ವಸುಂಧರಾ ರಾಜೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತನಿಖೆಗೆ ಒತ್ತಾಯಿಸಿ ಗೆಹ್ಲೋಟ್ ವಿರುದ್ಧ ಸಿಡಿದೆದ್ದ ಪೈಲಟ್‌

Date:

  • ಏಪ್ರಿಲ್‌ 11ರಂದು ಪ್ರತಿಭಟನೆ ಘೋಷಿಸಿದ್ದ ಸಚಿನ್‌ ಪೈಲಟ್‌
  • ಪ್ರತಿಭಟನೆಗೆ ಸೂಕ್ತ ಸಮಯವಲ್ಲ ಎಂದ ಕಾಂಗ್ರೆಸ್‌ ನಾಯಕತ್ವ

ಆರು ತಿಂಗಳ ಕಾಲ ತಣ್ಣಗಿದ್ದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ, ಭಾನುವಾರ (ಏಪ್ರಿಲ್‌ 9) ಹಿರಿಯ ನಾಯಕ ಸಚಿನ್ ಪೈಲಟ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೇಲೆ ಹಿಂದಿನ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಂತರ ಘರ್ಷಣೆ ಭುಗಿಲೆದ್ದಿದೆ.

ಅಶೋಕ್ ಗೆಹ್ಲೋಟ್ ಸರ್ಕಾರ ಹಿಂದಿನ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಂಗಳವಾರ (ಏಪ್ರಿಲ್‌ 11) ದಿನವಿಡೀ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು. ಕೇಂದ್ರದ ಕಾಂಗ್ರೆಸ್‌ ನಾಯಕತ್ವ ಸಚಿನ್ ಪೈಲಟ್ ಧರಣಿ ಕೂರಲು ಆರಿಸಿಕೊಂಡ ಸಮಯ ಸೂಕ್ತವಲ್ಲ ಎಂದು ಹೇಳಿದೆ. ಜೊತೆಗೆ, ಸಚಿನ್ ಪೈಲಟ್ ಮುಂದಿಟ್ಟಿರುವ ಆರೋಪಗಳ ಬಗ್ಗೆ ಗಮನಹರಿಸುವುದಾಗಿಯೂ ಕಾಂಗ್ರೆಸ್ ಹೇಳಿದೆ.

ಈ ಹಿಂದಿನ ಬಿಜೆಪಿಯ ವಸುಂಧರ ರಾಜೆ ಅವರ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಗೆಹ್ಲೋಟ್‌ ಮೌನವಾಗಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಪೈಲಟ್‌ ಹೇಳಿದ್ದಾರೆ.

ಪೈಲಟ್‌ ಅವರ ಪ್ರತಿಭಟನೆಗೆ ಇದು ಸೂಕ್ತ ಸಮಯವಲ್ಲ. ಈ ವಿಚಾರವಾಗಿ ಅಶೋಕ್‌ ಗೆಹ್ಲೋಟ್ ಹಾಗೂ ಪೈಲಟ್‌ ಜತೆ ಮಾತುಕತೆ ನಡೆಸುವುದಾಗಿ ಕಾಂಗ್ರೆಸ್‌ ಹೇಳಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್, ಪಕ್ಷದ ನಾಯಕ ರಾಹುಲ್‌ ಗಾಂಧಿ ಅನರ್ಹತೆ ಮತ್ತು ಗೌತಮ್‌ ಅದಾನಿ ಹಗರಣದ ಕುರಿತು ತಿಕ್ಕಾಟದಲ್ಲಿ ತೊಡಗಿರುವಾಗ ರಾಜಸ್ಥಾನದಲ್ಲಿ ಆಂತರಿಕ ಬಿಕ್ಕಟ್ಟು ತಲೆದೋರುವುದು ಕಾಂಗ್ರೆಸ್‌ಗೆ ಬೇಡವಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಸಚಿನ್‌ ಪೈಲಟ್‌ ಅವರ ಹೊಸ ಬೇಡಿಕೆ ಕಾಂಗ್ರೆಸ್‌ ನಾಯಕತ್ವದ ಚಿಂತೆಗೆ ಕಾರಣವಾಗಿದೆ.

ಅಲ್ಲದೆ ಕಾಂಗ್ರೆಸ್‌ ನಾಯಕತ್ವದ ಗಮನ ಈಗ ಅನೇಕ ರಾಜ್ಯಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ನೆಟ್ಟಿದೆ. ಈಗ ಕರ್ನಾಟಕದಲ್ಲಿ ನಡೆಯುವ ಚುನಾವಣೆ ಸಂಬಂಧ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗೂಡಿಸುವಿಕೆಯ ತಂತ್ರ ಹೆಣೆಯುವಲ್ಲಿ ಸಕ್ರಿಯವಾಗಿದೆ.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿಯವರ ‘ಅರಣ್ಯಾಸಕ್ತಿ’; ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಮಸೂದೆ ಹೇಳುವುದೇನು?

“ಸಚಿನ್ ಪೈಲಟ್ ಅವರನ್ನು ಹತ್ತಾರು ಸಲ ಭೇಟಿಯಾದರೂ ಈ ಬಗ್ಗೆ ಅವರು ನನ್ನೊಂದಿಗೆ ಚರ್ಚಿಸಿಲ್ಲ. ಸೋಮವಾರ ಅಥವಾ ಮಂಗಳವಾರ ಜೈಪುರಕ್ಕೆ ತೆರಳಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗೆ ಮಾತುಕತೆ ನಡೆಸಲಾಗುವುದು” ಎಂದು ರಾಜಸ್ಥಾನ ಕಾಂಗ್ರೆಸ್‌ನ ಉಸ್ತುವಾರಿ ಸುಖ್‌ಜಿಂದರ್‌ ಸಿಂಗ್‌ ರಾಂಧವ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

“ನಾನು ರಾಜಸ್ತಾನದ ಉಸ್ತುವಾರಿ ಆದ ನಂತರ 10-15 ಬಾರಿ ಪೈಲಟ್‌ ಅವರನ್ನು ಭೇಟಿಯಾಗಿದ್ದೇನೆ. ಆದರೆ ಅವರು ಎಂದೂ ತಮ್ಮ ಅಸಮಾಧಾನದ ಬಗ್ಗೆ ಹೇಳಿಕೊಂಡಿಲ್ಲ” ಎಂದು ಸುಖಜಿಂದರ್‌ ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತ ವಿರೋಧಿ ಕಾಯ್ದೆಗಳ ಮರುಪರಿಶೀಲನೆ: ಸಿಎಂ ಸಿದ್ದರಾಮಯ್ಯ ಭರವಸೆ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಜಾನುವಾರು...

ಕಲಾತಂಡದೊಂದಿಗೆ ಕಚೇರಿ ಪೂಜೆ ನೆರವೇರಿಸಿ ಗಮನ ಸೆಳೆದ ಸಚಿವ ಶಿವರಾಜ್ ತಂಗಡಗಿ

ಕೊಠಡಿ ಪೂಜೆಯಲ್ಲಿ ವಿಭಿನ್ನತೆ ಮೆರೆದ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಹಾರ, ತುರಾಯಿ...

ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಹಿರಿಯ ಐಪಿಎಸ್...