ಅವಶೇಷಗಳು ಸುರಂಗದೊಳಗೆ ಬಿದ್ದಾಗ ಏನಾಯಿತು?: ಘಟನೆ ಬಿಚ್ಚಿಟ್ಟ ಸಿಲುಕಿಕೊಂಡಿದ್ದ ಕಾರ್ಮಿಕ

Date:

ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಿಲ್ಕ್ಯಾರಾದಲ್ಲಿ ಸುರಂಗ ಕುಸಿದು ಆತಂಕ ಸೃಷ್ಟಿಯಾಗಿದ್ದು ಕೊನೆಗೂ ನಿವಾರಣೆಯಾಗಿದೆ. ಕಳೆದ 17 ದಿನಗಳಿಂದ ಸುರಂಗದ ಒಳಗೆ ಸಿಲುಕಿಕೊಂಡಿದ್ದ ಎಲ್ಲ 41 ಕಾರ್ಮಿಕರು ಸುರಕ್ಷಿತವಾಗಿ ನ.28ರ ರಾತ್ರಿ 8.30 ಸುಮಾರಿಗೆ ಹೊರಗೆ ಬಂದಿದ್ದಾರೆ.

ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಕ್ಲಿಷ್ಟಕರ ಮಾತ್ರವಲ್ಲದೆ ಸವಾಲಿನದ್ದಾಗಿತ್ತು. ಚೂರು ಎಡವಿದರೂ ಮತ್ತಷ್ಟು ಭೂಕುಸಿತ ಉಂಟಾಗಿ, ಕಾರ್ಮಿಕರ ಜೊತೆ ರಕ್ಷಣಾ ತಂಡಗಳೂ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿತ್ತು.

ಸುರಂಗದ ಒಳಗಿನ ಕತ್ತಲಿನಲ್ಲಿ ಹಾಗೂ ಸಣ್ಣ ಜಾಗದಲ್ಲಿ, ಆತಂಕದೊಂದಿಗೆ 17 ದಿನಗಳನ್ನು ಕಳೆದಿರುವುದಕ್ಕೆ ಕಾರ್ಮಿಕರ ಮಾನಸಿಕ ಧೈರ್ಯವನ್ನು ಮೆಚ್ಚಲೇಬೇಕು. ಸುರಂಗ ಕುಸಿದಾಗ ಒಳಗೆ ಏನೇನಾಯಿತು ಎಂಬುದರ ಬಗ್ಗೆ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರಲ್ಲಿ ಒಬ್ಬರಾದ ವಿಶ್ವಜೀತ್ ಕುಮಾರ್ ವರ್ಮಾ ಎಂಬ ಕಾರ್ಮಿಕರೊಬ್ಬರು ಘಟನೆಯ ಬಗ್ಗೆ ಮಾಧ್ಯಮವೊಂದಕ್ಕೆ ತಮಗಾದ ಅನುಭವಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಭೂಕುಸಿತ ಸಂಭವಿಸಿದ್ದರಿಂದ 41 ಕಾರ್ಮಿಕರು ನಿರ್ಮಾಣ ಹಂತದ ಸುರಂಗದಲ್ಲಿನ 4.5-ಕಿಲೋಮೀಟರ್ (2.8-ಮೈಲಿ) ಒಳಗೆ ಸಿಲುಕಿದ್ದೆವು. ಪ್ರವೇಶದ್ವಾರದಿಂದ ಸುಮಾರು 200 ಮೀಟರ್ (650 ಅಡಿ) ದೂರದಲ್ಲಿ ಭೂಕುಸಿತ ಉಂಟಾಗಿತ್ತು. ಅವಶೇಷಗಳು ಮೇಲಿಂದ ಸುರಂಗದೊಳಗೆ ಕುಸಿದಾಗ ನಾವೆಲ್ಲರೂ ಸಿಲುಕಿಕೊಂಡಿದ್ದೇವೆ ಎಂಬುದು ನಮಗೆ ತಿಳಿದಿತ್ತು” ಎಂದು ವಿಶ್ವಜೀತ್ ಕುಮಾರ್ ವರ್ಮಾ ಹೇಳಿದರು.

“ಸಿಕ್ಕಿಬಿದ್ದ ಮೊದಲ 10-15 ಗಂಟೆಗಳ ಕಾಲ ನಾವು ತುಂಬ ಕಷ್ಟವನ್ನು ಎದುರಿಸಿದೆವು. ಆದರೆ ನಂತರ, ಪೈಪ್‌ ಮೂಲಕ ಅಕ್ಕಿ, ಬೇಳೆ ಮತ್ತು ಒಣ ಹಣ್ಣುಗಳೊಂದಿಗೆ ಸುರಂಗದೊಳಗೆ ಆಹಾರವನ್ನು ಒದಗಿಸಲಾಯಿತು. ನಂತರ ಮೈಕ್ ಅನ್ನು ಅಳವಡಿಸಲಾಯಿತು. ಅನಂತರದಲ್ಲಿ ನಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಯಿತು. ನಾನು ಈಗ ಸಂತೋಷವಾಗಿದ್ದೇನೆ, ಆಗ ದೀಪಾವಳಿ ಆಚರಿಸಲು ಸಾಧ್ಯವಾಗಲಿಲ್ಲ ಈಗ ದೀಪಾವಳಿಯನ್ನು ಆಚರಿಸುತ್ತೇವೆ” ಎಂದು ವಿಶ್ವಜೀತ್ ಕುಮಾರ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 17 ದಿನಗಳ ಕಾರ್ಯಾಚರಣೆ ಯಶಸ್ವಿ: ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರ ರಕ್ಷಣೆ

ಎಲ್ಲ ಕಾರ್ಮಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿದೆ. ಪೈಪ್ ಮೂಲಕ ಸೋಮವಾರ ಅವರಿಗೆ ಬ್ಯಾಟ್, ಚಂಡು, ಚೆಸ್ ಕಿಟ್‌ಗಳನ್ನು ಕಳುಹಿಸಲಾಗಿತ್ತು. ಒಳಗೆ ಅವರು ಕ್ರಿಕೆಟ್, ಚೆಸ್ ಆಡಿದ್ದಾರೆ. ಎಲ್ಲರೂ ಸಂತಸದಿಂದ ಇದ್ದರು ಎಂದು  ಫೋನ್ ಮೂಲಕ ತಿಳಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಸುರಂಗದಿಂದ ರಕ್ಷಿಸಿದ ಕೂಡಲೇ, ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಮನೆಗೆ ಕಳುಹಿಸುವ ಮೊದಲು ಅಲ್ಲಿ ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ.

ರ‍್ಯಾಟ್ ಹೋಲ್ ಪರಿಣಿತರಿಗೆ ಸಾಧನೆಗೆ ಶ್ಲಾಘನೆ

ವಿದೇಶಿ ಹೈಟೆಕ್ ಯಂತ್ರಗಳು ಅಥವಾ ಆಗರ್‌ಗಳು ಸುಮಾರು 60 ಮೀಟರ್ ಬಂಡೆಯನ್ನು ಕೊರೆಯಲು ವಿಫಲವಾದ ನಂತರ, ರ್‍ಯಾಟ್ ಹೋಲ್ ತಂತ್ರದ ಮೂಲಕ ಸುರಂಗ ಕೊರೆದು ಕಾರ್ಮಿಕರನ್ನು ರಕ್ಷಿಸಲಾಯಿತು.
ಅಂತಿಮ ಹಂತದಲ್ಲಿ ಕಾರ್ಮಿಕರನ್ನು ರಕ್ಷಿಸಲು ಅಳವಡಿಸಿಕೊಂಡ ಯೋಜನೆ ರ್‍ಯಾಟ್ ಹೋಲ್ ತಂತ್ರ. ಫಿರೋಝ್, ರಶೀದ್, ಇರ್ಶಾದ್, ನಸೀಮ್, ಮೋನು, ನಾಸೀ‌ರ್, ಅಂಕು‌ರ್, ಜತಿನ್, ಸೌರಭ್, ವಕೀಲ್ ಹಸನ್ ಮತ್ತು ದೇವೇಂದರ್ ಈ ತಂಡದಲ್ಲಿದ್ದ ಕಾರ್ಮಿಕರು. ರ‍್ಯಾಟ್ ಹೋಲ್ ಮೈನರ್ ಅಥವಾ ಇಲಿ ರಂಧ್ರ ಗಣಿಗಾರರು ಎಂದು ಕರೆಯಲ್ಪಡುವ ಇವರ ಕಾರ್ಯಕ್ಕೆ ದೇಶಾದ್ಯಂತ ಭರಪೂರ ಪ್ರಶಂಸೆಗಳು ವ್ಯಕ್ತವಾಗಿದ್ದು, ಯಂತ್ರ ಮಾಡದಿದ್ದ ಕಾರ್ಯವನ್ನು ಈ ಕಾರ್ಮಿಕರು ನೆರವೇರಿಸಿ 41 ಮಂದಿಯ ಪ್ರಾಣ ಉಳಿಸಿದ ನಿಜವಾದ ನಾಯಕರಾಗಿದ್ದಾರೆ.
ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಕಾರ್ಮಿಕರು ಬರೋಬ್ಬರಿ 17 ದಿನಗಳಿಂದ ಸುರಂಗದೊಳಗೆ ಸಿಲುಕಿದ್ದರು. ಅಗರ್‌ ಯಂತ್ರದ ಬ್ಲೇಡುಗಳು ಮುರಿದ ನಂತರ ಕೈಯ್ಯಲ್ಲಿ ಹಿಡಿಯುವ ರ್‍ಯಾಟ್ ಯಂತ್ರಗಳಿಂದಲೇ ಕೊರೆಯುವ ಕಾರ್ಯವನ್ನು ನಡೆಸಲಾಯಿತು.
41 ಕಾರ್ಮಿಕರನ್ನು ರಕ್ಷಿಸುವ ಭಾರತೀಯ ಸೇನಾ ಕಾರ್ಯಾಚರಣೆಗೆ ಉತ್ತರ ಪ್ರದೇಶದ ಝಾನ್ಸಿಯ ಆರು ಮಂದಿ ‘ರ‍್ಯಾಟ್ ಹೋಲ್’ ಗಣಿ ಕುಶಲಕಾರ್ಮಿಕರ ತಂಡ ಕೈಜೋಡಿಸಿತ್ತು.
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸೋಲಿನಿಂದ ಮಾತ್ರ ಹಿಂದೂ ರಾಷ್ಟ್ರ ಸಾಧ್ಯ: ಸುಬ್ರಮಣಿಯನ್ ಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ...

ಸ್ಪ್ಯಾನಿಷ್ ಪ್ರವಾಸಿ ಮೇಲೆ ಗ್ಯಾಂಗ್ ರೇಪ್- ಮೂವರಿಗೆ ನ್ಯಾಯಾಂಗ ಬಂಧನ

ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸ್ಪ್ಯಾನಿಷ್ ಪ್ರವಾಸಿ ಮಹಿಳೆಯ ಸಾಮೂಹಿಕ ಅತ್ಯಾಚಾರ (ಗ್ಯಾಂಗ್...

ವಿಡಿಯೋ ಕಾನ್ಫರೆನ್ಸ್ ಮೂಲಕ ಇ.ಡಿ ವಿಚಾರಣೆಗೆ ಸಿದ್ಧ: ಅರವಿಂದ್ ಕೇಜ್ರಿವಾಲ್

ದೆಹಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ...

ಮೀನಾಕ್ಷಿ ಲೇಖಿಗೆ ಕೈತಪ್ಪಿದ ಬಿಜೆಪಿ ಟಿಕೆಟ್: ಮಂಗಳೂರಿನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಮುಂದೂಡಿಕೆ!

ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ...