ತುಮಕೂರು | ಸ್ವಾಯತ್ತ ಸಂಸ್ಕೃತಿಯ ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರವಿರಲಿ : ಪ್ರೊ. ಎಸ್. ನಟರಾಜ ಬೂದಾಳು

Date:

 ನಮ್ಮ ಓದಿನ ಮತ್ತು ಅಧ್ಯಯನದ ಆಯ್ಕೆಗಳ ಅರಿವು ನಮಗೆ ಅತ್ಯಗತ್ಯವಾಗಿದೆ. ಕೇವಲ ರಾಮಾಯಣ, ಮಹಾಭಾರತದಂತಹ ಕೆಲವು ಗ್ರಂಥಗಳು ಮಾತ್ರ ನಮ್ಮನ್ನು ಆಳುತ್ತಿದ್ದು, ಅದರಿಂದಾಚೆಗಿನ ನಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ  ಪುಸ್ತಕಗಳನ್ನು ನಾವು ಅಧ್ಯಯನ ಮಾಡಬೇಕಿದೆ ಎಂದು ಚಿಂತಕ ಪ್ರೊ. ಎಸ್. ನಟರಾಜ ಬೂದಾಳು ಹೇಳಿದರು. 

- Advertisement -

ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಜುಂಜಪ್ಪ ಅಧ್ಯಯನ ಪೀಠ, ಕನ್ನಡ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜು ಸಹಯೋಗದಲ್ಲಿ ಮೆ 27 ಬುಧವಾರ ದಂದು ಆಯೋಜಿಸಲಾಗಿದ್ದ ಕರಿಮಲೆಯಿಂದ ಕೊಂಕಿ ಜರಮಲೆಯವರೆಗೆ ಕೃತಿಯನ್ನು ಅನುಲಕ್ಷಿಸಿದ ಕಾಡುಗೊಲ್ಲರ ಆಚರಣೆಯ ನೆಲೆಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಅಪರಿಚಿತ ಲೋಕದ ನಿಸರ್ಗದಲ್ಲಿನ ಬದುಕನ್ನು ದಾಖಲಿಸುವ ಕೆಲಸ ಅತ್ಯಂತ ಕಠಿಣವಾದುದು. ಅನ್ನ, ನೀರು, ಗಾಳಿ, ಬೆಳಕು ಮತ್ತು ಭೂಮಿಯ ಮೇಲೆ ಯಾರದೇ ಏಕಸ್ವಾಮ್ಯ ಇರಬಾರದು. ಸೆಮಿಟಿಕ್ ಹಾಗೂ ಹಿಂದೂ ಧರ್ಮಗಳ ಆವರಣಗಳ ಬಗ್ಗೆ ನಮಗೆ ಸ್ಪಷ್ಟ ಅರಿವಿರಬೇಕು ಎಂದು ತಿಳಿಸಿದರು.

ಸಣ್ಣ ಸಣ್ಣ ಸಮುದಾಯಗಳ ಆಚರಣೆಗಳಿಗೆ ನಾಗರಿಕರಿಂದ ಎದುರಾಗುತ್ತಿರುವ ಅಡ್ಡಿ ಹಾಗೂ ದರ್ಪಗಳು ನಿಲ್ಲಬೇಕು. ಕಾಡುಗೊಲ್ಲರು ಶೈವರೂ ಅಲ್ಲ, ವೈಷ್ಣವರೂ ಅಲ್ಲ, ಅವರು ಕೇವಲ ಕಾಡುಗೊಲ್ಲರಷ್ಟೇ. ನಮ್ಮ ಆಚರಣೆಗಳು ನಮಗೆ ಶ್ರೇಷ್ಠವಾಗಿದ್ದು, ನಮ್ಮ ಸ್ವಾಯತ್ತ ಆಚರಣೆಗಳನ್ನು ನಾವೇ ಗೌರವಿಸಿ ಪಾಲಿಸಬೇಕು ಹಾಗೂ ನಮ್ಮ ಸಂಸ್ಕೃತಿಯನ್ನು ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು. 

ಸಣ್ಣ ಸಮುದಾಯಗಳು ಹುಟ್ಟಿನ ಸಂಕೇತಗಳಾಗಿ ಗುಂಡುಕಲ್ಲು, ಒಳಕಲ್ಲು, ಮುದ್ದೆಕೋಲು, ಕವಡೆ ಮುಂತಾದವುಗಳನ್ನು ಪೂಜಿಸುತ್ತವೆ. ನಮ್ಮಲ್ಲಿ ನಿರಂತರ ಚಲನಶೀಲತೆ ಉಳ್ಳ ಕಾವ್ಯಗಳಿವೆ. ಅಧಿಕಾರ, ದರ್ಪ ಹಾಗೂ ಹಮ್ಮು ಇಲ್ಲದೆ ಬದುಕುವ ಸಮುದಾಯ ನಮ್ಮದಾಗಿದ್ದರೂ, ನಮ್ಮೊಳಗೂ ಅಸ್ಪೃಶ್ಯತೆ, ಅಸಮಾನತೆ, ಮೇಲು-ಕೀಳು ಭಾವನೆಗಳು ಹಾಗೂ ಹೆಣ್ಣುಮಕ್ಕಳ ಬದುಕಿನ ಸಮಸ್ಯೆಗಳು ಇವೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ ಎಂದ ಅವರು, ಅಪರಿಚಿತ ಲೋಕದ ಆಚರಣೆಗಳು ಎದುರಾದಾಗ ನಮ್ಮ ವೀಕ್ಷಣೆ ಹೇಗಿರುತ್ತದೆ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ ಎಂದರು.

ಲೇಖಕ ಡಾ. ಜಿ. ವಿ. ಆನಂದ ಮೂರ್ತಿ  ಮಾತನಾಡಿ, ಇಂದು ನಾವು ನಮ್ಮ ಮೂಲ ಸಂಸ್ಕೃತಿಗಳನ್ನು ಮರೆಯುತ್ತಿರುವುದು ಮತ್ತು ಸಂಶೋಧನೆಗಳು ಕಡೆಗಣಿಸಲ್ಪಡುತ್ತಿರುವುದು ಶೋಚನೀಯ ಸಂಗತಿ. ತಳ ಸಮುದಾಯದ ಕೃತಿಗಳನ್ನು ಉಪ ಸಂಸ್ಕೃತಿ  ಎಂದು ಕರೆಯುವುದು ಸರಿಯಲ್ಲ. ಮೇಲ್ವರ್ಗದ ಸಂಸ್ಕೃತಿ  ದರ್ಪ ಮತ್ತು ಕೀಳರಿಮೆಯನ್ನು ಬಿಂಬಿಸುತ್ತದೆ. ಮೇಲ್ವರ್ಗದವರು ತಮ್ಮ ಸಂಸ್ಕೃತಿಯನ್ನು ಭಾಷೆಯ ಮೂಲಕ ದಾಖಲಿಸಿದರೆ, ತಳ ಸಮುದಾಯಗಳು ಅದನ್ನು ತಮ್ಮ ಆಚರಣೆಗಳ ಮೂಲಕ ಜೀವಂತವಾಗಿ ಇಡುತ್ತವೆ. ಯಾವುದೇ ಸಮುದಾಯ ತನ್ನ ಅಸ್ಮಿತೆಯನ್ನು ಕಳೆದುಕೊಂಡಾಗ ಅದು ಅಳಿವು ಎದುರಿಸುತ್ತದೆ. ಸರ್ಕಾರಗಳು ತಕ್ಷಣವೇ ಗೊಲ್ಲರ ಹಟ್ಟಿಗಳಿಗೆ ಶಿಕ್ಷಣ, ಮೂಲಸೌಕರ್ಯ ಒದಗಿಸುವುದರೊಂದಿಗೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಶ್ರೀ ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕರಾದ ಡಾ. ಎಸ್. ಶಿವಣ್ಣ ಬೆಳವಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಆರ್. ರೇಣುಕ ವಂದಿಸಿದರು. ಚಳ್ಳಕೆರೆಯ ಛಾಯಾಗ್ರಾಹಕರಾದ ನಿಸರ್ಗ ಗೋವಿಂದರಾಜು ಹಾಗೂ ಸಹ ಪ್ರಾಧ್ಯಾಪಕರಾದ ಪ್ರೊ. ಬಿ. ಕರಿಯಣ್ಣ ಉಪಸ್ಥಿತರಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾ | ಬೆಳಕಿನ ಹಬ್ಬದ ಹಿಂದೆ ಕತ್ತಲ ಲೆಕ್ಕ!

 ನಾಡಹಬ್ಬ ದಸರಾಕ್ಕೆ ತುಮಕೂರು ನಗರ ಸಜ್ಜಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು...

ತುಮಕೂರು | ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ : ಆರೋಗ್ಯ ಸಚಿವ ಯು.ಟಿ. ಖದರ್

 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.95ರಷ್ಟು ಅಗತ್ಯ ಸವಲತ್ತುಗಳು ಲಭ್ಯವಿದ್ದು, ಯಾವುದೇ ಕೊರತೆಗಳಿದ್ದರೆ...

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...

ತುಮಕೂರು | ಜಿಪಂ – ತಾಪಂ ಮೀಸಲು ಅಂತಿಮ: ಮಹಿಳೆಯರಿಗೆ ಸಿಂಹಪಾಲು

ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ...