ಅಮೆರಿಕ: ಟ್ರಂಪ್ ಆಡಳಿತದ ವಿವಾದಾತ್ಮಕ ಪೋಸ್ಟರ್ ಬೆನ್ನಲ್ಲೇ ಸಿಖ್ ಟ್ರಕ್ ಚಾಲಕನಿಗೆ ಚಾಕು ಇರಿತ

Date:

ಅಮೆರಿಕದ ವಯೋಮಿಂಗ್‌ನಲ್ಲಿ 28 ವರ್ಷದ ಪಂಜಾಬಿ ಮೂಲದ ಸಿಖ್ ಟ್ರಕ್ ಚಾಲಕನೊಬ್ಬನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ 17 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಅಮೆರಿಕದ ‘ಗೃಹ ಭದ್ರತಾ ಇಲಾಖೆ’ (DHS) ಸಿಖ್ ಟ್ರಕ್ ಚಾಲಕರನ್ನು ಗುರಿಯಾಗಿಸಿ ವಿವಾದಾತ್ಮಕ ಪೋಸ್ಟರ್‌ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಆತಂಕವನ್ನು ಹೆಚ್ಚಿಸಿದೆ.

- Advertisement -

​ಸ್ಯಾಕ್ರಮೆಂಟೊ ಮೂಲದ, ತಮ್ಮನ್ನು ಕೇವಲ ‘ಸಿಂಗ್’ ಎಂದು ಗುರುತಿಸಿಕೊಂಡಿರುವ ಯುವಕನೇ ಹಲ್ಲೆಗೊಳಗಾದ ಟ್ರಕ್ ಚಾಲಕ. ಭಾನುವಾರ ಮುಂಜಾನೆ ಅವರು ಪೆನ್ಸಿಲ್ವೇನಿಯಾ ಕಡೆಗೆ ಪ್ರಯಾಣಿಸುತ್ತಿದ್ದಾಗ, ವಯೋಮಿಂಗ್‌ನ ಇಂಟರ್‌ಸ್ಟೇಟ್ 80 ಹೆದ್ದಾರಿಯ ಬಿಟರ್ ಕ್ರೀಕ್ ವಿಶ್ರಾಂತಿ ಕೇಂದ್ರದಲ್ಲಿ (Rest area) ವಾಹನ ನಿಲ್ಲಿಸಿದ್ದರು. ಶೌಚಾಲಯಕ್ಕೆ ತೆರಳಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದಾನೆ. ಕುತ್ತಿಗೆ, ಎದೆ, ತೋಳು ಹಾಗೂ ಪಕ್ಕೆಲುಬುಗಳಿಗೆ 17 ಬಾರಿ ಇರಿತಕ್ಕೊಳಗಾದ ಅವರು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದು, ಕುಸಿದುಬಿದ್ದು ಸಹಾಯಕ್ಕಾಗಿ ಮೊರೆಯಿಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಹಿಸ್ಪಾನಿಕ್ ಕುಟುಂಬದಿಂದ ನೆರವು:

ರಕ್ತದ ಮಡುವಿನಲ್ಲಿ ಸಹಾಯಕ್ಕಾಗಿ ಕರೆಯುತ್ತಿದ್ದ ಸಿಂಗ್ ಅವರ ನೆರವಿಗೆ ಅಲ್ಲೇ ಇದ್ದ ಹಿಸ್ಪಾನಿಕ್ ಕುಟುಂಬವೊಂದು ಧಾವಿಸಿದೆ. ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಪೊಲೀಸರಿಗೆ ಮಾಹಿತಿ ಮುಟ್ಟಿಸಿದೆ. ಅಲ್ಲದೆ, ದಾಳಿಕೋರ ಪರಾರಿಯಾದ ಟ್ರಕ್‌ನ ವಿವರಗಳನ್ನೂ ನೀಡಿದ್ದರಿಂದ, ವಯೋಮಿಂಗ್ ಹೆದ್ದಾರಿ ಪೊಲೀಸರು ಘಟನಾ ಸ್ಥಳದಿಂದ 113 ಕಿ.ಮೀ ದೂರದ ರಾವ್ಲಿನ್ಸ್ ಬಳಿ ಆಂಡ್ರ್ಯೂ ಕ್ರಿಸ್ ಬ್ಜಡಾಕ್ (Andrew Kris Bzdak) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ವಿರುದ್ಧ ‘ಪ್ರಥಮ ದರ್ಜೆಯ ಕೊಲೆ ಯತ್ನ’ದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

‘ಮಿಸ್ಟರ್ ಸಿಂಗ್, ರಸ್ತೆಗಳಿಂದ ತೊಲಗಿ’:

ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಟ್ರಂಪ್ ಆಡಳಿತದ ಅಮೆರಿಕನ್ ಗೃಹ ಭದ್ರತಾ ಇಲಾಖೆಯು, ಈ ಘಟನೆ ನಡೆಯುವ ಕೆಲವೇ ದಿನಗಳ ಮುನ್ನ ಸಿಖ್ಖರನ್ನು ಗುರಿಯಾಗಿಸಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ್ದ ಪೋಸ್ಟರ್ ಒಂದನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿತ್ತು. ‘ಟ್ರಾನ್ಸ್‌ಫಾರ್ಮರ್ಸ್: ಏಜ್ ಆಫ್ ಡಿಪೋರ್ಟೇಷನ್ಸ್’ ಹೆಸರಿನ ಈ ಪೋಸ್ಟರ್‌ನಲ್ಲಿ ಟ್ರಾನ್ಸ್‌ಫಾರ್ಮರ್ ಯಂತ್ರವೊಂದು ಪೇಟಧಾರಿ ಸಿಖ್ ವ್ಯಕ್ತಿಯನ್ನು ದಿಟ್ಟಿಸುತ್ತಿರುವ ಚಿತ್ರವಿತ್ತು. ಅಲ್ಲದೆ, “ಅಮೆರಿಕ ಇರುವುದು ಅಮೆರಿಕನ್ನರಿಗೆ. ನಮ್ಮ ರಸ್ತೆಗಳಿಂದ ತೊಲಗಿ; ಮಿಸ್ಟರ್ ಸಿಂಗ್, ನಿಮಗೆ ವಾಹನ ಚಲಾಯಿಸಲು ಬರುವುದಿಲ್ಲ. ನೀವಾಗಿಯೇ ದೇಶ ಬಿಟ್ಟು ಹೋಗಿ” ಎಂಬ ಜನಾಂಗೀಯ ನಿಂದನೆಯ ಒಕ್ಕಣೆಯಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮರುದಿನವೇ ಸರ್ಕಾರ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿತ್ತು.

ತೀವ್ರ ಖಂಡನೆ:

ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಮೂಲದ ಡೆಮಾಕ್ರಟಿಕ್ ಪಕ್ಷದ ಸಂಸದ ರಾಜಾ ಕೃಷ್ಣಮೂರ್ತಿ, “ಅಮೆರಿಕದಲ್ಲಿ ಭಾರತೀಯ ವಲಸಿಗರ ಮೇಲಿನ ದ್ವೇಷ ಹೆಚ್ಚುತ್ತಿರುವುದು ಆತಂಕಕಾರಿ. ಸರ್ಕಾರಿ ಅಧಿಕಾರಿಗಳೇ ಇಂತಹ ದ್ವೇಷ ಬಿತ್ತುವ ಕೆಲಸ ನಿಲ್ಲಿಸಬೇಕು ಮತ್ತು ಹಿಂಸಾಚಾರಕ್ಕೆ ಇಳಿಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಕಳೆದ ಮೂರು ವರ್ಷಗಳಿಂದ ವಾಣಿಜ್ಯ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿರುವ ಸಂತ್ರಸ್ತ ಯುವಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆಯಿಂದಾಗಿ ಅಮೆರಿಕದಾದ್ಯಂತ ಸಂಚರಿಸುವ ಇತರೆ ಪಂಜಾಬಿ ಸಿಖ್ ಚಾಲಕರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರಿನಲ್ಲಿ ಸಚಿವ ಸಂಪುಟ; ಕರಾವಳಿ–ಮಲೆನಾಡಿಗೆ ಹೊಸ ರೂಪ: ಸಿಎಂ ಡಿಕೆಶಿ

ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೊಸ ರೂಪ ನೀಡುವ ಮೂಲಕ ಇಲ್ಲಿನ...

ಯುಪಿಐ ಪಾವತಿಗೆ ಶುಲ್ಕ; ಕೇಂದ್ರ ಸಚಿವರು ಪಿಕ್ ಪಾಕೆಟ್‌ನಲ್ಲಿ ಪಿಎಚ್‌ಡಿ: ಸಿಎಂ ಡಿ ಕೆ ಶಿವಕುಮಾರ್

"ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್...

SIR | ಒಂದೇ ಮತಗಟ್ಟೆಯಲ್ಲಿ ಶೇ. 62ರಷ್ಟು ಮತದಾರರ ಹೆಸರು ಡಿಲೀಟ್: ಚುನಾವಣಾ ಆಯೋಗಕ್ಕೆ ರಮೇಶ್ ಬಾಬು ದೂರು

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)...