ಈ ದಿನ ಸಂಪಾದಕೀಯ | ಪಾನ್ ಮಸಾಲ, ಗುಟ್ಕಾ ನಿಷೇಧ ಸಾಧ್ಯವೇ, ನಷ್ಟಕ್ಕೆ ಸರ್ಕಾರ ಸಿದ್ಧವಿದೆಯೇ?

Date:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ, ಗುಟ್ಕಾ-ಪಾನ್ ಮಸಾಲಗಳ ಕುರಿತ ಖಡಕ್ ಎಚ್ಚರಿಕೆ, ಸರ್ಕಾರಕ್ಕೆ ಸಿಗುವ ಆದಾಯ ಕಳೆದುಕೊಳ್ಳಲು ತಯಾರಿದ್ದಾರೆಯೇ ಎಂಬ ಪ್ರಶ್ನೆಯನ್ನು; ಗುಟ್ಕಾ ಮತ್ತು ಪಾನ್ ಮಸಾಲ ಕಂಪನಿಗಳ ಮಾಲೀಕರಿಗೆ ಬೆದರಿಕೆಯಂತೆ ಕಾಣಬಹುದೆಂಬ ಅನುಮಾನವನ್ನು ಹುಟ್ಟುಹಾಕಿದರೆ ಆಶ್ಚರ್ಯವಿಲ್ಲ...

‘ಪಾನ್ ಮಸಾಲ, ಗುಟ್ಕಾದಲ್ಲಿ ಅಮಲು ಪದಾರ್ಥ ಬೆರೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಅದೇನಾದರೂ ನಿಜವೇ ಆಗಿದ್ದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಪಾನ್ ಮಸಾಲ, ಗುಟ್ಕಾ ಪದಾರ್ಥಗಳನ್ನು ನಿಷೇಧಿಸಲಾಗುವುದು. ಇದರಿಂದ 100 ಕೋಟಿ ಆದಾಯ ನಷ್ಟವಾದರೂ ಚಿಂತಿಸಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

- Advertisement -

ಜನರಿಗೆ ಗುಟ್ಕಾದ ಚಟ ಹಿಡಿಸಲು ತಯಾರಿಕಾ ಕಂಪನಿಗಳೇ ಪಾನ್ ಮಸಾಲ, ಗುಟ್ಕಾಕ್ಕೆ ನಶೆ ಪದಾರ್ಥ ಸೇರ್ಪಡೆ ಮಾಡುವ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನಶೆ ಪದಾರ್ಥಗಳ ಬಳಸಿ ಗುಟ್ಕಾ ಮಾರಾಟ ಕಾನೂನುಬಾಹಿರವಾಗಿದೆ. ಆದರೂ ಬಾಲಕರಿಂದ ಹಿಡಿದು ವೃದ್ಧರವರೆಗೆ ಗುಟ್ಕಾದ ವ್ಯಸನಕ್ಕೆ ಸಿಲುಕಿದ್ದಾರೆ. ಕಡಿಮೆ ಬೆಲೆಯ ಗುಟ್ಕಾ ಅಗಿಯುವುದು, ಎಲ್ಲೆಂದರಲ್ಲಿ ಉಗಿಯುವುದು ಮಿತಿಮೀರಿ ಹೋಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇವುಗಳ ಬಳಕೆಯಿಂದ ಜನರು ಕ್ಯಾನ್ಸರ್‍‌ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆಸ್ಪತ್ರೆ ಖರ್ಚು ಭರಿಸದೆ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ. ಅದು ಸಮಾಜ ಮತ್ತು ಸರ್ಕಾರದ ಮೇಲೆ ಒತ್ತಡ ತರುತ್ತಿದೆ. ಹೀಗಾಗಿ ಸರ್ಕಾರಕ್ಕೆ 100 ಕೋಟಿ ಆದಾಯ ಖೋತಾ ಆದರೂ ಚಿಂತಿಸದೆ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಟ್ಕಾ ಕಂಪನಿಗಳಿಗೆ ಎಚ್ಚರಿಕೆ ನೀಡಿರುವುದು ಸರಿಯಾಗಿದೆ.

ತಂಬಾಕುಯುಕ್ತ ಗುಟ್ಕಾ ಮತ್ತು ಪಾನ್ ಮಸಾಲ ಬಾಯಿ, ನಾಲಗೆ, ಗಂಟಲು ಮತ್ತು ಅನ್ನನಾಳದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಿಗಳ ಸಂಖ್ಯೆಯ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿ, ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾದ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ಫೆಬ್ರವರಿ 2025ರಲ್ಲಿ ನಿಷೇಧಿಸಿದೆ. ಆದರೆ ಈ ನಿಷೇಧವು ವಿಧಾನಸಭೆ ಅಂಗೀಕರಿಸಿದ ಪ್ರತ್ಯೇಕ ರಾಜ್ಯ ಕಾಯ್ದೆಯ ಮೂಲಕವಲ್ಲ. ಬದಲಿಗೆ, ಕೇಂದ್ರದ ಆಹಾರ ಸುರಕ್ಷತಾ ಕಾನೂನು ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ರಾಜ್ಯದ ಆಹಾರ ಸುರಕ್ಷತಾ ಆಯುಕ್ತರು ಹೊರಡಿಸುವ ಅಧಿಸೂಚನೆಗಳ ಮೂಲಕ ಜಾರಿಗೊಳಿಸಲಾಗಿದೆ.

ಇದನ್ನು ಓದಿದ್ದೀರಾ?: ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಪೌರತ್ವ ನಿಗದಿ ಆಗದಿರುವುದು ನಾಚಿಕೆಗೇಡು

ಅಷ್ಟೇ ಅಲ್ಲ, ಕಳೆದ ವರ್ಷ ಮೇ 2025ರಲ್ಲಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೀಡಿ, ಸಿಗರೇಟು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕಾಯ್ದೆ ಉಲ್ಲಂಘಿಸಿದವರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಮತ್ತು ಗುಟ್ಕಾ ತಿಂದು ಉಗುಳಿದರೆ 1,000 ರೂ. ದಂಡ ವಿಧಿಸಲಾಗುವುದೆಂದು ರಾಜ್ಯ ಸರ್ಕಾರ ತಿಳಿಸಿದೆ. ಇದಲ್ಲದೆ, ಸಾರ್ವಜನಿಕರ ಆರೋಗ್ಯ ರಕ್ಷಿಸುವ ಹಾಗೂ ತಂಬಾಕು ನಿಯಂತ್ರಣದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವ ಕುರಿತು ವಿಶೇಷ ಕಾರ್ಯಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಇಷ್ಟಾದರೂ, ತಂಬಾಕುರಹಿತ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟವನ್ನು ನಿರ್ಬಂಧಿಸಿಲ್ಲ. ಜೊತೆಗೆ ಆ ಸರಕು ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ; ಅಧಿಕೃತವೆಷ್ಟು-ಅನಧಿಕೃತವೆಷ್ಟು ಎಂಬುದಕ್ಕೆ ಲೆಕ್ಕವಿಲ್ಲ. ಅದಕ್ಕೆ ಮಾದಕವಸ್ತು ಸೇರಿಸಲಾಗುತ್ತದೆ ಎಂಬುದನ್ನು ಯಾರೂ ಪರೀಕ್ಷೆಗೊಳಪಡಿಸಿಲ್ಲ. ಇದರಿಂದ ಉಂಟಾಗುವ ಆರೋಗ್ಯ ಹಾನಿ ಯಾರ ಅಂದಾಜಿಗೂ ಸಿಗುತ್ತಿಲ್ಲ. ಗುಟ್ಕಾ ವ್ಯಸನಕ್ಕೆ ಒಳಗಾಗಿ ದಾರಿ ತಪ್ಪುತ್ತಿರುವ ಯುವಜನತೆ ಮತ್ತು ಸಮಾಜ-ಸರ್ಕಾರದ ಮೇಲೆ ಬೀಳುತ್ತಿರುವ ಹೆಚ್ಚುವರಿ ಆರೋಗ್ಯ ವೆಚ್ಚ- ಇವುಗಳನ್ನು ಗಂಭೀರವಾಗಿ ಗಮನಿಸಿದರೆ, ಪಾನ್ ಮಸಾಲ ಉತ್ಪಾದನೆ ಮತ್ತು ಮಾರಾಟದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಅಥವಾ ನಿಷೇಧ ಹೇರುವ ಅಗತ್ಯವಿದೆ.

ಆದರೆ, ದೇಶದ ಪಾನ್ ಮಸಾಲ ಉದ್ಯಮದ ವಾರ್ಷಿಕ ಗಾತ್ರವು ಸುಮಾರು 45ರಿಂದ 60 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಆ ಕಂಪನಿಗಳ ಮಾಲೀಕರು ಪ್ರಭಾವಿಗಳಾಗಿದ್ದು ಸರ್ಕಾರಗಳನ್ನೇ ನಿಯಂತ್ರಿಸುವವರಾಗಿದ್ದಾರೆ. ಕರ್ನಾಟಕ ರಾಜ್ಯವು ಈ ಉತ್ಪನ್ನಗಳ ಉತ್ಪಾದಕ ರಾಜ್ಯವಲ್ಲ, ಆದರೆ ಅಡಿಕೆ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಈ ಅಡಿಕೆಯ ಬಹುಭಾಗವು ಉತ್ತರ ಭಾರತದ ಪಾನ್ ಮಸಾಲ ಮತ್ತು ಗುಟ್ಕಾ ಕಂಪನಿಗಳಿಗೆ ಪೂರೈಕೆಯಾಗುತ್ತದೆ. ರಾಜ್ಯದ ರೈತರಿಗೆ ಆರ್ಥಿಕ ಬಲ ತಂದಿದೆ. ಹಾಗೆಯೇ ಉದ್ಯಮವು ಲಕ್ಷಾಂತರ ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಉದ್ಯೋಗ ನೀಡುತ್ತಿದೆ. ಜೊತೆಗೆ ರಾಜ್ಯಕ್ಕೆ ಮತ್ತು ದೇಶಕ್ಕೆ ದೊಡ್ಡ ಮಟ್ಟದ ಆದಾಯದ ಮೂಲವಾಗಿದೆ.

ಹಾಗಾಗಿ ತಂಬಾಕುರಹಿತ ಗುಟ್ಕಾ ಮತ್ತು ಪಾನ್ ಮಸಾಲಾ ಕುರಿತ ರಾಜ್ಯ ಸರ್ಕಾರದ ಬಹಿರಂಗ ಎಚ್ಚರಿಕೆ, ನಾಜೂಕಿನ ನಡೆಯಂತೆ ಕಂಡರೆ ಆಶ್ಚರ್ಯವಿಲ್ಲ. ಹಾಗೆಯೇ ಈ ಸರಕನ್ನು ಮಾರಾಟ ಮಾಡಲು ಜನಪ್ರಿಯ ಸಿನೆಮಾ ತಾರೆಯರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕಡಿಮೆ ಬೆಲೆ, ಸುಲಭ ಲಭ್ಯತೆ ಮತ್ತು ಜಾಹೀರಾತುಗಳಿಂದ ವಿದ್ಯಾರ್ಥಿಗಳು ಹಾಗೂ ಯುವಜನತೆ ದಾರಿತಪ್ಪಲು, ಮಾದಕ ವಸ್ತುಗಳ ವ್ಯಸನಿಗಳಾಗಲು ಪ್ರೇರೇಪಿಸಿದಂತಿದೆ. ಗುಟ್ಕಾ ಮತ್ತು ಪಾನ್ ಮಸಾಲಗಳಿಗೆ ಮಾದಕ ಅಥವಾ ನಿಷೇಧಿತ ರಾಸಾಯನಿಕಗಳನ್ನು ಬೆರೆಸಿರುವುದು ಕಂಡುಬಂದರೆ ಸರ್ಕಾರ ಕ್ರಮ ಕೈಗೊಳ್ಳಬಹುದು. ಆದರೆ, ಕ್ರಮ ಕೈಗೊಂಡಿದ್ದು ಇಲ್ಲಿಯವರೆಗೂ ಕಂಡುಬಂದಿಲ್ಲ.

ಇದನ್ನು ಓದಿದ್ದೀರಾ? ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಬಿಜೆಪಿ ಭಂಡರು

ಹಾಗೆಯೇ ಗುಟ್ಕಾ-ಪಾನ್ ಮಸಾಲದ ಮೇಲೆ ಕೇವಲ ಕ್ರಮ ಕೈಗೊಳ್ಳುವುದು ಹಾಗೂ ನಿಷೇಧ ಹೇರುವುದು ಸಾಕಾಗುವುದಿಲ್ಲ. ಪರಿಣಾಮಕಾರಿ ಕಾನೂನು ಜಾರಿ, ವ್ಯಸನಮುಕ್ತ ಕಾರ್ಯಕ್ರಮಗಳು, ಸಾರ್ವಜನಿಕ ಜಾಗೃತಿ, ಅಪ್ರಾಪ್ತರ ರಕ್ಷಣೆ ಮತ್ತು ಅಕ್ರಮ ವ್ಯಾಪಾರದ ನಿಯಂತ್ರಣ ಮೊದಲು ಆಗಬೇಕು. ಶಾಲೆಗಳು, ಮಾಧ್ಯಮಗಳು ಮತ್ತು ಆರೋಗ್ಯ ಇಲಾಖೆಯ ಮೂಲಕ ನಿರಂತರ ಅರಿವು ಮೂಡಿಸಬೇಕು. ಗಡಿ ಪ್ರದೇಶಗಳು ಮತ್ತು ಉತ್ಪಾದನಾ ಘಟಕಗಳ ಮೇಲೆ ಪರಿಣಾಮಕಾರಿ ನಿಗಾ ಇರಬೇಕು. ಸಾರ್ವಜನಿಕ ಆರೋಗ್ಯ, ಕುಟುಂಬದ ಆರ್ಥಿಕ ಸ್ಥಿತಿ, ಯುವಜನರ ಭವಿಷ್ಯ ಮತ್ತು ಸಾರ್ವಜನಿಕ ಸ್ವಚ್ಛತೆಯ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುವುದರಿಂದ ಇದನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಬೇಕು. ಇವೆಲ್ಲವನ್ನು ಅಳವಡಿಸಿಕೊಂಡ ಕಾನೂನು ಜಾರಿಗೆ ತರುವುದರಿಂದ ಮಾತ್ರ ಯಶಸ್ಸು ಕಾಣಬಹುದಾಗಿದೆ.  

ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ, ‘ಗುಟ್ಕಾ-ಪಾನ್ ಮಸಾಲದಲ್ಲಿ ಅಮಲಿನ ಅಂಶ ಪತ್ತೆಯಾದ್ರೆ, ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಿಮ್ಮಿಂದ ಸರ್ಕಾರಕ್ಕೆ ಹೆಚ್ಚೆಂದರೆ 100 ಕೋಟಿ ಆದಾಯ ಬರಬಹುದು. ಅದು ಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿರುವುದು, ಮೇಲ್ನೋಟಕ್ಕೆ ಖಡಕ್ ಹೇಳಿಕೆಯಂತೆ ಕಂಡರೂ, ಸರ್ಕಾರಕ್ಕೆ ಸಿಗುವ ಆದಾಯ ಕಳೆದುಕೊಳ್ಳಲು ತಯಾರಿದ್ದಾರೆಯೇ ಎಂಬ ಪ್ರಶ್ನೆಯನ್ನು; ಗುಟ್ಕಾ ಮತ್ತು ಪಾನ್ ಮಸಾಲ ಕಂಪನಿಗಳ ಮಾಲೀಕರಿಗೆ ಬೆದರಿಕೆಯಂತೆ ಕಾಣಬಹುದೆಂಬ ಅನುಮಾನವನ್ನು ಹುಟ್ಟುಹಾಕಲಿದೆ. ಇದೆಲ್ಲದಕ್ಕೂ ಉತ್ತರ… ಮುಂದಿನ ದಿನಗಳೇ ಹೇಳಬಲ್ಲವು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...