- ಗ್ರಾಮಸ್ಥರ ತರಾಟೆಗೆ ತಲೆ ಚಚ್ಚಿಕೊಂಡ ಶಾಸಕ
- ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್
ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕನ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆ ವೇಳೆ ನಮ್ಮ ನೆನಪಾಯಿತೆ? ಎಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ಸಂಡೂರಿನಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುಡುತಿನಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಈ ತುಕಾರಾಂ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? : ಚುನಾವಣೆ 2023 | ಕಾಂಗ್ರೆಸ್ ನಾಯಕ ಮನೋಹರ್ ತಹಶೀಲ್ದಾರ್ ಏ. 7ಕ್ಕೆ ಜೆಡಿಎಸ್ ಸೇರ್ಪಡೆ
“ಪ್ರತಿ ಸಲ ಚುನಾವಣೆ ವೇಳೆಗೆ ಮಾತ್ರ ಆಗಮಿಸುತ್ತೀರಾ, ನಮ್ಮ ಸಮಸ್ಯೆಗಳಿಗೆ ಯಾವತ್ತಾದರೂ ಸ್ಪಂದಿಸಿದ್ದೀರಾ? ಬರೀ ನಿಮ್ಮ ಹಿಂಬಾಲಕರನ್ನು ಮಾತ್ರ ಏಳಿಗೆ ಮಾಡಿದ್ದೀರಿ. ಹಿಂಬಾಲಕರ ಮತ ಸಾಕು, ನಮ್ಮ ವೋಟು ನಿಮಗ್ಯಾಕೆ” ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಹಿಂಬಾಲಕರು ಮತ್ತು ಗ್ರಾಮಸ್ಥರ ನಡುವೆ ನೂಕಾಟ ಮತ್ತು ತಳ್ಳಾಟ ನಡೆಯುತ್ತಿತ್ತು. ಇದನ್ನು ನೋಡಿ ಅಸಹಾಯಕರಾದ ತುಕಾರಾಂ ತಲೆಚಚ್ಚಿಕೊಂಡು, ಎಲ್ಲರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿ, ಅಲ್ಲಿಂದ ಹೊರನಡೆದರು.