ಪಾನ್‌-ಆಧಾರ್ ಜೋಡಣೆ | ಕೆಳ ವರ್ಗಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಹೊಣೆ ಯಾರು?

Date:

ಕೆಲವು ದಿನಗಳಿಂದ ಸಾರ್ವಜನಿಕರು ಪಾನ್-ಆಧಾರ್ ಕಾರ್ಡ್‌ಅನ್ನು ಲಿಂಕ್ ಮಾಡಿಸುವ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ. ಜೊತೆಗೆ 1,000 ರೂ. ದಂಡವನ್ನೂ ಕಟ್ಟುತ್ತಿದ್ದಾರೆ. ಕಾರಣ, ಲಿಂಕ್ ಮಾಡಿಸದೇ ಇದ್ದಲ್ಲಿ ತಮ್ಮ ಯಾವುದೇ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲಾಗುವುದಿಲ್ಲ, ಪಾನ್‌ಅನ್ನು ನಿಷ್ಕ್ರಿಯಗೊಳಿಸಲಾಗುವುದು, ಬ್ಯಾಂಕ್‌ನ ನಮ್ಮದೇ ಖಾತೆಯಿಂದ ನಮ್ಮ ಹಣವನ್ನು ತೆಗೆದುಕೊಳ್ಳಲು ಅವಕಾಶವಿಲ್ಲ ಎಂಬ ಬೆದರಿಕೆಯನ್ನು ಕೇಂದ್ರ ಸರ್ಕಾರವೊಡ್ಡಿದೆ. ಮಾತ್ರವಲ್ಲ, ಮಾರ್ಚ್ ತಿಂಗಳ ಅಂತ್ಯದೊಳಗೆ ಲಿಂಕ್ ಮಾಡಿಸದೇ ಇದ್ದಲ್ಲಿ ದಂಡದ ಮೊತ್ತವನ್ನು 10,000 ರೂ.ಗೆ ಹೆಚ್ಚಾಗುತ್ತದೆ ಎಂದೂ ಮೊತ್ತೊಂದು ಬೆದರಿಕೆಯನ್ನೂ ವೊಡ್ಡಿತ್ತು. ಇದೀಗ, 1,000 ರೂ. ದಂಡದೊಂದಿಗೆ ಲಿಂಕ್‌ ಮಾಡಲು ಜೂನ್‌ ಅಂತ್ಯದವರೆಗೆ ಸಮಯವನ್ನು ವಿಸ್ತರಿಸಿದೆ. ಸದ್ಯ ಈಗಾಗಲೇ ಜನರಿಂದ ದಂಡದ ರೂಪದಲ್ಲಿ 4,500 ಕೋಟಿ ರೂ. ಮೊತ್ತವನ್ನು ಸರ್ಕಾರ ವಸೂಲಿ ಮಾಡಿದೆ.

ಮೊದಲಿಗೆ, ತೆರಿಗೆ ಕಳ್ಳರನ್ನು ಮಟ್ಟಹಾಕುವ ಸಲುವಾಗಿ ಈ ಪಾನ್-ಆಧಾರ್ ಜೊಡಣೆ ಅಗತ್ಯವೆಂದು ಮಾರ್ಚ್ 2017ರಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. ಆಧಾರ ಮತ್ತು ಪಾನ್‌ ಕಾರ್ಡ್ಅನ್ನು ಲಿಂಕ್‌ ಮಾಡಬೇಕೆಂದು ಆದೇಶಿಸಿತ್ತು. 2022ರ ವರೆಗೂ ಯಾವುದೇ ಶುಲ್ಕವಿಲ್ಲದೆ ಸುಮಾರು 45 ಕೋರಿಗೂ ಅಧಿಕ ಜನರು ಲಿಂಕ್ ಮಾಡಿಸಿದ್ದಾರೆ. ಈಗಲೂ ಮಾಡಿಸುತ್ತಿದ್ದಾರೆ. ಇದೆಲ್ಲದರ ನಡುವೆ, ಈ ಪ್ರಕ್ರಿಯೆಗೆ ಕೊನೆಯ ದಿನಾಂಕವಾದರೂ ಯಾಕೆ ಎಂದು ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಯಾರು ಆದಾಯ ತೆರಿಗೆ ಕಟ್ಟುತ್ತಾರೋ ಅಥವಾ ತೆರಿಗೆ ಕಟ್ಟುವಂತಹ ವ್ಯವಹಾರದಲ್ಲಿ ತೊಡಗಿರುತ್ತಾರೋ ಅಂಥವರಿಗೆ ಪಾನ್ ಕಾರ್ಡ್ ಬೇಕಾಗುತ್ತದೆ. ದೇಶದಲ್ಲಿ ಇಂತವರ ಸಂಖ್ಯೆ ಹೆಚ್ಚೆಂದರೆ ಶೇ.5ರಷ್ಟು ಮಾತ್ರ. ಆದರೆ ಉಳಿದ ಎಲ್ಲರೂ ಇದನ್ನು ಲಿಂಕ್ ಮಾಡಿಸುವ ತುರ್ತಾದರೂ ಏನಿದೆ? ಇದನ್ನು ಲಿಂಕ್ ಮಾಡಿಸದೇ ಇದ್ದರೆ ಆಗಬಹುದಾದ ತೊಂದರೆಯಾದರೂ ಏನು? ಎಂಬುದಕ್ಕೆ ಕೇಂದ್ರ ಸರ್ಕಾರವಾಗಲಿ, ರಿಸರ್ವ್ ಬ್ಯಾಂಕ್ ಆಗಲಿ ಆಥವಾ ಸ್ಥಳೀಯ ಬ್ಯಾಂಕ್‌ಗಳಾಗಲಿ ಉತ್ತರಿಸುತ್ತಿಲ್ಲ.

ದೇಶದಲ್ಲಿ ರೈತಾಪಿ ಜನ, ಕೂಲಿ ಕಾರ್ಮಿಕರು, ಯುವಜನರು, ನಿರುದ್ಯೋಗಿಗಳ ಸೇರಿದಂತೆ ಸಾಮಾನ್ಯ ಜನರು (ನೇರ ತೆರಿಗೆ ಪಾವತಿ ಮಾಡದವರು) ಅಧಿಕ ಸಂಖ್ಯೆಯಲ್ಲಿ ಪಾನ್‌ ಕಾರ್ಡ್ ಹೊಂದಿರುವವರು ಇದ್ದಾರೆ, ಹೊಂದದೇ ಇರುವವರೂ ಇದ್ದಾರೆ. ಇವರ್ಯಾರು ಆದಾಯ ತೆರಿಗೆ ಕಟ್ಟುವ ಕುಬೇರಲ್ಲ. ಇವರಾಗಿರೂ ಆಧಾರ-ಪಾನ್‌ ಲಿಂಕ್‌ ಬಗ್ಗೆ ಮಾಹಿತಿಯಾಗಿಲಿ, ಅರಿವಾಗಲಿ ಇರಲಿಲ್ಲ. ಇವರುಗಳು ಯಾರೂ ಈ ಸಮಯದಲ್ಲಿ ದಂಡವನ್ನು ಕಟ್ಟಬೇಕಾಗಿಯೇ ಇಲ್ಲ. ಆದರೆ, ಇದ್ದಕ್ಕಿದ್ದಂತೆ ಈ ಸಾಮಾನ್ಯರ ಮೇಲೆ ಸರ್ಕಾರದ ದಂಡವನ್ನು ಹೇರಿದೆ. ಅಧಿಕ ದಂಡದ ಪ್ರಯೋಗ(10,000)ಕ್ಕೆ ತುತ್ತಾಗುತ್ತೇವೆಂಬ ಭಯಕ್ಕೆ ಮಣಿದು 1,000 ರೂ. ದಂಡ ಕಟ್ಟಿ ತರಾತುರಿಯಲ್ಲಿ ಲಿಂಕ್‌ ಮಾಡಿಸುತ್ತಿದ್ದಾರೆ.

ಸಾರ್ವಜನಿಕರು ಬ್ಯಾಂಕುಗಳಲ್ಲಿ ತಮಗೆ ಬೇಕಾದ ಸಮಯದಲ್ಲಿ ತಮ್ಮ ಹಣವನ್ನು ಬ್ಯಾಂಕಿನಲ್ಲಿ ಇಡುವುದು ಅಥವಾ ತೆಗೆದುಕೊಳ್ಳುವುದನ್ನು ಅವರ ಇಷ್ಟಕ್ಕೆ ಬಿಡದೆ, ಖಾತೆಯನ್ನೇ ನಿರ್ಬಂಧಿಸಲಾಗುವುದು ಎಂದು ನೇರ ವಸೂಲಿಗೆ ನಿಂತಿರುವುದು ಸರ್ಕಾರದ ಅಕ್ಷಮ್ಯ.

ಕೆಂದ್ರದ ಪೋಷಣೆಯಿಂದ ಆಧಾರ್–ಪಾನ್ ಲಿಂಕ್ ಮಾಡಿಸಿಯೂ ಸಾಲಗಳ್ಳರು ದೇಶಬಿಟ್ಟು ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ, ಸರ್ಕಾರದ ಗಮನಕ್ಕೆ ಬಾರದೆ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವವರು ಶೇ.95 ಜನರೋ ಅಥವಾ ಪರಾರಿಯಾಗುತ್ತಿರುವ ಕಾರ್ಪೊರೇಟ್ ಕುಳಗಳೋ ಎಂಬುದು ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲವೆ. ಈ ಒಂದು ಜೊಡಣೆಯಿಂದ ತೆರಿಗೆ ಕಳ್ಳರನ್ನು ತಡೆಯಲಾಗುತ್ತದೆ ಎಂಬುದು ಸರ್ಕಾರದ ನಿಲುವಾದರೆ, ಈಗಾಗಲೇ ಪಂಗನಾಮ ಹಾಕಿ ದೇಶ ಬಿಟ್ಟವರ ಬಗ್ಗೆ ಏನು ಹೇಳುತ್ತಾರೆ.

