ಸುಪ್ರೀಂ ಮೆಟ್ಟಿಲೇರಿದ ಫಾರ್ಮ್-6 ವಿವಾದ: ಸಿಇಸಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಕಾಂಗ್ರೆಸ್ ಆಗ್ರಹ

Date:

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ದೇಶದ ಸಂವಿಧಾನ ಮತ್ತು ಕಾನೂನು ನಿಯಮಗಳನ್ನು ಉಲ್ಲಂಘಿಸಿ, ಏಕಪಕ್ಷೀಯವಾಗಿ ಮತದಾರರ ನೊಂದಣಿ ‘ಫಾರ್ಮ್ 6’ರಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತಕ್ಷಣವೇ ಸ್ವಯಂಪ್ರೇರಿತ (Suo Motu) ವಿಚಾರಣೆ ಕೈಗೆತ್ತಿಕೊಂಡು ಗ್ಯಾನೇಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

- Advertisement -

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿ, ಗ್ಯಾನೇಶ್ ಕುಮಾರ್ ವಿರುದ್ಧ ಮುಖ್ಯವಾಗಿ ಮೂರು ಪ್ರಮುಖ ಉಲ್ಲಂಘನೆಗಳನ್ನು ಪಟ್ಟಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್:...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ;...

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು ಸಾವಯವ ಕೃಷಿಯ ಪವಾಡ" ಎಂದು ಚಂ.ಸು ಪಾಟೀಲ್ ಸಾವಯವ ಕೃಷಿಯ ಅನುಕೂಲಗಳನ್ನು ವಿಶ್ಲೇಷಿಸುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ತೀವ್ರ...

ಇದನ್ನೂ ಓದಿ: ಸಿಇಸಿ ಗ್ಯಾನೇಶ್ ಕುಮಾರ್ ವಜಾಕ್ಕೆ ಆಗ್ರಹ; ಸಂಸತ್ತಿನಲ್ಲಿ ‘ಮಹಾಭಿಯೋಗ’ ಸಲ್ಲಿಕೆಗೆ ವಿಪಕ್ಷಗಳ ನಿರ್ಧಾರ

2026ರ ಜುಲೈ ಆರಂಭದಲ್ಲಿ ಯಾವುದೇ ಅಧಿಕೃತ ಗೆಜೆಟ್ ನೋಟಿಫಿಕೇಶನ್ ನೀಡದೆ ಆನ್‌ಲೈನ್ ಫಾರ್ಮ್ 6 ಅನ್ನು ರಹಸ್ಯವಾಗಿ ಬದಲಾಯಿಸಲಾಗಿದೆ. ‘ಜನಪ್ರತಿನಿಧಿ ಕಾಯ್ದೆ 1950’ರ ಪ್ರಕಾರ ಫಾರ್ಮ್‌ಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಚುನಾವಣಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಈ ತಿದ್ದುಪಡಿ ಮಾಡಿದೆ. ‘ಮತದಾರರ ನೋಂದಣಿ ನಿಯಮಗಳು 1960’ಕ್ಕೆ ಸಂಬಂಧಿಸಿದ ನಿಯಮಾವಳಿಗಳಿಗೆ ಯಾವುದೇ ತಿದ್ದುಪಡಿ ತರದೆ ಹಾಗೂ ಸಂಸತ್ತಿಗೆ ಯಾವುದೇ ಮಾಹಿತಿ ನೀಡದೆ ಈ ಹೆಜ್ಜೆ ಇಡಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಹೊಸದಾಗಿ ನೋಂದಾಯಿಸಿಕೊಳ್ಳುವ ಯುವ ಮತದಾರರು (Gen Z) ಫಾರ್ಮ್ 6 ಭರ್ತಿ ಮಾಡುವಾಗ, ಅವರ ಪೋಷಕರು ಅಥವಾ ಅಜ್ಜ-ಅಜ್ಜಿಯರು ಹಿಂದಿನ ಮತದಾರರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪಟ್ಟಿಯಲ್ಲಿ ಭಾಗಿಯಾಗಿದ್ದರೆ ಎಂಬ ವಿವರವನ್ನು ನೀಡುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಹೊಸದಾಗಿ ಮತದಾನದ ಹಕ್ಕು ಪಡೆಯಲು ಬಯಸುವ ಲಕ್ಷಾಂತರ ಯುವಕರಿಗೆ ದೊಡ್ಡ ತಡೆಗೋಡೆ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಜೈರಾಮ್ ರಮೇಶ್, “ಸಿಇಸಿ ಗ್ಯಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ತಕ್ಷಣ ರಾಜೀನಾಮೆ ನೀಡಬೇಕು” ಎಂದು ಪುನರುಚ್ಚರಿಸಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ಮೂಲಗಳು, ಫಾರ್ಮ್ 6 ರ ಮೂಲ ಕಾನೂನಾತ್ಮಕ ಸ್ವರೂಪವನ್ನು ತಿದ್ದುಪಡಿ ಮಾಡಲಾಗಿಲ್ಲ, ಬದಲಾಗಿ ಹೆಚ್ಚುವರಿ ಮಾರ್ಗದರ್ಶಿ ಸೂಚನೆಗಳು ಮತ್ತು ‘ಅನೆಕ್ಸರ್-ಡಿ’ ಪ್ರಕ್ರಿಯೆಯನ್ನು ಮಾತ್ರ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮತದಾನದ ಹಕ್ಕು ಕಸಿಯಲು ಯಾರಿಗೂ ಅಧಿಕಾರವಿಲ್ಲ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

"ಈ ದೇಶದಲ್ಲಿ ಹುಟ್ಟಿರುವ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿಯಲು ಯಾರಿಗೂ...

CEC ಗ್ಯಾನೇಶ್‌ ಕುಮಾರ್‌ ವಿರುದ್ಧ ತನಿಖೆಗೆ ಸುಪ್ರೀಂನಲ್ಲಿ ಅರ್ಜಿ; ಆಯೋಗದ ಡೇಟಾಬೇಸ್‌ ಆಡಿಟ್‌ಗೆ ಮನವಿ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧದ ಆರೋಪಗಳ ತನಿಖೆಗೆ...

ಬಿಡದಿ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ

ಕಳೆದ ಐದು ದಿನಗಳಿಂದ ಬೈರಮಂಗಲ ವೃತ್ತದಲ್ಲಿ ರಸ್ತೆ ತಡೆ ಹಾಗೂ ಸರಣಿ...