ಗದಗ | ಯುವ ಮುಸ್ಲಿಂ ವ್ಯಾಪಾರಿಯನ್ನು ಬೀದಿಪಾಲು ಮಾಡಿದ ಬಿಜೆಪಿ ಪ್ರಚಾರ ಯಾತ್ರೆ

ಬಿಜೆಪಿ ಪ್ರಚಾರ ಯಾತ್ರೆ
  • ಅಮಿತ್‌ ಶಾ ಭಾಗಿಯಾಗಿದ್ದ ಪ್ರಚಾರ ಸಭೆಯಲ್ಲಿ ನಡೆದ ಘಟನೆ
  • ತಂಪು ಪಾನೀಯ ಗಾಡಿಯನ್ನು ಹರಿದು ಮುಕ್ಕಿದ ಬಿಜೆಪಿ ಕಾರ್ಯಕರ್ತರು

ಗದಗ ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಟಾಟಾ ಏಸ್‌ ವಾಹನದಲ್ಲಿ ತಂಪು ಪಾನೀಯ ಮಾರುತ್ತಿದ್ದ ಯುವ ಮುಸ್ಲಿಂ ವ್ಯಾಪಾರಿಯ ಬಳಿ ನುಗ್ಗಿದ ಬಿಜೆಪಿ ಕಾರ್ಯಕರ್ತರು ವಾಹನದಲ್ಲಿದ್ದ ಪಾನೀಯವನ್ನೆಲ್ಲ ಕಿತ್ತುಕೊಂಡು ರಂಪಾಟ ಮಾಡಿರುವ ಘಟನೆ ನಡೆದಿದೆ.

ಗದಗದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. ಬಿಜೆಪಿ ಸಮಾವೇಶಕ್ಕೆ ಸಾವಿರಾರು ಜನರನ್ನು ಅಕ್ಕಪಕ್ಕದ ಊರುಗಳಿಂದ ಕರೆಸಲಾಗಿತ್ತು. ಬೇಸಿಗೆಯ ತಾಪಮಾನ ಹೆಚ್ಚಿದ್ದರೂ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ನೆರೆದಿದ್ದವರೂ ಬಾಯಾರಿಕೆಯಿಂದ ಹನಿ ನೀರಿಗಾಗಿ ಹಾತೊರಿಯುತ್ತಿದ್ದರು.

ಈ ವೇಳೆ, ಶರೀಫ ಎಂಬ ಮುಸ್ಲಿಂ ವ್ಯಾಪಾರಿ ತಂಪು ಪಾನೀಯಗಳನ್ನು ಮಾರಾಟ ಮಾಡಲೆಂದು ಸಮಾವೇಶದ ಸ್ಥಳಕ್ಕೆ ತನ್ನ ವಾಹನದಲ್ಲಿ ಆಗಮಿಸಿದ್ದರು. ಇದನ್ನು ಗಮನಿಸಿದ ಕೆಲ ಬಿಜೆಪಿ ಕಾರ್ಯಕರ್ತರು ಆತನ ಬಳಿಯಿದ್ದ ತಂಪು ಪಾನೀಯಗಳನ್ನು ಪಡೆದುಕೊಳ್ಳಲು ಮುಂದೆ ಧಾವಿಸಿದರು. ಇದನ್ನು ಕಂಡ ಜನ ಬಿಜೆಪಿ ಕಾರ್ಯಕರ್ತರು ತಮಗಾಗಿ ತಂಪು ಪಾನೀಯ ತಂದಿದ್ದಾರೆ ಎಂದು ಭಾವಿಸಿ, ವಾಹನದ ಮೇಲೇರಿ ಗಾಡಿಯಲ್ಲಿದ್ದ ಎಲ್ಲ ತಂಪು ಪಾನೀಯಗಳನ್ನು ಕೈಗೆ ಸಿಕ್ಕಷ್ಟು ಬಾಚಿಕೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? : ಬಿಜೆಪಿಯಿಂದ ಲಿಂಗಾಯತರ ನಿಂದನೆ ಎಂದ ಮೋದಿ; ಕಮಲ ಪಡೆ ಯಡವಟ್ಟು

ಇದರಿಂದ ಆಘಾತಗೊಂಡ ಶರೀಫ ಕೆಲ ಕಾಲ ಅವರನ್ನು ಅಲ್ಲಿಂದ ಕಳುಹಿಸುವ ಪ್ರಯತ್ನ ಮಾಡಿದನಾದರೂ, ತನ್ನ ಮುಂದೆ ಧಾವಿಸಿ ಬರುತ್ತಿದ್ದ ಸಾವಿರಾರು ಜನರನ್ನು ಎದುರಿಸಲಾಗದೇ ಅಸಹಾಯಕನಾಗಿ, ಭಯಭೀತನಾಗಿ, ಅಳಲು ಪ್ರಾರಂಭಿಸಿದರು. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಹಾಗೂ ಅಲ್ಲಿದ್ದ ಜನರನ್ನು ಕಳುಹಿಸುವ ಪ್ರಯತ್ನ ಮಾಡಿದರು.

ಈ ಘಟನೆಯನ್ನು ಕಂಡ ಕೆಲವರು ಮುಸ್ಲಿಂ ಯುವಕನ ಅಸಹಾಯಕತೆಗೆ ಹಾಗೂ ಬಿಜೆಪಿ ಕಾರ್ಯಕರ್ತರ ನಡೆಗೆ ಬೇಸರ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾನದಲ್ಲಿ ಬಿಜೆಪಿ ವಿರುದ್ಧ ಕಡಿಕಾರಿದ್ದಾರೆ.

1 COMMENT

  1. ಶಿಸ್ತು ಸಂಸ್ಕಾರ ರಾಷ್ಟ್ಟ್ರವಾದಿಗಳು ತರಬೇತಿ ಶಿಬಿರಗಳಲ್ಲಿ ಇದನ್ನೇ ಕಲಿಸಿರಬೇಕು,,ಜನ ಸ್ವಪ್ರೇರಣೆಯಿಂದ ಮತ ಹಾಕದೇ ಹೋದರೆ,,,, ಹೀಗಾಗುತ್ತದೆ ಅಂದು ತೋರಿಸುವ ಪ್ರಯತ್ನ ಮಾಡಿರಬಹುದು,,,ಇಂಥವರ ಕೈಗೆ ರಾಜ್ಯ ಸಿಕ್ಕರೆ ಜನಸಾಮಾನ್ಯರ ಗತಿ ಏನಾಗಬೇಡ

LEAVE A REPLY

Please enter your comment!
Please enter your name here