ಕೆಲವು ಅಧ್ಯಯನದ ಪ್ರಕಾರ 2018-19ರಲ್ಲಿ ಸಾರ್ವಜನಿಕರಿಂದ ಸುಕಾಸುಮ್ಮನೆ ಬ್ಯಾಂಕುಗಳು ಸೇವಾ ಶುಲ್ಕ, SMS ಶುಲ್ಕ, ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟಿಲ್ಲ ಎಂಬಿತ್ಯಾದಿ ನೆಪವೊಡ್ಡಿ ಸುಮಾರು 10,000 ಕೋಟಿಗೂ ಅಧಿಕ ಹಣವನ್ನು ವಸೂಲಿ ಮಾಡಲಾಗಿದೆ.

2019ರಿಂದ ಇಲ್ಲಿವರೆಗೆ ಬ್ಯಾಂಕುಗಳು ಗ್ರಾಹಕರ ಮೇಲೆ ವಿಶೇಷ ತೆರಿಗೆಗಳ ಮೂಲಕ (5ಕ್ಕಿಂತ ಹೆಚ್ಚು ಬಾರಿ ಹಣವನ್ನು ಎಟಿಎಂ ಮೂಲಕ ತೆಗೆದುಕೊಂಡರೆ. ತೆಗೆದುಕೊಂಡಾಗಲೆಲ್ಲಾ ಅದಕ್ಕೆ ಮೆಸೇಜ್ ಶುಲ್ಕಕ್ಕೆ. ಸಂಬಂಧಿತ ಬ್ಯಾಂಕ್ ಅಲ್ಲದೆ ಬೇರೇ ಬ್ಯಾಂಕುಗಳಿಂದ ಹಣ ಪಡೆದರೆ) ಸುಮಾರು 80,000 ಕೋಟಿ ಯಿಂದ 1 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದೆ.

ಹಾಗಾದರೆ ಅಕೌಂಟ್‌ಗಳಲ್ಲಿ ಕಡಿಮೆ ಹಣವನ್ನೂ (ಮಿನಿಮಮ್ ಬ್ಯಾಲೆನ್ಸ್‌) ಇಡಲು ಸಾಧ್ಯವಾಗದ ಜನರಿಂದ ಈ ರೀತಿಯಲ್ಲಿ ದಂಡ ವಸೂಲಿ ಮಾಡುವುದು ಸರಿಯಾದ ಕ್ರಮ ಹೇಗಾಗುತ್ತದೆ. ಇದರ ಉದ್ದೇಶವೇನು? ಅಂದರೆ ಕೆಲ ಕಾರ್ಪೊರೇಟ್ ಕುಳಗಳು ಬ್ಯಾಂಕುಗಳಿಗೆ ಪಂಗನಾಮ ಹಾಕಿದ್ದರಿಂದ ಬ್ಯಾಂಕುಗಳಿಗೆ ಉಂಟಾಗಿರುವ ನಷ್ಟವನ್ನು ಜನರಿಂದ ವಸೂಲಿ ಮಾಡಿ, ಸರಿದೂಗಿಸುವ ಹುನ್ನಾರವಲ್ಲವೇ?

ಇದನ್ನು ನೇರವಾಗಿ ಹೇಳದೆ ವಿಧವಿಧವಾದ ದರೋಡೆ ಮತ್ತು ಶುಲ್ಕಗಳ ಹೆಸರಿನಲ್ಲಿ ಸಾಮಾನ್ಯರ ಬಳಿಯಿರುವ ಪುಡಿಗಾಸನ್ನು ಕಸಿದುಕೊಂಡು, ಉಳ್ಳವರಿಗೆ ಪುಗಸಟ್ಟೆಯಾಗಿ ನೀಡುವ ಪ್ರೌರುತ್ತಿಯನ್ನು ಮೋದಿ ಸರ್ಕಾರ ಮಾಡುತ್ತಿದೆ. ಇಂತಹ ಹಗಲು ದರೋಡೆಯನ್ನು ಸರ್ಕಾರ ನಿಲ್ಲಿಸಬೇಕು.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Nimma ee lekanakke tumba thanks. Kallarannu hediyalu ee upaya. Yenu thiliyada bada janarannu sulige madi jebu tumbo kelasa Devaru mecchodilla. Ketta paddathi raddagali,janara amount vapasu kodali. Drama jasti agide, janarannu badukalu bedi.jai Hindi

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ ಟಿ ರವಿ ಆರೋಪ

ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನದಲ್ಲಿ ...

ಚಂದ್ರಬಾಬು ನಾಯ್ಡು ಜಾಮೀನು ಷರತ್ತು ಸಡಿಲಿಸಿದ ಸುಪ್ರೀಂ; ರ‍್ಯಾಲಿ, ಸಭೆಗಳಲ್ಲಿ ಭಾಗವಹಿಸಲು ಅನುಮತಿ

ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಷರತ್ತಾಗಿ ಸಾರ್ವಜನಿಕ...