ಉತ್ತರಾಖಂಡ SIR | ಒಬ್ಬರೇ ವ್ಯಕ್ತಿಯಿಂದ 5,906 ಆಕ್ಷೇಪಣಾ ಅರ್ಜಿ; ಕಾಂಗ್ರೆಸ್‌ ಆರೋಪವೇನು?

Date:

ಉತ್ತರಾಖಂಡದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಲವು ಅಚ್ಚರಿಯ ಅಂಕಿ-ಅಂಶಗಳೊಂದಿಗೆ ವಿವಾದಕ್ಕೆ ಕಾರಣವಾಗಿದೆ. ಇಲ್ಲಿವರೆಗೆ ರಾಜ್ಯಾದ್ಯಂತ 59,604 ಆಕ್ಷೇಪಣೆಗಳು ದಾಖಲಾಗಿದ್ದು, ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರೇ ವ್ಯಕ್ತಿಯೇ ಬರೋಬ್ಬರಿ 5,906 ಆಕ್ಷೇಪಣೆಗಳನ್ನು ಸಲ್ಲಿಸಿರುವುದು ಗಮನ ಸೆಳೆದಿದೆ.

- Advertisement -

ಚುನಾವಣಾ ಅಧಿಕಾರಿಗಳು ಸಿದ್ಧಪಡಿಸಿರುವ ವಿಶ್ಲೇಷಣಾ ವರದಿ ಪ್ರಕಾರ, ರಾಜ್ಯದಲ್ಲಿ ದಾಖಲಾಗಿರುವ 59,604 ಆಕ್ಷೇಪಣೆಗಳಲ್ಲಿ ಶೇ.90ಕ್ಕೂ ಹೆಚ್ಚು ಆಕ್ಷೇಪಣೆಗಳು ಬಯಲು ಪ್ರದೇಶಗಳ ಜಿಲ್ಲೆಗಳಿಂದ ಬಂದಿವೆ. ಹೆಚ್ಚಿನ ಪ್ರಮಾಣದ ಆಕ್ಷೇಪಣೆಗಳು ಚುನಾವಣಾ ಆಯೋಗಕ್ಕೆ ಮತದಾರರ ವಿವರಗಳನ್ನು ಪರಿಶೀಲಿಸುವ ಸವಾಲನ್ನು ತಂದೊಡ್ಡಿವೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಒಟ್ಟು ಆಕ್ಷೇಪಣೆಗಳಲ್ಲಿ 40,906 ಮತದಾರರು ತಮ್ಮ ನೋಂದಾಯಿತ ವಿಳಾಸದಲ್ಲಿ ಪತ್ತೆಯಾಗಿಲ್ಲ ಅಥವಾ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ ಎಂಬ ಕಾರಣ ನೀಡಲಾಗಿದೆ. ಇದು ಒಟ್ಟು ಆಕ್ಷೇಪಣೆಗಳ ಪೈಕಿ ಶೇ.69ರಷ್ಟಾಗಿದೆ.

ಇದಲ್ಲದೆ, 2,575 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬ ನಿರ್ದಿಷ್ಟ ಕಾರಣದಡಿ ದೂರುಗಳನ್ನು ಸಲ್ಲಿಸಲಾಗಿದೆ. ಆದರೆ ಮತದಾರರು ಮನೆಯಲ್ಲಿ ಪತ್ತೆಯಾಗದಿರುವುದು ಮಾತ್ರ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಸಕಾರಣವಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತಗೊಳಿಸುವುದೇ SIR ಪ್ರಕ್ರಿಯೆಯ ಪ್ರಮುಖ ಉದ್ದೇಶ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ರಾಜ್ಯದಲ್ಲೇ ಅತಿ ಹೆಚ್ಚು ಆಕ್ಷೇಪಣೆಗಳು ಕಿಚ್ಚಾ ವಿಧಾನಸಭಾ ಕ್ಷೇತ್ರದಲ್ಲಿ (8,767) ದಾಖಲಾಗಿವೆ. ಈ ಪೈಕಿ 5,906 ಆಕ್ಷೇಪಣೆಗಳನ್ನು ಒಬ್ಬರೇ ಸಲ್ಲಿಸಿದ್ದಾರೆ. ಚುನಾವಣಾ ಅಧಿಕಾರಿಗಳ ವರದಿಯಲ್ಲಿ ಆ ವ್ಯಕ್ತಿಯನ್ನು ರಾಜೇಶ್‌ ತಿವಾರಿ ಎಂದು ಗುರುತಿಸಲಾಗಿದೆ. ರಾಜ್ಯಾದ್ಯಂತ ದಾಖಲಾಗಿರುವ ಒಟ್ಟು 59,604 ಆಕ್ಷೇಪಣೆಗಳಲ್ಲಿ ತಿವಾರಿಯೊಬ್ಬರೇ ಸಲ್ಲಿಸಿರುವ ಆಕ್ಷೇಪಣೆಗಳ ಪ್ರಮಾಣ ಶೇ.10ರಷ್ಟಿದೆ. ಕಿಚ್ಚಾ ಕ್ಷೇತ್ರದಲ್ಲಿ ದಾಖಲಾಗಿರುವ ಆಕ್ಷೇಪಣೆಗಳ ಪೈಕಿ ಮೂರನೇ ಎರಡರಷ್ಟು ಆಕ್ಷೇಪಣೆಗಳು ಅವರಿಂದಲೇ ಬಂದಿವೆ.

ರಾಜೇಶ್‌ ತಿವಾರಿ ಅವರು ಆ ಕ್ಷೇತ್ರದಲ್ಲಿ ಬಿಜೆಪಿಯ ಬೂತ್‌ ಮಟ್ಟದ ಏಜೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕಾಂಗ್ರೆಸ್‌ ಬೆಂಬಲಿಗರೆಂದು ಗುರುತಿಸಲಾದ ಮತದಾರರ ವಿರುದ್ಧ ಉದ್ದೇಶಪೂರ್ವಕವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಅಮೇಂದ್ರ ಬಿಷ್ಟ್‌ ಆರೋಪಿಸಿದ್ದಾರೆ. SIR ಪ್ರಕ್ರಿಯೆಯನ್ನು ಮುಸ್ಲಿಂ ಮತದಾರರು ಮತ್ತು ಪ್ರತಿಪಕ್ಷ ಬೆಂಬಲಿಗರನ್ನು ಗುರಿಯಾಗಿಸಲು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

“ಮುಸ್ಲಿಂ ಮತದಾರರು ಮತ್ತು ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ” ಎಂದು ಕಾಂಗ್ರೆಸ್‌ನ ಅಮೇಂದ್ರ ಬಿಷ್ಟ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ಎಸ್‌ಐಆರ್‌ ಕರಡು ಮತದಾರರ ಪಟ್ಟಿ

ಆದರೆ ಕಾಂಗ್ರೆಸ್‌ನ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ರಾಜ್ಯ ಬಿಜೆಪಿ ವಕ್ತಾರೆ ಮಥುರಾ ಜೋಶಿ, “ನಿರ್ದಿಷ್ಟ ಸಮುದಾಯವನ್ನು ಓಲೈಸುವ ಉದ್ದೇಶದಿಂದ ಕಾಂಗ್ರೆಸ್‌ ಇಂತಹ ಆರೋಪಗಳನ್ನು ಮಾಡುತ್ತಿದೆ. ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲೇ SIR ಪ್ರಕ್ರಿಯೆ ನಡೆಯುತ್ತಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.

