ಮೋದಿ-ಶಾರನ್ನು ಈ ಅಪರಾಧಕ್ಕಾಗಿ ವಿಚಾರಣೆಗೊಳಪಡಿಸಲಾಗುವುದು; ಜ್ಞಾನೇಶ್‌ ಕುಮಾರ್‌ ಅಪ್ರೂವರ್‌ ಆಗೋದು ಒಳ್ಳೆಯದು: ರಾಹುಲ್‌ ಗಾಂಧಿ ಸ್ಫೋಟಕ ಹೇಳಿಕೆ

Date:

“ಚುನಾವಣಾ ಅಕ್ರಮಗಳ ಷಡ್ಯಂತ್ರದ ರೂವಾರಿಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಮತ ಕಳ್ಳತನದ ದೇಶದ್ರೋಹದ ಅಪರಾಧಕ್ಕಾಗಿ ವಿಚಾರಣೆಗೆ ಒಳಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವೇ ಈ ಪ್ರಕರಣದಲ್ಲಿ ಅವರು ಅಪ್ರೂವರ್ (ಸಾಕ್ಷಿ) ಆಗುವುದು ಅವರಿಗೆ ಒಳ್ಳೆಯದು,” ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.

- Advertisement -

ಗುರುವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಂದಿನ 15, 30 ಅಥವಾ 50 ವರ್ಷಗಳ ಕಾಲ ತಾವೇ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಈ ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇದು ಮತ ಕಳ್ಳತನದ ಮೂಲಕ ಗೆಲ್ಲುವ ಅತಿಯಾದ ಆತ್ಮವಿಶ್ವಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

​”ಆಡಳಿತ ವಿರೋಧಿ ಅಲೆಯು ಪ್ರತಿಯೊಬ್ಬ ನಾಯಕನಿಗೂ ಎದುರಾಗುತ್ತದೆ. ಅದು ಇರದೇ ಇರಲು ಉತ್ತರ ಕೊರಿಯಾದಂತಹ ಸರ್ವಾಧಿಕಾರಿ ರಾಷ್ಟ್ರಗಳಲ್ಲಿ ಮಾತ್ರ ಸಾಧ್ಯ. ಆ ಅಲೆ ಕೆಲಸ ಮಾಡದಿದ್ದರೆ ಅಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದರ್ಥ. ನಮ್ಮ ದೇಶದಲ್ಲಿ ಆ ಆಡಳಿತ ವಿರೋಧಿ ಅಲೆ ಎಲ್ಲಿಗೆ ಹೋಯಿತು ಎಂದು ನಾವು ಉತ್ತರ ಹುಡುಕುತ್ತಿದ್ದೆವು, ಈಗ ನಮಗೆ ಆ ಉತ್ತರ ಸಿಕ್ಕಿದೆ. ಆ ಉತ್ತರವೇ ಈ ಷಡ್ಯಂತ್ರ,” ಎಂದು ಅವರು ಮಾರ್ಮಿಕವಾಗಿ ನುಡಿದರು.

56101

ದೇಶದ ಚುನಾವಣಾ ವ್ಯವಸ್ಥೆಯು “ಮೂಲತಃ ಒಡೆದುಹೋಗಿದೆ” ಮತ್ತು “ಕಾನೂನುಗಳು ಪ್ರಶ್ನಾರ್ಹವಾಗಿವೆ”. ಚುನಾವಣಾ ಆಯೋಗದ ಇಬ್ಬರು ಆಯುಕ್ತರೇ ವ್ಯವಸ್ಥೆಯೊಳಗಿನ ಅಕ್ರಮಗಳನ್ನು ಹಾಗೂ ಆಗಿರುವ ಹಾನಿಯನ್ನು ಬಹಿರಂಗಪಡಿಸಿದ್ದಾರೆ.ಕೇವಲ ಮತಗಳ ಕಳ್ಳತನ ಮಾತ್ರವಲ್ಲ, ಇದರಿಂದ ಕಾನೂನಿನ ಕಳ್ಳತನ ಹಾಗೂ ಸಂಸ್ಥೆಗಳ ಕಳ್ಳತನ (ಸಂಸ್ಥಾ ಚೋರಿ) ಕೂಡ ಎಗ್ಗಿಲ್ಲದೆ ನಡೆಯುತ್ತಿದೆ.ಕಳ್ಳ ಮತಗಳ ಮೂಲಕ ಆಯ್ಕೆಯಾದ ಸಂಸತ್ತಿನ ಸದಸ್ಯರು ರೂಪಿಸುವ ಯಾವುದೇ ಕಾನೂನು ಕೂಡ ಸಂಪೂರ್ಣವಾಗಿ ಕಾನೂನುಬಾಹಿರವಾಗಿರುತ್ತದೆ.ಇದು ದೇಶದ ಮೂಲಭೂತ ಶಾಸನಾತ್ಮಕ ರಚನೆಗೆ ಎದುರಾಗಿರುವ ಅತಿದೊಡ್ಡ ಅಪಾಯವಾಗಿದೆ ಎಂದು ಎಚ್ಚರಿಸಿದರು.

Advertisements

​ದೇಶದ ಕಾನೂನು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಒಟ್ಟು ವ್ಯವಸ್ಥೆಯನ್ನೇ ನಾಶ ಮಾಡುವುದೇ ಈ ಬೃಹತ್ ಷಡ್ಯಂತ್ರದ ಹಿಂದಿರುವ ಅಸಲಿ ಉದ್ದೇಶವಾಗಿದೆ. ಇದಕ್ಕಾಗಿ ಪ್ರಧಾನಿ ಹಾಗೂ ಅಮಿತ್ ಶಾ ಅವರು ತಾವೇ ಖುದ್ದಾಗಿ ಗ್ಯಾನೇಶ್ ಕುಮಾರ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದಲ್ಲದೆ, ಅವರ ರಕ್ಷಣೆಗಾಗಿಯೇ 2023ರ ಡಿಸೆಂಬರ್ 21ರಂದು ಹೊಸ ಕಾನೂನೊಂದನ್ನು ಜಾರಿಗೆ ತಂದಿದ್ದಾರೆ ಎಂದು ಅವರು ನೇರ ಆರೋಪ ಮಾಡಿದರು.

56096

ಈ ಹೊಸ ಕಾನೂನಿನ ಪ್ರಕಾರ ಚುನಾವಣಾ ಆಯುಕ್ತರನ್ನು ಯಾವುದೇ ರೀತಿಯ ತನಿಖೆಗೆ ಒಳಪಡಿಸುವಂತಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕರಾಳ ಕಾನೂನಿನ ಮೂಲಕ ಆಯುಕ್ತರಿಗೆ ಸಂಪೂರ್ಣ ರಕ್ಷಣೆ ಒದಗಿಸಿ, ಅವರ ಬೆಂಬಲದೊಂದಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಚುನಾವಣಾ ಅಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಆರೋಪಗಳಿಗೆ ಪುಷ್ಟಿ ನೀಡುವಂತೆ, ಫೆಬ್ರವರಿ 7, 2024 ರಂದು ಮಹಾರಾಷ್ಟ್ರದ ಚುನಾವಣಾ ಅಕ್ರಮಗಳ ಕುರಿತು ನಡೆಸಿದ ಸುದ್ದಿಗೋಷ್ಠಿಯ ವಿವರವನ್ನು ನೀಡಿದರು. ಅದರ ಬೆನ್ನಲ್ಲೇ ಬೆಂಗಳೂರಿನ ಮಹಾದೇವಪುರ, ಹರಿಯಾಣ ಹಾಗೂ ಆನಂದ್ (ಗುಜರಾತ್) ಮುಂತಾದ ಕಡೆಗಳಲ್ಲಿ ನಡೆದ ಮತ ಕಳ್ಳತನದ ಘಟನೆಗಳನ್ನು ಉದಾಹರಣೆಯಾಗಿ ನೀಡಿದರು. ಈ ಘಟನೆಗಳು ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ಅಕ್ರಮಗಳ ಸರಮಾಲೆಯನ್ನು ಎತ್ತಿತೋರಿಸುತ್ತವೆ ಎಂದು ವಿವರಿಸಿದರು.

56073

ದೇಶದ ಜನಸಾಮಾನ್ಯರ ಮತವನ್ನು ಕದಿಯುವುದು ಕೇವಲ ರಾಜಕೀಯ ಭ್ರಷ್ಟಾಚಾರವಲ್ಲ, ಅದು ಭಾರತ ಮತ್ತು ಸಂವಿಧಾನದ ವಿರುದ್ಧ ಎಸಗಿದ ‘ಮಹಾ ದೇಶದ್ರೋಹದ ಕೃತ್ಯ’. ಭಾರತದ ರಾಜಕೀಯ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವವನ್ನು ನಾಶವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ; ಈ ಅಕ್ರಮದ ಹಿಂದೆ ಇರುವ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ಆಗಲೇಬೇಕು ಎಂದು ಅವರು ಎಚ್ಚರಿಕೆ ರವಾನಿಸಿದರು.

​ಈ ವಿಷಯವನ್ನು ಇಲ್ಲಿಗೇ ಕೈಬಿಡುವುದಿಲ್ಲ, ಭಾರತದ ರಾಜಕೀಯ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವವನ್ನು ನಾಶವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈ ಅಕ್ರಮದ ಹಿಂದೆ ಇರುವ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ಆಗಲೇಬೇಕು, ಇದಕ್ಕಾಗಿ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು. ಇದು ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪವಲ್ಲ, ಬದಲಾಗಿ ಭಾರತ ದೇಶ ಹಾಗೂ ಅದರ ಪವಿತ್ರ ಸಂವಿಧಾನವನ್ನು ಉಳಿಸುವ ಅಳಿವು-ಉಳಿವಿನ ಹೋರಾಟವಾಗಿದೆ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ ‘ಮೋದಿ ಜಪ’ದ ಸಂಸದರು

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ...

ಸೆ.25ಕ್ಕೆ ಚುನಾವಣಾ ಕಚೇರಿಗಳಿಗೆ ಕಾಂಗ್ರೆಸ್ ಮುತ್ತಿಗೆ: ಸಿಇಸಿ ಗ್ಯಾನೇಶ್ ಕುಮಾರ್ ಬಂಧನ, ವಜಾಕ್ಕೆ ಆಗ್ರಹ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣವೇ ಬಂಧಿಸಬೇಕು,...

ಬಾಗಲಕೋಟೆ | ಸಮುದಾಯಗಳ ಸಮಸ್ಯೆಗಳಿಗೆ ಸಂಘಟಿತ ಹೋರಾಟ ಅಗತ್ಯ

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಮೂಲಕ...