ಪ್ರೀಮಿಯಂ ಲೇಖನ | ಎಐ ಡೇಟಾ ಸೆಂಟರ್‌ಗಳ ವಿಸ್ತರಣೆ ಮತ್ತು ಪರಿಸರ ಸವಾಲು

Date:

2025ರಲ್ಲಿ ಅಮೆರಿಕದಲ್ಲಿ ಸ್ಥಳೀಯ ವಿರೋಧದ ಕಾರಣ ಸುಮಾರು 152 ಬಿಲಿಯನ್ ಡಾಲರ್ ಮೌಲ್ಯದ ಡೇಟಾ ಸೆಂಟರ್ ಯೋಜನೆಗಳು ಸ್ಥಗಿತಗೊಂಡವು. ಹಲವು ದೇಶಗಳ ಚುನಾವಣೆಗಳಲ್ಲಿ ಡೇಟಾ ಸೆಂಟರ್ ಪ್ರಶ್ನೆಯೇ ಪ್ರಮುಖ ರಾಜಕೀಯ ವಿಷಯವಾಗಿ ಚರ್ಚೆಯಾಗಿ ರಾಜಕೀಯ ಪಕ್ಷಗಳು ಇಲ್ಲಿ ನೀರು ಮತ್ತು ವಿದ್ಯುತ್ ಸಂಪನ್ಮೂಲಗಳ ಬಳಕೆಯ ಪ್ರಮಾಣದ ಮೌಲ್ಯಮಾಪನ ಕಡ್ಡಾಯವಾಗಬೇಕು ಎಂದು ಒತ್ತಾಯಿಸಿದವು.

- Advertisement -

ದಿನನಿತ್ಯದ ಕಚೇರಿಯ ವಿಷಯವಾಗಲೀ, ಮಕ್ಕಳ ಶಾಲೆಯ ಪ್ರಾಜೆಕ್ಟ್‌ಗಳಿಗಾಗಲಿ, ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳ ಬಗೆಗಿನ ಫೀಡ್‌ಬ್ಯಾಕ್‌ ಆಗಿರಲಿ, ಆರೋಗ್ಯ ಸಮಸ್ಯೆಯಾಗಿರಲಿ ಅಥವಾ ಇನ್ನು ಯಾವುದೇ ಇತರ ವಿಷಯವಾಗಲಿ ಉತ್ತರಗಳಿಗಾಗಿ ಹಿಂದೆ ಮುಂದೆ ನೋಡದೆ ತಕ್ಷಣವೇ ನಮ್ಮ ಬೆರಳುಗಳು ಚಾಟ್‌ಜಿಪಿಟಿ ಅಥವಾ ಜೆಮಿನಿಯಂತಹ ಎಐ ಚಾಟ್‌ಬಾಟ್‌ಗಳಲ್ಲಿ ಪಟಪಟನೆ ಪ್ರಾಂಪ್ಟ್‌ಗಳನ್ನು ಟೈಪಿಸಿಬಿಡುತ್ತವೆ. ಆದರೆ ಎಐ ಪರಿಹರಿಸುವ ಪ್ರತಿಯೊಂದು ಪ್ರಾಂಪ್ಟ್‌ಗೆ ನಾವು ನಮ್ಮ ಪರಿಸರವನ್ನೇ ಬೆಲೆಯಾಗಿ ತೆರುತ್ತಿದ್ದೇವೆ ಎಂಬುದು ಎಷ್ಟು ಜನರಿಗೆ ಗೊತ್ತು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಐ ಚಾಟ್‌ಬಾಟ್‌ಗಳು ನಾವು ನೀಡುವ ಪ್ರತಿಯೊಂದು ಪ್ರಾಂಪ್ಟ್‌ನ ಪದಗಳನ್ನು ವಿಭಜಿಸಿ, ಅದನ್ನು ಫುಟ್ಬಾಲ್ ಮೈದಾನಗಳಿಗಿಂತಲೂ ದೊಡ್ಡದಾಗಿರುವ ಬೃಹತ್ ಡೇಟಾ ಸೆಂಟರ್‌ಗಳಿಗೆ ಕಳುಹಿಸುತ್ತದೆ. ಅಲ್ಲಿ ಇರುವ ಕಂಪ್ಯೂಟರ್‌ಗಳ ಸಮೂಹಗಳು ಕ್ಷಣಾರ್ಧದಲ್ಲಿ ಉತ್ತರಗಳನ್ನು ರಚಿಸುತ್ತವೆ. ಆದರೆ ಈ ಸಂಪೂರ್ಣ ಪ್ರಕ್ರಿಯೆಯು, ಸಾಮಾನ್ಯವಾಗಿ ಗೂಗಲ್‌ನಲ್ಲಿ ನಾವು ನಡೆಸುವ ಹುಡುಕಾಟಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚು ಇಂಧನವನ್ನು ಬಳಸುತ್ತದೆ ಎಂದು ಎಲೆಕ್ಟ್ರಿಕ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಅಂದಾಜಿಸುತ್ತದೆ.

ಏನಿದು ಎಐ ಡೇಟಾ ಸೆಂಟರ್‌

1990 ರ ದಶಕ ಇಂಟರ್‌ನೆಟ್‌ ಕ್ರಾಂತಿಯ ಆರಂಭಿಕ ವರ್ಷವಾಗಿದ್ದರೆ, ಹಿಂದೆಂದೂ ಯಾವ ಎಲೆಕ್ಟ್ರಾನಿಕ್‌ ಉಪಕರಣಕ್ಕೂ ಕಂಡಿರದ ಭಾರೀ ಪ್ರಮಾಣದ ಜನಪ್ರಿಯತೆಯೊಂದಿಗೆ 2000ನೆ ಇಸವಿ ʻಮೊಬೈಲ್‌ ಫೋನ್‌ ಬೂಮ್‌ ಇಯರ್‌ʼ ಎಂದು ಇತಿಹಾಸದಲ್ಲಿ ದಾಖಲಾಯಿತು. ಇದೀಗ ಪ್ರಸಕ್ತ ಅವಧಿ ಕೃತಕ ಬುದ್ಧಿಮತ್ತೆ ಅಥವಾ ಎಐಮಯ ಯುಗವಾಗಿ ಬಿಟ್ಟಿದೆ. ಎಲ್ಲ ಕ್ಷೇತ್ರಗಳನ್ನೂ ಎಐ ಆಕ್ರಮಿಸಿಕೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಎಐ ಅಪ್ಲಿಕೇಶನ್ಸ್‌ಗಳಿಗೆ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅವುಗಳಿಗೆ ಅಗತ್ಯವಾದ ಡೇಟಾ ಸೆಂಟರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವುದು ಅನಿವಾರ್ಯವಾಗುತ್ತಿದೆ.

ಡೇಟಾ ಸೆಂಟರ್‌ಗಳನ್ನು ನಿರ್ವಹಿಸುವ ಪ್ರಮುಖ ಕಂಪನಿಗಳಾದ ಗೂಗಲ್‌, ಮೈಕ್ರೋ ಸಾಫ್ಟ್‌, ಅಮೇಜಾನ್‌ ಮತ್ತು ಮೆಟಾ ತಮ್ಮ ಎಐ ಸೇವೆಗಳಿಗೆ ಅಪಾರ ಪ್ರಮಾಣದ ಗಣಕಶಕ್ತಿ (computing power) ಅಗತ್ಯವಿರುವುದರಿಂದ, ಹೊಸ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಮುಂದಾಗುತ್ತಿವೆ. ಈ ಕಂಪನಿಗಳಿಗೆ ಕಂಪ್ಯೂಟರ್‌ಗಳು, ಸರ್ವರ್‌ಗಳು, ಡೇಟಾ ಸಂಗ್ರಹ ವ್ಯವಸ್ಥೆಗಳು, ನೆಟ್‌ವರ್ಕ್ ಉಪಕರಣಗಳು, ವಿದ್ಯುತ್ ಬ್ಯಾಕಪ್ ವ್ಯವಸ್ಥೆಗಳು ಮತ್ತು ಸರ್ವರ್‌ಗಳು ಅತಿಯಾಗಿ ಬಿಸಿಯಾಗದಂತೆ ನೋಡಿಕೊಳ್ಳಲು ತಂಪುಗೊಳಿಸುವ ವ್ಯವಸ್ಥೆಗಳನ್ನು (Cooling systems) ಹೊಂದಿರುವ ವಿಶೇಷ ಕಟ್ಟಡ ಅಥವಾ ಡೇಟಾ ಸೆಂಟರ್‌ಗಳ ಅಗತ್ಯವಿದೆ.

ಆದರೆ ಇನ್ನೊಂದೆಡೆ ಹೆಚ್ಚುತ್ತಿರುವ ಡೇಟಾ ಸೆಂಟರ್‌ಗಳ ಪರಿಣಾಮವಾಗಿ, ಇಲ್ಲಿನ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಹಾರ್ಡ್‌ವೇರ್‌ಗಳಿಗೆ ಬೇಕಾಗುವ ವಿದ್ಯುತ್ ಬಳಕೆಯ ಪ್ರಮಾಣವು ವೇಗವಾಗಿ ಏರತೊಡಗಿದೆ. ಇವುಗಳೊಂದಿಗೆ ಇಂಗಾಲದ ಹೊರಸೂಸುವಿಕೆ, ಸರ್ವರ್‌ಗಳನ್ನು ತಂಪಾಗಿಡಲು ಹೆಚ್ಚಿನ ನೀರಿನ ಬಳಕೆ, ಮತ್ತು ಇವುಗಳಿಂದಾಗಿ ಸ್ಥಳೀಯ ಪರಿಸರದ ಮೇಲೆ ಪರಿಣಾಮವೂ ಹೆಚ್ಚುತ್ತಿದೆ.

ಎಐ ಡೇಟಾ ಸೆಂಟರ್‌ಗಳಲ್ಲಿ ನೀರು ಮತ್ತು ವಿದ್ಯುತ್‌ ಬಳಕೆ

ಎಐ ಡೇಟಾ ಸೆಂಟರ್‌ಗಳಲ್ಲಿ ಬಳಸುವ ನೀರಿನ ಬಳಕೆಯಲ್ಲಿ ಎರಡು ವಿಧಗಳಿವೆ. ಮೊದಲನೆಯದು ನೇರ ನೀರಿನ ಬಳಕೆ. ಇದು ಡೇಟಾ ಸೆಂಟರ್‌ಗಳಲ್ಲಿನ ಸರ್ವರ್‌ಗಳನ್ನು ತಂಪಾಗಿಡಲು ಬಳಸುವ ನೀರು. ಎರಡನೆಯದು ಪರೋಕ್ಷ ನೀರಿನ ಬಳಕೆ. ಎಂದರೆ ಡೇಟಾ ಸೆಂಟರ್‌ಗಳಿಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸುವ ಸಂದರ್ಭದಲ್ಲಿ ಬಳಸುವ ನೀರು.

ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ, 2023ರಲ್ಲಿ ಜಗತ್ತಿನಾದ್ಯಂತ ಡೇಟಾ ಸೆಂಟರ್‌ಗಳು ಬಳಸಿದ ನೀರಿನ ಒಟ್ಟು ಪ್ರಮಾಣ ಸುಮಾರು 560 ಬಿಲಿಯನ್ ಲೀಟರ್. ಇದರಲ್ಲಿ 373 ಬಿಲಿಯನ್ ಲೀಟರ್ (ಸುಮಾರು ಮೂರನೇ ಎರಡು ಭಾಗ) ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಪರೋಕ್ಷ ನೀರಿನ ಬಳಕೆಯಾಗಿದ್ದರೆ, 140 ಬಿಲಿಯನ್ ಲೀಟರ್ (ಸುಮಾರು ನಾಲ್ಕನೇ-ಒಂದು ಭಾಗ) ಡೇಟಾ ಸೆಂಟರ್‌ಗಳನ್ನು ತಂಪುಗೊಳಿಸಲು ಬಳಸಿದ ನೀರಿನ ಪ್ರಮಾಣವಾಗಿದೆ. ಇನ್ನುಳಿದ 47 ಬಿಲಿಯನ್ ಲೀಟರ್ (ಸುಮಾರು 8%) ಹಾರ್ಡ್‌ವೇರ್ ತಯಾರಿಕೆಯಲ್ಲಿ ಬಳಸಲ್ಪಟ್ಟ ನೀರಾಗಿದೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 2023-24ರಲ್ಲಿ ಅಮೆರಿಕದ ಡೇಟಾ ಸೆಂಟರ್‌ಗಳು 192.64 TWh/ಟೆರಾವಾಟ್-ಗಂಟೆ ವಿದ್ಯುತ್ (192.64 ಟೆರಾವಾಟ್-ಗಂಟೆ ಎಂದರೆ ಸುಮಾರು 19,264 ಕೋಟಿ ಯೂನಿಟ್ ವಿದ್ಯುತ್ — ಇದು ಲಕ್ಷಾಂತರ ಮನೆಗಳು ಬಳಸುವ ವಾರ್ಷಿಕ ವಿದ್ಯುತ್ ಬಳಕೆಗೆ ಸಮನಾದ ಬೃಹತ್ ಪ್ರಮಾಣ) ಬಳಸಿ 105.59 ಮಿಲಿಯನ್ ಟನ್ ಇಂಗಾಲವನ್ನು ಹೊರಸೂಸಿವೆ. ಆದರೆ ಇದನ್ನು ಖಚಿತವಾಗಿ ನೀಡಲು ಇನ್ನೂ ಪೂರಕ ಅಧ್ಯಯನಗಳು ನಡೆಯಬೇಕಿದೆ. ಜೊತೆಗೆ ಈ ಕಂಪನಿಗಳ ವಾರ್ಷಿಕ ಸುಸ್ಥಿರತಾ ವರದಿಗಳು ಎಐ ವ್ಯವಸ್ಥೆಗಳಿಂದ ಉಂಟಾಗುವ ಪರಿಸರ ಪರಿಣಾಮಗಳ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ನೀಡುವುದಿಲ್ಲ.

Data center

ಇದರೊಂದಿಗೆ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಡೇಟಾ ಸೆಂಟರ್‌ಗಳು ದೀರ್ಘಕಾಲೀನ ಹವಾಮಾನ ಒತ್ತಡಗಳಿಗೆ (chronic climate stress) ಒಳಗಾಗುವ ಮಾರುಕಟ್ಟೆಗಳಲ್ಲಿ ಸ್ಥಾಪಿತವಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಇರುವ ಎಲ್ಲಾ ಡೇಟಾ ಸೆಂಟರ್‌ಗಳ ಸಾಮರ್ಥ್ಯದ ಸುಮಾರು 79 ಶೇಕಡಾ ಭಾಗವು ಹವಾಮಾನ ಬದಲಾವಣೆಯಿಂದ ಉಂಟಾಗುವ ತೀವ್ರ ಹವಾಮಾನ ಅಪಾಯಗಳ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆಯಿಂದ ಈ ಡೇಟಾ ಸೆಂಟರ್‌ಗಳ ಮೇಲೆ ಉಂಟಾಗುವ ದೀರ್ಘಕಾಲೀನ ಪರಿಣಾಮಗಳನ್ನು ಹೂಡಿಕೆದಾರರು ಸಮರ್ಪಕವಾಗಿ ಪರಿಗಣಿಸಿಲ್ಲ.

ಡಿಜಿಟಲ್‌ ಮೂಲ ಸೌಕರ್ಯ ಕ್ಷೇತ್ರ ಮತ್ತು ಭಾರತ

ಹೀಗೆ ಜಾಗತಿಕ ಮಟ್ಟದ ಅಧ್ಯಯನಗಳು ಮುಂದಿನ ತಲೆಮಾರಿನ ಡೇಟಾ ಸೆಂಟರ್‌ಗಳು ಹವಾಮಾನ ಬದಲಾವಣೆಯಿಂದ ಉಂಟಾಗುವ ಅಡಚಣೆಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸುತ್ತಿರುವಾಗಲೂ, ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆಗಳನ್ನು ಸೆಳೆಯಲು ಭಾರತ ಪೈಪೋಟಿ ನಡೆಸುತ್ತಿದೆ.

ಹವಾಮಾನ ಅಪಾಯ ವಿಶ್ಲೇಷಣಾ ಸಂಸ್ಥೆಯಾದ ಕ್ರಾಸ್‌ ಡಿಪೆಂಡೆನ್ಸಿ ಇನಿಶಿಯೇಟೀವ್‌ (Cross Dependency Initiative) “2026 Global Analysis of Planned Data Centres for Physical Climate Risk and Resilience” ಎಂಬ ವರದಿಯಲ್ಲಿ ವಿಶ್ವದಾದ್ಯಂತ ನಿರ್ಮಿಸಲು ಯೋಜಿಸಿರುವ 2,595 ಡೇಟಾ ಸೆಂಟರ್‌ಗಳನ್ನು ಪರಿಶೀಲಿಸಿದೆ. ಈ ಅಧ್ಯಯನದಲ್ಲಿ ನೇರ ಹವಾಮಾನ ಹಾನಿ, ಅತಿಯಾದ ತಾಪಮಾನದಿಂದ ಉಂಟಾಗುವ ಕಾರ್ಯಾಚರಣೆಯ ಅಡಚಣೆಗಳು, ವಿದ್ಯುತ್, ನೀರು ಹಾಗೂ ಸಾರಿಗೆ ಜಾಲಗಳ ವೈಫಲ್ಯದಿಂದ ಉಂಟಾಗುವ ಅಪಾಯಗಳು ಇತ್ಯಾದಿಗಳನ್ನು ವಿಶ್ಲೇಷಿಸಲಾಗಿದೆ.

ಈ ಅಧ್ಯಯನದ ಪ್ರಕಾರ ಯೋಜಿತ ಡೇಟಾ ಸೆಂಟರ್‌ಗಳಿಗೆ ಎದುರಾಗುವ ಹವಾಮಾನ ಅಪಾಯದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ 11ನೇ ಸ್ಥಾನದಲ್ಲಿದೆ. ಇದಕ್ಕಿಂತಲೂ ಗಮನಾರ್ಹ ಸಂಗತಿಯೆಂದರೆ, ಭಾರತದ ಪ್ರಮುಖ ತಂತ್ರಜ್ಞಾನ ಮತ್ತು ಹೂಡಿಕೆ ಕೇಂದ್ರಗಳಾದ ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಅತಿಯಾದ ತಾಪಮಾನದಿಂದ ಕಾರ್ಯಾಚರಣೆಗೆಅಪಾಯದ ಉಂಟುಮಾಡುವ ವಿಶ್ವದ ಅತ್ಯಂತ ಅಪಾಯಕಾರಿಯಾದ ಮೊದಲ 30 ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ವರದಿಯ ಪ್ರಕಾರ ಏಷ್ಯಾದಲ್ಲಿ ಯೋಜಿತ ಡೇಟಾ ಸೆಂಟರ್‌ಗಳಿಗೆ ಅತ್ಯಧಿಕ ಹವಾಮಾನ ಅಪಾಯವಿದೆ. ಹೆಚ್ಚಿನ ಹಸಿರುಮನೆ ಅನಿಲ ಹೊರಸೂಸುವಿಕೆಯ ಪರಿಸ್ಥಿತಿ ಮುಂದುವರಿದರೆ, ಶತಮಾನದ ಅಂತ್ಯದ ವೇಳೆಗೆ ಈ ಅಪಾಯವು ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದಂತೆ ಈ ಅಪಾಯಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ತಾಪಮಾನದ ಪರಿಣಾಮಗಳು ಪ್ರವಾಹ ಅಥವಾ ಚಂಡಮಾರುತಗಳಂತೆ ತಕ್ಷಣದ ಹಾನಿ ಉಂಟುಮಾಡದಿದ್ದರೂ, ದೀರ್ಘಕಾಲದ ತೀವ್ರ ಉಷ್ಣತೆಯು: ಉಪಕರಣಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ, ಶೀತಲೀಕರಣ ವೆಚ್ಚವನ್ನು ಹೆಚ್ಚಿಸುತ್ತದೆ, ವಿದ್ಯುತ್ ಸರಬರಾಜಿನ ಮೇಲೆ ಒತ್ತಡ ಉಂಟುಮಾಡುತ್ತದೆ, ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಡಿಜಿಟಲ್ ಮೂಲಸೌಕರ್ಯಗಳು ತಮ್ಮ ಜೀವಿತಾವಧಿಯವರೆಗೆ ಕಾರ್ಯನಿರ್ವಹಿಸುವುದು ಕಷ್ಟ ಸಾಧ್ಯ.

ಡೇಟಾ ಸೆಂಟರ್‌ಗಳು ಮತ್ತು ಜಾಗತಿಕ ಮಟ್ಟದ ವಿರೋಧ

ವಿಶ್ವದ ಕಂಪನಿಗಳನ್ನು ಭಾರತವು ಎಐ (ಕೃತಕ ಬುದ್ಧಿಮತ್ತೆ) ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಆಹ್ವಾನಿಸುತ್ತಿದ್ದರೆ ಅತ್ತ ಅಮೆರಿಕ, ಯುರೋಪ್, ಲ್ಯಾಟಿನ್ ಅಮೆರಿಕ ಹಾಗೂ ಇತರ ಭಾಗಗಳಲ್ಲಿ ಇವುಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲಿನ ಸ್ಥಳೀಯ ಸಮುದಾಯಗಳು ಮತ್ತು ರಾಜಕೀಯ ನಾಯಕರು ನೀರು, ವಿದ್ಯುತ್ ಮತ್ತು ಭೂಮಿಯ ಮೇಲೆ ಉಂಟಾಗುವ ಅಪಾರ ಒತ್ತಡದ ಕಾರಣ ಡೇಟಾ ಸೆಂಟರ್‌ಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿರೋಧದ ವ್ಯಾಪ್ತಿ ಚಿಲಿಯ, ಅಮೆರಿಕ, ಕೆನಡಾ, ಐರ್ಲೆಂಡ್‌, ಬ್ರಿಟನ್‌, ಮಲೇಷ್ಯಾ, ಇಂಡೋನೇಷ್ಯಾದೊಂದಿಗೆ ಭಾರತದ ವಿಶಾಖಪಟ್ಟಣಂವರೆಗೂ ವಿಸ್ತರಿಸಿದೆ.

2025ರಲ್ಲಿ ಅಮೆರಿಕದಲ್ಲಿ ಸ್ಥಳೀಯ ವಿರೋಧದ ಕಾರಣ ಸುಮಾರು 152 ಬಿಲಿಯನ್ ಡಾಲರ್ ಮೌಲ್ಯದ ಡೇಟಾ ಸೆಂಟರ್ ಯೋಜನೆಗಳು ಸ್ಥಗಿತಗೊಂಡವು. ಹಲವು ದೇಶಗಳ ಚುನಾವಣೆಗಳಲ್ಲಿ ಡೇಟಾ ಸೆಂಟರ್ ಪ್ರಶ್ನೆಯೇ ಪ್ರಮುಖ ರಾಜಕೀಯ ವಿಷಯವಾಗಿ ಚರ್ಚೆಯಾಗಿ ರಾಜಕೀಯ ಪಕ್ಷಗಳು ಇಲ್ಲಿ ನೀರು ಮತ್ತು ವಿದ್ಯುತ್ ಸಂಪನ್ಮೂಲಗಳ ಬಳಕೆಯ ಪ್ರಮಾಣದ ಮೌಲ್ಯಮಾಪನ ಕಡ್ಡಾಯವಾಗಬೇಕು ಎಂದು ಒತ್ತಾಯಿಸಿದವು.

ಭಾರತದಲ್ಲಿ ಸ್ಥಳೀಯ ಸಮುದಾಯಗಳ ಪ್ರತಿರೋಧ

ಭಾರತ ಈಗಾಗಲೇ ನೀರಿನ ಕೊರತೆ ಮತ್ತು ವಿದ್ಯುತ್ ಅಭಾವದಿಂದ ಬಳಲುತ್ತಿದೆ. ಆದರೆ ಸರ್ಕಾರ ಈ ಡೇಟಾ ಸೆಂಟರ್‌ಗಳಿಗೆ ತೆರಿಗೆ ವಿನಾಯಿತಿ ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿದೆ. ಜೊತೆಗೆ “ಇವು ಯುವಜನತೆಗೆ ಭಾರೀ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ” ಎಂಬ ಮಿಥ್ಯೆಯನ್ನು ಹುಟ್ಟುಹಾಕಿದೆ. ಆದರೆ ತಜ್ಞರ ಪ್ರಕಾರ ವಾಸ್ತವದಲ್ಲಿ, ಈ ಬೃಹತ್ ಡೇಟಾ ಸೆಂಟರ್‌ಗಳು ಕೇವಲ ಎಐ ಸರ್ವರ್‌ಗಳನ್ನು ಹೊಂದಿರುವ ವಿಶಾಲ ಗೋದಾಮುಗಳು. ಇಲ್ಲಿ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಅಥವಾ ಕೌಶಲ್ಯ ತರಬೇತಿ ನಡೆಯುವುದಿಲ್ಲ. ಈ ಕೇಂದ್ರಗಳು ಕಾರ್ಯಾರಂಭಿಸಿದ ನಂತರ ಅವುಗಳನ್ನು ನಿರ್ವಹಿಸಲು ತಾಂತ್ರಿಕ ಸಿಬ್ಬಂದಿಗಳನ್ನು ಅವಲಂಬಿಸಿರುತ್ತದೆ.

ಇದಲ್ಲದೆ ಸಾಮಾನ್ಯ ಡೇಟಾ ಸೆಂಟರ್‌ಗಳಿಗಿಂತ ಎಐ ಡೇಟಾ ಸೆಂಟರ್‌ಗಳಿಗೆ ಹೆಚ್ಚು ಇಂಧನ ಮತ್ತು ನೀರಿನ ಅಗತ್ಯವಿದೆ. ಇದರ ಜೊತೆಗೆ, ಈ ಡೇಟಾ ಸೆಂಟರ್‌ಗಳಿಗೆ ದೊಡ್ಡ ಪ್ರಮಾಣದ ಭೂಮಿಯೂ ಬೇಕಾಗುತ್ತದೆ. ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಗೂಗಲ್, ಅಮೆಜಾನ್, ಮೆಟಾ, ಅದಾನಿ ಸಮೂಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ಗಳಿಗೆ ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿಯೂ ಭೂಮಿ ಒದಗಿಸಲು ಮುಂದಾಗಿವೆ.

ಹೀಗಾಗಿ ಇದರ ವಿರುದ್ಧ ವಿಶಾಖಪಟ್ಟಣಂ ಮತ್ತು ಅಂಕಾಪಲ್ಲಿ ಜಿಲ್ಲೆಗಳಲ್ಲಿ ಗೂಗಲ್–ಅದಾನಿ ಯೋಜನೆಗಳ ವಿರುದ್ಧ ಪರಿಸರ ಹೋರಾಟಗಾರರು ದೀರ್ಘಕಾಲದಿಂದ ಅಭಿಯಾನ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ಮೂಲಕ್ಕೆ ಧಕ್ಕೆ ಉಂಟಾಗಬಹುದು ಎಂಬ ಆತಂಕ ಮತ್ತು ಅರಣ್ಯ ನಾಶದ ಕುರಿತ ಕಳವಳ ಈ ಪ್ರತಿಭಟನೆಗೆ ಕಾರಣವಾಗಿದೆ.ಆದರೆ ಅವರ ಕಳವಳಗಳಿಗೆ ಹೆಚ್ಚಿನ ಸ್ಪಂದನೆ ದೊರೆತಿಲ್ಲ. ಬದಲಾಗಿ, ಆಂಧ್ರಪ್ರದೇಶ ಸರ್ಕಾರ ಈ ಯೋಜನೆಗೆ ವಿದ್ಯುತ್ ಸಬ್ಸಿಡಿ, ನೀರಿನ ಸಬ್ಸಿಡಿ, ಭೂಮಿಯ ಬೆಲೆಯಲ್ಲಿ ರಿಯಾಯಿತಿ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.

Jamnagar
ರಿಲಯನ್ಸ್-ಮೆಟಾದ ಜಾಮ್‌ನಗರ ಯೋಜನೆ

ರಿಲಯನ್ಸ್-ಮೆಟಾದ ಜಾಮ್‌ನಗರ ಯೋಜನೆ, ಗೂಗಲ್ ಕ್ಲೌಡ್‌ನ ನವಿ ಮುಂಬೈಯ ವಿಸ್ತರಣಾ ಯೋಜನೆ ಮತ್ತು ಕಂಟ್ರೋಲ್‌ಎಸ್‌ ಸಂಸ್ಥೆಯ ಮೆಗಾ ಕ್ಯಾಂಪಸ್‌ಗಳಂತಹ ದೊಡ್ಡ ಪ್ರಮಾಣದ ಹೂಡಿಕೆಗಳಿಗೆ ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿವೆ. ಇವುಗಳು ಸ್ಥಳ ಆಯ್ಕೆಯ ಮಾನದಂಡಗಳು ಮತ್ತು ವಿದ್ಯುತ್‌ ಹಾಗು ನೀರಿನ ಬಳಕೆಯ ವರದಿಯಲ್ಲಿ ಪಾರದರ್ಶಕತೆ ಪೂರೈಸಿದಾಗ ಮಾತ್ರ ಇವುಗಳಿಗೆ ಅನುಮತಿ ನೀಡಬೇಕಿದೆ.

ಸದ್ಯಕ್ಕೆ ಈ ನಿಟ್ಟಿನಲ್ಲಿ ಆಶಾಕಿರಣವೆಂದರೆ ಎನ್ ವಿಡಿಯ ಸಂಸ್ಥೆ ಘೋಷಿಸಿರುವ ಹೊಸ ತಂತ್ರಜ್ಞಾನ. ಅತಿ ಕಡಿಮೆ ನೀರು ಬೇಡುವ ಎ ಐ  ಡೇಟಾ ಸೆಂಟರ್ ಅನ್ನು ಘೋಷಿಸಿದೆ.  ಇದು ನಿಜಕ್ಕೂ ಕಾರ್ಯಗತವಾದರೆ, ನೀರಿನ ಬೇಡಿಕೆ ಕುಗ್ಗಬಹುದು.,
****
ಕೃತಕ ಬುದ್ಧಿಮತ್ತೆಯೂ ಕೆಲಸ ಮಾಡಬೇಕೆಂದರೆ ಬೇಕಾಗಿರುವುದು ನೈಸರ್ಗಿಕ ಸಂಪನ್ಮೂಲಗಳೇ. ಎಐಗೆ ಪ್ರಾಂಪ್ಟ್‌ಗಳನ್ನು ನೀಡುವ ನಾವು, ಪ್ರಕೃತಿಯನ್ನು ಉಳಿಸಲು ನಮ್ಮದೇ ಕಾರ್ಯಗಳನ್ನು ಪ್ರಾಂಪ್ಟ್‌ ಆಗಿ ಕೈಗೊಳ್ಳಬೇಕಾಗಿದೆ.

WhatsApp Image 2025 11 17 at 3.57.02 PM
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...