ಮೈಸೂರಿನಲ್ಲಿ ‘SIR’ ಫಾರಂ-7 ದುರ್ಬಳಕೆ ಆರೋಪ: ಮೂವರ ವಿರುದ್ಧ FIR

Date:

ಮೈಸೂರಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ 'ಫಾರಂ-7' ದುರ್ಬಳಕೆ ಮಾಡಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಪದಾಧಿಕಾರಿ ಸೇರಿದಂತೆ ಮೂವರ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯೊಂದಿಗೆ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ, ಮಾಜಿ ಕಾರ್ಪೋರೇಟರ್ ಸೈಯದ್ ಹಸರತ್ ಉಲ್ಲಾ ನೀಡಿದ ದೂರಿನ ಆಧಾರದ ಮೇಲೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಅಧಿಕೃತ ಪೊಲೀಸ್ FIR ಪ್ರಕಾರ, ಕ್ರೈಂ ನಂ.220/2026, ದಿನಾಂಕ 1-10-2026ರಂದು ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 318(4), 336(3), 336(4), 353, 192, 196, 61(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಆಗ್ನೇಯ ಪದವೀಧರ ಕ್ಷೇತ್ರ: ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ!

ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕಾವು ಪಡೆದುಕೊಂಡಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ನಿಂದ ಶಶಿ ಹುಲಿಕುಂಟೆಮಠ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ...

ಬಿಜೆಪಿ ಪದಾಧಿಕಾರಿ ಸೇರಿದಂತೆ ಮೂವರು ಆರೋಪಿಗಳು

  1. ಹರೀಶ್ ಕುಮಾರ್ ಸಿ. (A1)-FIRನಲ್ಲಿ ಆರೋಪಿ ಎಂದು ನಮೂದಿಸಲಾಗಿದೆ.
  2. ರಾಘವೇಂದ್ರ ಎಂ. (A2)-FIRನಲ್ಲಿ ಆರೋಪಿ ಎಂದು ನಮೂದಿಸಲಾಗಿದೆ.
  3. ಅನಿಲ್ ಥಾಮಸ್ (A3)-FIRನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂದು ದೂರುದಾರರು ಉಲ್ಲೇಖಿಸಿರುವ ವ್ಯಕ್ತಿ.
  4. ಇತರೆ ಆರೋಪಿಗಳು (A4)-FIRನಲ್ಲಿ ‘Others’ ಎಂದು ನಮೂದಿಸಲಾಗಿದೆ.

39 ವರ್ಷಗಳಿಂದ ಅದೇ ವಿಳಾಸದಲ್ಲಿ ಮತದಾನ: ದೂರುದಾರರ ಆರೋಪ

ಈದಿನ.ಕಾಮ್ ಜೊತೆ ಮಾತನಾಡಿದ ಮಾಜಿ ಕಾರ್ಪೋರೇಟರ್ ಸೈಯ್ಯದ್ ಹಸರತ್ ಉಲ್ಲಾ, “ನಾನು ಹುಟ್ಟಿ ಬೆಳೆದಿರುವುದು ಎನ್.ಆರ್. ಮೊಹಲ್ಲಾದಲ್ಲಿ. ಹಲವು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇನೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರು ಬಾರಿ ಕಾರ್ಪೊರೇಟರ್ ಆಗಿ ಜನರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಇಂತಹ ನನ್ನ ಕುಟುಂಬದ ಸದಸ್ಯರು ಸೇರಿದಂತೆ 28 ಮಂದಿ ಮತದಾರರ ವಿರುದ್ಧ ಫಾರಂ-7 ಸಲ್ಲಿಸಿ, ಸುಳ್ಳು ಮಾಹಿತಿಯನ್ನು ನಮೂದಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ಸೈಯ್ಯದ್ ಹಸರತ್ ಉಲ್ಲಾ ಆರೋಪಿಸಿದ್ದಾರೆ. ತಮ್ಮ ವಾರ್ಡ್‌ನಲ್ಲಿ 12 ಸಾವಿರಕ್ಕೂ ಅಧಿಕ ಮತದಾರರಿದ್ದು, ಅವರಲ್ಲಿ ಸರಿಸುಮಾರು 4 ಸಾವಿರ ಮುಸ್ಲಿಂ ಮತದಾರರು ಹಾಗೂ 8 ಸಾವಿರಕ್ಕೂ ಅಧಿಕ ಇತರ ಸಮುದಾಯಗಳ ಮತದಾರರಿದ್ದಾರೆ ಎಂದು ವಿವರಿಸಿದರು.

“ಇದೇ ಪ್ರದೇಶದಿಂದ ನಾನು ಮೂರು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದೇನೆ. ನಾನು ಹಾಗೂ ನನ್ನ ಕುಟುಂಬದವರು ಇಲ್ಲಿಯೇ ವಾಸಿಸುತ್ತಿದ್ದೇವೆ. ಆದರೂ ನಮ್ಮ ವಿರುದ್ಧ ಫಾರಂ-7 ಅರ್ಜಿಗಳನ್ನು ಸಲ್ಲಿಸಿ, ನಾವು ಇಲ್ಲಿ ವಾಸಿಸುತ್ತಿಲ್ಲ ಎಂಬ ರೀತಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ FIR ಕೂಡ ದಾಖಲಾಗಿದೆ” ಎಂದು ಹೇಳಿದರು.

SIR ಪ್ರಕ್ರಿಯೆಯಲ್ಲಿ ಫಾರಂ-7 ಬಳಕೆಯ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿವೆ ಎಂದು ಹೇಳಿದ ಅವರು, “ಮುಸ್ಲಿಂ ಸಮುದಾಯದ ಅರ್ಹ ಮತದಾರರನ್ನು ಗುರಿಯಾಗಿಸಿಕೊಂಡು ಫಾರಂ-7 ಮೂಲಕ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ರಾಜ್ಯದ ವಿವಿಧೆಡೆ ಕೇಳಿಬರುತ್ತಿವೆ. ನಮ್ಮ ಪ್ರಕರಣದ ಮೂಲಕವೂ ಇಂತಹ ಆರೋಪಗಳ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ” ಎಂದರು.

“ಇದು ಕೇವಲ ನನ್ನ ಅಥವಾ ನನ್ನ ಕುಟುಂಬದ ವಿಚಾರವಲ್ಲ. ಜನಪ್ರತಿನಿಧಿಯಾಗಿ, ಹಲವು ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ನನಗೆ ಈ ರೀತಿಯ ಸಮಸ್ಯೆ ಎದುರಾಗಿದ್ದರೆ, ಮತದಾರರ ಪಟ್ಟಿಯ ಪ್ರಕ್ರಿಯೆಗಳ ಬಗ್ಗೆ ಅರಿವು ಕಡಿಮೆ ಇರುವ ಸಾಮಾನ್ಯ ಜನರು, ವಿಶೇಷವಾಗಿ ಕಾನೂನು ಮತ್ತು ಆನ್‌ಲೈನ್ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲದವರು ಯಾವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದನ್ನು ಊಹಿಸಬಹುದು” ಎಂದು ಅವರು ಪ್ರಶ್ನಿಸಿದರು. ಫಾರಂ-7 ಅರ್ಜಿಗಳಲ್ಲಿನ ಮಾಹಿತಿಯ ಸತ್ಯಾಸತ್ಯತೆ, ಅರ್ಜಿಗಳನ್ನು ಸಲ್ಲಿಸಿದವರ ಉದ್ದೇಶ, ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ಹಾಗೂ ಸಂಬಂಧಿಸಿದ ಮತದಾರರ ನೈಜ ವಾಸಸ್ಥಳದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

“ನಮ್ಮ ವಿರುದ್ಧ ಸಲ್ಲಿಸಿರುವ ಫಾರಂ-7 ಅರ್ಜಿಗಳ ಕುರಿತು ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ರಾಜ್ಯದ ವಿವಿಧೆಡೆ ಇಂತಹ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಸೈಯ್ಯದ್ ಹಸರತ್ ಉಲ್ಲಾ ಮನವಿ ಮಾಡಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷನಿಂದ ಸುಳ್ಳು ಅರ್ಜಿ!

ದೂರಿನ ಪ್ರಕಾರ, ಹರೀಶ್ ಕುಮಾರ್ ಸಿ. ಅವರು ದೂರುದಾರರ ಕುಟುಂಬ ಸೇರಿದಂತೆ 28 ಮತದಾರರ ವಿರುದ್ಧ, ರಾಘವೇಂದ್ರ ಎಂ. ಅವರು 27 ಮತದಾರರ ವಿರುದ್ಧ ಹಾಗೂ ಅನಿಲ್ ಥಾಮಸ್ ಅವರು 36 ಮತದಾರರ ವಿರುದ್ಧ Form-7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. FIRನಲ್ಲಿ ಅನಿಲ್ ಥಾಮಸ್ ಅವರನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂದು ದೂರುದಾರರು ಉಲ್ಲೇಖಿಸಿದ್ದಾರೆ. ಈ ಅರ್ಜಿಗಳಲ್ಲಿ ಮತದಾರರು ಸಂಬಂಧಿಸಿದ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂಬಂತಹ ಕಾರಣಗಳನ್ನು ನೀಡಲಾಗಿದ್ದು, ಅವು ಸುಳ್ಳು ಮಾಹಿತಿಯನ್ನು ಆಧರಿಸಿವೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿದೆ.

SIRನಲ್ಲಿ Form-7ರ ಉದ್ದೇಶವೇನು?

ಚುನಾವಣಾ ಆಯೋಗದ ಅಧಿಕೃತ Form-7 ಪ್ರಕಾರ, ಈಗಿರುವ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ಅಳಿಸಲು ಅಥವಾ ನಿರ್ದಿಷ್ಟ ವ್ಯಕ್ತಿಯ ಹೆಸರಿನ ಸೇರ್ಪಡೆಗೆ ಆಕ್ಷೇಪ ಸಲ್ಲಿಸಲು Form-7 ಬಳಸಲಾಗುತ್ತದೆ. ಮರಣ, ಅಪ್ರಾಪ್ತ ವಯಸ್ಸು, ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, ಈಗಾಗಲೇ ಮತ್ತೊಂದು ಕಡೆ ನೋಂದಣಿಯಾಗಿರುವುದು ಅಥವಾ ಭಾರತೀಯ ನಾಗರಿಕರಲ್ಲದಿರುವುದು ಮುಂತಾದ ಕಾರಣಗಳನ್ನು ಸೂಚಿಸಬಹುದು. Form-7ನಲ್ಲಿ ಅರ್ಜಿದಾರರು ನೀಡುವ ವಿವರಗಳು ತಮ್ಮ ತಿಳುವಳಿಕೆ ಮತ್ತು ನಂಬಿಕೆಯ ಮಟ್ಟಿಗೆ ಸತ್ಯವೆಂದು ಘೋಷಿಸಬೇಕು. ಸುಳ್ಳು ಘೋಷಣೆ ನೀಡುವುದು Representation of the People Act, 1950ರ ಕಲಂ 31ರಡಿ ಶಿಕ್ಷಾರ್ಹವಾಗಬಹುದು ಎಂದು ಚುನಾವಣಾ ಆಯೋಗದ Form-7ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಷ್ಟೇ ಅಲ್ಲ, ಚುನಾವಣಾ ಆಯೋಗದ Electoral Rolls Manualನಲ್ಲಿ bulk applications ಸ್ವೀಕರಿಸಬಾರದು; ವೈಯಕ್ತಿಕ ಅರ್ಜಿಗಳನ್ನೇ ಸ್ವೀಕರಿಸಬೇಕು ಎಂಬ ಮಾರ್ಗಸೂಚಿಯೂ ಇದೆ. ಹೀಗಾಗಿ, ವೈಯಕ್ತಿಕ ಮತದಾರರ ವಿರುದ್ಧ ಒಂದೇ ರೀತಿಯ ಅಥವಾ ದೊಡ್ಡ ಸಂಖ್ಯೆಯ Form-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಆರೋಪ ಬಂದಲ್ಲಿ, ಅರ್ಜಿದಾರರು ನೀಡಿರುವ ಕಾರಣಗಳು, ಅವರ ಅರ್ಹತೆ ಮತ್ತು ಘೋಷಣೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಪ್ರಮುಖವಾಗುತ್ತದೆ.

ಪೊಲೀಸರು FIRನಲ್ಲಿ ಕೆಳಗಿನ BNS ಸೆಕ್ಷನ್‌ಗಳನ್ನು ದಾಖಲಿಸಿದ್ದಾರೆ:

ಕಲಂ 318(4) – ವಂಚನೆ ಮಾಡಿ ಆಸ್ತಿ/ಮೌಲ್ಯಯುತ ಭದ್ರತೆ ಮುಂತಾದವುಗಳನ್ನು ಹಸ್ತಾಂತರಿಸುವಂತೆ ಪ್ರೇರೇಪಿಸುವ ರೀತಿಯ cheatingಗೆ ಸಂಬಂಧಿಸಿದ provision.

ಕಲಂ 336(3) – ವಂಚನೆ ಉದ್ದೇಶಕ್ಕಾಗಿ forgery ಮಾಡಿರುವ ಆರೋಪಕ್ಕೆ ಸಂಬಂಧಿಸಿದ provision; ಇದಕ್ಕೆ ಗರಿಷ್ಠ ಏಳು ವರ್ಷ ಜೈಲು ಮತ್ತು ದಂಡದ provision ಇದೆ.

ಕಲಂ 336(4) – ವ್ಯಕ್ತಿಯ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ಅಥವಾ ಅಂತಹ ಬಳಕೆಯ ಸಾಧ್ಯತೆ ತಿಳಿದಿದ್ದರೂ forgery ಮಾಡುವುದು.

ಕಲಂ 353 – ಸಾರ್ವಜನಿಕ ಗೊಂದಲ/ಭಯ/ಅಶಾಂತಿ ಉಂಟುಮಾಡುವ ಸಾಧ್ಯತೆಯಿರುವ ಸುಳ್ಳು ಮಾಹಿತಿ, ವದಂತಿ ಅಥವಾ ವರದಿಯನ್ನು ಮಾಡುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ provision.

ಕಲಂ 192 – ಗಲಭೆ ಅಥವಾ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ರೀತಿಯ ಪ್ರಚೋದನೆಗೆ ಸಂಬಂಧಿಸಿದ provision.

ಕಲಂ 196 – ಧರ್ಮ, ಜಾತಿ, ಭಾಷೆ, ಸಮುದಾಯ ಮುಂತಾದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ, ವೈಷಮ್ಯ ಅಥವಾ ಅಸಮಾಧಾನ ಉಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದ provision.

ಕಲಂ 61(2) – ಅಪರಾಧ ಸಂಚಿಗೆ ಸಂಬಂಧಿಸಿದ provision.

ಕಲಂ 3(5) – ಹಲವು ವ್ಯಕ್ತಿಗಳು ಸಾಮಾನ್ಯ ಉದ್ದೇಶದಿಂದ ಕೃತ್ಯ ಎಸಗಿದಾಗ ಅವರ ಹೊಣೆಗಾರಿಕೆಗೆ ಸಂಬಂಧಿಸಿದ ಸಾಮಾನ್ಯ ಕಾನೂನು provision. ಇದು ಸ್ವತಂತ್ರ ಅಪರಾಧವಲ್ಲ; ಇತರ ಅಪರಾಧಗಳೊಂದಿಗೆ ಅನ್ವಯಿಸುವ liability provision ಆಗಿದೆ.