ಕಿಚ್ಚಾ ಬಳಿಕ ಹಲ್ದ್ವಾನಿಯಲ್ಲಿ 7,312, ಜಸ್ಪುರದಲ್ಲಿ 6,720, ಕಾಶಿಪುರದಲ್ಲಿ 5,704, ರುದ್ರಪುರದಲ್ಲಿ 4,958, ಗದರ್‌ಪುರದಲ್ಲಿ 4,785, ಝಬ್ರೇರಾದಲ್ಲಿ 2,333, ಸಿತಾರಗಂಜ್‌ನಲ್ಲಿ 1,612, ಬಾಜ್‌ಪುರದಲ್ಲಿ 1,475 ಮತ್ತು ಹರಿದ್ವಾರ ಗ್ರಾಮೀಣದಲ್ಲಿ 1,400 ಆಕ್ಷೇಪಣೆಗಳು ದಾಖಲಾಗಿವೆ. ಈ ಅಂಕಿ-ಅಂಶಗಳು ಬಹುತೇಕ ಆಕ್ಷೇಪಣೆಗಳು ರಾಜ್ಯದ ಬಯಲು ಪ್ರದೇಶಗಳಿಂದ, ಅದರಲ್ಲೂ ಉಧಮ್ ಸಿಂಗ್ ನಗರ ಮತ್ತು ಹರಿದ್ವಾರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಂದ ಬಂದಿರುವುದನ್ನು ತೋರಿಸುತ್ತವೆ.

ಒಟ್ಟು ಆಕ್ಷೇಪಣೆಗಳ ಪೈಕಿ 14,358 ಈಗಾಗಲೇ ಮತದಾರರಾಗಿ ನೋಂದಾಯಿತರಾಗಿರುವವರ ವಿರುದ್ಧ, 2,575 ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಆರೋಪ, 804 ಮೃತಪಟ್ಟಿರುವವರು, 143 ಅಪ್ರಾಪ್ತ ವಯಸ್ಕರು, 205 ಭಾರತೀಯ ನಾಗರಿಕರಲ್ಲ ಎಂಬ ಆರೋಪ, 607 ಸ್ಪಷ್ಟ ಕಾರಣ ನಮೂದಿಸದ ಪ್ರಕರಣಗಳು ದಾಖಲಾಗಿವೆ.

ಈ ಕುರಿತು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವಿಜಯ್‌ ಕುಮಾರ್‌ ಜೋಗ್‌ದಂಡೆ ಸ್ಪಷ್ಟನೆ ನೀಡಿದ್ದು, ಕೇವಲ ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ಮತದಾರರ ಹೆಸರನ್ನು ಸ್ವಯಂಚಾಲಿತವಾಗಿ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ. ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿ ಹಾಗೂ ಯಾರ ವಿರುದ್ಧ ಆಕ್ಷೇಪಣೆ ಸಲ್ಲಿಸಲಾಗಿದೆಯೋ ಆ ಮತದಾರ ಇಬ್ಬರಿಗೂ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ಮೂವರ ಬಲಿ, 7 ಮನೆಗಳಿಗೆ ಬೆಂಕಿ

ದೀರ್ಘಕಾಲದಿಂದ ಜನಾಂಗೀಯ ಸಂಘರ್ಷಕ್ಕೆ ಈಡಾಗಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್‌ಪೋಕ್ಪಿ...

ದೆಹಲಿ ಪ್ರತಿಭಟನೆ | ವಶಕ್ಕೆ ಪಡೆದ ನೂರಾರು ಪ್ರತಿಭಟನಾಕಾರರನ್ನು ಸ್ಟೇಡಿಯಂಗೆ ದಬ್ಬಿದ ಪೊಲೀಸರು

ದೆಹಲಿಯ ವಿವಿಧ ಪ್ರದೇಶಗಳಿಂದ CJP ನೂರಾರು ಕಾರ್ಯಕರ್ತರು ಸೇರಿದಂತೆ ಹಲವು ನಾಗರಿಕರು...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ದೆಹಲಿಯಲ್ಲಿ ಮೂವರು ಮಾಜಿ ಸಿಎಂ – ಮಮತಾ, ಪಿಣರಾಯಿ, ಕೇಜ್ರಿವಾಲ್ – ಬಂಧನ

ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ...