ಅಸ್ಸಾಂ | ಶಾಲಾ ಶಿಕ್ಷಕರು ಜೀನ್ಸ್ ಧರಿಸದಂತೆ ವಸ್ತ್ರ ಸಂಹಿತೆ ಹೊರಡಿಸಿದ ಸರ್ಕಾರ

Date:

  • ಶಿಕ್ಷಕರು ಟಿ ಶರ್ಟ್‌, ಜೀನ್ಸ್‌, ಲೆಗ್ಗಿನ್ಸ್‌ ಧರಿಸುವಂತಿಲ್ಲ ಎಂದ ಅಸ್ಸಾಂ ವಸ್ತ್ರ ಸಂಹಿತೆ
  • ಅಧಿಸೂಚನೆ ಪ್ರತಿಯನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡ ಸಚಿವ ರನೋಜ್ ಪೆಗು

ಅಸ್ಸಾಂ ಸರ್ಕಾರವು ಶನಿವಾರ (ಮೇ 20) ಶಾಲಾ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿ ಮಾಡಿದೆ.

ಈ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನೂ ಅಸ್ಸಾಂನ ಸರ್ಕಾರ ಅಧಿಸೂಚನೆಯಲ್ಲಿ ಹೇಳಿದೆ.

“ಕೆಲ ಶಿಕ್ಷಕರು ತಮ್ಮಿಷ್ಟದ ಕಣ್ಣು ಕುಕ್ಕುವ ಉಡುಪು ಧರಿಸುವುದು ಸಾರ್ವಜನಿಕವಾಗಿ ಒಪ್ಪಲಾಗದು. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಅಸ್ಸಾಂ ರಾಜ್ಯದ ಶಾಲೆಯ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ” ಎಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಶಿಕ್ಷಕರು ಇನ್ನು ಮುಂದೆ ಫಾರ್ಮಲ್‌ ದಿರಿಸಿನಲ್ಲಿ (ಪ್ಯಾಂಟ್‌ ಮತ್ತು ಅಂಗಿ) ಶಾಲೆಗೆ ಆಗಮಿಸಬೇಕು. ಶಿಕ್ಷಕಿಯರು ಸೀರೆ, ಸಭ್ಯ ರೀತಿಯ ಸಲ್ವಾರ್‌ ಸೂಟ್‌ಗಳನ್ನು ಮಾತ್ರ ಧರಿಸಬೇಕು. ಇವು ತಿಳಿವರ್ಣದಿಂದ ಕೂಡಿರಬೇಕು. ಮೇಖೇಲಾ ಚಾದರ್‌ಗಳನ್ನು (ಅಸ್ಸಾಂನ ಸ್ಥಳೀಯ ಬಟ್ಟೆ) ಧರಿಸಬಹುದು. ಅಲ್ಲದೆ ಶಿಕ್ಷಕಿಯರು ಟಿ ಶರ್ಟ್‌, ಜೀನ್ಸ್ ಮತ್ತು ಲೆಗ್ಗಿನ್ಸ್‌ಗಳನ್ನು ಧರಿಸುವಂತಿಲ್ಲ” ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.

“ಶಿಕ್ಷಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ವಿಶೇಷವಾಗಿ ಎಲ್ಲ ರೀತಿಯ ಸಭ್ಯತೆಗೆ ಉದಾಹರಣೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕೆಲಸದ ಸ್ಥಳದಲ್ಲಿ ಸಭ್ಯತೆ, ಶಿಸ್ತು, ವೃತ್ತಿಪರತೆ ಮತ್ತು ಉದ್ದೇಶದ ಗಂಭೀರತೆ ಪ್ರತಿಬಿಂಬಿಸುವ ವಸ್ತ್ರ ಸಂಹಿತೆ ಅನುಸರಿಸುವುದು ಅವಶ್ಯಕ” ಎಂದು ಅಧಿಸೂಚನೆ ತಿಳಿಸುತ್ತದೆ.

ಈ ಸುದ್ದಿ ಓದಿದ್ದೀರಾ? ಛತ್ತೀಸ್‌ಗಢ | 10 ಪೊಲೀಸರು ಮೃತಪಟ್ಟಿದ್ದ ಸ್ಫೋಟ ಪ್ರಕರಣದಲ್ಲಿ 8 ಮಾವೋವಾದಿಗಳ ಬಂಧನ

ಅಸ್ಸಾಂ ಶಿಕ್ಷಣ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ರನೋಜ್ ಪೆಗು ಅವರು ಈ ಅಧಿಸೂಚನೆಯ ಪ್ರತಿಯನ್ನು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಶಾಲಾ ಶಿಕ್ಷಕರಿಗೆ ಸೂಚಿಸಲಾದ ವಸ್ತ್ರ ಸಂಹಿತೆ ಕುರಿತು ಕೆಲವು ಅನುಮಾನಗಳಿವೆ. ಸ್ಪಷ್ಟತೆಗಾಗಿ ಈ ಅಧಿಸೂಚನೆ ಹಂಚಿಕೊಳ್ಳುತ್ತಿದ್ದೇನೆ” ಎಂದು ಟ್ವೀಟ್‌ನಲ್ಲಿ ರನೋಜ್‌ ಹೇಳಿದ್ದಾರೆ.

ಅಸ್ಸಾಂನ ಸರ್ಕಾರಿ ಶಾಲಾ ಶಿಕ್ಷಣವನ್ನು ಸುಧಾರಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. 2016ರಲ್ಲಿ ಶಾಲೆಗಳಿಗೆ ವಿಭಿನ್ನ ಸಮಯದ ವೇಳಾಪಟ್ಟಿ ಸೂಚಿಸಲಾಗಿತ್ತು. ಆದರೆ ಅದರಲ್ಲಿನ ಕೆಲವು ಲೋಪದೋಷಗಳ ಹಿನ್ನೆಲೆ ಮತ್ತೊಂದು ಅಧಿಸೂಚನೆಯ ಮೂಲಕ ಸಮಯದ ವೇಳಾಪಟ್ಟಿಯನ್ನು ಬದಲಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿದ ಆರೋಪ: ಮಾಜಿ ಐಪಿಎಸ್ ಅಧಿಕಾರಿಗೆ 20 ವರ್ಷ ಜೈಲು

ವಕೀಲರೊಬ್ಬರನ್ನು ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿಸಿದ ಆರೋಪದ ಮೇಲೆ ಗುಜರಾತ್‌ನ ಮಾಜಿ ಐಪಿಎಸ್‌...

ಕೋಲಾರ ಟಿಕೆಟ್‌ | ಬಣ ಬಡಿದಾಟಕ್ಕೆ ಪೂರ್ಣವಿರಾಮವಿಟ್ಟ ಸಿಎಂ, ಡಿಸಿಎಂ; ಅಭ್ಯರ್ಥಿ ಯಾರು?

ಕೋಲಾರ ಟಿಕೆಟ್‌ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಬಣಗಳ ಬಡಿದಾಟವನ್ನು...

ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್...