ಗಡಿ ಉದ್ವಿಗ್ನತೆ ಮತ್ತು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’: ಜನರಲ್ ನರವಣೆ ಪುಸ್ತಕದ ಸುತ್ತ ಏಕೆ ಈ ನಿಗೂಢ ಮೌನ?

Date:

ಕೇವಲ ಚೀನಾ ಗಡಿ ವಿಷಯವಷ್ಟೇ ಅಲ್ಲ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಗ್ನಿಪಥ್’ ಯೋಜನೆಯ ಬಗ್ಗೆಯೂ ನರವಣೆ ಪುಸ್ತಕದಲ್ಲಿ ಅಚ್ಚರಿಯ ಸಂಗತಿಗಳಿವೆ. ಈ ಯೋಜನೆಯು ಸೇನೆಗೆ ಅನಿರೀಕ್ಷಿತವಾಗಿತ್ತು ಮತ್ತು ಇದನ್ನು ಜಾರಿಗೊಳಿಸುವ ಮುನ್ನ ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಸಮರ್ಪಕವಾಗಿ ಚರ್ಚಿಸಿರಲಿಲ್ಲ ಎಂಬ ಅರ್ಥಬರುವ ಸಾಲುಗಳು ಪುಸ್ತಕದಲ್ಲಿವೆ

- Advertisement -

ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಭೀಕರ ಸಂಘರ್ಷದ ಸತ್ಯಾಸತ್ಯತೆಗಳೇನು? ಭಾರತದ ಗಡಿಯೊಳಗೆ ಚೀನಾ ಸೇನೆ ನುಗ್ಗಿ ಬಂದಾಗ ರಾಜಕೀಯ ನಾಯಕತ್ವ ತೆಗೆದುಕೊಂಡ ನಿರ್ಧಾರಗಳೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಭಾರತೀಯ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರ ಆತ್ಮಕಥನ ‘ಫೋರ್‌ ಸ್ಟಾರ್ಸ್‌ ಆಫ್ ಡೆಸ್ಟಿನಿ’ ಪ್ರಕಟಣೆಗೆ ಕೇಂದ್ರ ಸರ್ಕಾರ ಇನ್ನೂ ಹಸಿರು ನಿಶಾನೆ ತೋರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಂದು ವರ್ಷ ಕಳೆದರೂ ಈ ಪುಸ್ತಕ ಮಾರುಕಟ್ಟೆಗೆ ಬಾರದಂತೆ ತಡೆಹಿಡಿದಿರುವುದು ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿ ಕೋಲಾಹಲ ಎಬ್ಬಿಸಿದ್ದು ಏಕೆ ಎಂಬುದು ಪ್ರಸ್ತುತ ಚರ್ಚೆಯ ವಿಷಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಈ ಪುಸ್ತಕದ ಅತ್ಯಂತ ವಿವಾದಾತ್ಮಕ ಮತ್ತು ಆತಂಕಕಾರಿ ಅಂಶವೆಂದರೆ 2020ರ ಆಗಸ್ಟ್‌ನಲ್ಲಿ ಲಡಾಖ್‌ನ ರೆಚಿನ್ ಲಾ (Rechin La) ನಲ್ಲಿ ನಡೆದ ಘಟನೆ. ಜನರಲ್ ನರವಣೆ ಅವರ ಪ್ರಕಾರ, 2020ರ ಆಗಸ್ಟ್ 31ರ ರಾತ್ರಿ ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿ (PLA) ಯುದ್ಧ ಟ್ಯಾಂಕರ್‌ಗಳನ್ನು ಮುಂದಿಟ್ಟುಕೊಂಡು ಭಾರತೀಯ ಯೋಧರತ್ತ ನುಗ್ಗಿ ಬರುತ್ತಿತ್ತು. ಆ ಟ್ಯಾಂಕರ್‌ಗಳು ಭಾರತೀಯ ನೆಲೆಯಿಂದ ಕೇವಲ 500 ಮೀಟರ್‌ಗಳಷ್ಟು ಹತ್ತಿರದಲ್ಲಿದ್ದವು. ಸೇನಾ ನಿಯಮಗಳ ಪ್ರಕಾರ, ಶತ್ರುಗಳು ಇಷ್ಟು ಹತ್ತಿರ ಬಂದರೆ ತಕ್ಷಣವೇ ಗುಂಡಿನ ದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಬೇಕು. ಅಂದು ಸ್ಥಳದಲ್ಲಿದ್ದ ಕಮಾಂಡರ್‌ಗಳು ಜನರಲ್ ನರವಣೆ ಅವರಿಗೆ ಕರೆ ಮಾಡಿ, “ನಾವು ಗುಂಡು ಹಾರಿಸಬೇಕೇ?” ಎಂದು ಕೇಳಿದ್ದರು. ಇದು ಯುದ್ಧಕ್ಕೆ ನಾಂದಿ ಹಾಡುವಂತಹ ನಿರ್ಣಾಯಕ ಕ್ಷಣವಾಗಿತ್ತು.

ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದಾಗ, ಸೇನಾ ಮುಖ್ಯಸ್ಥ ನರವಣೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ ಆದೇಶಕ್ಕಾಗಿ ಕಾದರು. ನರವಣೆ ಅವರ ಕೃತಿಯ ಆಯ್ದ ಭಾಗಗಳ ಪ್ರಕಾರ, ಅವರು ರಕ್ಷಣಾ ಸಚಿವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು. ಆದರೆ ರಾಜನಾಥ್ ಸಿಂಗ್‌ ಅವರು, “ನಾನು ಪ್ರಧಾನ ಮಂತ್ರಿಯವರೊಂದಿಗೆ ಚರ್ಚಿಸಿ ಹೇಳುತ್ತೇನೆ” ಎಂದರು. ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿದಾಗಲೂ ಸ್ಪಷ್ಟ ಆದೇಶ ಬರಲಿಲ್ಲ. ಕೊನೆಗೆ ರಾಜನಾಥ್ ಸಿಂಗ್‌ ಅವರು, “ಜೋ ಉಚಿತ್‌ ಸಂಝೋ ವೋ ಕರೋ”(ನಿಮಗೆ ಯಾವುದು ಸರಿ ಎನಿಸುತ್ತದೋ ಅದನ್ನು ಮಾಡಿ) ಎಂದು ಹೇಳಿದರು. ಅಂದರೆ, ಯುದ್ಧದಂತಹ ಪರಿಸ್ಥಿತಿಯಲ್ಲಿ ರಾಜಕೀಯ ನಾಯಕತ್ವವು ನೇರವಾದ ಜವಾಬ್ದಾರಿಯನ್ನು ಹೊರಲು ಹಿಂಜರಿಯಿತೇ ಎಂಬ ಪ್ರಶ್ನೆಯನ್ನು ಈ ಘಟನೆ ಹುಟ್ಟುಹಾಕಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!

ಪ್ರತಿಪಕ್ಷಗಳ ಪ್ರಕಾರ, 500 ಮೀಟರ್ ದೂರದಲ್ಲಿ ಶತ್ರು ಟ್ಯಾಂಕ್‌ಗಳಿದ್ದಾಗಲೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗದ ಸರ್ಕಾರದ “ಮೀನಮೇಷ” ಎಣಿಸುವಿಕೆಯು ರಾಷ್ಟ್ರೀಯ ಭದ್ರತೆಗೆ ಆತಂಕಕಾರಿ. ಇದು ಮೋದಿ ಸರ್ಕಾರದ ದೃಢ ನಿರ್ಧಾರಗಳ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ವಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಗ್ನಿಪಥ್ ಯೋಜನೆಗೆ ನರವಣೆ ವಿರೋಧವಿದ್ದರೂ ಜಾರಿ?

ಕೇವಲ ಚೀನಾ ಗಡಿ ವಿಷಯವಷ್ಟೇ ಅಲ್ಲ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಗ್ನಿಪಥ್’ ಯೋಜನೆಯ ಬಗ್ಗೆಯೂ ನರವಣೆ ಪುಸ್ತಕದಲ್ಲಿ ಅಚ್ಚರಿಯ ಸಂಗತಿಗಳಿವೆ. ಈ ಯೋಜನೆಯು ಸೇನೆಗೆ ಅನಿರೀಕ್ಷಿತವಾಗಿತ್ತು ಮತ್ತು ಇದನ್ನು ಜಾರಿಗೊಳಿಸುವ ಮುನ್ನ ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಸಮರ್ಪಕವಾಗಿ ಚರ್ಚಿಸಿರಲಿಲ್ಲ ಎಂಬ ಅರ್ಥಬರುವ ಸಾಲುಗಳು ಪುಸ್ತಕದಲ್ಲಿವೆ. ಸೇನೆಯ ಆಂತರಿಕ ರಚನೆಗೆ ಧಕ್ಕೆ ತರುವಂತಹ ಈ ಯೋಜನೆಯನ್ನು ಜನರಲ್ ನರವಣೆ ಅವರು ಸಂಪೂರ್ಣವಾಗಿ ಒಪ್ಪಿರಲಿಲ್ಲ ಎನ್ನಲಾಗಿದೆ.