ಮತದಾನದ ಹಕ್ಕು ಅಳಿಸುವ ಪ್ರಯತ್ನವೇ?

ದೂರುದಾರರು, ತಮ್ಮ ಮತ್ತು ಕುಟುಂಬದ ಮತಗಳನ್ನು ಮಾತ್ರವಲ್ಲದೆ ಇತರೆ ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನೂ SIR ಪ್ರಕ್ರಿಯೆಯಲ್ಲಿ ಅಳಿಸುವ ಉದ್ದೇಶದಿಂದ Form-7 ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಸಂವಿಧಾನ ನೀಡಿರುವ ಮತದಾನದ ಹಕ್ಕಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಗೊಂದಲ ಹಾಗೂ ಅಶಾಂತಿ ಸೃಷ್ಟಿಸುವ ಉದ್ದೇಶವಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

SIR ಕುರಿತು ರಾಜ್ಯ ಮಟ್ಟದಲ್ಲೂ Form-7 ಪ್ರಶ್ನೆ

ಮೈಸೂರಿನ ಈ FIR ದಾಖಲಾಗಿರುವ ಸಂದರ್ಭದಲ್ಲೇ ಕರ್ನಾಟಕದ SIR ಪ್ರಕ್ರಿಯೆಯಲ್ಲಿ Form-7 ಅರ್ಜಿಗಳ ದೊಡ್ಡ ಪ್ರಮಾಣದ ಸಲ್ಲಿಕೆಗೆ ಸಂಬಂಧಿಸಿದ ವಿವಾದ ರಾಜ್ಯ ಮಟ್ಟದಲ್ಲೂ ಚರ್ಚೆಗೆ ಬಂದಿದೆ. ಅಕ್ಟೋಬರ್ 1ರಂದು ಚುನಾವಣಾ ಆಯೋಗವು ಕರ್ನಾಟಕದ ಅಧಿಕಾರಿಗಳಿಗೆ bulk Form-7 ಅರ್ಜಿಗಳು ಮತ್ತು ಅವುಗಳಲ್ಲಿ ಕೆಲವು genuine ಅಲ್ಲ ಎಂಬ ಆರೋಪಗಳು ಗಮನಕ್ಕೆ ಬಂದಿವೆ ಎಂದು ತಿಳಿಸಿ, ಸುಳ್ಳು ಹೇಳಿಕೆ ಅಥವಾ ಘೋಷಣೆ ನೀಡಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅಂತಹ ಕ್ರಮಕ್ಕೂ ಮೊದಲು Registration of Electors Rules, 1960ರ Rule 20ರಡಿ ವಿಚಾರಣೆ ನಡೆಯಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗದ ಅಧಿಕೃತ ದಾಖಲೆಗಳಲ್ಲಿಯೂ SIR-2026 ಸಂದರ್ಭದಲ್ಲಿ Form-7 ಮೂಲಕ ಮತದಾರರ ಹೆಸರಿನ deletion/objection ಸಲ್ಲಿಸುವ ವ್ಯವಸ್ಥೆ ಮುಂದುವರಿದಿರುವುದು ಸ್ಪಷ್ಟವಾಗಿದೆ.

SIR ಪ್ರಕ್ರಿಯೆಯಲ್ಲಿ ಎಲ್ಲಿ ಪ್ರಶ್ನೆ ಎದ್ದಿದೆ?

