ಅಬುಧಾಬಿ | ಗಂಟೆಗೆ 120 ಕಿಲೋಮೀಟರ್ ಕಡಿಮೆ ವೇಗದಲ್ಲಿ ಸಂಚರಿಸಿದರೆ ಭಾರಿ ದಂಡ!

Date:

  • ದುಬೈಗೆ ಸಂಪರ್ಕ ಕಲ್ಪಿಸುವ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಹೆದ್ದಾರಿ
  • ಗಂಟೆಗೆ 120 ಕಿಲೋಮೀಟರ್ ಕನಿಷ್ಠ ವೇಗ, 140 ಕಿಲೋಮೀಟರ್‌ ಗರಿಷ್ಠ ವೇಗ

ಅತಿ ವೇಗವಾಗಿ ವಾಹನ ಚಲಾಯಿಸಿದರೆ ದಂಡ ವಿಧಿಸುವ ನಿಯಮ ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಜಾರಿಯಲ್ಲಿದೆ. ಆದರೆ ಅತಿ ವೇಗವಾಗಿ ವಾಹನ ಚಲಾಯಿಸಿದಿದ್ದರೆ ದಂಡ ವಿಧಿಸುವ ನಿಯಮ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಮೇ 1ರಿಂದ ಜಾರಿಗೆ ಬಂದಿದೆ.

ಅಬುಧಾಬಿಯಿಂದ ವಿಶ್ವವಿಖ್ಯಾತ ನಗರ ದುಬೈಗೆ ಸಂಪರ್ಕ ಕಲ್ಪಿಸುವ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ನಿಯಮ ಅನ್ವಯವಾಗಲಿದೆ.

4 ಪಥದ 62 ಕಿಲೋಮೀಟರ್‌ ಉದ್ದದ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಹೆದ್ದಾರಿಯಲ್ಲಿ ವಾಹನಗಳ ಗರಿಷ್ಠ ವೇಗ ಗಂಟೆಗೆ 140 ಕಿಲೋಮೀಟರ್‌ ಮತ್ತು ಕನಿಷ್ಠ ವೇಗ ಗಂಟೆಗೆ 80 ಕಿಲೋಮೀಟರ್‌ ನಿಗದಿಪಡಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ?: ಯೆಮನ್ | ಭೀಕರ ಕಾಲ್ತುಳಿತ: 85 ಮಂದಿ ಸಾವು, 322 ಜನರಿಗೆ ಗಾಯ

ಆದರೆ ಈ ಹೆದ್ದಾರಿಯ ಎಡದಿಂದ ಮೊದಲ ಮತ್ತು ಎರಡನೇ ಪಥಗಳಲ್ಲಿ ಸಂಚರಿಸುವ ವಾಹನಗಳು  ಮೇ 1ರಿಂದ ಕನಿಷ್ಠ 120 ಕಿಲೋಮೀಟರ್‌ ವೇಗದಲ್ಲಿ ಸಂಚರಿಸಬೇಕಿದೆ.

ಈ ನಿಯಮವನ್ನು ಉಲ್ಲಂಘಿಸುವ ವಾಹನ ಚಾಲಕರು 8 ಸಾವಿರ (400 ದಿರ್ಹಂ) ದಂಡ ತೆರಬೇಕಾಗುತ್ತದೆ ಎಂದು ಅಬುಧಾಬಿ ಪೊಲೀಸ್‌ನ ಕೇಂದ್ರ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಜನರಲ್ ಅಹ್ಮದ್ ಸೈಫ್ ಅಲ್ ತಿಳಿಸಿದ್ದಾರೆ.

ಭಾರೀ ಗಾತ್ರದ ವಾಹನಗಳಿಗೆ ಮೂರನೇ ಮತ್ತು ಕೊನೆಯ ಪಥದಲ್ಲಿ ಕನಿಷ್ಠ ವೇಗದ ನಿಯಮವು ಅನ್ವಯವಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್ ಮೇಲೆ ಶೀಘ್ರ ಇರಾನ್ ದಾಳಿ ಸಾಧ್ಯತೆ: ಬೈಡನ್ ಎಚ್ಚರಿಕೆ

ಸಿರಿಯಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್ ಶೀಘ್ರವೇ ಇಸ್ರೇಲ್ ಮೇಲೆ ದಾಳಿ...

ವಂಚನೆ ಪ್ರಕರಣದಲ್ಲಿ ವಿಯೆಟ್ನಾಂ ಶತ ಕೋಟ್ಯಾಧೀಶೆಗೆ ಮರಣ ದಂಡನೆ

ದೇಶದ ಅತೀ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಯೆಟ್ನಾಂ ನ ರಿಯಲ್‌...

ಇಂಗ್ಲೆಂಡ್‌ನಲ್ಲಿ 12 ಮಂದಿ ಭಾರತೀಯರ ಬಂಧನ

ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 11 ಮಂದಿ ಪುರುಷರು ಮತ್ತು...

‘ಹಿಗ್ಸ್ ಬೋಸಾನ್’ ಕಂಡುಹಿಡಿದ ಭೌತಶಾಸ್ತ್ರಜ್ಞ ಪೀಟರ್ ಹಿಗ್ಸ್ ನಿಧನ

ಹಿಗ್ಸ್ ಬೋಸಾನ್ ಎಂದು ಕರೆಯಲ್ಪಡುವ ಸೃಷ್ಟಿಯ ಮೂಲ ಧಾತು (ಗಾಡ್ ಪಾರ್ಟಿಕಲ್...