ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ಕೇವಲ 1 ಲಕ್ಷ ವಿಲೇವಾರಿ

Date:

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದಂತೆ ಮತದಾರರ ಸೇರ್ಪಡೆ ಹಾಗೂ ಕೈಬಿಡುವಿಕೆ ಕುರಿತು ಸಲ್ಲಿಕೆಯಾಗಿರುವ ಒಟ್ಟು 38.20 ಲಕ್ಷ ಮೇಲ್ಮನವಿಗಳ ಪೈಕಿ, ಇಲ್ಲಿಯವರೆಗೆ ಕೇವಲ 1.02 ಲಕ್ಷ ಮೇಲ್ಮನವಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ಮೇಲ್ಮನವಿ ನ್ಯಾಯಮಂಡಳಿಗಳು ಕಾರ್ಯಾರಂಭ ಮಾಡಿ 5 ತಿಂಗಳು ಕಳೆದಿದ್ದರೂ, ವಿಲೇವಾರಿ ಪ್ರಮಾಣ ಅತ್ಯಂತ ನಿಧಾನಗತಿಯಲ್ಲಿದೆ ಎಂಬುದು ಆಯೋಗದ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.

- Advertisement -

​ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕ ಪ್ರಸೇನ್‌ಜಿತ್ ಬೋಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಜುಲೈ 17ರಂದು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತ್ತು. ಮತದಾರರ ಪಟ್ಟಿಗೆ ಸೇರ್ಪಡೆ, ಕೈಬಿಟ್ಟಿರುವ ವಿವರ ಹಾಗೂ ಬಾಕಿ ಇರುವ ಮೇಲ್ಮನವಿಗಳ ಸಂಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಆಯೋಗ ಗುರುವಾರ ತನ್ನ ಅಫಿಡವಿಟ್ ಸಲ್ಲಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ,...

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ...

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಚುನಾವಣಾ ಆಯೋಗ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಒಟ್ಟು 38,20,683 ಮೇಲ್ಮನವಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 1,02,231 ವಿಲೇವಾರಿಯಾಗಿವೆ ಹಾಗೂ 37,18,452 ಅರ್ಜಿಗಳು ಬಾಕಿ ಉಳಿದಿವೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಆದರೆ, ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ 27.16 ಲಕ್ಷ ಮಂದಿಯ ಪೈಕಿ ಎಷ್ಟು ಜನರು ಮರು ಸೇರ್ಪಡೆಗಾಗಿ ಮೇಲ್ಮನವಿ ಸಲ್ಲಿಸಿದ್ದಾರೆ ಹಾಗೂ ಹೊಸ ಸೇರ್ಪಡೆಯನ್ನು ಪ್ರಶ್ನಿಸಿ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ನಿಖರವಾದ ವಿಂಗಡಣಾ ಮಾಹಿತಿಯನ್ನು (Break-up) ಆಯೋಗ ಒದಗಿಸಿಲ್ಲ.

​ಈ ಹಿಂದೆ ಆಗಸ್ಟ್ 25ರಂದು ನಡೆದಿದ್ದ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು, ಚುನಾವಣಾ ಆಯೋಗದ ಪರ ವಕೀಲ ಡಿ.ಎಸ್. ನಾಯ್ಡು ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ‘ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ವ್ಯಕ್ತಿಯೊಬ್ಬನ ಮತದಾನದ ಹಕ್ಕನ್ನೇ ಕಸಿದುಕೊಂಡಂತೆ. ಹೀಗಾಗಿ, ಕೈಬಿಟ್ಟಿರುವ ಮೇಲ್ಮನವಿಗಳಿಗೆ ನಾವು ಮೊದಲ ಆದ್ಯತೆ ನೀಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಎಷ್ಟು ಜನ ಸೇರ್ಪಡೆಗೆ ಹಾಗೂ ಎಷ್ಟು ಜನ ಕೈಬಿಟ್ಟಿದ್ದರ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ ಎಂಬ ನಿಖರ ಮಾಹಿತಿ ಒದಗಿಸಿ’ ಎಂದು ತಾಕೀತು ಮಾಡಿದ್ದರು. ಆದರೂ ಆಯೋಗ ಈ ವಿಂಗಡಣೆಯನ್ನು ಒದಗಿಸಿಲ್ಲ.

ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟವಾದ 2025ರ ಡಿಸೆಂಬರ್ 17ರಿಂದ, ಈ ವರ್ಷದ ಆಗಸ್ಟ್ 7ರವರೆಗೆ ಮತದಾರರ ನೋಂದಣಿಗಾಗಿ ಒಟ್ಟು 34.13 ಲಕ್ಷ ‘ಫಾರ್ಮ್ 6’ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುತ್ತಿರುವವರು ಹಾಗೂ ಕರಡು ಪಟ್ಟಿಯಲ್ಲಿ ಕೈಬಿಡಲಾಗಿದ್ದ 58.20 ಲಕ್ಷ ಮತದಾರರ ಅರ್ಜಿಗಳೂ ಸೇರಿವೆ. ಈ ಪೈಕಿ 7.26 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿದ್ದು, 14,079 ಅರ್ಜಿಗಳು ಮಾತ್ರ ಅಂಗೀಕಾರಗೊಂಡಿವೆ ಹಾಗೂ 4.86 ಲಕ್ಷ ಅರ್ಜಿಗಳ ಪರಿಶೀಲನೆ ಬಾಕಿಯಿದೆ. ಅದೇ ರೀತಿ, ಹೆಸರನ್ನು ಕೈಬಿಡಲು ಸಲ್ಲಿಕೆಯಾದ 6.39 ಲಕ್ಷ ‘ಫಾರ್ಮ್ 7’ ಅರ್ಜಿಗಳಲ್ಲಿ 14,506 ತಿರಸ್ಕೃತಗೊಂಡಿದ್ದು, 3,355 ಅರ್ಜಿಗಳು ಅಂಗೀಕಾರವಾಗಿವೆ.

​ಮತದಾರರ ಪಟ್ಟಿಯ ಲಿಂಗಾನುಪಾತದ (ಪ್ರತಿ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ) ಕುರಿತೂ ಆಯೋಗ ಮಾಹಿತಿ ನೀಡಿದೆ. 2025ರ ಜನವರಿ 1ರಂದು 969 ಇದ್ದ ಲಿಂಗಾನುಪಾತ, ಎಸ್ಐಆರ್ ಪ್ರಕಟವಾದ 2025ರ ಅಕ್ಟೋಬರ್ 27ರ ವೇಳೆಗೆ 970ಕ್ಕೆ ಏರಿಕೆಯಾಗಿತ್ತು. ಆದರೆ, 2025ರ ಡಿಸೆಂಬರ್‌ನಲ್ಲಿ ಪ್ರಕಟವಾದ ಕರಡು ಪಟ್ಟಿಯಲ್ಲಿ ಈ ಪ್ರಮಾಣ 956ಕ್ಕೆ ಕುಸಿದಿತ್ತು. ತರುವಾಯ ಫೆಬ್ರವರಿ 28ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಇದು 964ಕ್ಕೆ ತುಸು ಚೇತರಿಕೆ ಕಂಡಿದೆ. ಅಲ್ಲದೆ, ಜನವರಿ 1ರ ಅಂದಾಜಿನಂತೆ ರಾಜ್ಯದ ಒಟ್ಟು ಜನಸಂಖ್ಯೆ 10.40 ಕೋಟಿಯಷ್ಟಿದ್ದರೆ, ಅದರಲ್ಲಿ 6.44 ಕೋಟಿ ಮತದಾರರಿದ್ದಾರೆ. ಅಂದರೆ, ಪ್ರತಿ 100 ಜನಸಂಖ್ಯೆಗೆ 62 ಮತದಾರರಿದ್ದಾರೆ (EP ಅನುಪಾತ 0.62). 2024ರ ಲೋಕಸಭಾ ಚುನಾವಣೆಯ ವೇಳೆ ದೇಶದ ಸರಾಸರಿ ಇಪಿ ಅನುಪಾತ 66.76 ಇತ್ತು ಎಂದು ಆಯೋಗ ವಿವರಿಸಿದೆ.

ಚುನಾವಣಾ ಆಯೋಗ ಹಾಗೂ ಅಂದಿನ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ನಡುವಿನ ಅಪನಂಬಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಕಳೆದ ಫೆಬ್ರವರಿ 20ರಂದು ಮಹತ್ವದ ಆದೇಶವೊಂದನ್ನು ನೀಡಿತ್ತು. ರಾಜ್ಯದ 60.06 ಲಕ್ಷ ಅನುಮಾನಾಸ್ಪದ ಮತದಾರರ ಅರ್ಹತೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ಸುಮಾರು 700 ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಿತ್ತು. ಇದರನ್ವಯ ತನಿಖೆ ನಡೆಸಿದ್ದ ಅಧಿಕಾರಿಗಳು 32.9 ಲಕ್ಷ ಹೆಸರನ್ನು ಸೇರ್ಪಡೆಗೊಳಿಸಿ, 27.16 ಲಕ್ಷ ಹೆಸರನ್ನು ಕೈಬಿಡಲು ಆದೇಶಿಸಿದ್ದರು. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್ ಮಾರ್ಚ್ 10ರಂದು ಮೇಲ್ಮನವಿ ನ್ಯಾಯಮಂಡಳಿಗಳ ರಚನೆಗೆ ಸೂಚಿಸಿತ್ತು. ಅದರಂತೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನೊಳಗೊಂಡ 19 ನ್ಯಾಯಮಂಡಳಿಗಳನ್ನು ಮಾರ್ಚ್ 20ರಂದು ಚುನಾವಣಾ ಆಯೋಗ ಅಧಿಸೂಚಿಸಿದ್ದು, ಅವು ಏಪ್ರಿಲ್ 13ರಿಂದ ಕಾರ್ಯಾರಂಭ ಮಾಡಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅಂತರಂಗ ಶುದ್ಧಿಯಿಂದ ಬದುಕಿಗೆ ನೆಮ್ಮದಿ

ಚಟ್ನಾಳ ಗ್ರಾಮದಲ್ಲಿ ವಿಶೇಷ ಶಕ್ತಿಯಿದ್ದು, ಅಂತರಂಗ ಶುದ್ಧಿಯಿಂದ ಸೇವೆಗೈಯುವ ಪರಂಪರೆ ಇಲ್ಲಿದೆ....

ಅಮೆರಿಕ: ಟ್ರಂಪ್ ಆಡಳಿತದ ವಿವಾದಾತ್ಮಕ ಪೋಸ್ಟರ್ ಬೆನ್ನಲ್ಲೇ ಸಿಖ್ ಟ್ರಕ್ ಚಾಲಕನಿಗೆ ಚಾಕು ಇರಿತ

ಅಮೆರಿಕದ ವಯೋಮಿಂಗ್‌ನಲ್ಲಿ 28 ವರ್ಷದ ಪಂಜಾಬಿ ಮೂಲದ ಸಿಖ್ ಟ್ರಕ್ ಚಾಲಕನೊಬ್ಬನ...

ಅಫ್ಘಾನ್ ವಿರುದ್ಧ ಭಾರತಕ್ಕೆ ಸರಣಿ ಕ್ಲೀನ್ ಸ್ವೀಪ್: ಶತಕದೊಂದಿಗೆ ಸೂರ್ಯವಂಶಿ ದಾಖಲೆ ಹಿಂದಿಕ್ಕಿದ ಅಭಿಷೇಕ್

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೂರನೇ ಹಾಗೂ ಅಂತಿಮ...

ಉರ್ದು, ಮರಾಠಿ ಶಿಕ್ಷಕರ ಪೂರ್ಣ ನೇಮಕಾತಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಆಗ್ರಹ

ಉರ್ದು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ನೀಡಿದ್ದ...