ಟ್ರಂಪ್ ಕರೆಗಳಿಗೆ ಉತ್ತರಿಸಲು ಪ್ರಧಾನಿ ಮೋದಿ ನಿರಾಕರಿಸಿದ್ದೇಕೆ?

Date:

ಭಾರತದ ಮೇಲೆ ಟ್ರಂಪ್ ಹೇರಿರುವ 50% ಸುಂಕವು ಆಗಸ್ಟ್‌ 27ರಂದು ಜಾರಿಗೆ ಬಂದಿದೆ. ಅದೇ ದಿನ, ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಲವು ಬಾರಿ ಕರೆ ಮಾಡಿದ್ದು, ಅವರ ಕರೆಯನ್ನು ಸ್ವೀಕರಿಸಲು ಮೋದಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

ಟ್ರಂಪ್‌ ಅವರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಮೋದಿ, ಇದ್ದಕ್ಕಿದ್ದಂತೆ ಟ್ರಂಪ್ ಕರೆಯನ್ನು ನಿರಾಕರಿಸುವ ನಿರ್ಧಾರ ಮಾಡಿದ್ದ ಅಚ್ಚರಿಯಂತೆ ಕಾಣುತ್ತಿದೆ. ಮಾತ್ರವಲ್ಲದೆ, ಈ ನಿರಾಕರಣೆಗೆ ಕಾರಣವೇನಿರಬಹುದು ಎಂಬ ಚರ್ಚೆ, ಪ್ರಶ್ನೆಗಳೂ ಮುನ್ನೆಲೆಯಲ್ಲಿವೆ. ಟ್ರಂಪ್ ಅವರ ದಾಷ್ಟ್ಯತನವನ್ನು ನಿಭಾಯಿಸಲು ಮತ್ತು ಅವರ ಧೋರಣೆಗೆ ಪೆಟ್ಟು ಕೊಡಲು ಅವರ ಕರೆಗಳನ್ನು ಸ್ವೀಕರಿದೆ ಮೋದಿ ಅವರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆಯೇ ಎಂದೂ ಹೇಳಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇತ್ತೀಚಿನ ವಾರಗಳಲ್ಲಿ ಟ್ರಂಪ್ ಅವರು ಮೋದಿಗೆ ಹಲವಾರು ಬಾರಿ ಕರೆ ಮಾಡಿದ್ದಾರೆ. ಆದರೆ, ಮೋದಿ ಉತ್ತರಿಸಿಲ್ಲ ಎಂದು ಜರ್ಮನ್ ಪತ್ರಿಕೆ ಮೊದಲಿಗೆ ವರದಿ ಮಾಡಿತ್ತು. ಆ ವರದಿಯನ್ನು ಮತ್ತಷ್ಟು ಬಲಪಡಿಸುವಂತೆ ನ್ಯೂಯಾರ್ಕ್ ಟೈಮ್ಸ್ (NYT) ಕೂಡ ಹೊಸ ವರದಿಯನ್ನು ಪ್ರಕಟಿಸಿದೆ. ಇದು, ಅಮೆರಿಕ ಅಧ್ಯಕ್ಷರ ಕರೆಯನ್ನು ನಿರ್ಲಕ್ಷ್ಯಿಸಿದ್ದಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಪಟ್ಟಿ ಮಾಡಿದೆ.

ಅಧಿಕೃತವಾಗಿ, ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಕೊನೆಯ ಫೋನ್ ಸಂಭಾಷಣೆಯು ಜೂನ್ 17 ರಂದು ನಡೆಯಿತು. ಟ್ರಂಪ್ ಕೆನಡಾದಲ್ಲಿ ನಡೆದ G7 ಶೃಂಗಸಭೆಯಲ್ಲಿದ್ದಾಗ, ಹಠಾತ್ತನೆ ಹೊರಟು ವಾಷಿಂಗ್ಟನ್‌ಗೆ ಹಿಂತಿರುಗಿದರು. ಆ ಸಮಯದಲ್ಲಿ, ಮೋದಿಗೆ ಟ್ರಂಪ್‌ ಕರೆ ಮಾಡಿದ್ದರು. ಆಗ, ವಾಷಿಂಗ್ಟನ್‌ನಲ್ಲಿ ಭೇಟಿ ಮಾಡುವಂತೆ ಮೋದಿ ಅವರನ್ನು ಟ್ರಂಪ್‌ ಕೇಳಿದ್ದರು. ಆದರೆ, ಕ್ರೊಯೇಷಿಯಾಗೆ ಭೇಟಿ ನಿಡುವ ಪೂರ್ವ ಯೋಜನೆಯ ಕಾರಣದಿಂದಾಗಿ, ಟ್ರಂಪ್ ವಿನಂತಿಯನ್ನು ಮೋದಿ ನಿರಾಕರಿಸಿದ್ದರು.

ಅಂದಿನ ಕರೆಯು, ಪ್ರಧಾನಿ ಮೋದಿ ಮೇಲೆ ಟ್ರಂಪ್ ಒತ್ತಡ ಹೇರಲು ಪ್ರಯತ್ನಿಸಬಹುದು ಎಂಬ ಕಾರಣಕ್ಕಾಗಿಯೇ ಮೋದಿ ಭೇಟಿಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಯಾಕೆಂದರೆ, ಅದೇ ಸಮಯದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಶ್ವೇತಭವನದಲ್ಲಿ ಊಟಕ್ಕೆ ಆಹ್ವಾನಿಸಲಾಗಿತ್ತು. ಆಗ, ಮೋದಿ ಅವರನ್ನು ಭೇಟಿಗೆ ಕರೆದದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಚರ್ಚೆಯನ್ನು ಅಮೆರಿಕ ನೆಲದಲ್ಲಿ ನಡೆಸುವ ಉದ್ದೇಶ ಟ್ರಂಪ್‌ ಅವರದ್ದಾಗಿತ್ತು ಎನ್ನಲಾಗಿದೆ.

ಈ ಲೇಖನ ಓದಿದ್ದೀರಾ?: ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?

ಅಂದಿನಿಂದ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ದಿನ ಕಳೆದಂತೆ ಹದಗೆಡುತ್ತಿದೆ. ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿದರು. ಜೊತೆಗೆ, ಅಮೆರಿಕದಲ್ಲಿ ಕೃಷಿ ಮತ್ತು ಡೈರಿ ಕ್ಷೇತ್ರಗಳ ಮಾರುಕಟ್ಟೆಯನ್ನು ವಿಸ್ತರಿಸುವ ಕುರಿತಾದ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸಿದರು.

ದೀರ್ಘಕಾಲದ ದೋಸ್ತಿಗಳಾದ ಅಮೆರಿಕ-ಭಾರತ (ಟ್ರಂಪ್-ಮೋದಿ) ನಡುವಿನ ವಿಶ್ವಾಸ ಕುಸಿದಿದೆ. ಆದಾಗ್ಯೂ, ಕೆಲವು ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಮೋದಿ ಅವರಿಗೆ ಟ್ರಂಪ್ ಪದೆ-ಪದೇ ಕರೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಟ್ರಂಪ್ ಅವರ ಅತಿಶಯೋಕ್ತಿ ಮತ್ತು ಏಕಪಕ್ಷೀಯ ಧೋರಣೆಯು ಮಾತುಕತೆಯ ಫಲಿತಾಂಶವನ್ನು ಯಾವ ರೀತಿಯಲ್ಲಿ ರೂಪಿಸಬಹುದು ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ, ಟ್ರಂಪ್‌ ಕರೆಗೆ ಮೋದಿ ಉತ್ತರಿಸುತ್ತಿಲ್ಲ ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

CJP ಪ್ರೊಟೆಸ್ಟ್‌ ಎಫೆಕ್ಟ್ | ಅ.10ರಂದು ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು

ದೆಹಲಿಯಲ್ಲಿ ಅಕ್ಟೋಬರ್‌ 10ರಂದು ನಡೆಯಲಿರುವ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಯ...

ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ

ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿವಿಧ ಪ್ರತಿಪಕ್ಷಗಳು...

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...