ನೆಹರು ವಸ್ತು ಸಂಗ್ರಹಾಲಯ ಹೆಸರು ಬದಲಾವಣೆ: ಪ್ರಧಾನಿಯ ಸೇಡಿನ ರಾಜಕಾರಣ ಎಂದ ಕಾಂಗ್ರೆಸ್

Date:

ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್ಎಂಎಂಎಲ್) ಹೆಸರನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಹಾಗೂ ಸೊಸೈಟಿ ಎಂದು ಮರುನಾಮಕರಣ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವಿಟ್‌ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, “ಅತೀ ದೀರ್ಘಾವಧಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ನೆಹರುರವರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಯ, ಸಂಕೀರ್ಣತೆಗಳು ಹಾಗೂ ಅಭದ್ರತೆಯ ದೊಡ್ಡ ಸುಳ್ಳಿನ ಕಂತೆಯನ್ನೇ ಹೊಂದಿದ್ದಾರೆ. ನೆಹರು ಮತ್ತು ಅವರ ಪರಂಪರೆಯನ್ನು ನಿರಾಕರಿಸುವ, ವಿರೂಪಗೊಳಿಸುವ, ಮಾನಹಾನಿ ಮಾಡುವ ಮತ್ತು ನಾಶ ಮಾಡುವ ಏಕೈಕ ಅಂಶದ ಉದ್ದೇಶವನ್ನು ಅವರು ಹೊಂದಿದ್ದಾರೆ. ಅವರು ‘ಎನ್‌’ ಅಳಿಸಿ ಬದಲಿಗೆ ‘ಪಿ’ ಎಂದು ಹಾಕಿದ್ದಾರೆ. ‘ಪಿ’ ಯು ಕ್ಷುಲ್ಲಕತೆ ಮತ್ತು ಸೇಡಿನ ರಾಜಕಾರಣವನ್ನು ಹೊಂದಿದೆ” ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿ ಓದಿದ್ದೀರಾ? ದ್ವಾರಕಾ ಎಕ್ಸ್‌ಪ್ರೆಸ್‌ವೇ | ಅನುಮೋದಿಸಿದ್ದು ಕಿಮೀಗೆ 18 ಕೋಟಿ, ಖರ್ಚಾಗಿದ್ದು 250 ಕೋಟಿ; ಸಿಎಜಿ ವರದಿ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ನೆಹರುರವರ ಅಮೋಘ ಕೊಡುಗೆಗಳನ್ನು ಮತ್ತು ಭಾರತ ರಾಷ್ಟ್ರದ ಪ್ರಜಾಸತ್ತಾತ್ಮಕ, ಜಾತ್ಯತೀತ, ವೈಜ್ಞಾನಿಕ ಮತ್ತು ಉದಾರವಾದಿ ಅಡಿಪಾಯಗಳನ್ನು ನಿರ್ಮಿಸುವಲ್ಲಿ ಅವರ ಅತ್ಯುನ್ನತ ಸಾಧನೆಗಳನ್ನು ಅವರು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನೆಹರು ಅವರ ಕೊಡುಗೆಗಳು ಈಗ ಮೋದಿ ಮತ್ತು ಅವರ ಹೊಗಳುಭಟ್ಟರ ಆಕ್ರಮಣಕ್ಕೆ ಒಳಗಾಗಿವೆ”ಎಂದು ಬೇಸರ ವ್ಯಕ್ತಪಡಿಸಿದರು.

“ನಿರಂತರ ದಾಳಿಯ ಹೊರತಾಗಿಯೂ, ಜವಾಹರಲಾಲ್ ನೆಹರುರವರ ಪರಂಪರೆಯು ಜಗತ್ತಿಗೆ ಕಾಣಿಸುತ್ತದೆ ಮತ್ತು ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ” ಎಂದು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ | ಸಚಿವ ಬಿ.ನಾಗೇಂದ್ರ ವಜಾಗೊಳಿಸಿ: ಪ್ರಲ್ಹಾದ್‌ ಜೋಶಿ ಆಗ್ರಹ

ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ...

ಪಪುವಾ ನ್ಯೂಗಿನಿಗೆ 1 ಮಿಲಿಯನ್ ಡಾಲರ್ ನೆರವು ಘೋಷಿಸಿದ ಭಾರತ

ಬೃಹತ್‌ ಪ್ರಮಾಣದ ಭೂಕುಸಿತದಿಂದ ಅಪಾರ ಪ್ರಮಾಣದ ಸಾವು ನೋವಿನ ನಷ್ಟ ಅನುಭವಿಸಿರುವ...

ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ

"ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು...