ರಾಜಸ್ಥಾನ | ಬಿಸಿಯೂಟದಲ್ಲಿ 2,000 ಕೋಟಿ ರೂ. ಹಗರಣ ಬಹಿರಂಗ; 21 ಮಂದಿ ವಿರುದ್ಧ ACB ಎಫ್‌ಐಆರ್‌

Date:

ಕೊರೊನಾ ಆಕ್ರಮಣವಿದ್ದ ಸಮಯದಲ್ಲಿ ರಾಜಸ್ಥಾನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳ ಪೂರೈಕೆಯಲ್ಲಿ ನಡೆದಿದೆ ಎನ್ನಲಾದ 2,000 ಕೋಟಿ ರೂ. ಹಗರಣ ಸಂಬಂಧ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ಎಫ್‌ಐಆರ್ ದಾಖಲಿಸಿದೆ. ಪ್ರಕರಣದಲ್ಲಿ 21 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

- Advertisement -

ಸರ್ಕಾರಿ ಶಾಲೆಗಳನ್ನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿಯೂ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿತ್ತು. ಈ ಯೋಜನೆಯಡಿ, ದ್ವಿದಳ ಧಾನ್ಯಗಳು, ಎಣ್ಣೆ, ಮಸಾಲೆ ಪದಾರ್ಥಗಳು ಸೇರಿದಂತೆ ನಾನಾ ಸಾಮಗ್ರಿಗಳುಳ್ಳ ಕಾಂಬೊ ಪ್ಯಾಕ್‌ಗಳನ್ನು ‘ರಾಜಸ್ಥಾನ ರಾಜ್ಯ ಸಹಕಾರಿ ಗ್ರಾಹಕರ ಒಕ್ಕೂಟ ನಿಮಗ'(CONFED) ಮೂಲಕ ಸರಬರಾಜು ಮಾಡಲಾಗಿತ್ತು. ಇವುಗಳನ್ನು FSSAI ಮತ್ತು Agmark ಮಾನದಂಡಗಳಿಗೆ ಅನುಗುಣವಾಗಿವೆ ಪ್ಯಾಕ್‌ ಮಾಡಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಬೇಕಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಆದಾಗ್ಯೂ, ಈ ಯೋಜನೆಯ ಅನುಷ್ಠಾನದಲ್ಲಿ ಭಾರಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದವು. ಆರೋಪಗಳಿಗೆ ಅನುಗುಣವಾಗಿ ಎಸಿಬಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿತ್ತು. “ಪ್ರಾಥಮಿಕ ತನಿಖೆಯಲ್ಲಿ, ಮಧ್ಯಾಹ್ನ ಊಟ ಯೋಜನೆ ಮತ್ತು CONFEDಗೆ ಸಂಬಂಧಿಸಿದ ಅಧಿಕಾರಿಗಳು ನಿಯಮಗಳನ್ನು ತಿರುಚಿ, ಅಕ್ರಮಕ್ಕೆ ಸಹಕರಿಸಿದ್ದಾರೆ ಎಂಬುದು ಕಂಡುಬಂದಿದೆ” ಎಂದು ಎಸಿಬಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

“ನಿಯಮಗಳ ತಿರುಚುವಿಕೆಯಿಂದ ಅರ್ಹ ಸಂಸ್ಥೆಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಅನುಕೂಲಕರ ಸಂಸ್ಥೆಗಳಿಗೆ ಟೆಂಡರ್‌ಗಳನ್ನು ನೀಡಲಾಗಿದೆ. ನಂತರ, ಈ ಸಂಸ್ಥೆಗಳು ಕಾನೂನುಬಾಹಿರವಾಗಿ ಇತರ ಸಂಸ್ಥೆಗಳಿಗೆ ಉಪಒಪ್ಪಂದಗಳನ್ನು ನೀಡಿವೆ. ಇದರ ಮೂಲಕ ನಕಲಿ ಪೂರೈಕೆದಾರರು ಮತ್ತು ಸಾಗಣೆದಾರರ ಸಂಘಟಿತ ಜಾಲವನ್ನು ಸ್ಥಾಪಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನೇಕ ಸಂದರ್ಭಗಳಲ್ಲಿ, ಸರಕುಗಳನ್ನು ಖರೀದಿಸದೆ ಅಥವಾ ಸರಬರಾಜು ಮಾಡದೆ ಹೆಚ್ಚಿನ ದರಗಳನ್ನು ತೋರಿಸಿ ನಕಲಿ ಇನ್‌ವಾಯ್ಸ್‌ಗಳನ್ನು ಸಲ್ಲಿಸಲಾಗಿದೆ. ಅವುಗಳ ಆಧಾರದ ಮೇಲೆ ಸರ್ಕಾರದಿಂದ ಹಣ ಪಾವತಿಗಳನ್ನು ಪಡೆಯಲಾಗಿದೆ. ಈ ವ್ಯವಸ್ಥಿತ ವಂಚನೆ ಮತ್ತು ಪಿತೂರಿಯು ರಾಜ್ಯ ಖಜಾನೆಗೆ ಗಂಭೀರ ಆರ್ಥಿಕ ನಷ್ಟವನ್ನುಂಟುಮಾಡಿದೆ. ನಷ್ಟದ ಅಂದಾಜು ಮೊತ್ತವು 2,000 ಕೋಟಿ ರೂ.ಗಳಾಗಿವೆ” ಎಂದು ಎಸಿಬಿ ಹೇಳಿದೆ.

