ಸಾವರ್ಕರ್ ಮಾನಹಾನಿ ಕೇಸ್‌: ವಿಚಾರಣೆಗೆ ತಡೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

Date:

ರಾಹುಲ್ ಗಾಂಧಿ ವಿರುದ್ಧ ಸಾತ್ಯಕಿ ಸಾವರ್ಕರ್ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಕೋರಿ ಪಂಕಜ್ ಫಡ್ನಿಸ್ ಬಾಂಬೆ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ವಿನಾಯಕ ಸಾವರ್ಕರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 2024ರಲ್ಲಿ ಆರಂಭಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಭಾಗವಾಗಿ ಬುಧವಾರ (ಆ.19) ಈ ಅರ್ಜಿ ಸಲ್ಲಿಸಿದ್ದಾರೆ.

- Advertisement -

ಪುಣೆಯ ವಿಶೇಷ ಎಂಪಿ/ಎಂಎಲ್‌ಎ ನ್ಯಾಯಾಲಯವು ಪ್ರಕರಣದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಫಡ್ನಿಸ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿರುವ ಅವರು, ಮಾನಹಾನಿ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಹಾಗೂ ‘Amicus Curiae’ ನೇಮಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಲಾಗುತ್ತಿರುವ ಸಾಕ್ಷ್ಯಗಳು ಮೂಲ ದೂರಿಗೆ ಸಂಬಂಧಿಸಿದ್ದೇ ಎಂಬುದನ್ನು ಅಮಿಕಸ್ ಪರಿಶೀಲಿಸಬೇಕು ಎಂದು ಕೋರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಫಡ್ನಿಸ್ ಅವರ ಅರ್ಜಿಯಲ್ಲಿ ಪುಣೆ ವಿಶೇಷ ನ್ಯಾಯಾಲಯದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ನ್ಯಾಯಾಲಯವು ತನ್ನ ವ್ಯಾಪ್ತಿಯನ್ನು ಮೀರಿ ವಿಚಾರಣೆ ನಡೆಸುತ್ತಿದೆ ಹಾಗೂ ಸಾವರ್ಕರ್ ‘ಧೈರ್ಯಶಾಲಿಯೇ ಅಥವಾ ಹೇಡಿಯೇ’ ಎಂಬುದನ್ನು ನಿರ್ಧರಿಸಲು ಮುಂದಾಗಿದೆ ಎಂದು ಆರೋಪಿಸಲಾಗಿದೆ. ನ್ಯಾಯಾಲಯದ ಕೆಲವು ಆದೇಶಗಳನ್ನು ‘ವಿಕೃತ’ ಹಾಗೂ ನ್ಯಾಯಾಂಗ ಶಿಸ್ತಿಗೆ ವಿರುದ್ಧವಾದವು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಾತ್ಯಕಿ ಸಾವರ್ಕರ್ ಅವರು ವಿಚಾರಣೆ ವೇಳೆ, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಕೋರಿ ಪತ್ರಗಳನ್ನು ಬರೆದಿದ್ದರು. ‘ಸ್ವಾತಂತ್ರ್ಯ ವೀರ’ ಎಂಬ ಬಿರುದನ್ನು ಯಾವುದೇ ಸರ್ಕಾರ ಸಾವರ್ಕರ್ ಅವರಿಗೆ ನೀಡಿಲ್ಲ ಎಂದು ಅವರು ಹೇಳಿದ್ದರು.

ಫಡ್ನಿಸ್ ಅವರ ಪ್ರಕಾರ, ಈ ವಿಚಾರಣೆಯ ವ್ಯಾಪ್ತಿ ಮೂಲ ದೂರಿನಲ್ಲಿ ಉಲ್ಲೇಖಿಸಿರುವ ವಿಷಯಕ್ಕೆ ಮಾತ್ರ ಸೀಮಿತವಾಗಿರಬೇಕು. ಸಾವರ್ಕರ್ ತಮ್ಮ ಪುಸ್ತಕಗಳಲ್ಲಿ ಮುಸ್ಲಿಮನೊಬ್ಬನನ್ನು ಹೊಡೆಯುವ ಕುರಿತು ಬರೆದಿದ್ದಾರೆಯೇ ಎಂಬುದನ್ನು ಮಾತ್ರ ನ್ಯಾಯಾಲಯ ಪರಿಶೀಲಿಸಬೇಕು; ಸಾವರ್ಕರ್ ಹೇಡಿಯೇ ಅಥವಾ ಧೈರ್ಯಶಾಲಿಯೇ ಎಂಬಂತಹ ಐತಿಹಾಸಿಕ ಪ್ರಶ್ನೆಗಳನ್ನು ನ್ಯಾಯಾಲಯ ನಿರ್ಧರಿಸುವ ಅಗತ್ಯವಿಲ್ಲ ಎಂದು ಅವರು ವಾದಿಸಿದ್ದಾರೆ.

