ಅಂಬೇಡ್ಕರ್ ಕಾರಣದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಸಿದ್ದರಾಮಯ್ಯ

Date:

  • ಹಡಪದ ಅಪ್ಪಣ್ಣ ಮನುಕುಲಕ್ಕಾಗಿ ತುಡಿದವರು
  • ಶರಣರು ಜಾತಿ ಮುಕ್ತ ಸಮಾಜಕ್ಕಾಗಿ ತುಡಿದವರು

ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಕುರಿ, ಎಮ್ಮೆ ಕಾಯುತ್ತಾ ಇರಬೇಕಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

- Advertisement -

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರು ನಗರ ಜಿಲ್ಲಾಡಳಿತ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ಚಲನೆ ಇಲ್ಲದೆ ಹಿಂದುಳಿದ ಶೋಷಿತ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ ಚಲನೆ ಸಿಗುವುದಿಲ್ಲ. ಹೀಗಾಗಿ ಬುದ್ದ, ಬಸವಾದಿ ಶರಣರು, ಡಾ. ಬಿ ಆರ್ ಅಂಬೇಡ್ಕರ್ ಅವರು ಜಾತಿ ಮುಕ್ತ ಸಮಾಜ ಇರಬೇಕು ಎಂದು ಆಶಿಸಿದ್ದರು. ಜನರಿಗೆ ಬಸವಣ್ಣ, ಹಡಪದ ಅಪ್ಪಣ್ಣ ಅವರಂಥವರ ಆದರ್ಶ ಮತ್ತು ವಿಚಾರಗಳು ಗೊತ್ತಾಗಬೇಕು. ಅದಕ್ಕಾಗಿ ಸಂತರ, ಬಸವಾದಿ ಶರಣರ ಜನ್ಮ ದಿನಾಚರಣೆಗಳನ್ನು ಆಚರಿಸಬೇಕು ಎಂದು ಹೇಳಿದರು.

ನಾವು ಬಸವಾದಿ ಶರಣರ ಆಶಯ ಮತ್ತು ಆದರ್ಶಗಳನ್ನು ಮುಂದುವರಿಸುವ ಉದ್ದೇಶದಿಂದಲೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತ ಆಗದೆ ಸರ್ವರಿಗೂ ಅನ್ವಯ ಆಗುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದು ವೆರಿ ಸಿಂಪಲ್. ನಮ್ಮ ಯೋಜನೆಗಳ ಹಿಂದಿನ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲು ಹೃದಯ ಇದ್ದರೆ ಸಾಕು ಎಂದರು.

ಚಾತುರ್ವರ್ಣ ವ್ಯವಸ್ಥೆಯ ಜಾತಿ ಕಾರಣಕ್ಕೆ ಶೂದ್ರರು ಮತ್ತು‌ ಮಹಿಳೆಯರು ಕೇವಲ ಉತ್ಪಾದನೆಗೆ ಮಾತ್ರ ಸೀಮಿತವಾಗಿದ್ದರು. ಇವರಿಗೆ ತಮ್ಮ ಉತ್ಪಾದನೆಯನ್ನು ಅನುಭವಿಸುವ ಹಕ್ಕು ಇರಲಿಲ್ಲ. ಯಾರು ಉತ್ಪಾದನೆಯಲ್ಲಿ ತೊಡಗುವುದಿಲ್ಲವೋ ಅವರು ಮಾತ್ರ ಉಳಿದೆಲ್ಲರ ಉತ್ಪಾದನೆಯನ್ನು ಅನುಭವಿಸಬಹುದಿತ್ತು. ಆದ್ದರಿಂದ ಬಸವಾದಿ ಶರಣರು ಈ ಶೋಷಣೆಯುಕ್ತ ಸಮಾಜವನ್ನು ಅಳಿಸಿ ಜಾತಿ ಮುಕ್ತ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ, ಅವರೆ ಮುನ್ನಡೆಯುತ್ತಾರೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಕಾರಿನ ಮೇಲೆ ಕಾಗೆ ಕುಳಿತ ಘಟನೆ ಸ್ಮರಿಸಿದ ಸಿಎಂ

ಬಸವಾದಿ ಶರಣರು ಮೌಢ್ಯ ಪರಂಪರೆ ವಿರುದ್ಧ ಹೋರಾಡಿದ್ದನ್ನು ವಿವರಿಸುವ ಸಂದರ್ಭದಲ್ಲಿ ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗವನ್ನು ಸ್ಮರಿಸಿದರು. ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಟಿವಿಗಳಲ್ಲಿ ಭಯಂಕರ ಚರ್ಚೆ ನಡೆಯಿತು. ಒಬ್ಬರು, ನಾನು ಬಜೆಟ್ ಮಂಡಿಸಲ್ಲ ಕುರ್ಚಿ ಕಳ್ಕೊತೀನಿ ಎಂದರು. ಇನ್ನೊಬ್ಬರು ಬಜೆಟ್ ಮಂಡಿಸಿದ ಮೇಲೆ ಅಧಿಕಾರ ಕಳ್ಕೊತಾರೆ ಎಂದರು. ಆದರೆ ಕಾಗೆ ಹಾರಿಹೋಯ್ತು. ಮೌಢ್ಯದ ಕಾಗೆ ಹಾರಿಸಿದವರೂ ನಾಪತ್ತೆ ಆದ್ರು. ನಾನು ಕಾಗೆ ಕುಳಿತ ಬಳಿಕವೂ ಎರಡು ಬಜೆಟ್ ಮಂಡಿಸಿ ಅಧಿಕಾರ ಪೂರ್ತಿಯಾಗಿ, ಸಮರ್ಥವಾಗಿ ನಿರ್ವಹಿಸಿದೆ. ಆದ್ದರಿಂದ ಮೌಢ್ಯವನ್ನು ನಂಬಬೇಡಿ ಎಂದು ತಮ್ಮ ಅನುಭವದ ಮೂಲಕವೇ ವಿವರಿಸಿದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಇಲಾಖೆ ಕಾರ್ಯದರ್ಶಿ ಡಾ. ಎನ್ ಮಂಜುಳ ಸೇರಿ ಹಲವರು ಉಪಸ್ಥಿತರಿದ್ದರು. ಸಚ್ಚಿದಾನಂದ ಚಟ್ನಳ್ಳಿ ಅವರು ಹಡಪದ ಅಪ್ಪಣ್ಣ ಕುರಿತು ಉಪನ್ಯಾಸ ನೀಡಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ದೂರಿದ್ದ ಎಎಪಿ ಶಾಸಕ ಅಮಾನತು

ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಹೆಚ್ಚಿದೆ ಎಂದು ತಮ್ಮದೇ...

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಮುಂಬೈ ಪ್ರತಿಭಟನೆ: ಸಿಜೆಪಿ ಆಯೋಜಕರು, 500ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್‌ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ...