ಬಕ್ರೀದ್ ಮುನ್ನ ದಶಕಗಳಷ್ಟು ಹಳೆಯ ವಾರಣಾಸಿಯ ಆಡು-ಕುರಿ ಮಾರುಕಟ್ಟೆ ಖಾಯಂ ಬಂದ್: ವ್ಯಾಪಾರಿಗಳಲ್ಲಿ ಆತಂಕ

Date:

ಬಕ್ರೀದ್‌ಗೂ (ಈದ್-ಉಲ್-ಅಧಾ) ಮುನ್ನವೇ ದೇಶದಲ್ಲಿ ಪ್ರಮುಖವಾಗಿ ಉತ್ತರ ಭಾರತದಲ್ಲಿ ಕೋಮು ರಾಜಕಾರಣ ತಾರಕಕ್ಕೆ ಏರಿದೆ. ಪ್ರತಿ ವರ್ಷದ ಬಕ್ರೀದ್ ದಿನ ಕುರಿ, ಆಡು, ಮೇಕೆ ಬಲಿ ನೀಡಲಾಗುತ್ತದೆ. ಈ ವಿಚಾರದಲ್ಲೇ ಉತ್ತರ ಭಾರತದಲ್ಲಿ ವಿವಾದಗಳು ಏಳುತ್ತಿದೆ. ಪ್ರಮುಖವಾಗಿ ಪ್ರಾಣಿ ವಧೆಯ ಸ್ಥಳ, ನೈರ್ಮಲ್ಯ ಮತ್ತು ಕಾನೂನು ನಿಯಮಗಳ ವಿಚಾರವನ್ನು ಮುಂದಿಟ್ಟುಕೊಂಡು ಅದಕ್ಕೆ ಕೋಮು ಬಣ್ಣ ಹಚ್ಚಿ ರಾಜಕೀಯ ನಡೆಸಲಾಗುತ್ತಿದೆ.

- Advertisement -

ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪುರಸಭೆಯು ದಶಕಗಳಷ್ಟು ಹಳೆಯದಾದ ಆಡು-ಕುರಿ ಮಾರುಕಟ್ಟೆಯನ್ನು ಬಕ್ರೀದ್‌ಗೂ ಮುನ್ನವೇ ಖಾಯಂ ಆಗಿ ಮುಚ್ಚಿದೆ. ಜನದಟ್ಟಣೆ ಮತ್ತು ಕಳಪೆ ನೈರ್ಮಲ್ಯದ ಬಗ್ಗೆ ದೂರುಗಳು ಬಂದಿವೆ ಎಂದು ಹೇಳಿ ಈ ಕ್ರಮವನ್ನು ಪುರಸಭೆ ಕೈಗೊಂಡಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನು ಓದಿದ್ದೀರಾ? ರಾಯಚೂರು | ಬಕ್ರೀದ್ ಹಬ್ಬವನ್ನು ಶಾಂತಿ–ಸೌಹಾರ್ದದಿಂದ ಆಚರಿಸಿ: ಎಸ್‌ಪಿ ಅರುಣಾಂಗ್ಷುಗಿರಿ

ಈದ್ ಅಲ್-ಅಧಾ ಎಂದೂ ಕರೆಯಲ್ಪಡುವ ಬಕ್ರೀದ್, ತ್ಯಾಗದ ಮನೋಭಾವವನ್ನು ಸ್ಮರಿಸುವ ಹಬ್ಬ. ಈ ದಿನ ಸಾಂಪ್ರದಾಯಿಕವಾಗಿ ಮೇಕೆಗಳನ್ನು ವಧೆ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಹಲವು ವರ್ಷಗಳಿಂದ ಇದೇ ರೀತಿ ಹಬ್ಬ ಆಚರಣೆ ನಡೆಯುತ್ತಿದೆ. ಆದರೆ ಕಳೆದ 10-15 ವರ್ಷಗಳಿಂದ ಉತ್ತರ ಭಾರತದಲ್ಲಿ ಕೋಮು ರಾಜಕಾರಣ ವಿವಾದಗಳನ್ನು ಸೃಷ್ಟಿಸುತ್ತಿದೆ.

ವಾರಣಾಸಿಯ ಬಕ್ರಾ ಮಾರುಕಟ್ಟೆ ಅಥವಾ ಮೇಕೆ ಮಾರುಕಟ್ಟೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬೆನಿಯಾ ಬಾಗ್ ಸುಮಾರು ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದು ಉತ್ತರ ಪ್ರದೇಶದ ಅತಿದೊಡ್ಡ ಮೇಕೆ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದು ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿದೆ. ಸಾಮಾನ್ಯವಾಗಿ ಬಕ್ರೀದ್‌ಗೆ ಒಂದು ವಾರ ಮೊದಲು ಕಾರ್ಯನಿರ್ವಹಿಸುತ್ತದೆ.

ಈ ವರ್ಷ ಮಾರುಕಟ್ಟೆಗೆ ಆರಂಭದಲ್ಲಿ ಅನುಮತಿ ನೀಡಲಾಗಿತ್ತು. ಆದರೆ ನಂತರ ನೈರ್ಮಲ್ಯಕ್ಕೆ ಸಂಬಂಧಿಸಿದ ದೂರುಗಳು ಬಂದಿದೆ ಎಂದು ಹೇಳಿ ಮಾರುಕಟ್ಟೆಗೆ ಅನುಮತಿ ರದ್ದುಗೊಳಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪುರಸಭೆ ಆಯುಕ್ತ ಹಿಮಾಂಶು ನಾಗಪಾಲ್ ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ವ್ಯಾಪಾರ ಪ್ರಾರಂಭವಾದ ನಾಲ್ಕು ದಿನಗಳ ನಂತರ ಅಧಿಕಾರಿಗಳು 6,000 ಚದರ ಅಡಿ ವಿಸ್ತೀರ್ಣದ ಸ್ಥಳವನ್ನು ಸೀಲ್ ಮಾಡಿದ್ದಾರೆ. ಇದರಿಂದಾಗಿ ಜಾನುವಾರು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಸೂಚನೆ ನೀಡದೆಯೇ ಕ್ರಮಕೈಗೊಳ್ಳಲಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಅಧಿಕಾರಿಗಳು 30 ನಿಮಿಷಗಳ ಒಳಗೆ ಮಾರುಕಟ್ಟೆಯನ್ನು ಖಾಲಿ ಮಾಡುವಂತೆ ಆದೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿದ್ದೀರಾ? ‘ಇದು ಪ್ರತಿರೋಧವು ಹೌದು, ಅಸಹಾಯಕತೆಯೂ ಹೌದು’; ಗೋಹತ್ಯೆ ನಿರಾಕರಣೆ ಬಗ್ಗೆ ಮುಸ್ಲಿಮರ ಮನದ ಮಾತು

ಆದರೆ ಸ್ಮಾರ್ಟ್ ಸಿಟಿ ವಾರಣಾಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಕಂಭರಿ ನಂದನ್ ಸೊಂಥಾಲಿಯಾ ಆರೋಪವನ್ನು ನಿರಾಕರಿಸಿದ್ದಾರೆ. ಶುಕ್ರವಾರ ಮಾರುಕಟ್ಟೆಗೆ ಅನುಮತಿಯನ್ನು ರದ್ದುಪಡಿಸಲಾಗಿದೆ. ವ್ಯಾಪಾರಿಗಳಿಗೆ ಸ್ಥಳದಿಂದ ಖಾಲಿ ಮಾಡಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಏನೇ ಆದರೂ ಹಬ್ಬದ ಸೀಸನ್‌ನಲ್ಲಿ ವ್ಯಾಪಾರವನ್ನೇ ನಂಬಿಕೊಂಡಿದ್ದ ನೂರಾರು ಕುಟುಂಬಗಳು ಜೀವನೋಪಾಯ ಕಳೆದುಕೊಳ್ಳುವ ಭೀತಿಯಲ್ಲಿವೆ. ಆಡಳಿತ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಬಕ್ರೀದ್ ಹಬ್ಬದ ಸಂದರ್ಭದಲ್ಲೇ ಈ ನಿರ್ಧಾರ ಹೊರಬಂದಿರುವುದರಿಂದ, ವ್ಯಾಪಾರಿಗಳು ಮುಂಚಿತವಾಗಿಯೇ ಹೂಡಿಕೆ ಮಾಡಿದ್ದ ಬಂಡವಾಳ ಮತ್ತು ತಂದಿಟ್ಟಿದ್ದ ಜಾನುವಾರುಗಳನ್ನು ಎಲ್ಲಿ ಮಾರಾಟ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ತಲೆಮಾರುಗಳಿಂದ ಇದೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ನೂರಾರು ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕೋಮು ಉದ್ವಿಗ್ನತೆ ಸೃಷ್ಟಿಸುವ ಉದ್ದೇಶ

ಬಕ್ರೀದ್‌ಗೆ ಮುಂಚಿತವಾಗಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಅಜಯ್ ರೈ, “ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿರುವಾಗ ಯಾರಿಗೂ ಯಾವುದೇ ಸಮಸ್ಯೆ ಇರಲಿಲ್ಲ. ಬಕ್ರೀದ್ ಹತ್ತಿರವಾಗುತ್ತಿದ್ದಂತೆ ಸಮಸ್ಯೆಗಳು ಕಾಣತೊಡಗಿದೆ. ಮೊದಲು ಮಾರುಕಟ್ಟೆಗೆ ಅನುಮತಿ ನೀಡಿ, ನಂತರ ಹಠಾತ್ತನೆ ಹಿಂಪಡೆಯುವುದು ಸರ್ಕಾರದ ಉದ್ದೇಶಪೂರ್ವಕ ಕ್ರಮದಂತೆ ಕಾಣುತ್ತದೆ” ಎಂದು ಹೇಳಿದ್ದಾರೆ. ಇನ್ನು ಸಮಾಜವಾದಿ ಪಕ್ಷದ ವಾರಣಾಸಿ ಮಹಾನಗರ ಘಟಕದ ಅಧ್ಯಕ್ಷ ದಿಲೀಪ್ ಡೇ ಕೂಡ ಸರ್ಕಾರ “ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ನೆಪಗಳನ್ನು ಹುಡುಕುತ್ತಿದೆ” ಎಂದು ಆರೋಪಿಸಿದ್ದಾರೆ.

ಇನ್ನೊಂದೆಡೆ ಮುಂಬೈನ ಮೀರಾ ರೋಡ್ ಬಳಿಯ ಪೂನಂ ಕ್ಲಸ್ಟರ್ ಪ್ರದೇಶದ ಸೃಷ್ಟಿ ಕಾಂಪ್ಲೆಕ್ಸ್‌ನಲ್ಲಿ ಬಕ್ರೀದ್‌ಗೆಂದು ತಂದಿದ್ದ ಮೇಕೆಗಳನ್ನು ಇಡಲು ವಸತಿ ಸಂಕೀರ್ಣದ ಆವರಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿದ ವಿಚಾರದಲ್ಲಿ ವಿವಾದ ಉಂಟಾಗಿದೆ. ಅಲ್ಲೂ ಸಂಘಪರಿವಾರ ಮಧ್ಯಪ್ರವೇಶಿಸಿದೆ. ಕೋಮು ಉದ್ವಿಗ್ನತೆ ಹೆಚ್ಚಿಸುವ ನಿಟ್ಟಿನಲ್ಲೇ ಪ್ರತಿಭಟನಾ ಸ್ಥಳದ ಬಳಿ ಹಂದಿಯೊಂದನ್ನು ಇಟ್ಟುಕೊಂಡಿದ್ದಾರೆ ಎಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಕಾರಣವಾಗಿದೆ. ಇದು ಮುಸ್ಲಿಂ ಸಮುದಾಯವನ್ನೂ ಕೆರಳಿಸಿದ್ದು, ಸದ್ಯ ಉದ್ವಿಗ್ನತೆ ಹೆಚ್ಚಾಗಿದೆ. ಕಾಶಿಮಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಹಬ್ಬಗಳು ಬರುತ್ತಿದ್ದಂತೆ ಕೋಮು ರಾಜಕಾರಣ ನಡೆಸುವವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...