ಈ ಲೇಖನ ಓದಿದ್ದೀರಾ?: ತುರ್ಕಮಾನ್ ಗೇಟ್ | ಅಂದು ಸಂಜಯ್ ಗಾಂಧಿ, ಇಂದು…? ಬದಲಾಗದ ಬುಲ್ಡೋಜರ್ ದರ್ಬಾರ್

“ಸಹಾಯಕ ಲೆಕ್ಕಪತ್ರ ಅಧಿಕಾರಿ ಸನ್ವತ್ರಂ; ವ್ಯವಸ್ಥಾಪಕ (ನಾಗರಿಕ ಸರಬರಾಜು ಇಲಾಖೆ) ರಾಜೇಂದ್ರ, ನಾಗರಿಕ ಸರಬರಾಜು ಇಲಾಖೆಯ ವ್ಯವಸ್ಥಾಪಕ ಲೋಕೇಶ್ ಕುಮಾರ್ ಬಾಪ್ನಾ, ಸಹಾಯಕ ವ್ಯವಸ್ಥಾಪಕಿ ಪ್ರತಿಭಾ ಸೈನಿ, ಯೋಜನಾ ವ್ಯವಸ್ಥಾಪಕ ಯೋಗೇಂದ್ರ ಶರ್ಮಾ, ವ್ಯವಸ್ಥಾಪಕ ರಾಜೇಂದ್ರ ಸಿಂಗ್ ಶೇಖಾವತ್, ಮಾರ್ಕೆಟಿಂಗ್‌ ವಿಭಾಗದ ಗೋಡೌನ್ ಕೀಪರ್ ರಾಮಧನ್ ಬೈರ್ವಾ ಮತ್ತು ಮೇಲ್ವಿಚಾರಕ ದಿನೇಶ್ ಕುಮಾರ್ ಶರ್ಮಾ, ಕನ್‌ಫೆಡ್‌ನ ಸೆಂಟ್ರಲ್ ಸ್ಟೋರ್‌ ಪ್ರದೇಶಿಕ ವ್ಯವಸ್ಥಾಪಕ ಶೈಲೇಶ್ ಸಕ್ಸೇನಾ, ಉಪ ವ್ಯವಸ್ಥಾಪಕ ಬಿ.ಸಿ. ಜೋಶಿ ಹಾಗೂ ಸಹಾಯಕ ವ್ಯವಸ್ಥಾಪಕ ಚಂದನ್ ಸಿಂಗ್ ಸೇರಿದಂತೆ ಹಲವರು ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಎಸಿಬಿ ತಿಳಿಸಿದೆ.

ಹೆಚ್ಚುವರಿಯಾಗಿ, ಮೆಸರ್ಸ್ ತಿರುಪತಿ ಸಪ್ಲೈಯರ್ಸ್, ಮೆಸರ್ಸ್ ಜಾಗೃತ್ ಎಂಟರ್‌ಪ್ರೈಸಸ್, ಮೆಸರ್ಸ್ ಸಾಯಿ ಟ್ರೇಡಿಂಗ್‌ನ ಮಾಲೀಕ ಮೆಸರ್ಸ್ ಎಂಟಿ ಎಂಟರ್‌ಪ್ರೈಸಸ್ ಮತ್ತು ಖಾಸಗಿ ವ್ಯಕ್ತಿಗಳಾದ ಕನ್ವಲ್ಜಿತ್ ಸಿಂಗ್ ರಣಾವತ್, ಮಧುರ್ ಯಾದವ್, ತ್ರಿಭುವನ್ ಯಾದವ್, ಸತೀಶ್ ಮುಲ್‌ಚಂದ್ ವ್ಯಾಸ್, ದೀಪಕ್ ವ್ಯಾಸ್ ಹಾಗೂ ರಿತೇಶ್ ಯಾದವ್ ಸೇರಿದಂತೆ ಇತರರನ್ನು ಎಸಿಬಿ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ಹಣಕಾಸಿನ ವಹಿವಾಟುಗಳು, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಸರ್ಕಾರಿ ನಿಧಿಯ ದುರುಪಯೋಗ ಸೇರಿದಂತೆ ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಸಾಕ್ಷ್ಯ ಸಂಗ್ರಹ, ದಾಖಲೆಗಳ ಪರಿಶೀಲನೆ ಹಾಗೂ ಇತರ ಅಗತ್ಯ ತನಿಖಾ ಕಾರ್ಯವಿಧಾನಗಳು ನಡೆಯುತ್ತಿವೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...