ತಿಹಾರ್‌ ಜೈಲಿನಲ್ಲಿ ಸಾವಿರ ದಿನ ಕಳೆದ ಉಮರ್‌ ಖಾಲಿದ್‌ : ಪ್ರತಿರೋಧದ ಸಂಕೇತ ಎಂದ ಹೋರಾಟಗಾರರು

Date:

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟದ ವೇಳೆ ದೆಹಲಿ ಹಿಂಸಚಾರಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸಾಮಾಜಿಕ ಹೋರಾಟಗಾರ, ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ತಿಹಾರ್‌ ಜೈಲು ಸೇರಿ ಮೇ 9ಕ್ಕೆ ಬರೋಬ್ಬರಿ ಒಂದು ಸಾವಿರ ದಿನಗಳು ಕಳೆದಿವೆ.

ಉಮರ್‌ ಖಾಲಿದ್‌ ಬಂಧನಕ್ಕೊಳಗಾಗಿ ಸಾವಿರ ದಿನಗಳು ಕಳೆದಿರುವ ಹಿನ್ನೆಲೆ ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ಸೇರಿದ್ದ ಹಲವು ಸಾಮಾಜಿಕ ಹೋರಾಟಗಾರರು, ಉಮರ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, “ಉಮರ್‌ ಖಾಲಿದ್‌ ಅವರ ಸಾವಿರ ದಿನಗಳ ಜೈಲು ವಾಸ ಪ್ರತಿರೋಧದ ಸಂಕೇತ” ಎಂದಿದ್ದಾರೆ. ಜೊತೆಗೆ ಹೋರಾಟಗಾರನ ಬಿಡುಗಡೆಗೂ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ದೇಶವ್ಯಾಪಿಯಾಗಿ ಜಾರಿಗೆ ತರಲು ಮುಂದಾಗಿದ್ದ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಗಳನ್ನು ವಿರೋಧಿಸಿ ಪೂರ್ವ ದೆಹಲಿಯಲ್ಲಿ ನಡೆದ ದೀರ್ಘ ಹೋರಾಟದಲ್ಲಿ ಉಮರ್‌ ಖಾಲಿದ್‌ ಮುಂದಾಳತ್ವ ವಹಿಸಿದ್ದರು. ಹಲವು ಸಾಮಾಜಿಕ ಕಾರ್ಯಕರ್ತರ ಜೊತೆಗೂಡಿ ರಸ್ತೆಗಳನ್ನು ಬಂದ್‌ ಮಾಡಿ ತಿಂಗಳುಗಟ್ಟಲೇ ಹೋರಾಟ ನಡೆಸಿದ್ದರು.

2019ರಿಂದ ಡಿಸೆಂಬರ್‌ನಿಂದ 2020ರ ಫೆಬ್ರವರಿ ವರೆಗೂ ಈ ಹೋರಾಟ ನಡೆದಿತ್ತು. ಫೆಬ್ರವರಿ 23 ರಿಂದ 25ರ ನಡುವೆ ಹೋರಾಟ ನಡೆಯತ್ತಿದ್ದ ಪೂರ್ವ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ 53 ಮಂದಿ ಸಾವನ್ನಪ್ಪಿದ್ದರು. ಜೊತೆಗೆ 700ಕ್ಕೂ ಹೆಚ್ಚು ತೀವ್ರವಾಗಿ ಗಾಯಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ರಾಜ್‌ಕುಮಾರ್ ಸರಳತೆ, ಸಂಸ್ಕಾರದ ರಾಯಭಾರಿ ; ಸಿಎಂ ಸಿದ್ದರಾಮಯ್ಯ

ಈ ಹಿಂಸಾಚಾರಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಿ ದೇಶದ್ರೋಹ ಮತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಉಮರ್‌ ಖಾಲಿದ್‌, ನತಾಶಾ ನತಾಶಾ ನರ್ವಾಲ್‌, ದೇವಂಗನಾ ಕಲಿತಾ ಸೇರಿದಂತೆ 18 ಮಂದಿ ಸಾಮಾಜಿಕ ಹೋರಾಟಗಾರರನ್ನು 2020ರ ಸೆಪ್ಟೆಂಬರ್‌ 14ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಉಮರ್‌ ಖಾಲಿದ್‌ ಸೇರಿದಂತೆ ಹಲವು ಹೋರಾಟಗಾರರಿಗೆ ಜಾಮೀನು ದೊರೆತಿಲ್ಲ. ಆದರೆ, ಉಮರ್‌ ಖಾಲಿದ್‌ ಮೇಲೆ ಮಾಡಿರುವ ಗಂಭೀರ ಆರೋಪಗಳನ್ನು ಸಾಬೀತು ಪಡಿಸಲು ದೆಹಲಿ ಪೊಲೀಸರು ಸೂಕ್ತ ಸಾಕ್ಷ್ಯಧಾರಗಳನ್ನು ಒದಗಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉದಯನಿಧಿ ಪೂರ್ವಜರು ಕೂಡ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರು: ನಟ ಕಮಲ್ ಹಾಸನ್

ಕೊಯಮತ್ತೂರಿನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷದ ಸಭೆಯಲ್ಲಿ ಹೇಳಿಕೆ ನೀಡಿದ ಸ್ಥಾಪಕ ಪೆರಿಯಾರ್...

ಬಿಜೆಪಿ ಸಂಸದನಿಂದ ಅವಹೇಳನ: ಸ್ಪೀಕರ್‌ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಮರ್ಯಾದಾ ಪುರುಷ ಸ್ಪೀಕರ್ ಅವರೇ ಏನು ಕ್ರಮ ಕೈಗೊಳ್ಳುತ್ತೀರಿ? ಬಹಿರಂಗವಾಗಿಯೇ ಪ್ರಶ್ನಿಸಿದ...

ಯುಪಿಯ ಸರ್ಕಾರ ಒಬಿಸಿ ಕೋಟಾ ಸೇರಿಸದಿರುವುದಕ್ಕೆ ವಿಷಾದವಿದೆ: ರಾಹುಲ್‌ ಗಾಂಧಿ

ಯುಪಿಎ ಸರ್ಕಾರ 2010ರಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ...

ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎಬ್ಬಿಸಿದ ‘ಭಯೋತ್ಪಾದಕ’ ಹೇಳಿಕೆ | ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹ

ಬಿಎಸ್‌ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಕರೆದಿದ್ದ ರಮೇಶ್...