ಪುಸ್ತಕ ಪ್ರಕಟಣೆಗೆ ತಡೆ: ಸತ್ಯ ಮುಚ್ಚಿಡುವ ಪ್ರಯತ್ನವೇ?

ಸಾಮಾನ್ಯವಾಗಿ ನಿವೃತ್ತ ಸೇನಾಧಿಕಾರಿಗಳು ಪುಸ್ತಕ ಬರೆಯುವಾಗ ರಕ್ಷಣಾ ಸಚಿವಾಲಯದ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ನರವಣೆ ಅವರ ಪುಸ್ತಕದ ಹಸ್ತಪ್ರತಿಯನ್ನು ಪರಿಶೀಲನೆಗೆ ಒಳಪಡಿಸಿರುವ ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯ, “ರಾಷ್ಟ್ರೀಯ ಭದ್ರತೆ ಮತ್ತು ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು” ಎಂಬ ಕಾರಣ ನೀಡಿ ಪ್ರಕಟಣೆಯನ್ನು ತಡೆಹಿಡಿದಿವೆ. ಆದರೆ ವಾಸ್ತವದಲ್ಲಿ, ಈ ಪುಸ್ತಕವು 2020ರ ಲಡಾಖ್ ಬಿಕ್ಕಟ್ಟಿನ ಸಮಯದಲ್ಲಿ ಮೋದಿ ಸರ್ಕಾರದ “ರಾಜಕೀಯ ನಿರ್ಧಾರಗಳ ವೈಫಲ್ಯ” ಅಥವಾ “ವಿಳಂಬ ನೀತಿ”ಯನ್ನು ಜಗಜ್ಜಾಹೀರು ಮಾಡಬಹುದು ಎಂಬ ಆತಂಕ ಸರ್ಕಾರಕ್ಕಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರು ಇದೇ ವಿಷಯವನ್ನು ಮುಂದಿಟ್ಟುಕೊಂಡು, “ಸರ್ಕಾರ ಸತ್ಯಕ್ಕೆ ಹೆದರುತ್ತಿದೆ, ಅದಕ್ಕಾಗಿಯೇ ಜನರಲ್ ನರವಣೆ ಅವರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದರು.

ಇವೆಲ್ಲವನ್ನು ಗಮನಿಸಿದರೆ, ಜನರಲ್ ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕೇವಲ ಒಂದು ಪುಸ್ತಕವಾಗಿ ಉಳಿದಿಲ್ಲ; ಅದು ಸರ್ಕಾರದ ಪಾರದರ್ಶಕತೆ ಮತ್ತು ರಕ್ಷಣಾ ನೀತಿಯ ಮೇಲಿನ ಚಾರ್ಜ್‌ಶೀಟ್ ಆಗಿ ಮಾರ್ಪಟ್ಟಿದೆ. ಗಡಿಯಲ್ಲಿ ಚೀನಾ ಅತಿಕ್ರಮಣ ನಡೆಸಿದಾಗ ಸರ್ಕಾರ ತೋರಿದ ನಡೆ ಮತ್ತು ಈಗ ನಿವೃತ್ತ ಜನರಲ್ ಒಬ್ಬರ ಅನುಭವ ಕಥನವನ್ನು ತಡೆಹಿಡಿಯುತ್ತಿರುವ ರೀತಿ, ‘ಬಲಿಷ್ಠ ನಾಯಕತ್ವ’ ಎಂದು ಬಿಂಬಿಸಿಕೊಳ್ಳುವ ಮೋದಿ ಸರ್ಕಾರದ ದುರ್ಬಲ ನಾಯಕತ್ವವೇ ಈ ಪುಸ್ತಕದ ತಿರುಳು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...

ಅಶೋಕ್ ಸಿಂಘಲ್: ಕೋಮುವಾದದ ರೂವಾರಿಯ ವೈಭವೀಕರಣ – ಮಾರಿಕೊಂಡ ಮಾಧ್ಯಮಗಳು

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಲ್ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ...