ಮೋದಿಗೆ ‘ಗಟ್ಸ್’ ಇಲ್ಲ, ಇಂದು ಅವರು ಸದನಕ್ಕೆ ಬರಲ್ಲ: ರಾಹುಲ್ ಗಾಂಧಿ ಲೇವಡಿ

Date:

ಪ್ರಧಾನಿ ಮೋದಿ ಅವರಿಗೆ ಬುಧವಾರ ಲೋಕಸಭೆಗೆ ಬರಲು ಗಟ್ಸ್‌ ಇಲ್ಲ. ಅವರು ಸದನಕ್ಕೆ ಬರುವುದಿಲ್ಲ. ಒಂದು ವೇಳೆ, ಅವರು ಸದನಕ್ಕೆ ಬಂದರೆ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ ಅವರ ಆತ್ಮಚರಿತ್ರೆ ”ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಪ್ರತಿಯನ್ನು ನಾನೇ ಖುದ್ದು ಅವರಿಗೆ ಹಸ್ತಾಂತರಿಸುತ್ತೇನೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸವಾಲು ಹಾಕಿದ್ದಾರೆ.

- Advertisement -

ಭಾರತದ ಭೂಮಿಯನ್ನು ಚೀನಾ ಅತಿಕ್ರಮಣ ಮಾಡಿಕೊಂಡಿರುವ ಮತ್ತು ಭಾರತೀಯ ಸೈನಿಕರ ಮೇಲಿನ ಚೀನಾ ದಾಳಿಯ ಕುರಿತು ಉಲ್ಲೇಖಿಸಿರುವ, ಇನ್ನೂ ಸಾರ್ವಜನಿಕವಾಗಿ ಪ್ರಕಟಗೊಳ್ಳದ ನರವಾಣೆ ಅವರ ಪುಸ್ತಕವನ್ನು ಮಂಗಳವಾರ ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಉಲ್ಲೇಖಿಸಿದ್ದರು. ಅದರೆ, ಅವರ ಭಾಷಣವನ್ನು ತಡೆಯಲಾಯಿತು. ಸದನದಲ್ಲಿ ರಾಹುಲ್‌ ಗಾಂಧಿ ಮಾತನಾಡಲು ಅವಕಾಶವನ್ನು ನಿರಾಕರಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬುಧವಾರ, ಪುಸ್ತಕದ ಮುದ್ರಿತ ಪ್ರತಿಯನ್ನು ಕೈಯಲ್ಲಿಡಿದುಕೊಂಡ ಸಂಸತ್‌ಗೆ ಬಂದ ರಾಹುಲ್‌ ಗಾಂಧಿ, “ಪ್ರಧಾನಿಯವರು ಇಂದು ಲೋಕಸಭೆಗೆ ಬರಲು ಧೈರ್ಯ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಅವರು ಬಂದರೆ, ನಾನು ಅವರಿಗೆ ಈ ಪುಸ್ತಕವನ್ನು ನೀಡಲಿದ್ದೇನೆ. ಪ್ರಧಾನಿ ಬಂದರೆ, ನಾನು ನೇರವಾಗಿ ಹೋಗಿ ಈ ಪುಸ್ತಕವನ್ನು ಅವರಿಗೆ ಹಸ್ತಾಂತರಿಸುತ್ತೇನೆ. ಅವರು ಪುಸ್ತಕವನ್ನು ಓದಬಹುದು ಮತ್ತು ದೇಶವು ಸತ್ಯವನ್ನು ತಿಳಿದುಕೊಳ್ಳಬಹುದು” ಎಂದಿದ್ದಾರೆ.

ದೇಶದ ಪ್ರತಿಯೊಬ್ಬ ಯುವಜನರು ಈ ಪುಸ್ತಕವನ್ನು ಓದಬೇಕೆಂದು ಮನವಿ ಮಾಡಿದ ರಾಹುಲ್‌ ಗಾಂಧಿ, “ಇದು ನರವಾಣೆ ಅವರ ಪುಸ್ತಕ. ಅವರು ಈ ಪುಸ್ತಕದಲ್ಲಿ ಲಡಾಖ್‌ನ ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ. ಈ ಪುಸ್ತಕವನ್ನು ಸದನದಲ್ಲಿ ನಾನು ಉಲ್ಲೇಖಿಸಲು ಸಾಧ್ಯವಿಲ್ಲವೆಂದು ಹೇಳಲಾಗಿದೆ” ಎಂದು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಗಡಿ ಉದ್ವಿಗ್ನತೆ ಮತ್ತು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’: ಜನರಲ್ ನರವಣೆ ಪುಸ್ತಕದ ಸುತ್ತ ಏಕೆ ಈ ನಿಗೂಢ ಮೌನ?

“(ಮಾಜಿ) ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರು ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ ‘ಚೀನಾದ ಟ್ಯಾಂಕ್‌ಗಳು ಕೈಲಾಸ ಪರ್ವತವನ್ನು ತಲುಪಿವೆ. ನಾವು ಏನು ಮಾಡಬೇಕು’ ಎಂದು ಕೇಳಿದಾಗ, ಮೊದಲು, ರಾಜನಾಥ್ ಸಿಂಗ್ ಅವರಿಗೆ ಪ್ರತಿಕ್ರಿಯಿಸಲಿಲ್ಲ. ಬಳಿಕ, ನರಾವಣೆ ಅವರು ಜೈಶಂಕರ್, ಎನ್‌ಎಸ್‌ಎಅನ್ನು ಕೇಳಿದರು. ಆದರೆ ಯಾವುದೇ ಉತ್ತರ ಬರಲಿಲ್ಲ. ನಂತರ ಅವರು ಮತ್ತೊಮ್ಮೆ ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿದರು. ರಾಜನಾಥ್ ಸಿಂಗ್ ಅವರು ‘ಮೇಲಿನವರನ್ನು’ ಕೇಳುವುದಾಗಿ ಹೇಳಿದರು” ಎಂದು ರಾಹುಲ್‌ ಗಾಂಧಿ ವಿವರಿಸಿದ್ದಾರೆ.

“ಚೀನಾದ ಪಡೆಗಳು ನಮ್ಮ ಗಡಿಗಳ ಒಳಗೆ ಬಂದರೆ, ನಾವು ಅವರ ಅನುಮತಿಯಿಲ್ಲದೆ ಅವರ ಮೇಲೆ ಗುಂಡು ಹಾರಿಸಬಾರದು ಎಂಬುದು ‘ಮೇಲಿನ’ ಅಧಿಕಾರಿಗಳ ಸ್ಥಾಯಿ ಆದೇಶವಾಗಿತ್ತು. ನರವಣೆ ಮತ್ತು ನಮ್ಮ ಸೈನ್ಯವು ಆ ಟ್ಯಾಂಕ್‌ಗಳು ನಮ್ಮ ಪ್ರದೇಶವನ್ನು ಪ್ರವೇಶಿಸಿದ್ದರಿಂದ ಅವುಗಳ ಮೇಲೆ ಗುಂಡು ಹಾರಿಸಲು ಬಯಸಿದ್ದರು. ನರೇಂದ್ರ ಮೋದಿ ಅವರು ‘ಜೋ ಉಚಿತ್ ಸಂಜೋ ವೋ ಕರೋ’ (ನೀವು ಬಯಸ್ಸಿದ್ದನ್ನು ಮಾಡಿ) ಎಂಬ ಸಂದೇಶವನ್ನು ನೀಡಿದರು. ಇದರರ್ಥ ನರೇಂದ್ರ ಮೋದಿ ತಮ್ಮ ಜವಾಬ್ದಾರಿಯನ್ನು ಪೂರೈಸಲಿಲ್ಲ. ಇದರಿಂದಾಗಿ, ‘ನಾನು ನಿಜವಾಗಿಯೂ ಒಂಟಿತನ ಅನುಭವಿಸಿದೆ, ಇಡೀ ವ್ಯವಸ್ಥೆಯಿಂದ ನಾನು ಕೈಬಿಡಲ್ಪಟ್ಟಿದ್ದೇನೆ’ ಎಂಬುದಾಗಿ ನರವಣೆ ಅವರು ಬರೆದಿದ್ದಾರೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...

‘ನಥಿಂಗ್ ನೈಸ್’: ಸಿಎಂ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ...

ಅಮೇಥಿ ಸೋಲಿನ ಬಳಿಕ ಯುಪಿ ರಾಜ್ಯಸಭೆ ರೇಸ್‌ನಲ್ಲಿ ಸ್ಮೃತಿ ಇರಾನಿ; ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಉತ್ತರ ಪ್ರದೇಶದಿಂದ ಅಕ್ಟೋಬರ್ 16ರಂದು ನಡೆಯಲಿರುವ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ...

ಶಾಲೆಗಳಲ್ಲಿ ರ‍್ಯಾಗಿಂಗ್ ತಡೆಗೆ ಕೇಂದ್ರದ ಹೊಸ ಕಾನೂನು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ದೇಶದ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ರ‍್ಯಾಗಿಂಗ್ ಮತ್ತು ಕಿರುಕುಳವನ್ನು ತಡೆಯಲು ಕೇಂದ್ರ...