ಹೆಚ್ಚುವರಿ ಲಗೇಜ್‍ಗೆ ಹಣ ಪಾವತಿಸುವಂತೆ ಹೇಳಿದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಮಹಿಳೆ

Date:

  • ಲಗೇಜ್‌ ತೂಕ 22 ಕೆಜಿ ಇದ್ದ ಕಾರಣ ಹೆಚ್ಚುವರಿ ಹಣ ಪಾವತಿ ಮಾಡಿ ಎಂದ ಸಿಬ್ಬಂದಿ
  • ಪರಿಶೀಲನೆ ವೇಳೆ ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಲಗೇಜ್‍ಗೆ ಹಣ ಪಾವತಿಸುವಂತೆ ಹೇಳಿದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಮಹಿಳೆಯೊಬ್ಬರು ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.

- Advertisement -

40 ವರ್ಷದ ಗೃಹಿಣಿಯೊಬ್ಬರು ಕಳೆದ ಸೋಮವಾರ ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಮುಂಬೈ-ಕೋಲ್ಕತ್ತಾ ವಿಮಾನದ ಚೆಕ್-ಇನ್ ಕೌಂಟರ್ ತಲುಪಿದ ಬಳಿಕ ಏರ್‌ಪೋರ್ಟ್‌ ಸಿಬ್ಬಂದಿಗೆ ಮಹಿಳೆಯೂ ತಮ್ಮ ಬೋರ್ಡಿಂಗ್ ಪಾಸ್‌ ಜತೆಗೆ ಎರಡು ಬ್ಯಾಗಗಳನ್ನು ನೀಡಿದ್ದಾರೆ. ಈ ವೇಳೆ, ಅವರ ಲಗೇಜ್‌ ತೂಕ 22 ಕೆಜಿ ಇದ್ದ ಕಾರಣ ಸಿಬ್ಬಂದಿ ಹೆಚ್ಚುವರಿ ಹಣ ಪಾವತಿ ಮಾಡಿ ಎಂದು ಕೇಳಿದ್ದಾರೆ.

ಏರ್‌ಲೈನ್ಸ್‌ನ ನಿಯಮಗಳ ಪ್ರಕಾರ, ಗರಿಷ್ಠ 15 ಕೆಜಿ ತೂಕದ ಒಂದು ಬ್ಯಾಗ್​ ಅನ್ನು ಮಾತ್ರ ಪ್ರಯಾಣಿಕರು ತಮ್ಮ ಜತೆಗೆ ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಆದರೆ, ಮಹಿಳೆಯ ಬ್ಯಾಗ್‌ನ ತೂಕ 22 ಕೆಜಿ ಇದ್ದ ಹಿನ್ನೆಲೆ, ಸಿಬ್ಬಂದಿ ಹೆಚ್ಚುವರಿ ಹಣ ಪಾವತಿಸುವಂತೆ ಕೇಳಿದ್ದಾರೆ.

ಮಹಿಳೆಯೂ ಹೆಚ್ಚುವರಿ ಹಣ ಪಾವತಿ ಮಾಡಲು ನಿರಾಕರಿಸಿದ್ದು, ಪ್ರತಿಯಾಗಿ ಸಿಬ್ಬಂದಿ ಜತೆಗೆ ಕೆಲ ಸಮಯ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ, ತಮ್ಮ ಬ್ಯಾಗ್‌ನಲ್ಲಿ ಬಾಂಬ್‌ ಇರುವುದಾಗಿ ಹೇಳಿದ್ದಾರೆ.

ಮಹಿಳೆಯ ಈ ಹೇಳಿಕೆಯೂ ಕೆಲ ಸಮಯ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರಲ್ಲಿಯೂ ಆತಂಕದ ವಾತಾವರಣ ಸೃಷ್ಠಿ ಮಾಡಿತ್ತು. ಈ ಮಾತನ್ನು ಆಲಿಸಿದ ಕರ್ತವ್ಯ ನಿರತ ಭದ್ರತಾ ಪಡೆ ಸಿಬ್ಬಂದಿ ಮಹಿಳೆಯ ಬ್ಯಾಗ್‌ ಅನ್ನು ಪರಿಶೀಲಿಸಿದರು. ಆದರೆ ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಈ ಸುದ್ದಿ ಓದಿದ್ದೀರಾ? ಲೋಕಸಭೆ ಚುನಾವಣೆಗೆ ಬಿಬಿಎಂಪಿ ಸಿದ್ಧತೆ | ಜು. 21ರಿಂದ ಮತದಾರರ ಪಟ್ಟಿ ಪರಿಷ್ಕರಣೆ

ನಂತರ ಮಹಿಳೆಯನ್ನು ಏರ್‌ಪೋರ್ಟ್‌ ಸಿಬ್ಬಂದಿ ಸಹರಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಹಿಳೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಕೋರ್ಟ್ ಮುಂದೆ ಹಾಜರುಪಡಿಸಿ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಹರಾ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಗುರುತನ್ನು ಗೌಪ್ಯತೆಯ ಕಾರಣದಿಂದಾಗಿ ಪೊಲೀಸರು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ಮೂವರ ಬಲಿ, 7 ಮನೆಗಳಿಗೆ ಬೆಂಕಿ

ದೀರ್ಘಕಾಲದಿಂದ ಜನಾಂಗೀಯ ಸಂಘರ್ಷಕ್ಕೆ ಈಡಾಗಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್‌ಪೋಕ್ಪಿ...

ದೆಹಲಿ ಪ್ರತಿಭಟನೆ | ವಶಕ್ಕೆ ಪಡೆದ ನೂರಾರು ಪ್ರತಿಭಟನಾಕಾರರನ್ನು ಸ್ಟೇಡಿಯಂಗೆ ದಬ್ಬಿದ ಪೊಲೀಸರು

ದೆಹಲಿಯ ವಿವಿಧ ಪ್ರದೇಶಗಳಿಂದ CJP ನೂರಾರು ಕಾರ್ಯಕರ್ತರು ಸೇರಿದಂತೆ ಹಲವು ನಾಗರಿಕರು...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ದೆಹಲಿಯಲ್ಲಿ ಮೂವರು ಮಾಜಿ ಸಿಎಂ – ಮಮತಾ, ಪಿಣರಾಯಿ, ಕೇಜ್ರಿವಾಲ್ – ಬಂಧನ

ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ...

ಅ.12ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಪ್ರತಿಭಟನೆ: ಕೆ.ಸಿ. ವೇಣುಗೋಪಾಲ್

ಜನರ ಮತದಾನದ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟವು ಸೋಮವಾರ ನವದೆಹಲಿಯಲ್ಲಿ...