ಸೂರತ್ | 100ಕ್ಕೂ ಹೆಚ್ಚು ಗುಡಿಸಲುಗಳು ಧ್ವಂಸ: ಪಾಲಿಕೆ – ಪೊಲೀಸರ ನಡುವೆ ಕೆಸರೆರಚಾಟ!

Date:

ಕೊಳಚೆ ಪ್ರದೇಶದಲ್ಲಿದ್ದ ಬಡ ಜನರು ವಾಸಿಸುತ್ತಿದ್ದ ಸುಮಾರು 100ಕ್ಕೂ ಹೆಚ್ಚು ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮ ಮಾಡಿರುವ ಘಟನೆ ಗುಜರಾತ್‌ನ ಸೂರತ್ ನಗರದ ವೇದ್ ದರ್ವಾಜಾ ಪ್ರದೇಶದಲ್ಲಿ ನಡೆದಿದೆ. ಗುಡಿಸಲುಗಳನ್ನು ಧ್ವಂಸಗೈದು, ಜಡವರನ್ನು ಬೀದಿ ಪಾಲು ಮಾಡಲಾಗಿದೆ. ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿದ್ದು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸೂರತ್ ಮಹಾನಗರ ಪಾಲಿಕೆ ಮತ್ತು ಪೊಲೀಸರು ಪರಸ್ಪರರ ವಿರುದ್ಧ ದೂಷಣೆಗಳನ್ನು ಮಾಡುತ್ತಿದ್ದಾರೆ.

- Advertisement -

ಗುಡಿಸಲುಗಳನ್ನು ನೆಲಸಮಗೊಳಿಸಿದ್ದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿಯೊಬ್ಬರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮೇ 28ರಿಂದ ಸೂರತ್ ಪೊಲೀಸರ ರಕ್ಷಣೆಯೊಂದಿಗೆ ಈ ತೆರವು ಕಾರ್ಯಾಚರಣೆ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ, ಸೂರತ್ ಮಹಾನಗರ ಪಾಲಿಕೆ (SMC) ಇದರಲ್ಲಿ ತನ್ನ ಪಾತ್ರವಿಲ್ಲ ಎಂದು ನಿರಾಕರಿಸಿದೆ. ಇನ್ನು, ಸೂರತ್ ಪೊಲೀಸರು ‘ತೆರವು ಕಾರ್ಯಾಚರಣೆಗೆ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಪಾಲಿಕೆ ಅಧಿಕಾರಿಗಳೇ ಕೇಳಿದ್ದರು’ ಎಂದು ವಾದಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಅರ್ಜಿದಾರ, ಸ್ಥಳೀಯ ನಿವಾಸಿ ಹುಸೇನ್ ಅಜೀಜ್ ಶೇಖ್ ಅವರು ಪ್ರಸ್ತುತ ಪ್ರಕರಣದಲ್ಲಿ ಗುಜರಾತ್ ಸರ್ಕಾರ, ಸೂರತ್ ಮಹಾನಗರ ಪಾಲಿಕೆ, ಸೂರತ್ ಪೊಲೀಸ್ ಕಮಿಷನರ್ ಹಾಗೂ ವಿಶೇಷ ಕಾರ್ಯಾಚರಣೆ ತಂಡವನ್ನು (SOG) ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. “ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ತಂಡದಲ್ಲಿ ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ಕೆಲವು ವ್ಯಕ್ತಿಗಳೊಂದಿಗೆ, ಸೂರತ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಚೌಕ್ ಬಜಾರ್ ಪೊಲೀಸ್ ಸಿಬ್ಬಂದಿ ಇದ್ದರು. ಇದು ಮಹಾನಗರ ಪಾಲಿಕೆಯದ್ದೇ ಕೆಲಸ” ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಆದರೆ, ಪಾಲಿಕೆ ಕಮಿಷನರ್ ಎನ್. ನಾಗರಾಜನ್ ಅವರು ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ತಮ್ಮ ಅಧಿಕಾರಿಗಳು ಕೇವಲ ಖಾಸಗಿ ವ್ಯಕ್ತಿಯೊಬ್ಬರು ಪ್ರಸ್ತಾಪಿಸಿದ ರಸ್ತೆಯ ಗುರುತು (ಡಿಮಾರ್ಕೇಷನ್) ಮಾಡಲು ಹೋಗಿದ್ದರಷ್ಟೇ. ಪಟ್ಟಣ ಯೋಜನೆ (ಟೌನ್ ಪ್ಲಾನಿಂಗ್) ಅಡಿಯಲ್ಲಿ ರಸ್ತೆ ನಿರ್ಮಿಸಲು ಆ ಜಾಗವನ್ನು ನಿಗದಿಪಡಿಸಲಾಗಿತ್ತು. ಸಾಮಾನ್ಯವಾಗಿ ಮೊದಲು ಜಾಗದ ಗುರುತು ಮಾಡಿ, ಕೆಲವು ದಿನಗಳ ನಂತರ ತೆರವು ಮಾಡಲಾಗುತ್ತದೆ. ಆದರೆ, ಈ ಧ್ವಂಸ ಕಾರ್ಯವನ್ನು ಪಾಲಿಕೆ ಮಾಡಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಸೂರತ್ ಪೊಲೀಸರ ವಾದವೇ ಬೇರೆಯಿದೆ. ನಾಸಿರ್‌ನಗರ ಕೊಳಚೆ ಪ್ರದೇಶದ ತೆರವು ಕಾರ್ಯಾಚರಣೆಗೆ ಬಿಗಿ ಭದ್ರತೆ ಒದಗಿಸುವಂತೆ ಸೂರತ್ ಮಹಾನಗರ ಪಾಲಿಕೆ ಅಧಿಕಾರಿಗಳಿಂದಲೇ ತಮಗೆ ಲಿಖಿತ ಅರ್ಜಿ ಮತ್ತು ಅಗತ್ಯ ದಾಖಲೆಗಳು ಬಂದಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಪಾಲಿಕೆಯ ಬೇಡಿಕೆಯ ಮೇರೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಮಾತ್ರ ತಾವಿಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾಗಿ ಅವರು ಹೇಳಿದ್ದಾರೆ.

ಈ ಮಧ್ಯೆ, ಸ್ಥಳೀಯ ಕಾಂಗ್ರೆಸ್ ನಾಯಕರು ಸಂತ್ರಸ್ತರ ಪರವಾಗಿ ಪಾಲಿಕೆ ಕಮಿಷನರ್, ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಹಾಗೂ ಮೇಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಕೊಳಚೆ ಪ್ರದೇಶದಲ್ಲಿ ಸುಮಾರು 35 ವರ್ಷಗಳಿಂದ 250ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇವರೆಲ್ಲರೂ ಪಾಲಿಕೆಗೆ ನಿಯಮಿತವಾಗಿ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಇವರ ಹೆಸರಿನಲ್ಲಿ ಅಧಿಕೃತ ವಿದ್ಯುತ್ ಮತ್ತು ನೀರಿನ ಸಂಪರ್ಕಗಳೂ ಇವೆ. ಹೀಗಿರುವಾಗ ಖಾಸಗಿ ಜಾಗ ಎಂಬ ಕಾರಣ ನೀಡಿ ಪಾಲಿಕೆ ಇವರನ್ನು ಹೇಗೆ ಒಕ್ಕಲೆಬ್ಬಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ನೆಹರೂ ನಿಂದನೆ ಎಂಬುದು ಸೆರಗಿಗೆ ಕಟ್ಟಿಕೊಂಡ ಕೆಂಡ! ಪರಮವಿಕೃತಿಯ ಈ ಪ್ರಾಜೆಕ್ಟು ಫಲಿಸುವುದಿಲ್ಲ

ಘಟನೆಯ ಕುರಿತು ಆಡಳಿತಾರೂಢ ಬಿಜೆಪಿಯ ಕತಾರ್‌ಗಾಮ್ ಶಾಸಕ ವಿನು ಮೊರಾಡಿಯಾ, “ಇಡೀ ಪ್ರಕ್ರಿಯೆಯಲ್ಲಿ ಏನೋ ತಪ್ಪು ನಡೆದಿದೆ. ಮನೆಗಳನ್ನು ನೆಲಸಮ ಮಾಡುವಾಗ ಸಾರ್ವಜನಿಕರು ಪ್ರಶ್ನಿಸಿದರೆ ಪಾಲಿಕೆ ಅಧಿಕಾರಿಗಳು ಸರಿಯಾದ ಉತ್ತರ ನೀಡಿಲ್ಲ. ಸ್ಥಳದಲ್ಲಿದ್ದ ಪೊಲೀಸರೂ ಸ್ಥಳೀಯರ ಪರವಾಗಿ ನಿಲ್ಲಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಮಗಿರುವ ಮಾಹಿತಿಯ ಪ್ರಕಾರ, ನಾಸಿರ್‌ನಗರದ ಸಮೀಪದಲ್ಲೇ ಬಿಲ್ಡರ್ ಒಬ್ಬರ ಜಾಗವಿದ್ದು, ಅವರ ನಿರ್ಮಾಣ ಯೋಜನೆಗಾಗಿ ರಸ್ತೆ ಮಾಡಿಕೊಳ್ಳಲು ಈ ಕೊಳಚೆ ಪ್ರದೇಶವನ್ನು ತೆರವುಗೊಳಿಸುವ ಸಂಚು ರೂಪಿಸಲಾಗಿದೆ. ಬಿಲ್ಡರ್‌ನ ಸ್ವಾರ್ಥಕ್ಕಾಗಿ ಇಡೀ ಕೊಳಚೆ ಪ್ರದೇಶವನ್ನೇ ಧ್ವಂಸ ಮಾಡಲು ಪಾಲಿಕೆ ಮುಂದಾಗಿರುವುದರ ಹಿಂದೆ ಅಧಿಕಾರಿಗಳ ಶಾಮೀಲಾತಿ ಇರುವ ಶಂಕೆಯಿದೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಸಂತ್ರಸ್ತರ ಪರವಾಗಿ ವಕೀಲ ಜಮೀರ್ ಶೇಖ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವವರೆಗೆ ಮತ್ತು ಅರ್ಜಿ ವಿಲೇವಾರಿಯಾಗುವವರೆಗೆ ಮುಂದಿನ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಸದ್ಯ ಹೈಕೋರ್ಟ್ ಈ ಅರ್ಜಿಯನ್ನು ಪುರಸ್ಕರಿಸಿದ್ದು, ಮುಂದಿನ ವಿಚಾರಣೆಗೆ ಖುದ್ದಾಗಿ ಹಾಜರಿರುವಂತೆ ಸೂರತ್ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಲಿನ ದರ ಏರಿಕೆ ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಬೃಹತ್ ಪ್ರತಿಭಟನೆ

ಹಾಲಿನ ದರ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ...

ಗ್ಯಾನೇಶ್ ಕುಮಾರ್ ವಿರುದ್ಧ ಲಂಚ ಆರೋಪ: ಕೇರಳ ಸರ್ಕಾರದಿಂದ ತನಿಖೆಗೆ ಆದೇಶ!

ಕೇರಳದ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಗುತ್ತಿಗೆದಾರರಿಂದ ಕೋಟಿಗಟ್ಟಲೆ ಲಂಚಕ್ಕೆ...

ರಾಮ-ಕೃಷ್ಣ ಹೋಲಿಕೆ ವಿವಾದ: ಬಾಗೇಶ್ವರ ಬಾಬಾ ವಿರುದ್ಧ ಯಾದವ ಸಮುದಾಯ ಆಕ್ರೋಶ!

ಧರ್ಮದ ಅಖಂಡತೆಯನ್ನು ಎತ್ತಿಹಿಡಿಯಬೇಕಾದ ಸಾರ್ವಜನಿಕ ವೇದಿಕೆಗಳೇ ಇತ್ತೀಚೆಗೆ ಧಾರ್ಮಿಕ ಒಡಕು ಮತ್ತು...

ಪತ್ರಿಕಾ ಸ್ವಾತಂತ್ರ್ಯ ಭಕ್ಷಕರು: ಜಾಗತಿಕ ಕಪ್ಪುಪಟ್ಟಿಗೆ ಅದಾನಿ, ಓಪ್‌ಇಂಡಿಯಾ, ಟ್ರಂಪ್ ಸೇರ್ಪಡೆ!

ಪ್ರಪಂಚದಾದ್ಯಂತ ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಮತ್ತು ಪತ್ರಕರ್ತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲು ಮುಂದಾಗಿರುವ...