ಚುನಾವಣಾ ಫಲಿತಾಂಶ | ಅಯೋಧ್ಯೆಯಲ್ಲೇ ಮೋದಿಯ ಹುಸಿ ಭಕ್ತಿಗೆ ಬಾಣ ಬಿಟ್ಟ ಶ್ರೀರಾಮ!

Date:

ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರದ ಹೆಸರನ್ನು 2018ರಲ್ಲಿ ಅಯೋಧ್ಯೆ ಎಂದು ಬದಲಿಸಲಾಗಿತ್ತು. 2024ರ ಜನವರಿ 22ರಂದು ಇನ್ನೂ ಪೂರ್ಣಗೊಳ್ಳದ ಅಯೋಧ್ಯಾ ರಾಮ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡ್ತಾರೆ.

- Advertisement -

ಪ್ರಧಾನಿ ಮೋದಿ ಮೇ 17ರಂದು ಉತ್ತರ ಪ್ರದೇಶದ ಬರ್ಬಂಕಿ ಹಾಗೂ ಹಮೀರ್ ಪುರ್‌ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಉಗ್ರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಗೆದ್ದರೆ ಅಯೋಧ್ಯೆ ರಾಮಮಂದಿರದ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೆ ಎಂಬ ಭಯ ಹುಟ್ಟಿಸುತ್ತಾರೆ ಪ್ರಧಾನಿ ಮೋದಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಈ ಎಲ್ಲ ಸರಣಿ ವಿದ್ಯಾಮಾನಗಳು ಅಯೋಧ್ಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ತಂದು ಕೊಡಲಿದೆ ಎಂದು ಲೆಕ್ಕಹಾಕಲಾಗಿತ್ತು. ಹಾಲಿ ಸಂಸದರಾಗಿದ್ದ ಬಿಜೆಪಿಯ ಲಲ್ಲು ಸಿಂಗ್ 2014 ಹಾಗೂ 2019 ರಲ್ಲಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

ಕಳೆದ ಚುನಾವಣೆಯಲ್ಲಿ 65,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದ ಲಲ್ಲು ಸಿಂಗ್ , 2014ರಲ್ಲಿ 2.82 ಲಕ್ಷದ ಬೃಹತ್ ಅಂತರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಎದುರು ಗೆಲುವು ದಾಖಲಿಸಿದ್ದರು. ಈ ಬಾರಿ ಯೋಗಿ ಮತ್ತು ಮೋದಿಯ ಬುಲ್ಡೋಜರ್ ತನಗೆ 3 ಲಕ್ಷಕ್ಕಿಂತ ದೊಡ್ಡ ಅಂತರದಲ್ಲಿ ಗೆಲುವು ತಂದು ಕೊಡಲಿದೆ ಎಂದು ಲಲ್ಲು ಸಿಂಗ್ ನಿರೀಕ್ಷೆ ಮಾಡಿದ್ದರು.

ಇನ್ನೂ ಮೋದಿ ಪ್ರಚಾರಕ್ಕೆ ಹೋದಲ್ಲಲ್ಲೆ ಅಯೋಧ್ಯೆ ಮತ್ತು ರಾಮ ಮಂದಿರವನ್ನು ಉಲ್ಲೇಖಿಸುತ್ತಿದ್ದರು . ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿ ಕೂಟವು ರಾಮ ಮಂದಿರ ಉದ್ಘಾಟನೆಯ ಆಹ್ವಾನ ತಿರಸ್ಕರಿಸಿ ಹಿಂದು ಧರ್ಮವಿರೋಧಿ ನಿಲುವು ತಾಳಿದೆ ಎಂದು ಉಗ್ರವಾಗಿ ಟೀಕಿಸುತ್ತಿದ್ದರು.

ಅಯೋಧ್ಯೆ ರಾಮಮಂದಿರ ಹಾಗೂ ಶ್ರೀರಾಮನನ್ನು ಚುನಾವಣಾ ದಾಳವಾಗಿ ಬಳಸಿಕೊಂಡ ಮೋದಿಯ ಅನೈತಿಕ ರಾಜಕೀಯಕ್ಕೆ ರಾಮ ಮಂದಿರದ ಬುಡದಲ್ಲೇ ಸರಿಯಾದ ಉತ್ತರ ಲಭಿಸಿದೆ. ಹ್ಯಾಟ್ರಿಕ್ ಕನಸು ಕಾಣುತ್ತಿದ ಅಯೋಧ್ಯೆಯ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೀಶ್ ಪ್ರಸಾದ್ ಎದುರು 54,352 ಮತಗಳ ದೊಡ್ಡ ಅಂತರದ ಸೋಲು ಕಂಡಿದ್ದಾರೆ.

ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಎಸ್.ಪಿ. ಅಭ್ಯರ್ಥಿ ಅವಧೀಶ್ ಪ್ರಸಾದ್ 5,52,177 ಮತ ಪಡೆದಿದ್ದಾರೆ. ಬಿಜೆಪಿಯ ಲಲ್ಲು ಸಿಂಗ್ 4,97,825 ಮತ ಪಡೆದರು. ಬಿಎಸ್ಪಿ ಅಭ್ಯರ್ಥಿ ಸಚಿದಾನಂದ ಪಾಂಡೆ 45,993 ಮತ ಪಡೆದಿದ್ದಾರೆ. ಸಿ.ಪಿ.ಐ ಅಭ್ಯರ್ಥಿ ಅರವಿಂದ ಸೇನ್ 15,347 ಮತ ಪಡೆದಿದ್ದಾರೆ. ಇನ್ನೂ ಹತ್ತು ಮಂದಿ ಸಣ್ಣ ಪುಟ್ಟ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದರು , ಈ ಹತ್ತು ಮಂದಿ ಅಭ್ಯರ್ಥಿಗಳು ಒಟ್ಟಾಗಿ ಹದಿನೆಂಟು ಸಾವಿರದಷ್ಟು ಮತ ಪಡೆದಿದ್ದಾರೆ, ವಿಶೇಷ ಅಂದರೆ 7511 ನೋಟಾ ಮತಗಳು ಈ ಕ್ಷೇತ್ರದಲ್ಲಿ ಬಿದ್ದಿವೆ.

ಒಟ್ಟಾರೆಯಾಗಿ ಈ ಕ್ಷೇತ್ರದ ಚುನಾವಣೆಯ ಮತ ಹಂಚಿಕೆಯನ್ನು ಗಮನಿಸಿದಾಗ ಬಿಜೆಪಿಗೆ ನೇರ ಎದುರಾಳಿಯಾಗಿದ್ದ ಸಮಾಜವಾದಿ ಪಕ್ಷವನ್ನು ಹೊರತುಪಡಿಸಿಯೂ ಸುಮಾರು 85 ಸಾವಿರದಷ್ಟು ಮತಗಳು ಬಿಜೆಪಿಗೆ ವಿರುದ್ದವಾಗಿ ಚಲಾವಣೆಯಾಗಿದೆ. ಬಹುಶಃ ಬಿಜೆಪಿ ಮತ್ತು ಮೋದಿಯ ಹುಸಿ ಭಕ್ತಿಯು ರಾಮನಿಗೆ ಅರ್ಥವಾಗಿರಬೇಕು , ಅದಕ್ಕೆ ಎಲ್ಲ ಕೋನಗಳಿಂದ ಬಾಣ ಬಿಟ್ಟಿರಬೇಕು.‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...