‘SIR ಹೋರಾಟದಲ್ಲಿ ನೀವೇಕೆ ಭಾಗವಹಿಸಿದಿರಿ’; ಬೇಷರತ್ ಕ್ಷಮೆ ಕೇಳುವಂತೆ ನಟ ಇಮ್ರಾನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಸೂಚನೆ

Date:

ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮುಂಬೈನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದಕ್ಕೆ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಅಮೆರಿಕದ ಪೌರತ್ವ ಹೊಂದಿರುವ ಖಾನ್, ದೇಶದ ರಾಜಕೀಯ ಅಥವಾ ಎಸ್‌ಐಆರ್‌ಗೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ ಭಾಗವಹಿಸಲು ಯಾವುದೇ ಹಕ್ಕಿಲ್ಲ ಎಂದು ಕೋರ್ಟ್ ಹೇಳಿದೆ. ಬೇಷರತ್ ಕ್ಷಮೆಯಾಚಿಸುವಂತೆ ಸೂಚಿಸಿದೆ.

- Advertisement -

ಕಳೆದ ಅಕ್ಟೋಬರ್ 10 ರಂದು ಮುಂಬೈನಲ್ಲಿ ನಡೆದ ಪ್ರತಿಭಟನಾ ಸ್ಥಳದಲ್ಲಿದ್ದ ಇಮ್ರಾನ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರ ವರದಿಯ ಆಧಾರದ ಮೇಲೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಕ್ಟೋಬರ್ 14 ರಂದು ಇಮ್ರಾನ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿ, ಅಕ್ಟೋಬರ್ 28 ರೊಳಗೆ ಭಾರತ ತೊರೆಯುವಂತೆ ಸೂಚಿಸಿತ್ತು. ನೋಟಿಸ್‌ಅನ್ನು ಪ್ರಶ್ನಿಸಿ ಖಾನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಅವರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಅದ್ವೈತ್ ಸೇಠ್ನಾ ಅವರಿದ್ದ ವಿಭಾಗೀಯ ಪೀಠವು, “ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (OCI) ಕಾರ್ಡ್‌ದಾರರು ಮತ್ತು ಭಾರತದ ಪೌರರಿಗೆ ಇರುವ ಹಕ್ಕುಗಳ ನಡುವೆ ಅಗಾಧ ವ್ಯತ್ಯಾಸವಿದೆ ಎಂಬುದನ್ನು ನಟ ನೆನಪಿನಲ್ಲಿಡಬೇಕು. ನಿಮಗೆ ಅಮೆರಿಕಕ್ಕೆ ತೆರಳಿ ಅಲ್ಲಿ ಪ್ರತಿಭಟಿಸುವ ಅಥವಾ ಮತ ಚಲಾಯಿಸುವ ಸಂಪೂರ್ಣ ಹಕ್ಕಿದೆ. ಆದರೆ, ಭಾರತದಲ್ಲಿದ್ದುಕೊಂಡು ಇಲ್ಲಿನ ಸರ್ಕಾರಿ ನಿರ್ಧಾರಗಳನ್ನು ವಿರೋಧಿಸಿ ಪ್ರತಿಭಟಿಸುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಮೌಖಿಕವಾಗಿ ಹೇಳಿದೆ.

ವಿಚಾರಣೆ ವೇಳೆ ಖಾನ್ ಪರ ವಕೀಲರು ವಾದ ಮಂಡಿಸಿ, “ಖಾನ್ ಅವರು ಪ್ರತಿಭಟನೆಯ ಸಂಘಟಕರಾದ ‘ಕಾಕ್ರೋಚ್ ಜನತಾ ಪಾರ್ಟಿ’ ಜೊತೆ ಯಾವುದೇ ಸಂಪರ್ಕ ಹೊಂದಿಲ್ಲ. ಪೊಲೀಸ್ ತಡೆಗೋಡೆಗಳನ್ನು ದಾಟಿ ಸಕ್ರಿಯವಾಗಿ ಪ್ರತಿಭಟಿಸಿಲ್ಲ. ವಶಕ್ಕೆ ಪಡೆಯಲಾಗಿದ್ದ ಸ್ನೇಹಿತರೊಬ್ಬರ ಬಗ್ಗೆ ವಿಚಾರಿಸಲು ತೆರಳಿದ್ದಾಗ ಮಾಧ್ಯಮದವರು ವರದಿ ಮಾಡಿದ್ದರಿಂದ ಈ ಗೊಂದಲ ಉಂಟಾಗಿದೆ” ಎಂದು ಸಮಜಾಯಿಷಿ ನೀಡಿದ್ದಾರೆ.

ಆದರೆ, ನ್ಯಾಯಾಲಯವು ಈ ಸಮಜಾಯಿಷಿಯನ್ನು ಒಪ್ಪದೆ, ಸಾರ್ವಜನಿಕವಾಗಿ ಪ್ರಭಾವ ಬೀರುವ ನಟರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅಭಿಪ್ರಾಯಪಟ್ಟಿದೆ. “ಅಕಸ್ಮಾತ್ತಾಗಿ ಇಂತಹ ಘಟನೆ ನಡೆದಿದ್ದರೂ ಸಹ, ಪ್ರಮಾಣಪತ್ರದ ಮೂಲಕ ಬೇಷರತ್ ಕ್ಷಮಾಪಣೆ ಸಲ್ಲಿಸುವುದು ಕಡ್ಡಾಯ” ಎಂದು ಪೀಠ ಹೇಳಿದೆ.

ಇದೇ ವೇಳೆ ‘ವಸುಧೈವ ಕುಟುಂಬಕಂ’ ಎಂಬ ತತ್ವವನ್ನು ಉಲ್ಲೇಖಿಸಿದ ನ್ಯಾಯಪೀಠ, “ನಟ ಸರಿಯಾದ ರೀತಿಯಲ್ಲಿ ಬೇಷರತ್ ಕ್ಷಮಾಪಣೆ ಸಲ್ಲಿಸಿದರೆ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಯೋಚಿಸಬಹುದು” ಎಂದಿದೆ.

ಸದ್ಯಕ್ಕೆ FRRO ಜಾರಿಗೊಳಿಸಿದ್ದ ‘ಭಾರತ ತೊರೆಯುವ ನೋಟಿಸ್’ಗೆ ನೀಡಲಾದ ತಡೆಯಾಜ್ಞೆಯನ್ನು ನ್ಯಾಯಾಲಯವು ಡಿಸೆಂಬರ್ 7 ರ ಮುಂದಿನ ವಿಚಾರಣೆಯವರೆಗೆ ವಿಸ್ತರಿಸಿದೆ.ಈ ಸಂಬಂಧ ತನ್ನ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೂ ಸೂಚಿಸಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿಗೆ ಎರಡು ದಿನ ಹಸಿರು ಪಟಾಕಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಧಾರ್ಮಿಕ ಆಚರಣೆ ಎಂದು ಪರಿಗಣಿಸಿರುವ ಸುಪ್ರೀಂ...

ಜರ್ಮನಿ | ಅಂಗಡಿಗಳ ಲೂಟಿಗೆ ತಿರುಗಿದ ಜೆನ್ ಜೀ ಪ್ರತಿಭಟನೆಗಳು!

ಸಾಮಾಜಿಕ ಭದ್ರತೆ, ಶಿಕ್ಷಣ, ವಸತಿ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ...

ಈ ದಿನ ಸಂಪಾದಕೀಯ | ರಾಮಲೀಲಾ ಪ್ರತಿಭಟನೆ ಐತಿಹಾಸಿಕ; ಪ್ರಚಂಡ ಜನಶಕ್ತಿಯಿಂದ ಮಾತ್ರವೇ ಸರ್ವಾಧಿಕಾರಿ ಶಕ್ತಿಗಳ ಧೂಳೀಪಟ ಸಾಧ್ಯ

ಬೃಹತ್ ಪ್ರತಿಭಟನೆಗಳಷ್ಟೇ ಸಾಲದು, ಪಕ್ಷಗಳ ಸಂಘಟನೆಗಳನ್ನು ಬಲಿಷ್ಠವಾಗಿ ಕಟ್ಟುವುದು ಪ್ರತಿಪಕ್ಷಗಳ ಮುಂದಿರುವ...