ರಾತ್ರೋರಾತ್ರಿ ಸಿದ್ಧವಾಯ್ತಾ ಕಠಿಣ ಕಾನೂನು: ಮೋದಿ ‘ಮಧ್ಯರಾತ್ರಿ ಮೆಸೇಜ್’ ಹಿಂದಿನ ಮರ್ಮವೇನು?

Date:

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ದೇಶಾದ್ಯಂತ ಭುಗಿಲೆದ್ದಿರುವ ವಿದ್ಯಾರ್ಥಿಗಳ ಆಕ್ರೋಶದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರ ‘ಮಧ್ಯರಾತ್ರಿಯ ಮೆಸೇಜ್’ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಹೊಸ ಮಸೂದೆಯೊಂದು ಸರ್ಕಾರದ ಕೈಸೇರಿದೆ ಎಂಬ ದಿಢೀರ್ ಘೋಷಣೆಯು, ವಿದ್ಯಾರ್ಥಿಗಳ ಹಿತಾಸಕ್ತಿಗಿಂತ ಸರ್ಕಾರದ ಮುಖ ಉಳಿಸಿಕೊಳ್ಳುವ ತಂತ್ರದಂತೆ ಕಾಣುತ್ತಿದೆ. ಸತತ ಪ್ರತಿಭಟನೆಗಳಿಂದ ಕಂಗೆಟ್ಟಿರುವ ಕೇಂದ್ರ ಸರ್ಕಾರ, ಜನರ ಕಣ್ಣಿಗೆ ಮಣ್ಣೆರಚಲು ಈ ಅಸ್ತ್ರ ಪ್ರಯೋಗಿಸಿದೆ ಎಂಬ ಟೀಕೆಗಳು ದಟ್ಟವಾಗಿವೆ.

- Advertisement -

ಈ ಕಠಿಣ ಕಾನೂನಿನ ಮಸೂದೆಯನ್ನು ಸಿದ್ಧಪಡಿಸಿರುವ ರೀತಿಯೇ ಬಲವಾದ ಸಂಶಯಗಳನ್ನು ಹುಟ್ಟುಹಾಕಿದೆ. ಮುಂಗಾರು ಅಧಿವೇಶನ ಆರಂಭವಾದ ನಂತರ, ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ ಹಾಗೂ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿಯ ಬೃಹತ್ ಪ್ರತಿಭಟನೆಗಳ ಬಿಸಿ ತಟ್ಟಿದ ಮೇಲಷ್ಟೇ ಸರ್ಕಾರ ದಿಢೀರ್ ಎಚ್ಚೆತ್ತುಕೊಂಡಿದೆ. ಈ ಮಸೂದೆಯನ್ನು ಯಾವುದೇ ಪೂರ್ವಸಿದ್ಧತೆ ಅಥವಾ ತಜ್ಞರ ಸಮಾಲೋಚನೆ ಇಲ್ಲದೆ, ಕೇವಲ ದಿನಗಳ ಅಂತರದಲ್ಲಿ ತರಾತುರಿಯಲ್ಲಿ ಸಿದ್ಧಪಡಿಸಲಾಗಿದೆ ಎಂಬ ಅನುಮಾನ ಕಾಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಇಂತಹ ಗಂಭೀರ ಕಾಯ್ದೆಯೊಂದನ್ನು ಇಷ್ಟು ಅವಸರದಲ್ಲಿ ರೂಪಿಸಿರುವುದು ಸರ್ಕಾರದ ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಮಸೂದೆಯ ಮಂಡನೆ ಮತ್ತು ಅಂಗೀಕಾರಕ್ಕೆ ಸರ್ಕಾರ ಹಾಕಿಕೊಂಡಿರುವ ವೇಳಾಪಟ್ಟಿಯೂ ಅದರ ಆತುರದ ಹಾಗೂ ತರ್ಕಬದ್ಧವಲ್ಲದ ನಿರ್ಧಾರವನ್ನು ಬಯಲು ಮಾಡಿದೆ. ಶುಕ್ರವಾರವೇ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ, ಚರ್ಚೆ ನಡೆಸಿ, ಬರುವ ಸೋಮವಾರದಂದೇ ಅದಕ್ಕೆ ಅನುಮೋದನೆ ಪಡೆಯುವ ತವಕದಲ್ಲಿ ಸರ್ಕಾರವಿದೆ. ಇಷ್ಟು ಮಹತ್ವದ ಮಸೂದೆಯ ಬಗ್ಗೆ ಸಂಸದೀಯ ಸಮಿತಿಯಲ್ಲಿ ಕನಿಷ್ಠ ಸುದೀರ್ಘ ಚರ್ಚೆಯಾಗಲಿ, ಸಾರ್ವಜನಿಕರ ಅಭಿಪ್ರಾಯವಾಗಲಿ ಪಡೆಯದೆ, ಕೇವಲ ಸಂಖ್ಯಾಬಲದ ಆಧಾರದ ಮೇಲೆ ಏಕಾಏಕಿ ಪಾಸ್ ಮಾಡಿಕೊಳ್ಳಲು ಹೊರಟಿರುವುದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಅಣಕವಾಗಿದೆ.

ಸರ್ಕಾರದ ಈ ದಿಢೀರ್ ಬೆಳವಣಿಗೆಯ ಹಿಂದಿನ ಅಸಲಿ ಮರ್ಮವೇ ಬೇರೆಯಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ಕೇಂದ್ರ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದ್ದು, ಈ ವಿದ್ಯಾರ್ಥಿ ಹೋರಾಟದ ಸಂಪೂರ್ಣ ರಾಜಕೀಯ ಲಾಭ ವಿರೋಧ ಪಕ್ಷಗಳ ಪಾಲಾಗುತ್ತಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಇದನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳುವುದನ್ನು ತಡೆಯಲು ಮತ್ತು ಪ್ರತಿಭಟನೆಯ ತೀವ್ರತೆಯನ್ನು ತಗ್ಗಿಸಲು ಸರ್ಕಾರ ಈ ‘ಮಸೂದೆ’ಯ ನಾಟಕವಾಡುತ್ತಿದೆ. ತರಾತುರಿಯಲ್ಲಿ ಕಾಯ್ದೆ ತರುವ ಮೂಲಕ ತನ್ನ ಮೇಲಿನ ಕಳಂಕವನ್ನು ‘ತಿಪ್ಪೆ ಸಾರಿಸಲು’ ಮೋದಿ ಸರ್ಕಾರ ಹೊರಟಂತಿದೆ.

ಸರ್ಕಾರದ ಈ ನಡೆ ಕೇವಲ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಶಿಕ್ಷಣ ಸಚಿವರ ರಾಜೀನಾಮೆ ಮತ್ತು ವ್ಯವಸ್ಥೆಯ ಸಂಪೂರ್ಣ ಶುದ್ಧೀಕರಣದಂತಹ ನೈಜ ಬೇಡಿಕೆಗಳಿಂದ ಜನರ ಹಾಗೂ ಮಾಧ್ಯಮಗಳ ಗಮನವನ್ನು ಬೇರೆಡೆ ಸೆಳೆಯಲು ಈ ಮಸೂದೆಯನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಆಳವಾದ ಅಧ್ಯಯನವಿಲ್ಲದೆ, ಕೇವಲ ವಿಪಕ್ಷಗಳ ಬಾಯಿ ಮುಚ್ಚಿಸಲು ಹಾಗೂ ರಾಜಕೀಯ ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ತರುತ್ತಿರುವ ಈ ಮಸೂದೆಯಿಂದ, ಪರೀಕ್ಷಾ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರ ನಿಜಕ್ಕೂ ಕೊನೆಯಾಗಲಿದೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...