ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ತನ್ನ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೇರಿದಂತೆ ಪಕ್ಷದ ಕೆಲವು ಹಿರಿಯ ಮುಖಂಡರಿಗೆ ಮತ್ತು ಮಾಜಿ ಸಚಿವರಿಗೆ ಟಿಕೆಟ್ ಘೋಷಿಸಲಾಗಿದೆ.
ಎಡಪ್ಪಾಡಿ ವಿಧಾನಸಭಾ ಕ್ಷೇತ್ರದಿಂದ ಪಳನಿಸ್ವಾಮಿ ಸ್ಪರ್ಧಿಸಲಿದ್ದಾರೆ. ಸಿ. ವಿಜಯಭಾಸ್ಕರ್ ವಿರಳಿಮಲೈ ವಿಧಾನಸಭಾ ಕ್ಷೇತ್ರದಿಂದ, ಎಂ.ಆರ್. ವಿಜಯಭಾಸ್ಕರ್ ಕರೂರು ವಿಧಾನಸಭಾ ಕ್ಷೇತ್ರದಿಂದ, ಎಸ್.ಪಿ. ವೇಲುಮಣಿ ಅವರು ತೊಂಡಮುತ್ತೂರ್ ವಿಧಾನಸಭಾ ಕ್ಷೇತ್ರದಿಂದ, ಮತ್ತು ಡಿ. ಜಯಕುಮಾರ್ ರಾಯಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಇದನ್ನೂ ಓದಿ :ತಮಿಳುನಾಡು ಚುನಾವಣೆ | ನಮ್ಮ ಪಕ್ಷ ಸಿದ್ಧಾಂತಕ್ಕೆ ಆದ್ಯತೆ ನೀಡುತ್ತದೆ : ಪಿ. ಷಣ್ಮುಗಂ
ಉಳಿದಂತೆ, ನಾಥಂ ಆರ್. ವಿಶ್ವನಾಥನ್ ಅವರು ನಾಥಂ ಕ್ಷೇತ್ರದಿಂದ, ಪಿ. ತಂಗಮಣಿ ಅವರು ಕುಮಾರಪಾಳ್ಯಂ ಕ್ಷೇತ್ರದಿಂದ, ಸಿ.ವಿ. ಷಣ್ಮುಗಂ ಅವರು ಮೈಲಂ ಕ್ಷೇತ್ರದಿಂದ, ಸೆಲ್ಲೂರ್ ಕೆ.ರಾಜು ಮಧುರೈ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ, ಕೆ.ಪಿ. ಅನ್ಬಳಗನ್ ಅವರು ಪಾಲಕೋಡ್ ಕ್ಷೇತ್ರದಿಂದ, ಆರ್.ಕಾಮರಾಜ್ ಅವರು ನನ್ನಿಲಂ ಕ್ಷೇತ್ರದಿಂದ, ಓ.ಎಸ್. ಮಣಿಯನ್ ಅವರು ವೇದಾರಣ್ಯಂ ಕ್ಷೇತ್ರದಿಂದ, ಸಿ.ವಿಜಯಭಾಸ್ಕರ್ ಅವರು ವಿರಾಲಿಮಲೈ ಕ್ಷೇತ್ರದಿಂದ, ಕಡಂಬೂರ್ ಸಿ.ರಾಜು ಕೋವಿಲ್ಪಟ್ಟಿ ಕ್ಷೇತ್ರದಿಂದ, ಆರ್.ಬಿ.ಉದಯಕುಮಾರ್ ಅವರು ತಿರುಮಂಗಲಂ ಕ್ಷೇತ್ರದಿಂದ, ಕೆ.ಟಿ. ರಾಜೇಂದ್ರ ಭಾಲಾಜಿ ಅವರು ಶಿವಕಾಶಿ ಕ್ಷೇತ್ರದಿಂದ, ಪಿ.ಬೆಂಜಮಿನ್ ಅವರು ಮಧುರವಾಯಲ್ ಕ್ಷೇತ್ರದಿಂದ, ಅಗ್ರಿ ಎಸ್.ಎಸ್.ಕೃಷ್ಣಮೂರ್ತಿ ಅವರು ಕಳಸಪಕ್ಕಂ ಕ್ಷೇತ್ರದಿಂದ, ವಿ.ವಿ. ರಾಜನ್ ಚೆಲ್ಲಪ್ಪ ಅವರು ತಿರುಪ್ಪರಕುಂದ್ರಂ ಕ್ಷೇತ್ರದಿಂದ, ಕೆ.ಸಿ. ಕರುಪ್ಪಣ್ಣನ್ ಅವರು ಭವಾನಿ ಕ್ಷೇತ್ರದಿಂದ, ಕೆ.ಸಿ. ವೀರಮಣಿ ಅವರು ಜೋಲಾರಪೇಟೆ ಕ್ಷೇತ್ರದಿಂದ, ಎಂ.ಆರ್.ವಿಜಯಭಾಸ್ಕರ್ ಕರೂರು ಕ್ಷೇತ್ರದಿಂದ, ಮತ್ತು ಎಸ್.ರಾಜೇಂದ್ರನ್ ಅವರು ಅರಿಯಲೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತಿಳಿಸಿದೆ.




