ಈ ದಿನ ಸಂಪಾದಕೀಯ | ರಾಮಲೀಲಾ ಪ್ರತಿಭಟನೆ ಐತಿಹಾಸಿಕ; ಪ್ರಚಂಡ ಜನಶಕ್ತಿಯಿಂದ ಮಾತ್ರವೇ ಸರ್ವಾಧಿಕಾರಿ ಶಕ್ತಿಗಳ ಧೂಳೀಪಟ ಸಾಧ್ಯ

Date:

ಬೃಹತ್ ಪ್ರತಿಭಟನೆಗಳಷ್ಟೇ ಸಾಲದು, ಪಕ್ಷಗಳ ಸಂಘಟನೆಗಳನ್ನು ಬಲಿಷ್ಠವಾಗಿ ಕಟ್ಟುವುದು ಪ್ರತಿಪಕ್ಷಗಳ ಮುಂದಿರುವ ದೊಡ್ಡ ಸವಾಲು.  ತಮ್ಮ ಎಲ್ಲ ನೈತಿಕ ಮತ್ತು ಆರ್ಥಿಕ ಶಕ್ತಿಯನ್ನು ಅವು ಜನತೆಯಿಂದಲೇ ಪಡೆಯಬೇಕು. ಹೀಗೆ ಪಡೆಯಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಜನಾಂದೋಲನವು ಬೇರು ಮಟ್ಟ ತಲುಪಬೇಕು. ಪರಿಣಾಮವಾಗಿ ಹುಟ್ಟುವ ಪ್ರಚಂಡ ಜನಶಕ್ತಿ ಮಾತ್ರವೇ ಸರ್ವಾಧಿಕಾರಿ ಶಕ್ತಿಗಳನ್ನು ಧೂಳೀಪಟ ಮಾಡಬಲ್ಲದು.

- Advertisement -

ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಪಕ್ಷಗಳ ಮಹಾ ರ್ಯಾಲಿ ಭಾರತ ರಾಜಕಾರಣದ ಇತಿಹಾಸದ ಹೊಸ ಮೈಲಿಗಲ್ಲಾಗಿ ನಿಲ್ಲಲಿದೆ. ಮೋದಿ ಮಡಿಲಲ್ಲಿ ಆಡುವ ಗೋದಿ ಮೀಡಿಯಾ ಕೂಡ ಈ ರ್ಯಾಲಿಯ ಅಪಾರ ಜನಸ್ತೋಮವನ್ನು ಎದ್ದು ಕುಳಿತು ಕಣ್ಣು ಹೊಸಕಿಕೊಂಡು ಗಮನಿಸಿರುವುದು ಹೊಸ ವಿದ್ಯಮಾನ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ನೆನ್ನೆ 2026ರ ನವೆಂಬರ್ ಒಂದರ ಭಾನುವಾರ. ಅದೇ ರಾಮಲೀಲಾ ಮೈದಾನ. ಪ್ರತಿಪಕ್ಷಗಳ ಪ್ರತಿಭಟನೆಯ ಮತ್ತೊಂದು ಮಹಾ ರ್ಯಾಲಿ ನಡೆಯಿತು. ಗ್ಯಾನೇಶ್ ಕುಮಾರ್ ಮತ್ತು ಅವರ ಹಿಂದಿರುವ ಮೋಶಾ ಜೋಡಿಯ ‘ಮತಗಳ್ಳತನ’ವನ್ನು ವಿರೋಧಿಸುವುದೇ ಈ ರ್ಯಾಲಿಯ ಪ್ರಧಾನ ಉದ್ದೇಶವಾಗಿತ್ತು.

ಸಂಸತ್ತು, ಉನ್ನತ ನ್ಯಾಯಾಂಗ ಮತ್ತು ಗೋದಿ ಮಾಧ್ಯಮಗಳ ಈಗಿನ ಕಾರ್ಯವೈಖರಿ- ನ್ಯಾಯಬದ್ಧತೆಯನ್ನು ಪ್ರಶ್ನಿಸುವುದೇ ಈ ಹೋರಾಟದ ತಂತ್ರ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಜನರನ್ನು ಸಾರ್ವಜನಿಕ ಹೋರಾಟಗಳಿಗೆ ಸಂಘಟಿಸುವುದು ಈ ಆಂದೋಲನದ ಉದ್ದೇಶ.

ಈ ಜನಾಂದೋಲನವು ಪ್ರತಿಪಕ್ಷಗಳ ಸಂಘಟನೆಯ ಅಡಿಪಾಯ ಆಗಬಲ್ಲದು. ಹೊಸ ಕಾರ್ಯಕರ್ತರನ್ನು ರೂಪಿಸಿ ಜನತೆಯೊಂದಿಗೆ ನೇರ ಸಂಪರ್ಕಕ್ಕೆ ದಾರಿ ಮಾಡಬಹುದಾಗಿದೆ. ಈ ಪ್ರತಿಭಟನೆಯನ್ನು ಕಾಯಂ ಸಂಘಟನೆಯಾಗಿ ಪರಿವರ್ತಿಸಬೇಕಿದೆ.

ಮತಗಳ್ಳತನದ ವಿರುದ್ಧದ ಹೋರಾಟಕ್ಕೊಂದು ಹೊಸ ತಿರುವು ನೀಡಬಲ್ಲ ಜನಸ್ತೋಮದ ಸಭೆಯಿದು. ಆದರೆ ಮತದಾನದ ಹಕ್ಕು ಪಕ್ಷಗಳ ಸಮಸ್ಯೆಯಷ್ಟೇ ಅಲ್ಲ, ಅದು ನಾಗರಿಕರ ಮೂಲಭೂತ ಜನತಾಂತ್ರಿಕ ಹಕ್ಕಿನ ಅಪಹರಣವೂ ಹೌದು. ಹೀಗಾಗಿ ಹೋರಾಟದ ನಂತರ ಪಕ್ಷಗಳ ಸಂಘಟನೆಗಳನ್ನು ಬಲಿಷ್ಠವಾಗಿ ಕಟ್ಟುವುದು ಪ್ರತಿಪಕ್ಷಗಳ ಮುಂದಿರುವ ದೊಡ್ಡ ಸವಾಲು.

ಜೊತೆಗೆ ಮೋಶಾ ಪಕ್ಷದ ಹಣಬಲ, ಮಾಧ್ಯಮಗಳ ಪ್ರಭಾವ, ತನಿಖಾ ಸಂಸ್ಥೆಗಳ ದುರ್ಬಳಕೆ, ಚುನಾವಣಾ ಆಯೋಗದಂತಹ ಸಂವಿಧಾನಾತ್ಮಕ ಸ್ವಾಯತ್ತ ಸಂಸ್ಥೆಗಳ ಬೆನ್ನು ಮೂಳೆ ಮುರಿತದ ಮುಂದೆ ಪ್ರತಿಪಕ್ಷಗಳು ಈಗಲೂ ‘ದುರ್ಬಲವೇ’. ತಮ್ಮ ಎಲ್ಲ ನೈತಿಕ ಮತ್ತು ಆರ್ಥಿಕ ಶಕ್ತಿಯನ್ನು ಅವು ಜನತೆಯಿಂದಲೇ ಪಡೆಯಬೇಕು. ಹೀಗೆ ಪಡೆಯಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಜನಾಂದೋಲನವು ಬೇರು ಮಟ್ಟ ತಲುಪಬೇಕು. ಪರಿಣಾಮವಾಗಿ ಹುಟ್ಟುವ ಪ್ರಚಂಡ ಜನಶಕ್ತಿ ಮಾತ್ರವೇ ಸರ್ವಾಧಿಕಾರಿ ಶಕ್ತಿಗಳನ್ನು ಧೂಳೀಪಟ ಮಾಡಬಲ್ಲದು.

ಪ್ರತಿಪಕ್ಷಗಳು ಮತದಾರರ ಮುಂದೆ ಪರ್ಯಾಯ ನೀತಿ ನಿರ್ಧಾರಗಳನ್ನು ಇಡಬೇಕು. ನಾಯಕತ್ವಗಳು ವಿಶ್ವಾಸಾರ್ಹ ಎನಿಸಿಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರಗಳನ್ನೂ ಮಂಡಿಸಬೇಕು.

ಪ್ರತಿಪಕ್ಷಗಳು ಬೀದಿ ಹೋರಾಟಗಳಲ್ಲಿ ಮುಳುಗಿ ಚುನಾವಣೆ ಸಂಘಟನೆಯನ್ನು ನಿರ್ಲಕ್ಷಿಸಬಾರದು. ಜನತಂತ್ರವನ್ನು ಕಾಪಾಡುವ ಆಂದೋಲನ ಮತ್ತು ಸರ್ವಾಧಿಕಾರಕ್ಕೆ ಪರ್ಯಾಯವನ್ನು ಕಟ್ಟುವ ಕೆಲಸ ಒಟ್ಟೊಟ್ಟಿಗೇ ನಡೆಯಬೇಕು.

ಪ್ರತಿಪಕ್ಷಗಳು ಈಗಿರುವ ಚುನಾವಣಾ ನಿಯಮಗಳ ಅಡಿಯಲ್ಲೇ ಅಧಿಕಾರಕ್ಕಾಗಿ ಸ್ಪರ್ಧಿಸುವ ಜೊತೆ ಜೊತೆಗೆ ಅದೇ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನಿಯಮಗಳ ಸುಧಾರಣೆಗೆ ಆಗ್ರಹಿಸತೊಡಗಿವೆ. ಅತ್ಯಂತ ನ್ಯಾಯಬದ್ಧ ಹೋರಾಟವಿದು.

