ಭಾರತದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಕಳೆದ ವರ್ಷ ಬಹಿರಂಗಪಡಿಸಿದ್ದ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ ಕಳೆದ ರಾತ್ರಿ ಭಾರತಕ್ಕೆ ಸಂಬಂಧಿಸಿದ ಮತ್ತೊಂದು ಸ್ಪೋಟಕ ವರದಿಯನ್ನು ಬಹಿರಂಗಪಡಿಸಿದೆ.
ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಹಿಂಡನ್‌ಬರ್ಗ್ ಆರೋಪಿಸಿದೆ.
ಹಿಂಡನ್‌ಬರ್ಗ್ ಶನಿವಾರ ಮಾಡಿರುವ ಪೋಸ್ಟ್‌ನಲ್ಲಿ “ಭಾರತದಲ್ಲಿ ಶೀಘ್ರದಲ್ಲೇ ದೊಡ್ಡದೊಂದು ಸಂಭವಿಸುತ್ತದೆ” ಎಂದು ಹೇಳು ಮೂಲಕ ಮತ್ತೊಂದು ವರದಿ ಬಿಡುಗಡೆಯ ಸುಳಿವು ನೀಡಿತ್ತು.
ಅದರಂತೆ ರಾತ್ರಿ ವೇಳೆಗೆ ಅದಾನಿ ಗ್ರೂಪ್ ಮತ್ತು ಸೆಬಿ ಮುಖ್ಯಸ್ಥರ ನಡುವೆ ಸಂಬಂಧವಿದೆ. ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಕಡಲಾಚೆಯ ಘಟಕಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಕೂಡಾ ಪಾಲು ಹೊಂದಿದ್ದಾರೆ ಎಂದು ವಿಸ್ಲ್‌ಬ್ಲೋವರ್‌ನಿಂದ ಪಡೆದ ದಾಖಲೆಗಳು ತೋರಿಸುತ್ತವೆ ಎಂದು ಹಿಂಡನ್‌ಬರ್ಗ್ ರಿಸರ್ಚ್ ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಅದಾನಿ ಕುರಿತ ನಮ್ಮ ಸಂಶೋಧನೆ ಬಗ್ಗೆ ಅತ್ಯಂತ ಹೆಮ್ಮೆಯಿದೆ: ಸೆಬಿಗೆ ಹಿಂಡನ್ಬರ್ಗ್ ಪ್ರತಿಕ್ರಿಯೆ
ಆದರೆ ಈ ಆರೋಪವನ್ನು ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಅಲ್ಲಗಳೆದಿದ್ದಾರೆ. ಈ ಆರೋಪಗಳು ಆಧಾರರಹಿತವಾಗಿದೆ. ನಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ. ಸೆಬಿಯಿಂದ ಶೋಕಾಸ್ ನೋಟಿಸ್ ಪಡೆದಿರುವ ಹಿಂಡನ್‌ಬರ್ಗ್ ಈಗ ಚಾರಿತ್ರ್ಯ ಹರಣಕ್ಕೆ ಮುಂದಾಗಿದೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಹಿಂಡನ್‌ಬರ್ಗ್ 2023ರ ಜನವರಿಯಲ್ಲಿ ಬಿಲಿಯನೇರ್ ಗೌತಮ್ ಅದಾನಿಯ ಅದಾನಿ ಗ್ರೂಪ್‌ನ ಷೇರುಪೇಟೆ ವಂಚನೆಗಳ ಬಗ್ಗೆ ವರದಿಯನ್ನು ಬಹಿರಂಗಪಡಿಸಿತ್ತು. ಈ ವರದಿಯಿಂದಾಗಿ ಅದಾನಿ ಗ್ರೂಪ್‌ನ ಸಮೂಹ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇದೀಗ ಕೊಂಚ ಸುಧಾರಿಸಿಕೊಳ್ಳುತ್ತಿದ್ದಂತೆ ಮತ್ತೆ ಅದಾನಿ ಗ್ರೂಪ್ ಮತ್ತು ಸೆಬಿ ಸಂಬಂಧದ ವರದಿಯನ್ನು ಹಿಂಡನ್‌ಬರ್ಗ್ ಪ್ರಕಟಿಸಿದೆ. ಈ ವರದಿ ಮತ್ತೆ ಅದಾನಿ ಸಮೂಹ ಷೇರುಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
NEW FROM US:
— Hindenburg Research (@HindenburgRes) August 10, 2024
Whistleblower Documents Reveal SEBI’s Chairperson Had Stake In Obscure Offshore Entities Used In Adani Money Siphoning Scandalhttps://t.co/3ULOLxxhkU
ಕಳ್ಳ, ಪೊಲೀಸ್, ಲಾಯರ್,ಜಡ್ಜ್, ಎಲ್ಲ ಇವರೇ. ಪ್ರತಿಭಾವಂತರು, ತುಂಬಾ ಮೆರಿಟೋರಿಯಸ್. ಮೀಸಲಾತಿಯ ಅಗತ್ಯವೇ ಇಲ್ಲ. ಇವರ ಬದುಕು, ಹಣಕಾಸಿನ ವಿವರಗಳು ತೆರೆದ ಬದುಕು. ಪಾರದರ್ಶಕ.
ಇನ್ನು ಇವರ ಪ್ರತಿಭೆಯನ್ನು ಹೋಗಳೋಕೆ ,ಕೊಂಡಾಡೋಕೆ ಇವರದ್ದೇ ವಂದಿಮಾಗಧರು, ಮಾಧ್ಯಮ, ಜಾಲತಾಣಗಳು. ಅಪೂರ್ವ ಸಂಸ್ಕೃತಿ, ಅಪೂರ್ವ ಸಾಧನೆ.