ಸಾವರ್ಕರ್ ಅವರ ಜೀವನದ ಕುರಿತು ತಮಗೆ ಪರಿಣಿತಿ ಇದೆ ಎಂದು ಹೇಳಿರುವ ಫಡ್ನಿಸ್, ಪತ್ರಿಕಾ ವರದಿಯೊಂದನ್ನು ಓದಿದ ಬಳಿಕ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಮುಂದಾದೆ ಎಂದು ತಿಳಿಸಿದ್ದಾರೆ. ತಮ್ಮ ಸಂಶೋಧನೆಯ ಆಧಾರದ ಮೇಲೆ ಸಾವರ್ಕರ್ ಗೌರವಕ್ಕೆ ಅರ್ಹ ವ್ಯಕ್ತಿ ಎಂಬ ಅಭಿಪ್ರಾಯ ಹೊಂದಿರುವುದಾಗಿ ಹೇಳಿದ್ದಾರೆ. ವಿವಿಧ ಧರ್ಮಗಳು ಭಾರತಕ್ಕೆ ಬಣ್ಣಗಳಂತೆ ಸೌಂದರ್ಯ ನೀಡುತ್ತವೆ ಎಂಬ ಸಾವರ್ಕರ್ ಅವರ ಹೇಳಿಕೆಯನ್ನು ಫಡ್ನಿಸ್ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಸಾವರ್ಕರ್ ಅವರನ್ನು ಅನುಸರಿಸುವ ಕೆಲವರಿಂದಲೇ ಅವರಿಗೆ ಅಪಚಾರವಾಗಿದೆ ಎಂದು ಹೇಳಿರುವ ಅವರು, ಮಹಾತ್ಮ ಗಾಂಧಿ ಹತ್ಯೆಗೆ ಸಂಚು ರೂಪಿಸಿದ ನಾಥುರಾಮ್ ಗೋಡ್ಸೆ ಹಾಗೂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರೆಂದು ಪರಿಗಣಿಸುವವರನ್ನು ಉಲ್ಲೇಖಿಸಿದ್ದಾರೆ.

2026ರ ಜೂನ್ 15ರಂದು ಪ್ರಕಟವಾದ ಪತ್ರಿಕಾ ವರದಿಯೊಂದರಿಂದ ತಾವು ಆಶ್ಚರ್ಯಗೊಂಡಿದ್ದಾಗಿ ಫಡ್ನಿಸ್ ಹೇಳಿದ್ದಾರೆ. ಮಾನಹಾನಿ ದೂರಿಗೆ ಸಂಬಂಧಿಸದ ವಿಷಯಗಳ ಬಗ್ಗೆಯೂ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂಬುದು ಆ ವರದಿಯಿಂದ ತಿಳಿದುಬಂದಿತ್ತು . ಸ್ವಾತಂತ್ರ್ಯ ಹೋರಾಟದಲ್ಲಿ ವ್ಯಕ್ತಿಯೊಬ್ಬರ ಕೊಡುಗೆ ಎಷ್ಟಿತ್ತು ಎಂಬುದು ನ್ಯಾಯಾಲಯ ನಿರ್ಧರಿಸುವ ವಿಷಯವಲ್ಲ, ಅದು ಸಂಸತ್ತು ಮತ್ತು ಸರ್ಕಾರದ ವ್ಯಾಪ್ತಿಗೆ ಬರುವ ವಿಚಾರ ಎಂದು ಫಡ್ನಿಸ್ ವಾದಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಒಪ್ಪಿಗೆಯೊಂದಿಗೆ ಸಂಸತ್ ಭವನದಲ್ಲಿ ಸಾವರ್ಕರ್ ಅವರ ಭಾವಚಿತ್ರ ಪ್ರದರ್ಶಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಫಡ್ನಿಸ್ ಅವರು ತಮ್ಮ ಅರ್ಜಿಯಲ್ಲಿ ಸಂವಿಧಾನದ ವಿಧಿ 21ರಡಿ ಅರ್ಥಪೂರ್ಣ ಜೀವನದ ಹಕ್ಕು ಕೂಡ ಪ್ರಸ್ತಾಪಿಸಿದ್ದಾರೆ. ರಾಹುಲ್ ಗಾಂಧಿ ಸಾವರ್ಕರ್ ಕುರಿತು ನೀಡಿರುವ ಹೇಳಿಕೆಗಳಿಂದ ಈ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅವರು ವಾದಿಸಿದ್ದಾರೆ. ದೇಶದ ಪ್ರಧಾನಮಂತ್ರಿಗಳು ಸೇರಿದಂತೆ ಅನೇಕ ಭಾರತೀಯರು ಸಾವರ್ಕರ್ ಅವರನ್ನು ಗೌರವಿಸುತ್ತಾರೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Gen Z ಸೆಳೆಯಲು ಕೇಂದ್ರದ ಕಸರತ್ತು; ʼದಿನಕ್ಕೊಂದು ವಿವಿ ಭೇಟಿʼ ಅಭಿಯಾನ

