ಹಾಸನ ಟಿಕೆಟ್ ಗೊಂದಲ | ದೊಡ್ಡಗೌಡರ ನಿರ್ಧಾರವೇ ಅಂತಿಮ : ಇಂದೇ 2ನೇ ಪಟ್ಟಿ ಬಿಡುಗಡೆ

Date:

  • ದೇವೇಗೌಡರ ಅಂಗಳಕ್ಕೆ ಬಿದ್ದ ಹಾಸನ ಟಿಕೆಟ್‌ ಗೊಂದಲ
  • ವರಿಷ್ಠರ ನಿರ್ಧಾರವೇ ಅಂತಿಮ ಎಂದ ಸಹೋದರರು

ಜೆಡಿಎಸ್ ಪಕ್ಷದೊಳಗೆ ವಿವಾದ ಹುಟ್ಟಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಗೊಂದಲ ನಿಭಾಯಿಸುವ ಜವಾಬ್ದಾರಿ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಹೆಗಲೇರಿದೆ. ಈ ವಿಚಾರದಲ್ಲಿ ದೇವೇಗೌಡರ ನಿರ್ಧಾರವೇ ಅಂತಿಮ ಎಂದು ಕುಮಾರಸ್ವಾಮಿ ಹಾಗೂ ರೇವಣ್ಣ ಒಟ್ಟಾಗಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇಬ್ಬರೂ ನಾಯಕರು, ಪಕ್ಷದ ಹಿತಕ್ಕಾಗಿ ವರಿಷ್ಠರ ಆಣತಿಯಂತೆ ನಡೆಯುವುದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನ ವಿಚಾರದಲ್ಲಿ ನನ್ನ ನಿಲುವು ಹೇಳಿದ್ದೇನೆ. ಎಚ್ ಡಿ ದೇವೇಗೌಡರು ಅನುಭವದ ಮಾತು ಹೇಳಿದ್ದಾರೆ. ಟಿಕೆಟ್ ಬಗ್ಗೆ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಇದೇ ವೇಳೆ ಟಿಕೆಟ್ ಹಂಚಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇಂದು (ಏಪ್ರಿಲ್ 3) ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಸಾಧ್ಯತೆ ಬಗ್ಗೆ ಸುಳಿವು ನೀಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನು ಹೊಳೆನರಸೀಪುರದಲ್ಲಿ ಮಾತನಾಡಿ ಎಚ್ಡಿಕೆ ಸಹೋದರ ಎಚ್ಡಿ ರೇವಣ್ಣ, ದೇವೇಗೌಡರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದರು.

ಈ ಸುದ್ದಿ ಓದಿದ್ದೀರಾ? :ಆದಿ ಚುಂಚನಗಿರಿ ಸ್ವಾಮೀಜಿಗಳಿಗೊಂದು ಬಹಿರಂಗ ಪತ್ರ

ಟಿಕೆಟ್ ವಿಚಾರವಾಗಿ ನಾವು ದೇವೇಗೌಡರ ಜೊತೆ ರಾತ್ರಿ 11ರವರೆಗೆ ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ದೇವೇಗೌಡರ ಜೊತೆ ಚರ್ಚಿಸಿರುವೆ. 60 ವರ್ಷಗಳ ರಾಜಕೀಯ ಅನುಭವ ದೇವೇಗೌಡರಿಗಿದೆ. ಅದನ್ನು ಬಳಸಿಕೊಂಡು ಮುನ್ನಡೆಯಲು ಸಿದ್ಧರಾಗಿದ್ದೇವೆ ಎಂದು ರೇವಣ್ಣ ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯಿಂದ ಪಿಕ್ ಪಾಕೆಟ್ ಕಾಂಗ್ರೆಸ್, ಕನ್ನಡಿಗರ ಕೈಗೆ ಚಿಪ್ಪು ಪೋಸ್ಟರ್ ಬಿಡುಗಡೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು,...

ಮಹಾಪ್ರಭು ಬಟ್ಟೆಯೊಳಗಡೆಯೇ ಬೆವರುತ್ತಿದ್ದಾರೆ: ಪ್ರಕಾಶ್‌ ರಾಜ್

“ನಿಮ್ಮ ಪಕ್ಷದ ಮ್ಯಾನಿಫೆಸ್ಟೋ ಬಗ್ಗೆ ಮಾತನಾಡಪ್ಪ ಅಂದರೆ ಊಟದ ಮೆನು ತೋರಿಸುತ್ತಾರೆ....

ನೇಹಾ ಕೊಲೆ | ನಿರಂಜನ್ ಮನೆಗೆ ಸಚಿವ ಎಚ್‌ ಕೆ ಪಾಟೀಲ್ ಭೇಟಿ, ನಿರಂಜನ್‌ ಜೊತೆ ಸಿಎಂ ಮಾತು

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ...

ಚುನಾವಣಾ ಅಖಾಡದಲ್ಲಿ ಒಂದಿಷ್ಟು ಮಾತು – ದೇವನೂರ ಮಹಾದೇವ

ನಾನೀಗ ಹಿಂದಿನದು ಮಾತಾಡಲೋ ಅಥವಾ ಈಗಲದು ಮಾತಾಡಲೋ ಗೊಂದಲದಲ್ಲಿದ್ದೇನೆ. ಹಿಂದಿನದನ್ನು ಹೇಳದಿದ್ದರೆ...