ಆಸ್ಪತ್ರೆಯ ‘ಪರಿಶೀಲನೆ’ ನಡೆಸಿದ ಜಾರ್ಖಂಡ್ ಸಚಿವರ ಮಗ: ವಿವಾದಕ್ಕೀಡಾದ ವಿಡಿಯೋ

Date:

ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರ 19 ವರ್ಷದ ಮಗ ಕ್ರಿಶ್ ಅನ್ಸಾರಿ ರಾಂಚಿಯ ಆಸ್ಪತ್ರೆಯಲ್ಲಿ ‘ಪರಿಶೀಲನೆ’ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ವಿವಾದಕ್ಕೀಡಾಗಿದೆ. ವಿಡಿಯೋದಲ್ಲಿ ಸಚಿವರ ಮಗ ಆಸ್ಪತ್ರೆಯನ್ನು ಪರಿಶೀಲಿಸುತ್ತಿರುವುದು, ರೋಗಿಗಳೊಂದಿಗೆ ಮಾತನಾಡುತ್ತಿರುವುದು, ಅವರಿಗೆ ಯಾವುದೇ ತೊಂದರೆಯಿದೆಯೇ ಎಂದು ಕೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

- Advertisement -

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಣ್ಣ ವಯಸ್ಸಿನ ಹುಡುಗ ಆಸ್ಪತ್ರೆಯಲ್ಲಿ ‘ಪರಿಶೀಲನೆ’ ನಡೆಸಲು ಮತ್ತು ಭೇಟಿ ನೀಡಲು ಯಾವ ಹಕ್ಕು ಮತ್ತು ಅಧಿಕಾರವನ್ನು ಹೊಂದಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ. ಆದರೆ ಸಚಿವರು ತಮ್ಮ ಮಗನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. “ಇದು ದಯೆಯ ಕಾರ್ಯ” ಎಂದಿದ್ದಾರೆ. ಬಿಜೆಪಿ ಮಾತ್ರ ಸಚಿವರ ಪುತ್ರ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನು ಓದಿದ್ದೀರಾ? ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್ ಸಚಿವರ ಬಂಧನ

ಇನ್‌ಸ್ಟಾಗ್ರಾಂನ ಈ ವಿಡಿಯೋದಲ್ಲಿ 19 ವರ್ಷದ ಕ್ರಿಶ್ ಅನ್ಸಾರಿ ತನ್ನ ಅಂಗರಕ್ಷಕ ಮತ್ತು ಸ್ನೇಹಿತರೊಂದಿಗೆ ಆಸ್ಪತ್ರೆ ಆವರಣದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಹಾಗೆಯೇ ಆಸ್ಪತ್ರೆಗೆ ದಾಖಲಾದ ಕೆಲವು ರೋಗಿಗಳೊಂದಿಗೆ ಮಾತನಾಡುವುದು, ಏನಾದರು ಸಮಸ್ಯೆ ಇದೆಯೇ ಎಂದು ಕೇಳುವುದು ಕಂಡುಬಂದಿದೆ.

ಕ್ರಿಶ್ ಅನ್ಸಾರಿ ಸ್ನೇಹಿತರು, “ಏನಾದರು ಸಮಸ್ಯೆಯಿದ್ದರೆ ಹೇಳಿ. ಸಚಿವರ ಹಿರಿಯ ಮಗ ಬಂದಿದ್ದಾರೆ” ಎಂದು ಹೇಳುತ್ತಿರುವುದೂ ವಿಡಿಯೋದಲ್ಲಿ ಕಾಣಬಹುದು. ಬಿಜೆಪಿ ಪ್ರತಿಕ್ರಿಯೆ ಬಳಿಕ ಅನ್ಸಾರಿ ಸಾಮಾಜಿಕ ಜಾಲತಾಣದಿಂದ ವಿಡಿಯೋವನ್ನು ತೆಗೆಯಲಾಗಿದೆ. ಆದರೆ ಸಚಿವರು ತಮ್ಮ ಮಗನನ್ನು ಸಮರ್ಥಿಸಿಕೊಂಡಿದ್ದಾರೆ. “ನನ್ನ ಮಗ ಕೇವಲ ಸಹಾಯ ಮಾಡುವ ಪ್ರಯತ್ನ ಮಾಡುತ್ತಿದ್ದಾನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು.

“ಬಿಜೆಪಿಯವರೇ ಸ್ವಲ್ಪ ಸಂಯಮವಿರಲಿ, ಸಕಾರಾತ್ಮಕ ಚಿಂತನೆಯಿರಲಿ. ನಮ್ಮೊಂದಿಗೆ ಜಗಳವಾಡಬೇಕೆಂದಿದ್ದರೆ ಜಗಳವಾಡಿ. ಕುಟುಂಬ ಅಥವಾ ಮಕ್ಕಳನ್ನು ಎಳೆದುತರಬೇಡಿ. ನಾನು ನನ್ನ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡಿದ್ದೇನೆ. ಅದು ನನ್ನ ಮಗನಾಗಿರಲಿ ಅಥವಾ ನನ್ನ ಕೆಲಸಗಾರನಾಗಿರಲಿ. ಅವರು ಮಾನವೀಯತೆಗೆ ಸಹಾಯ ಮಾಡುತ್ತಾರೆ. ಅವರು ಜನರಿಗೆ ಚಿಕಿತ್ಸೆ ಲಭಿಸುತ್ತಿದೆಯೇ ಎಂದು ನೋಡುತ್ತಾರೆ, ಅವರ ಜೀವಗಳನ್ನು ಉಳಿಸುತ್ತಾರೆ” ಎಂದು ಹೇಳಿದ್ದಾರೆ.

ತಮ್ಮ ಮಗನನ್ನು “ಪ್ರಸ್ತುತ ರಜೆಯಲ್ಲಿರುವ ವಿದ್ಯಾವಂತ ಮತ್ತು ಸೂಕ್ಷ್ಮ ಯುವ ವಿದ್ಯಾರ್ಥಿ” ಎಂದು ಕರೆದಿರುವ ಸಚಿವರು, “ಅಪ್ಪಾ, ಜನರಿಗೆ ಸಹಾಯ ಮಾಡುವುದು ಅಪರಾಧವೇ? ಎಂದು ಕ್ರಿಶ್ ನನ್ನನ್ನು ಕೇಳುತ್ತಲೇ ಇರುತ್ತಾನೆ. ಈ ಪ್ರಶ್ನೆ ನನ್ನನ್ನು ಒಳಗಿನಿಂದ ಕುಗ್ಗಿಸುತ್ತದೆ. ನನ್ನ ಮಗ ಯಾವುದೇ ಅಪರಾಧ ಮಾಡಿಲ್ಲ, ಅಥವಾ ದುರಹಂಕಾರ ಅಥವಾ ಅಧಿಕಾರದಿಂದ ವರ್ತಿಸಿಲ್ಲ. ಅವನು ಯಾರನ್ನು ಸಂಕಷ್ಟದಲ್ಲಿ ನೋಡಿದ್ದಾನೋ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾನೆ” ಎಂದು ಸಚಿವರು ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...