ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆಗಳ ‘ದುರುಪಯೋಗ’ ಆರೋಪದ ಮೇಲೆ ಬಂಧಿಸಲಾದ ಎಂಟು ಆರೋಪಿಗಳ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೆಲವು ಆರೋಪಿಗಳ ನಿವಾಸಗಳಲ್ಲಿ ದಾಖಲೆಗಳು ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್, ಅನುಕಲ್ಪ್ ಮಿಶ್ರಾ, ಲುವ್‌ಕುಶ್ ಮಿಶ್ರಾ, ಮನೀಶ್ ಯಾದವ್ ಮತ್ತು ಸುಭಾಷ್ ಶ್ರೀವಾಸ್ತವ ನಿವಾಸದ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ: ಟ್ರಸ್ಟ್ ಸ್ಪಷ್ಟನೆ
ಪೊಲೀಸರು ಶೋಧ ನಡೆಸಿ ಆರೋಪಿಗಳ ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ. ಅವರ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿರುವ ಅವಿನಾಶ್ ಶುಕ್ಲಾ ಅವರ ನಿವಾಸವನ್ನು ಈಗಾಗಲೇ ಸೀಲ್ ಮಾಡಲಾಗಿದೆ.
ಪೊಲೀಸರು ಈ ಹಿಂದೆ ಕೆಲವು ಆರೋಪಿಗಳ ನಿವಾಸಗಳಿಂದ ಸುಮಾರು 80 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.




