2015-2025ರ ನಡುವೆ ಮೋದಿ ವಿದೇಶ ಪ್ರವಾಸಕ್ಕೆ 762 ಕೋಟಿ ರೂ. ವೆಚ್ಚ

Date:

ಲೋಕಸಭೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸಲ್ಲಿಸಿದ ಇತ್ತೀಚಿನ ದಾಖಲೆಗಳ ಪ್ರಕಾರ, 2015ರಿಂದ 2025ರವರೆಗಿನ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಿಗಾಗಿ 762 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ವಿದೇಶಿ ಪ್ರವಾಸಗಳ ವಾರ್ಷಿಕ ವೆಚ್ಚವು 2024ರಲ್ಲಿ 100 ಕೋಟಿ ರೂ.ಗಳಿಗಿಂತ ಹೆಚ್ಚಿದೆ. ಇನ್ನು, 2025ರಲ್ಲಿ ಮೋದಿ ಅವರು ಯುರೋಪಿಯನ್ ರಾಷ್ಟ್ರಗಳು, ಅಮೆರಿಕ, ಆಫ್ರಿಕಾ ಹಾಗೂ ಪೂರ್ವ ಏಷ್ಯಾ ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ವೆಚ್ಚವು 175 ಕೋಟಿ ರೂ.ಗಳನ್ನು ದಾಟಿದೆ ಎಂಬುದನ್ನು ಎಂಇಎ ದಾಖಲೆಗಳು ತೋರಿಸಿವೆ.

- Advertisement -

ಪ್ರವಾಸಗಳ ಸಮಯದಲ್ಲಿ ಆತಿಥೇಯ ದೇಶವು ಹೆಚ್ಚಿನ ಆತಿಥ್ಯ ವೆಚ್ಚವನ್ನು ಭರಿಸುತ್ತದೆ. ಆದರೆ, ಸರ್ಕಾರವು ಹೆಚ್ಚಾಗಿ ಭದ್ರತಾ ವ್ಯವಸ್ಥೆಗಳು, ಅಧಿಕೃತ ನಿಯೋಗಗಳು, ಮಾಧ್ಯಮ ತಂಡ ಹಾಗೂ ಇತರ ಲಾಜಿಸ್ಟಿಕ್ಸ್‌ಗಾಗಿ ಖರ್ಚು ಮಾಡುತ್ತದೆ ಎಂದು MEA ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
Yearವರ್ಷವಾರು ಮೋದಿ ಪ್ರವಾಸದ ವೆಚ್ಚ (ಕೋಟಿ ರೂ,ಗಳಲ್ಲಿ)
201591.5 cr
201633.22 cr
201744.27 cr
201851.46 cr
201971.76 cr
20200 (Covid-19 pandemic)
202136.11 cr
202255.82 cr
202393.63 cr
2024109.51 cr
2025175.19 cr

2014ರ ಮೇ ತಿಂಗಳಿನಿಂದ, ಪ್ರಧಾನ ಮಂತ್ರಿಯವರ ನಿಯೋಗದಲ್ಲಿನ ಸದಸ್ಯರ ಗಾತ್ರವು ಅವಶ್ಯಕತೆಗಳನ್ನು ಅವಲಂಬಿಸಿ 27 ರಿಂದ 72 ರವರೆಗೆ ಇತ್ತು. ಆದರೆ, 2025ರಲ್ಲಿ ಐದು ದೇಶಗಳಿಗೆ ಭೇಟಿ ನೀಡಿದ ಒಂದು ಪ್ರವಾಸದಲ್ಲಿ 95 ಸದಸ್ಯರಿದ್ದರು ಎಂದು ಸಚಿವಾಲಯ ತಿಳಿಸಿದೆ.

ಮೋದಿ ಸರ್ಕಾರಕ್ಕೆ ಹೋಲಿಸಿದರೆ, ಮನಮೋಹನ್ ಸಿಂಗ್ ಸರ್ಕಾರವು ವಿದೇಶಿ ಪ್ರವಾಸಗಳಿಗೆ ಗಮನಾರ್ಹವಾಗಿ ಕಡಿಮೆ ಖರ್ಚು ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ಉತ್ತರ ವಿವರಿಸಿದೆ. 2011ರಲ್ಲಿ ಅಮೆರಿಕಕ್ಕೆ 10.74 ಕೋಟಿ ರೂ., 2013ರಲ್ಲಿ ರಷ್ಯಾಕ್ಕೆ 9.95 ಕೋಟಿ ರೂ., 2011ರಲ್ಲಿ ಫ್ರಾನ್ಸ್‌ಗೆ 8.33 ಕೋಟಿ ರೂ. ಹಾಗೂ 2013ರಲ್ಲಿ ಜರ್ಮನಿಗೆ 6.02 ಕೋಟಿ ರೂ.ಗಳನ್ನು ಸಿಂಗ್‌ ಸರ್ಕಾರ ವ್ಯಯಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...