ಉತ್ತರಾಖಂಡ | ಹೆಲಿಕಾಪ್ಟರ್ ಬಳಿ ಸೆಲ್ಫೀ ತೆಗೆದುಕೊಳ್ಳುವ ವೇಳೆ ಹಿಂಬದಿಯ ಚಕ್ರ ಬಡಿದು ಅಧಿಕಾರಿ ಸಾವು

Date:

  • ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿದ್ದ ಜಿತೇಂದ್ರ ಸೈನಿ
  • ಕೇದಾರನಾಥದ ಸರ್ಕಾರಿ ಸ್ವಾಮ್ಯದ ಗಢವಾಲ್ ಮಂಡಲ ನಿಗಮ ಹೆಲಿಪ್ಯಾಡ್ ನಲ್ಲಿ ಘಟನೆ

ಉತ್ತರಾಖಂಡ ರಾಜ್ಯದ ಕೇದಾರನಾಥದಲ್ಲಿ ಹೆಲಿಕಾಪ್ಟರ್‌ನ ಹಿಂಭಾಗದ ಚಕ್ರ (ಟೇಲ್‌ ರೋಟರ್‌) ಬಡಿದು ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತ ಅಧಿಕಾರಿಯನ್ನು ಜಿತೇಂದ್ರ ಕುಮಾರ್‌ ಸೈನಿ ಎಂದು ಗುರುತಿಸಲಾಗಿದೆ. ಮೃತರು ಉತ್ತರಾಖಂಡದ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (ಯುಸಿಎಡಿಎ) ಅಧಿಕಾರಿಯಾಗಿದ್ದರು. ಜಿತೇಂದ್ರ ಸೈನಿ ಅವರು ಆರ್ಥಿಕ ವಿಭಾಗದ ಉಸ್ತುವಾರಿ ವಹಿಸಿರುವ ಪ್ರಾಧಿಕಾರ ಉತ್ತರಾಖಂಡ ರಾಜ್ಯದಲ್ಲಿ ಹೆಲಿಕಾಪ್ಟರ್‌ ಸೇವೆ ನಿರ್ವಹಣೆ ಮಾಡುತ್ತದೆ.

ಉತ್ತರಾಖಂಡ ರಾಜ್ಯದ ಕೇದಾರನಾಥದ ಸರ್ಕಾರಿ ಸ್ವಾಮ್ಯದ ಗಢವಾಲ್‌ ಮಂಡಲ ನಿಗಮ ಹೆಲಿಪ್ಯಾಡ್‌ನಲ್ಲಿ ಭಾನುವಾರ ಮಧ್ಯಾಹ್ನ 2.15ಕ್ಕೆ ಘಟನೆ ನಡೆದಿದೆ ಎಂದು ಇಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿ ವಿಶಾಖ ಅಶೋಕ್‌ ಭಂದಾನೆ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಿತೇಂದ್ರ ಸೈನಿ ಅವರು ಪ್ರಯಾಣದ ವ್ಯವಸ್ಥೆ ಪರಿಶೀಲಿಸಲು ತೆರಳಿದ್ದ ವೇಳೆ ಹೆಲಿಕಾಪ್ಟರ್ ಬಳಿ ಸೆಲ್ಫೀ ತೆಗೆದುಕೊಳ್ಳುವ ವೇಳೆ ಹಿಂಬದಿ ಚಕ್ರ ಬಡಿದಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವಿಶಾಖ ಅಶೋಕ್‌ ತಿಳಿಸಿದರು.

ಅಕ್ಷಯ ತೃತೀಯ ಹಿನ್ನೆಲೆ ಚಾರ್‌ಧಾಮ್‌ ಯಾತ್ರೆಯು ಶನಿವಾರದಿಂದ (ಏಪ್ರಿಲ್‌ 22) ಆರಂಭವಾಗಿದೆ. ಮಾರನೇ ದಿನ ಈ ಘಟನೆ ನಡೆದಿದೆ.

ರಾಜ್ಯದ ಉತ್ತರಕಾಶಿಯಲ್ಲಿರುವ ಗಂಗೋತ್ರಿ ಮತ್ತು ಯಮುನೋತ್ರಿ ಬಾಗಿಲುಗಳನ್ನು ಯಾತ್ರೆಯ ಹಿನ್ನೆಲೆ ಈಗಾಗಲೇ ತೆರೆಯಲಾಗಿದೆ.

ಈ ಸುದ್ದಿ ಓದಿದ್ದೀರಾ? ಎಸ್‌ಸಿಒ ಶೃಂಗಸಭೆ | ಭಾಗವಹಿಸುವಿಕೆ ಖಚಿತಪಡಿಸಿದ ಚೀನಾ ರಕ್ಷಣಾ ಸಚಿವ ಲಿ ಶಾಂಗ್‌ಫು

ಇದೇ 25 ರಂದು ಕೇದಾರನಾಥ ದೇಗುಲವನ್ನು ಭಕ್ತರಿಗೆ ತೆರೆಯಲಿದ್ದಾರೆ. ಈ ಹಿನ್ನೆಲೆ ಸಿದ್ಧತೆಗಳ ಪರಿಶೀಲನೆಗೆ ಜತೇಂದ್ರ ಸೈನಿ ಹೆಲಿಪ್ಯಾಡ್‌ಗೆ ಭೇಟಿ ನೀಡಿದ್ದರು.

ಉತ್ತರಾಖಂಡ ರಾಜ್ಯದ ಚಾರ್‌ಧಾಮ್ ಯಾತ್ರೆಗೆ ಈಗಾಗಲೇ ಸುಮಾರು 16 ಲಕ್ಷ ಮಂದಿ ಭಕ್ತರು ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಬದರಿನಾಥ ದೇಗುಲವನ್ನು ಏಪ್ರಿಲ್‌ 27 ರಂದು ತೆರೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇದಾರನಾಥದಲ್ಲಿ ಆರಂಭವಾಗಿರುವ ಚಾರ್‌ಧಾಮ್‌ ಯಾತ್ರೆಗಾಗಿ ಈಗಾಗಲೇ ಲಕ್ಷಾಂತರ ಭಕ್ತರು ಯಾತ್ರೆ ಆರಂಭಿಸಿದ್ದಾರೆ. ಈ ವೇಳೆ ಗಂಗೋತ್ರಿ ಮತ್ತು ಯಮುನೋತ್ರಿಗೂ ಭಕ್ತರು ತೆರಳುತ್ತಾರೆ. ಈ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಾರಾಷ್ಟ್ರದಲ್ಲಿ ಬಿಜೆಪಿ ತಂತ್ರಕ್ಕೆ ಆಹುತಿಯಾಗುತ್ತಾ ಮಹಾಯುತಿ

ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಕೇಂದ್ರ...

ಮೂರನೇ ಬಾರಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣವಚನ

ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಪೆಮಾ ಖಂಡು...

ಗಾಜಿಯಾಬಾದ್‌ನ ವಸತಿ ಕಟ್ಟಡದಲ್ಲಿ ಬೆಂಕಿ; ಐವರು ಸಾವು

ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಸಾವನ್ನಪ್ಪಿದ್ದಾರೆ...

ಜಮ್ಮು ಕಾಶ್ಮೀರ| ನಾಲ್ವರು ಉಗ್ರರ ರೇಖಾಚಿತ್ರ ಬಿಡುಗಡೆ, 20 ಲಕ್ಷ ರೂ ಬಹುಮಾನ ಘೋಷಣೆ

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ದೋಡಾ ಜಿಲ್ಲೆಯಲ್ಲಿ ಎರಡು ದಾಳಿಗಳಲ್ಲಿ...