ಯಾದಗಿರಿ | ಯುವಜನರಲ್ಲಿ ನಾಯಕತ್ವ ಗುಣ ಬೆಳೆಸಲು ತರಬೇತಿ ಅಗತ್ಯ: ಶರಣಬಸವ ಪೊಲೀಸ್ ಬೀರದಾರ್

Date:

ಯುವಜನರು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತು ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶರಣಬಸವ ಪೊಲೀಸ್ ಬೀರದಾರ್ ಹೇಳಿದರು.

- Advertisement -

ಶಹಾಪುರ ತಾಲ್ಲೂಕಿನ ಸೈದಾಪುರದ ಯುನೈಟೆಡ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್ (ಐಎಸ್‌ಐ), ಬೆಂಗಳೂರು ಹಾಗೂ ಸರ್ವೋದಯ ಟ್ರಸ್ಟ್ ಕನ್ನೆಕೋಳೂರು, ಕನಸು ಟ್ರಸ್ಟ್ ಹುಲ್ಕಲ್ (ಜೆ), ಸುಮಿತ್ ಸಂಸ್ಥೆ ರಸ್ತಾಪುರ ಸಹಯೋಗದಲ್ಲಿ ಆಯೋಜಿಸಿರುವ ಗ್ರಾಮೀಣ ಯುವಜನರಿಗಾಗಿ ಮೂರು ದಿನಗಳ ಸಾಮರ್ಥ್ಯ ವರ್ಧನಾ ತರಬೇತಿ ‘ನಾವು ಮತ್ತು ಸಮಾಜ’ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

‘ಯುವಕರು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು. ಎದುರಾಗುವ ಸವಾಲುಗಳಿಗೆ ಎದೆಗುಂದದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ, ಶಿಸ್ತು, ಸಾಮಾಜಿಕ ಕಾಳಜಿ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದರು.

2710434

ಐಎಸ್‌ಐ ರಾಜ್ಯ ಸಂಯೋಜಕ ಹಾಗೂ ವಕೀಲ ವಸಂತ್ ಕುಮಾರ್ ಮಾತನಾಡಿ, ‘ಗ್ರಾಮೀಣ ಯುವಜನರಲ್ಲಿ ಸ್ವ-ಅರಿವು, ವ್ಯಕ್ತಿತ್ವ ವಿಕಾಸ, ನಾಯಕತ್ವ ಸಾಮರ್ಥ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಯುವಕರು ಸಮಾಜದ ವಾಸ್ತವಗಳನ್ನು ಅರ್ಥೈಸಿಕೊಂಡು ಸಕಾರಾತ್ಮಕ ಬದಲಾವಣೆಯ ಭಾಗವಾಗಬೇಕು’ ಎಂದು ಹೇಳಿದರು.

ಶಿಬಿರದಲ್ಲಿ ವ್ಯಕ್ತಿತ್ವ ವಿಕಾಸ, ಸ್ವ-ಅರಿವು ಮತ್ತು ಸಮಾಜ, ನಾಯಕತ್ವ ಕೌಶಲ್ಯ, ಸಂವಹನ ಸಾಮರ್ಥ್ಯ, ಸಂವಿಧಾನ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ.

ಇದನ್ನು ಓದಿದ್ದೀರಾ? ಕಲಬುರಗಿ | ಅಧ್ಯಾಪಕರು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳುವುದು ಅಗತ್ಯ: ತಹಸೀಲ್ದಾರ್ ಅಂಜುಮ್ ತಬಸ್ಸುಮ್

ಸಂಪನ್ಮೂಲ ವ್ಯಕ್ತಿ ಡಾ. ಶ್ರೀನಿವಾಸ, ಎಸ್‌ಬಿಐ ಸಿಬ್ಬಂದಿ ರವಿಚಂದ್ರ, ಕನಸು ಟ್ರಸ್ಟ್ ಕಾರ್ಯದರ್ಶಿ ಸಂಗೀತ ಹುಲ್ಕಲ್, ಸರ್ವೋದಯ ಟ್ರಸ್ಟ್ ಸದಸ್ಯ ಮೋಹನ ಕುಮಾರ್, ಸುಮಿತ್ ಸಂಸ್ಥೆಯ ಮಲ್ಲಿಕಾರ್ಜುನ ಅರಬೋಳ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ದೇವಿಂದ್ರ ಹುಲ್ಕಲ್ (ಜೆ) ನಿರೂಪಿಸಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎಸ್‌ಐಆರ್: ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಪಾರದರ್ಶಕ ಪರಿಶೀಲನೆ ನಡೆಸಲಿ: ಬಹುಭಾಷ ನಟ ಪ್ರಕಾಶ್ ರೈ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲಗಳಿಗೆ...

ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ವಿರುದ್ಧ ದಾಳಿ – ರೂ.16 ಲಕ್ಷ ಮೌಲ್ಯದ ಸೊತ್ತು ವಶ

ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ...

ಬಾಗಲಕೋಟೆ | ಬೆಳೆ ವಿಮೆ ಪರಿಹಾರದಲ್ಲಿ ವಿಳಂಬ ಬೇಡ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಅರ್ಹ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೊರೆಯಬೇಕಾದ...

ಉಡುಪಿ | ಹೂಡೆಯಲ್ಲಿ ನವಜಾತ ಶಿಶು ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ SDPI ಮನವಿ

ಉಡುಪಿ ನಗರದ ಹೂಡೆ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್ 7ರಂದು ನಡೆದ ನವಜಾತ...