ಪ್ರತಿಪಕ್ಷಗಳ ಸಂಘಟನಾ ಸಂಪನ್ಮೂಲಗಳು ಅತ್ಯಂತ ಸೀಮಿತ. ಮೋಶಾ ಸರ್ಕಾರ ಅವುಗಳನ್ನು ಅಕ್ರಮವಾಗಿ ಹಿಂಡಿ ಹಾಕಿದೆ.

1975ರ ಜೂನ್ 25ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಪ್ರಧಾನಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ನಡೆದ ಈ ಹೋರಾಟಕ್ಕೆ ಲೋಕನಾಯಕ ಜಯಪ್ರಕಾಶ್ ನಾರಾಯಣ್ (ಜೆಪಿ) ನೇತೃತ್ವ ವಹಿಸಿದ್ದರು.

1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ 1971ರ ಲೋಕಸಭಾ ಚುನಾವಣೆಯನ್ನು ಅಸಿಂಧುಗೊಳಿಸಿತು.

ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಈ ತೀರ್ಪು ಹೊರಬಿದ್ದಿತ್ತು. ಇಂದಿರಾ ಗಾಂಧಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದವು. ಜೂನ್ 24ರಂದು ಸುಪ್ರೀಂ ಕೋರ್ಟ್ ಷರತ್ತುಬದ್ಧ ತಡೆಯಾಜ್ಞೆ ನೀಡಿತು. ಮರುದಿನವೇ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಸುಮಾರು ಒಂದು ಲಕ್ಷ ಜನ ರಾಮಲೀಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ವರದಿಗಳು ಹೇಳುತ್ತವೆ.

ಜಯಪ್ರಕಾಶ್ ನಾರಾಯಣ್ ಮೂರು ಪ್ರಮುಖ ಕರೆಗಳನ್ನು ನೀಡಿದ್ದರು. ಇಂದಿರಾ ಗಾಂಧಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶಾದ್ಯಂತ ಅಹಿಂಸಾತ್ಮಕ ಸತ್ಯಾಗ್ರಹ ನಡೆಸಬೇಕು. ಪೊಲೀಸರು ಮತ್ತು ಸೈನಿಕರು ಕಾನೂನುಬಾಹಿರ ಆದೇಶಗಳನ್ನು ಪಾಲಿಸಬಾರದು.

 “ಸಿಂಹಾಸನ ಖಾಲಿ ಮಾಡಿ, ಜನತೆ ಬರುತ್ತಿದ್ದಾರೆ!” ಎಂಬ ಪ್ರಸಿದ್ಧ ಘೋಷಣೆಯನ್ನು ಸಮಾವೇಶದಲ್ಲಿ ಜೆಪಿ ಮೊಳಗಿಸಿದರು. ಈ ಭಾಷಣದ ವಿರುದ್ಧ ಇಂದಿರಾ ಗಾಂಧಿ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇಂದಿನ ಮೋದಿ ಸರ್ಕಾರ ಕೂಡ ಭಾನುವಾರದ ಪ್ರತಿಪಕ್ಷಗಳ ರ್ಯಾಲಿಯ ಮೇಲೆ ಕಟು ದಾಳಿ ನಡೆಸಿದೆ.

ಪ್ರತಿಭಟನೆಯ ನಂತರ ಜೂನ್ 25ರ ರಾತ್ರಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಜಯಪ್ರಕಾಶ್ ನಾರಾಯಣ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸೆನ್ಸಾರ್‌ಶಿಪ್ ಹೇರಲಾಯಿತು. ನಾಗರಿಕರ ಮೂಲಭೂತ ಹಕ್ಕುಗಳ ಜಾರಿಗೆ ಗಂಭೀರ ನಿರ್ಬಂಧ ವಿಧಿಸಲಾಯಿತು. ಪ್ರತಿಭಟನೆಗಳು ಮತ್ತು ರಾಜಕೀಯ ಚಟುವಟಿಕೆಗಳನ್ನು ವ್ಯಾಪಕವಾಗಿ ನಿರ್ಬಂಧಿಸಲಾಯಿತು.

ತುರ್ತು ಪರಿಸ್ಥಿತಿಯ ನಂತರ ರಚನೆಯಾದ ಶಾ ತನಿಖಾ ಆಯೋಗ ಮಹತ್ವದ ಅಂಶಗಳನ್ನು ದಾಖಲಿಸಿತು. ತುರ್ತು ಪರಿಸ್ಥಿತಿ ಘೋಷಿಸಲು ಅಗತ್ಯವಾದ ಪರಿಸ್ಥಿತಿ ಇತ್ತು ಎಂಬುದಕ್ಕೆ ಸಮರ್ಪಕ ಪುರಾವೆಗಳಿರಲಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿತು.