ಪುಣೆ ನ್ಯಾಯಾಲಯದಲ್ಲಿ ಫಡ್ನಿಸ್ ಅವರ ಮಧ್ಯಪ್ರವೇಶದ ಅರ್ಜಿಯನ್ನು ತಿರಸ್ಕರಿಸುವಾಗ ನ್ಯಾಯಾಧೀಶ ಅಮೋಲ್ ಶಿಂಧೆ ಅವರು ₹20,000 ದಂಡ ವಿಧಿಸಿದ್ದರು. ಅವರ ಅರ್ಜಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದೆ ಎಂದು ನ್ಯಾಯಾಲಯ ಹೇಳಿತ್ತು. ಈ ಹಿಂದೆ ಸಾವರ್ಕರ್ ಅವರನ್ನು ಅವಮಾನಿಸುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೋರಿ ಫಡ್ನಿಸ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿತ್ತು. ಇದೀಗ ಫಡ್ನಿಸ್ ಅವರ ಮಧ್ಯಂತರ ಅರ್ಜಿ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಈ ನಡುವೆ, ರಾಹುಲ್ ಗಾಂಧಿ ಪರ ವಕೀಲರ ಪ್ರತಿಪ್ರಶ್ನೆಯಲ್ಲಿ ಸಾತ್ಯಕಿ ಸಾವರ್ಕರ್, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಪತ್ರಗಳನ್ನು ಬರೆದಿದ್ದರು, ‘ಸ್ವಾತಂತ್ರ್ಯ ವೀರ’ ಎಂಬ ಬಿರುದು ಯಾವುದೇ ಸರ್ಕಾರದಿಂದ ನೀಡಲ್ಪಟ್ಟದ್ದಲ್ಲ ಎಂದು ಹೇಳಿದ್ದರು. ಸಾವರ್ಕರ್ ಧಾರ್ಮಿಕ ಆಚರಣೆಗಳನ್ನು ಟೀಕಿಸುವ, ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ಹಾಗೂ ಗೋ ಪೂಜೆಯನ್ನು ವಿರೋಧಿಸುವ ಪುಸ್ತಕವೊಂದನ್ನು ಬರೆದಿದ್ದರು ಎಂದೂ ಅವರು ಹೇಳಿದ್ದರು. ನಾಥುರಾಮ್ ಗೋಡ್ಸೆ ಮತ್ತು ಗೋಪಾಲ್ ಗೋಡ್ಸೆ ಆರ್‌ಎಸ್‌ಎಸ್‌ನ ಸಕ್ರಿಯ ಸದಸ್ಯರಾಗಿದ್ದರು ಎಂದೂ ಸಾತ್ಯಕಿ ಹೇಳಿರುವುದಾಗಿ ವಿಚಾರಣೆಯ ವಿವರಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಪಿಯ IQ ಕಡಿಮೆ ಇದ್ದ ಮಾತ್ರಕ್ಕೆ ವಿಚಾರಣೆಯಿಂದ ಹೊರಗಿಡಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

ಕಡಿಮೆ ಬುದ್ಧಿಮತ್ತೆ (IQ) ಅಥವಾ ಬೌದ್ಧಿಕ ಅಸಮರ್ಥತೆ ಇದೆ ಎಂಬ ಕಾರಣವೊಂದರಿಂದಲೇ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; NSUIನಿಂದ ವಿನೂತನ ‘ಜೀವಂತ ಶವ’ ಪ್ರತಿಭಟನೆ

ಮತದಾರರ ಹಕ್ಕುಗಳು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ಬೆದರಿಕೆಗಳನ್ನು ಖಂಡಿಸಿ, ಮುಖ್ಯ...

ಸಾಗರ | ತಾಲೂಕು ಮಟ್ಟದ ಪ್ರಜಾಸೇವೆ ಸಭೆ; 500ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ

ಸಾಗರ ತಾಲೂಕಿನಲ್ಲಿ ಮನೆ ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿದೆ ಸಹಕಾರ ಎಂಬ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...