಿಮ ಪಟ್ಟಿಯಿಂದ ಕೈಬಿಡಲಾಯಿತು.
  3. ಬಿಜೆಪಿಯ ಅನುಪಸ್ಥಿತಿ; ಎಲ್‌ಡಿಎಫ್ – ಯುಡಿಎಫ್ ಕೇಡರ್ ಬೇಸ್: ಕೇರಳದಲ್ಲಿ ಸಂಘ ಪರಿವಾರ ಎಷ್ಟೇ ಪ್ರಬಲವಾಗಿದ್ದರೂ ಬಿಜೆಪಿ ಅಷ್ಟಕ್ಕಷ್ಟೆ. ಹಾಗಾಗಿ, ಅವರು ಆಯೋಗದ ಮೇಲೆ ಪ್ರಭಾವ ಬೀರಿ ತಮ್ಮ ವಿರುದ್ಧ ಇರುವ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಡಿಲೀಟ್ ಮಾಡಿಸಲು ಸಾಧ್ಯವಾಗಲಿಲ್ಲ. ಅದೇ ಸಂದರ್ಭದಲ್ಲಿ ಕೇರಳದಲ್ಲಿ ಎಸ್‌ಐಆರ್ ನಡೆದಾಗ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರೋಧ ಪಕ್ಷವಾಗಿತ್ತು. ಈ ಎರಡೂ ಒಕ್ಕೂಟಗಳ ಬಲಿಷ್ಟ ‘ಕೇಡರ್ ಬೇಸ್’ ಹೊಂದಿರುವ ಕಾರಣದಿಂದ ಎಸ್‌ಐಆರ್ ಆರಂಭವಾಗುವ ಮೊದಲೇ ಕಾರ್ಯನಿರತವಾಗಿ ಜನರ ಬಳಿಗೆ ಹೋಗಿ ಕೆಲಸ ಮಾಡಿದರು. ಮತದಾರರ ಪಟ್ಟಿ ಡೌನ್ಲೋಡ್ ಮಾಡಿ 2002ರ ಪಟ್ಟಿಗೆ ಲಿಂಕಿಂಗ್ ಮಾಡಿ, ಲಿಂಕ್ ಆಗದವರಿಗೆ ದಾಖಲೆ ಒದಗಿಸುವ ಕೆಲಸ ಮಾಡಿದರು. ಹಾಗಾಗಿ ಅಲ್ಲಿ ಬಿಜೆಪಿ ಆಟ ನಡೆಯಲಿಲ್ಲ.

ಈ ಎಲ್ಲ ಕಾರಣಗಳಿಂದ ಕೇರಳದಲ್ಲಿ ಎಸ್‌ಐಆರ್‌ನಿಂದ ದೊಡ್ಡ ಪ್ರಮಾಣದಲ್ಲಿ ಮತದಾರರ ಹಕ್ಕು ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿಯೇ ಅಲ್ಲಿನ ಚುನಾವಣಾ ಫಲಿತಾಂಶಗಳಲ್ಲಿಯೂ ದೊಡ್ಡ ಬದಲಾವಣೆಗಳು ಕಂಡುಬಂದಿಲ್ಲ. ಎಲ್‌ಡಿಎಫ್ ಒಕ್ಕೂಟದಿಂದ ಅಧಿಕಾರವು ಯುಡಿಎಫ್‌ಗೆ ಬದಲಾಗಿದೆ ಅಷ್ಟೇ.