ಜೂನ್ 25ಕ್ಕೂ ಮೊದಲೇ ತುರ್ತು ಪರಿಸ್ಥಿತಿ ಜಾರಿಗೊಳಿಸುವ ಸಿದ್ಧತೆ ನಡೆದಿತ್ತು ಎಂಬುದನ್ನೂ ಆಯೋಗ ದಾಖಲಿಸಿತು. 1975ರ ಜೂನ್ 25ರಂದು ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆ ಭಾರತದ ರಾಜಕೀಯ ಇತಿಹಾಸದ ಮಹತ್ವದ ಘಟನೆಯಾಯಿತು.

21 ತಿಂಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. 1977ರ ಮಾರ್ಚ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋತಿತು. ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂತು.

ಅಂದು ಆರೆಸ್ಸೆಸ್ ಮತ್ತು ಜನಸಂಘ (ಇಂದಿನ ಬಿಜೆಪಿ) ಹಾಗೂ ಸಂಘಪರಿವಾರದ ಇತರೆ ಸಂಘಟನೆಗಳು ಜೆಪಿ ಜೊತೆ ಕೈ ಜೋಡಿಸಿದ್ದವು. ಇಂದು ಮೋದಿ ಸರ್ಕಾರದೊಂದಿಗೆ ನಿಂತಿವೆ. ಮೋದಿ ಸರ್ಕಾರ ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡು, ಅದನ್ನು ಉಳಿಸಿಕೊಳ್ಳಲು ಯಾವುದೇ ಅಕ್ರಮ-ಅನೈತಿಕ ಪಾತಾಳಕ್ಕೆ ಕುಸಿಯಬಲ್ಲದು ಎಂಬುದನ್ನು ಈಗಾಗಲೇ ಸಂಶಯಕ್ಕೆ ಎಡೆಯಿಲ್ಲದಂತೆ ತೋರಿಸಿಕೊಟ್ಟಿದೆ.

ಮೋಶಾ ಆಡಳಿತದಲ್ಲಿ ಭಾರತ ಈಗಾಗಲೇ ಚುನಾವಣೆ ವ್ಯವಸ್ಥೆಯುಳ್ಳ ಸರ್ವಾಧಿಕಾರಿ ದೇಶವಾಗಿ ಬದಲಾಗಿದೆ. ಜನತಂತ್ರ ನಿರಂತರ ಇಳಿಜಾರಿನ ಹಾದಿಯಲ್ಲಿದೆ. ನಾಗರಿಕರ ಮೂಲಭೂತ ಹಕ್ಕುಗಳು ಸತತವಾಗಿ ಸವೆಯುತ್ತಿವೆ. 

1975ರಲ್ಲಿ ಜೆಪಿ ನೇತೃತ್ವದಲ್ಲಿ ಶುರುವಾದ ಅಂತಹುದೇ ಆಂದೋಲನಕ್ಕೆ ಭಾನುವಾರದ ರಾಮಲೀಲಾ ಮೈದಾನದ ರ್ಯಾಲಿ ಅಡಿಗಲ್ಲು ಇರಿಸಿದೆ. ಈ ಅಡಿಗಲ್ಲಿನ ಮೇಲೆ ಜನತಂತ್ರವನ್ನು ಪುನಃ ಬಲಿಷ್ಠವಾಗಿ ಕಟ್ಟಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೈದರಾಬಾದ್ | ಅಂಡಾಣು ದಂಧೆ ಜಾಲ ಭೇದಿಸಿದ ಪೊಲೀಸರು!

ಹೈದರಾಬಾದ್ ನಗರದ ವಿವಿಧೆಡೆ ದಾಳಿ ನಡೆಸಿದ ಪೊಲೀಸರು, ಬೃಹತ್ ಅಂತರರಾಜ್ಯ ಅಂಡಾಣು...

ಕಲಬುರಗಿ | ಹಾಲಿನ ದರ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ರಿಂದ ₹12ರವರೆಗೆ...

SIR ಅಂತಿಮ ಮತದಾರರ ಪಟ್ಟಿ ತಿರಸ್ಕರಿಸಿ; ರಾಜ್ಯ ಸರ್ಕಾರಕ್ಕೆ ನಾಗರಿಕ ಸಂಘಟನೆಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿರುವ ಎಸ್‌ಐಆರ್‌ನ ಅಂತಿಮ ಮತದಾರರ ಪಟ್ಟಿಯನ್ನು ಕರ್ನಾಟಕ...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ ಜನಾಂದೋಲನವಾಗಬೇಕು…

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು...