ಸರ್ಕಾರ ಬೀಳಿಸಲು ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರೂ ಆಮಿಷ; ಡಿಕೆಶಿ ಆರೋಪ

Date:

“ಸರ್ಕಾರವನ್ನು ಬೀಳಿಸಲು ಬಿಜೆಪಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಇತ್ತೀಚೆಗೆ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿಯ ಆಮಿಷ ನೀಡಿದೆ” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದರು.

- Advertisement -

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಉಪ ಚುನಾವಣೆಯಲ್ಲಿ ಪುಟ್ಟಣ್ಣ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೆಂಗೇರಿಯ ಸೂಲಿಕೇರಿ ಮೈದಾನದಲ್ಲಿ ಭಾನುವಾರ ಶಿಕ್ಷಕರ ಕೃತಜ್ಞತಾ ಸಭೆ ನಡೆದಿದೆ. ಇಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆಶಿ, “ಬಿಜೆಪಿಯು ನಮ್ಮ ಸರ್ಕಾರವನ್ನು ಕೆಡವಲು ಪ್ರಯತ್ನ ಮಾಡಿದ್ದು, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನೂ ಸಂಪರ್ಕಿಸಿದ್ದಾರೆ. ಆದರೆ ಬಿಜೆಪಿಗೆ ನಮ್ಮ ಶಾಸಕರನ್ನು ಅವರ ಪಕ್ಷದತ್ತ ಎಳೆದುಕೊಳ್ಳಲು ಸಾಧ್ಯವಾಗಿಲ್ಲ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

“ಬಿಜೆಪಿ ಕೋಮುವಾದಿ ಪಕ್ಷ ಅದು ಸಮಾಜ ಒಡೆಯುತ್ತದೆ ಎಂಬ ಕಾರಣಕ್ಕೆ ನಾವು ಮತ್ತು ಸಿದ್ದರಾಮಯ್ಯ ಅವರು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಯಾವುದೇ ಷರತ್ತು ಇಲ್ಲದೆಯೇ ಸಿಎಂ ಮಾಡಿದೆವು, ಆದರೆ ಬಿಜೆಪಿಯು ನಮ್ಮ ಆಗಿನ ಸರ್ಕಾರವನ್ನು ಕೆಡವಿತು” ಎಂದ ಡಿಕೆಶಿ, “ತಾನು ಸಿಎಂ ಆಗಿದ್ದ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಜೊತೆಗೆಯೇ ಈಗ ಕುಮಾರಸ್ವಾಮಿ ಇದ್ದಾರೆ” ಎಂದು ಟೀಕಿಸಿದರು.

“ಬಿಜೆಪಿ ಪಕ್ಷದ ನಾಯಕರು ಸರ್ಕಾರ ಬೀಳಿಸುವ ವಿಚಾರದಲ್ಲಿ ‘ತಿರುಕನ ಕನಸು’ ಕಾಣುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಲು ಬಯಸುತ್ತೇನೆ. ನಾವು ಜನರ ಆಶೀರ್ವಾದದಿಂದ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ” ಎಂದ ಡಿಕೆಶಿ “ಇಂತಹ ನೀತಿಗೆಟ್ಟ ರಾಜಕಾರಣ ನೋಡಿ ಅಸಹ್ಯವಾಗುತ್ತದೆ” ಎಂದು ವಾಗ್ದಾಳಿ ನಡೆಸಿದರು.

“ನಾವು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಮಾತ್ರವಲ್ಲದೆ ಮೂವರು ಪಕ್ಷೇತರರ ಬೆಂಬಲದಿಂದ ಬಲಿಷ್ಠವಾಗಿ ಸರ್ಕಾರ ನಡೆಸುತ್ತಿದ್ದೇವೆ, ಹೀಗಿರುವಾಗ ನಮ್ಮ ಸರ್ಕಾರವನ್ನು ಬಿಜೆಪಿಯವರಿಂದ ಬೀಳಿಸಲು ಸಾಧ್ಯವಾಗದು” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ದುರ್ಬಳಕೆ; ಅಶ್ಲೀಲ ವಿಡಿಯೋ, ಫೋಟೋ ವೈರಲ್: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ

ಸಾಮಾಜಿಕ ಜಾಲತಾಣಗಳಲ್ಲಿ ಎಐ ತಂತ್ರಜ್ಞಾನ ಬಳಸಿ ರಚಿಸಲಾದ ಅಶ್ಲೀಲ ಮತ್ತು ನಕಲಿ...

ಪ್ರಧಾನಿ ಮೋದಿ ‘ವೋಟ್ ಚೋರ್, ಗದ್ದಿ ಚೋರ್’ – ಪ್ರಕಾಶ್ ರಾಜ್ ಆಕ್ರೋಶ

ಬೆಂಗಳೂರಿನಲ್ಲಿ 'ಎಸ್‌ಐಆರ್ ವಿರೋಧಿ ಕರ್ನಾಟಕ' ಸಂಘಟನೆಯು ಆಯೋಜಿಸಿದ್ದ 'ಜನತಾ ನ್ಯಾಯಾಲಯ' ಕಾರ್ಯಕ್ರಮದಲ್ಲಿ...

ಕೇರಳ ಮುಸ್ಲಿಂ ಲೀಗ್ ಐತಿಹಾಸಿಕ ಹೆಜ್ಜೆ: ಇದೇ ಮೊದಲ ಬಾರಿಗೆ ಹಿಂದೂ ನಾಯಕನಿಗೆ ಉಪಾಧ್ಯಕ್ಷ ಪಟ್ಟ

ಕೇರಳದ ಪ್ರಮುಖ ರಾಜಕೀಯ ಪಕ್ಷವಾದ 'ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್' (IUML)...