ಈ ಲೇಖನ ಓದಿದ್ದೀರಾ?: ಕಮಲದ ಕಪಿಮುಷ್ಠಿಯಲ್ಲಿ ಪ್ರಾದೇಶಿಕ ಪಕ್ಷಗಳು: ಬಿಹಾರದಲ್ಲಿ ಬಯಲಾದ ವಂಚನೆ

ತಮಿಳುನಾಡಿನಲ್ಲಿ ಅಧಿಕ ಮತಗಳು ಡಿಲೀಟ್

ಕೇರಳದ ಸಕಾರಾತ್ಮಕ ಉದಾಹರಣೆ ನಮ್ಮ ಮುಂದಿದೆ. ಆದರೆ, ಪಕ್ಕದ ತಮಿಳುನಾಡಿನಲ್ಲಿ ಎಸ್‌ಐಆರ್ ನಿಂದ 74 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಯಿತು. ತಮಿಳುನಾಡು ದೊಡ್ಡ ರಾಜ್ಯ ಮತ್ತು ಕೇರಳಕ್ಕಿಂತ ಎರಡು ಪಟ್ಟುಗೂ ಅಧಿಕ ಮತದಾರರಿದ್ದರೂ ಕೂಡ, 74 ಲಕ್ಷ ಮತಗಳ ಡಿಲೀಟ್ ಎಂಬುದು ಅತಿ ದೊಡ್ಡ ವಿಷಯವೇ. ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಪ್ರತಿನಿಧಿಸುವ ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿಯೇ ಸುಮಾರು 1.03 ಲಕ್ಷ ಮತಗಳನ್ನು ಡಿಲೀಟ್ ಮಾಡಲಾಗಿತ್ತು. ಅಲ್ಲಿ ಅವರು ಸೋಲು ಕೂಡ ಕಾಣಬೇಕಾಯಿತು.

ಯಾಕೆ ಹೀಗಾಯಿತು?

  1. ವಲಸೆ ಮತ್ತು ಮನೆ ಬದಲಾವಣೆ: ಭಾರತದಲ್ಲಿಯೇ ಅತಿ ಹೆಚ್ಚು ನಗರೀಕರಣ ಕಂಡಿರುವ ರಾಜ್ಯವೆಂದರೆ ತಮಿಳುನಾಡು. ಬಹಳಷ್ಟು ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹಳ್ಳಿಗಳನ್ನು ತೊರೆದು ನಗರಗಳನ್ನು ಸೇರಿದ್ದಾರೆ. ಅಷ್ಟು ಮಾತ್ರವಲ್ಲದೇ ಆ ನಗರಗಳಲ್ಲಿ ಅವರು ಪದೇ ಪದೇ ಮನೆ ಬದಲಾಯಿಸಿದ್ದಾರೆ. ಅಲ್ಲಿನ ಆಂತರಿಕ ಸರ್ವೆಯ ಪ್ರಕಾರ ಸುಮಾರು 66 ಲಕ್ಷಕ್ಕೂ ಅಧಿಕ ಜನ ತಾವು ಮತದಾರರು ಎಂದು ನೋಂದಾಯಿಸಿಕೊಂಡಿದ್ದ ಮನೆಗಳಲ್ಲಿ ವಾಸವಿರಲಿಲ್ಲ. ಈ ಕಾರಣದಿಂದಾಗಿ ಅವರು ಬೇರೆ ಕಡೆ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಭಾವಿಸಿ ಹಲವರ ಮತ ಡಿಲೀಟ್ ಮಾಡಲಾಗಿದೆ. 8 ಲಕ್ಷಕ್ಕೂ ಅಧಿಕ ಮತದಾರರು ಎನ್ಯುಮರೇಷನ್ ಫಾರ್ಮ್ ತುಂಬದ ಕಾರಣಕ್ಕೆ ಪಟ್ಟಿಯಿಂದ ಹೊರಗುಳಿದಿದ್ದಾರೆ.
  2. ತಡವಾಗಿ ಎಚ್ಚೆತ್ತುಕೊಂಡ ತಮಿಳುನಾಡು ಸರ್ಕಾರ: ಎಸ್‌ಐಆರ್ ನಡೆದಾಗ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಅಧಿಕಾರದಲ್ಲಿತ್ತು. ತಮಿಳುನಾಡಿಗೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ಅತಿ ಹೆಚ್ಚಿನ ಕಾರ್ಮಿಕರು ವಲಸೆ ಬಂದಿದ್ದು ಅವರೆಲ್ಲರೂ ಇಲ್ಲಿಯೂ ಮತದಾರರಾಗಿ ನೋಂದಾಯಿಸಿಕೊಂಡಿದ್ದರು. ಹಾಗಾಗಿ ಅವರ ಮತಗಳು ಡಿಲೀಟ್ ಆಗುತ್ತವೆ, ಎಸ್‌ಐಆರ್‌ನಿಂದ ತಮಗೆ ಒಳ್ಳೆಯದೇ ಆಗುತ್ತದೆ ಎಂದು ಡಿಎಂಕೆ ಸರ್ಕಾರ ನಂಬಿತ್ತು. ಆದರೆ, ಎಸ್‌ಐಆರ್ ಅಪಾಯಗಳು ಅರಿವಾಗುವ ವೇಳೆಗೆ ಕಾಲ ಮೀರಿ ಹೋಗಿತ್ತು. ಡುಪ್ಲೀಕೇಟ್ ಮತದಾರರು ಎಂದು ಹಲವರ ಮತಗಳನ್ನು ಡಿಲೀಟ್ ಮಾಡಿಸಲಾಯಿತು. ಡಿಎಂಕೆ ಪಕ್ಷಕ್ಕೆ ದೊಡ್ಡ ಕೇಡರ್ ಬೇಸ್ ಇದ್ದರೂ ಕೂಡ ತಡವಾಗಿ ಎಚ್ಚೆತ್ತುಕೊಂಡ ಪರಿಣಾಮ ಹಲವು ಮತಗಳು ಡಿಲೀಟ್ ಆದವು.

ಇದರಿಂದ ಕರ್ನಾಟಕಕ್ಕೆ ಪಾಠಗಳೇನು?

ಕರ್ನಾಟಕವು ತನ್ನ ಅಕ್ಕ ಪಕ್ಕದ ಎರಡು ರಾಜ್ಯಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ಅನುಭವಗಳ ಹಿನ್ನೆಲೆಯಲ್ಲಿ ಈಗಲೇ ಪಾಠ ಕಲಿತರೆ, ಈ ಎಸ್‌ಐಆರ್‌ನಿಂದ ಬಚಾವ್ ಆಗಬಹುದಾಗಿದೆ. ಆಪತ್ತಾಗಿ ಬಂದಿರುವ ಎಸ್‌ಐಆರ್ ಅನ್ನು ಅವಕಾಶವಾಗಿಯೂ ಬಳಸಿಕೊಳ್ಳಬಹುದು.

ಇದು ಸಾಧ್ಯವಾಗಬೇಕಾದರೆ ಮಾಡಬೇಕಾದುದ್ದೇನು?

  • ಸಮರ್ಪಕ ತರಬೇತಿ: ಎಸ್‌ಐಆರ್ ಜೂನ್ 30 ರಿಂದ ಆರಂಭವಾಗುತ್ತಿರುವದರಿಂದ ಇನ್ನೂ 20 ದಿನಗಳಿಗೂ ಅಧಿಕ ಸಮಯವಿದೆ. ಕಾಂಗ್ರೆಸ್ ಪಕ್ಷವು ತನ್ನ ಬಿಎಲ್‌ಎಗಳಿಗೆ, ಕಾರ್ಯಕರ್ತರಿಗೆ ಹೀಗಿನಿಂದಲೇ ಎಸ್‌ಐಆರ್ ಎದುರಿಸುವ ಕುರಿತು ಸಮರ್ಪಕ ತರಬೇತಿ ನೀಡಬೇಕು. 2025 ಮತ್ತು 2002ರ ಮತಪಟ್ಟಿಗಳನ್ನು ಡೌನ್ಲೋಡ್ ಮಾಡುವುದು, ಎರಡೂ ಪಟ್ಟಿಯಿಲ್ಲಿ ಹೆಸರು ಇವೆಯೇ? ಸರಿಯಾಗಿವೆಯೇ? ಸ್ಪೆಲ್ಲಿಂಗ್ ಮಿಸ್ಟೇಕ್ ಇವೆಯೇ ಎಂದು ಪರಿಶೀಲಿಸುವ ಕೆಲಸ ಆರಂಭಿಸಬೇಕು.

    ಆದರೆ, ಸಿಎಂ ಬದಲಾದ ಹಿನ್ನೆಲೆಯಲ್ಲಿ ಬಹುತೇಕ ಶಾಸಕರು ಮಂತ್ರಿ ಸ್ಥಾನಕ್ಕಾಗಿ ಒತ್ತಡ ತರುವ ಕೆಲಸದಲ್ಲಿ ನಿರತರಾಗಿದ್ದು ತರಬೇತಿ ಅಷ್ಟು ಸಮರ್ಪಕವಾಗಿ ನಡೆಯುತ್ತಿಲ್ಲ. ಅದು ಬದಲಾಗಬೇಕು. ಈಗಾಗಲೇ ಸಿಎಂ ಡಿ.ಕೆ ಶಿವಕುಮಾರ್ ಹೇಳಿದಂತೆ ಎಸ್‌ಐಆರ್‌ನಲ್ಲಿ ಸರಿಯಾಗಿ ಕೆಲಸ ಮಾಡಿದವರಿಗೆ ಮಾತ್ರ ಅವಕಾಶಗಳು ಎಂಬಂತೆ ಎಲ್ಲರೂ ಜವಾಬ್ದಾರಿಯಿಂದ ಎಸ್‌ಐಆರ್‌ ಬಗ್ಗೆ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅವರು ಇನ್ನೆರಡು ವರ್ಷಕ್ಕೆ ಮಂತ್ರಿಯಾದರೂ ಹೀಗಿನಂತೆ ಎಸ್‌ಐಆರ್ ನಡೆದರೆ ಮುಂದೆ ಅವರು ಗೆಲ್ಲುವುದು ಕಷ್ಟ ಮತ್ತು ಕಾಂಗ್ರೆಸ್ ಮತ್ತೊಮ್ಮೆ ಮರು ಆಯ್ಕೆಯಾಗುವುದು ಅನುಮಾನ.

    • ಮ್ಯಾಪಿಂಗ್ ಸರಿಯಾಗಿದೆಯೇ ಪರಿಶೀಲಿಸಬೇಕು: ಬಹಳಷ್ಟು ಶಾಸಕರು ತಮ್ಮ ಕ್ಷೇತ್ರದಲ್ಲಿ ಶೇ.95ಕ್ಕಿಂತ ಹೆಚ್ಚಿನ ಮ್ಯಾಪಿಂಗ್ ಆಗಿದೆ. ಎಸ್‌ಐಆರ್‌ನಿಂದ ನಮಗೇನೂ ತೊಂದರೆಯಿಲ್ಲ, ನಮ್ಮ ಓಟ್ ಡಿಲೀಟ್ ಆಗುವುದಿಲ್ಲ ಎಂದು ನಂಬಿದ್ದಾರೆ. ಆದರೆ, ಮ್ಯಾಪಿಂಗ್ ಆದ ಮಾತ್ರಕ್ಕೆ ಓಟುಗಳು ಉಳಿದುಕೊಳ್ಳುತ್ತವೆ ಎಂಬುದಕ್ಕೆ ಗ್ಯಾರಂಟಿಯಿಲ್ಲ. ಮ್ಯಾಪಿಂಗ್ ಎಂಬುದು ಎನ್ಯುಮರೇಷನ್ ಫಾರ್ಮ್ ತುಂಬಲು ಮಾಡಿಕೊಂಡಿರುವ ಪೂರ್ವ ತಯಾರಿ ಅಷ್ಟೇ. ಜೊತೆಗೆ ಮ್ಯಾಪಿಂಗ್ ತಪ್ಪಾಗಿ ಆಗಿದ್ದರೆ, ಆ ಮತದಾರರ ಓಟ್ ಡಿಲೀಟ್ ಆಗುತ್ತದೆ. ಹಾಗಾಗಿ ಸರಿಯಾಗಿ ಮ್ಯಾಪಿಂಗ್ ಆಗಿದೆಯೇ? ವಿಶೇಷವಾಗಿ ಮಹಿಳಾ ಮತದಾರರು 2002ರಲ್ಲಿ ಅವರ ಹೆಸರು ಇಲ್ಲದಿದ್ದರೆ ಅವರ ತಂದೆ ಅಥವಾ ತಾಯಿ ಜೊತೆಗೆ ಮ್ಯಾಪಿಂಗ್ ಆಗಿದೆಯೇ? ಆ ವಿಧಾನಸಭಾ ಕ್ಷೇತ್ರ, ಬೂತ್ ನಂಬರ್ ಮತ್ತು ಕ್ರಮ ಸಂಖ್ಯೆ ಸರಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತಪ್ಪಾಗಿದ್ದರೆ ರೀ ಮ್ಯಾಪಿಂಗ್ ಮಾಡಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಪ್ರತಿಯೊಬ್ಬ ಮತದಾರರ ಎನ್ಯುಮರೇ‍ಷನ್ ಫಾರ್ಮ್ ತುಂಬಬೇಕು ಎಂದು ಒತ್ತಿ ಒತ್ತಿ ಹೇಳಬೇಕು.
    • ಮನೆ-ಮನೆ ಭೇಟಿ: ಕಾರ್ಯಕರ್ತರು ಮತ್ತು ಬಿಎಲ್‌ಎಗಳು ತಮ್ಮ ಬೂತ್‌ನ ಪ್ರತಿ ಮನೆ-ಮನೆಗೂ ಭೇಟಿ ನೀಡಿ ಎಸ್‌ಐಆರ್ ಕುರಿತು ಮಾಹಿತಿ ನೀಡಬೇಕು. ಮನೆಯ ಎಲ್ಲಾ ಮತದಾರರ ಹೆಸರು 2025 ಮತ್ತು 2002ರ ಮತಪಟ್ಟಿಗಳಲ್ಲಿ ಇವೆಯೇ? ಇಲ್ಲದಿದ್ದರೆ ಯಾವ ದಾಖಲೆ ಕೊಡಬೇಕು ಎಂಬುದನ್ನು ತಿಳಿಸಿ ದಾಖಲೆ ಮಾಡಿಸಲು ಸಹಾಯ ಮಾಡಬೇಕು. ಜೂನ್ 30 ರಿಂದ ಬಿಎಲ್‌ಎಗಳು ಕೊಡುವ ಎನ್ಯುಮರೇಷನ್ ಫಾರ್ಮ್ ಅನ್ನು ತಪ್ಪದೇ ತುಂಬಬೇಕು ಎಂದು ತಿಳಿಸಬೇಕು.
    • ದಾಖಲೆಗಳ ವಿತರಣೆ: ಕಾಂಗ್ರೆಸ್ ಸರ್ಕಾರವು ಹೀಗಿನಿಂದಲೇ ತಹಶೀಲ್ದಾರ್‌ಗಳಿಗೆ ಆದೇಶ ಹೊರಡಿಸಿ ಪ್ರತಿಯೊಂದು ಮನೆಗೂ ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ ವಿತರಿಸಬೇಕು. ಆಗ ಹೆಚ್ಚಿನ ಕುಟುಂಬಗಳು ದಾಖಲೆಗಳಿಗಾಗಿ ಅಲೆದಾಡುವುದು ತಪ್ಪಲಿದೆ.
    • ಜಾಹೀರಾತು ಮೂಲಕ ಪ್ರಚಾರ: ಎಸ್‌ಐಆರ್ ಕುರಿತು ಅಷ್ಟಾಗಿ ಪ್ರಚಾರ ನಡೆದಿಲ್ಲ. ಹಾಗಾಗಿ ಸರ್ಕಾರ ಕೂಡಲೇ ಜಾಹೀರಾತುಗಳ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಜನರು ತಮ್ಮ ಮತಾಧಿಕಾರ ಉಳಿಸಿಕೊಳ್ಳುವಂತೆ ಕರೆ ನೀಡಬೇಕು.

    ಇಷ್ಟು ಕೆಲಸಗಳನ್ನು ಸರ್ಕಾರ ಮತ್ತು ಪಕ್ಷ ಜೊತೆಯಾಗಿ ಮಾಡಬೇಕು. ಏಕೆಂದರೆ, ಬಿಜೆಪಿಗೆ ಎಸ್‌ಐಆರ್ ಬೇಕಿದೆ. ಬಡವರು, ಮಹಿಳೆಯರು, ವಲಸೆ ಕಾರ್ಮಿಕರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಮತದಾರರ ಓಟು ಡಿಲೀಟ್ ಆಗುವುದನ್ನೇ ಅವರು ಕಾಯುತ್ತಿದ್ದಾರೆ. ಏಕೆಂದರೆ ಅವರಲ್ಲಿ ಬಹುತೇಕರು ತಮಗೆ ಮತ ಹಾಕುವುದಿಲ್ಲ ಎಂಬ ಅರಿವು ಅವರಿಗಿದೆ. ಆದರೆ ಆ ಮತದಾರರೇ ತಮ್ಮ ಕೋರ್ ವೋಟರ್ ಬೇಸ್ ಎಂಬುದನ್ನು ಕಾಂಗ್ರೆಸ್ ಅರಿತುಕೊಂಡು ಕೆಲಸ ಮಾಡದಿದ್ದರೆ ಎಸ್‌ಐಆರ್ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ.

    <p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

    ಪೋಸ್ಟ್ ಹಂಚಿಕೊಳ್ಳಿ:

    ಮುತ್ತುರಾಜು
    ಮುತ್ತುರಾಜು
    ಪತ್ರಕರ್ತ, ಲೇಖಕ

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಕಲಬುರಗಿ SIR | ಬದುಕಿದ್ದರೂ ಮತದಾರರ ಪಟ್ಟಿಯಲ್ಲಿ ಅಸ್ತಿತ್ವವೇ ಇಲ್ಲ; ಅರ್ಹರ ಮತದಾನದ ಹಕ್ಕಿಗೆ ಕತ್ತರಿ!

    ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಲಭಿಸಿರುವ ಅತ್ಯಂತ ಮಹತ್ವದ ಹಕ್ಕು...

    ‘ಕದನ ವಿರಾಮ ಎಂಬುದು ಬರಿ ಕಣ್ಣೊರೆಸುವ ತಂತ್ರ’; ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆ ಆಕ್ರೋಶ

    ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ನಡೆಸುತ್ತಿರುವ ಹಿಂಸಾಚಾರ ಮತ್ತು ಮಾನವಹಕ್ಕುಗಳ...

    ಸೋಮನಾಥ ದೇಗುಲದ ಸುತ್ತ ಮಾಂಸಾಹಾರ ನಿಷೇಧ ಮುಂದುವರಿಕೆ; ಏಕಸದಸ್ಯ ಪೀಠದ ಆದೇಶಕ್ಕೆ ಗುಜರಾತ್ ಹೈಕೋರ್ಟ್ ತಡೆ

    ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರ ತಯಾರಿಕೆ, ಮಾರಾಟ...

    SIR ­| ಫಾರ್ಮ್-7 ದುರ್ಬಳಕೆ: ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ತಾಕೀತು!

    ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ‘ಫಾರ್ಮ್-7’ ನಮೂನೆಗಳನ್ನು ಅಪಾರ ಪ್ರಮಾಣದಲ್ಲಿ...