ಈ ಪ್ರಕರಣದಿಂದ ಮುಖ್ಯವಾಗಿ ಕೆಲವು ಪ್ರಕ್ರಿಯಾತ್ಮಕ ಪ್ರಶ್ನೆಗಳು ಎದುರಾಗುತ್ತವೆ:

  1. ಮತದಾರ ನಿಜವಾಗಿಯೂ ಆ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂಬುದನ್ನು Form-7 ಸಲ್ಲಿಸುವ ಮೊದಲು ಹೇಗೆ ಪರಿಶೀಲಿಸಲಾಯಿತು?
  2. ಒಂದೇ ವ್ಯಕ್ತಿ ದೊಡ್ಡ ಸಂಖ್ಯೆಯ ಮತದಾರರ ವಿರುದ್ಧ Form-7 ಸಲ್ಲಿಸಿದ್ದರೆ, ಪ್ರತಿಯೊಂದು ಅರ್ಜಿಯೂ ಸ್ವತಂತ್ರವಾಗಿ ಪರಿಶೀಲನೆಯಾಗಿದೆಯೇ?
  3. ಅರ್ಜಿಗಳಲ್ಲಿರುವ ಕಾರಣಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಅರ್ಜಿದಾರರು ಒದಗಿಸಿದ್ದಾರೆಯೇ?
  4. Form-7ನಲ್ಲಿ ನೀಡಿದ ಘೋಷಣೆಗಳು ನಿಜವೇ ಎಂಬುದನ್ನು ERO/BLO ಮಟ್ಟದಲ್ಲಿ ಹೇಗೆ ಪರಿಶೀಲಿಸಲಾಗಿದೆ?
  5. ಮತದಾರರು ದೀರ್ಘಕಾಲದಿಂದ ಅದೇ ವಿಳಾಸದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ ಸಂದರ್ಭಗಳಲ್ಲಿ, ಅವರ ವಾಸಸ್ಥಳದ ಕುರಿತು ಸ್ಥಳ ಪರಿಶೀಲನೆ ನಡೆದಿದೆಯೇ?
  6. ಒಂದೇ ಮಾದರಿಯ ವಿವರಗಳು ಅಥವಾ ದೊಡ್ಡ ಪ್ರಮಾಣದ ಅರ್ಜಿಗಳು ಕಂಡುಬಂದರೆ ಅವುಗಳ ಮೂಲ ಮತ್ತು ಸಲ್ಲಿಕೆ ವಿಧಾನವನ್ನು ಪರಿಶೀಲಿಸಲಾಗಿದೆಯೇ?

ಇವುಗಳಲ್ಲಿ ಯಾವುದಾದರೂ ಅಕ್ರಮ ನಡೆದಿದೆಯೇ ಎಂಬುದನ್ನು ಪೊಲೀಸ್ ತನಿಖೆ ಹಾಗೂ ಚುನಾವಣಾ ಅಧಿಕಾರಿಗಳ ಪರಿಶೀಲನೆಯೇ ನಿರ್ಧರಿಸಬೇಕಾಗಿದೆ.

FIR ದಾಖಲಾಗಿ ತನಿಖೆ ಆರಂಭ

FIRನ 11ನೇ ಅಂಶದಲ್ಲಿ “Action Taken: Investigation” ಎಂದು ನಮೂದಿಸಲಾಗಿದೆ. FIR ಅನ್ನು ದೂರುದಾರರಿಗೆ ಓದಿ ವಿವರಿಸಿ, ಅದರ ಪ್ರತಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ದಾಖಲಿಸಲಾಗಿದೆ. ಪ್ರಕರಣವನ್ನು ನರಸಿಂಹರಾಜ ಪೊಲೀಸ್ ಠಾಣೆ ದಾಖಲಿಸಿದ್ದು, FIR ಪ್ರಕಾರ ಘಟನೆ ನಡೆದ ಸ್ಥಳ ಮೈಸೂರಿನ ಎನ್.ಆರ್. ಮೊಹಲ್ಲಾದ 9ನೇ ಕ್ರಾಸ್. ಠಾಣೆಯಿಂದ ಸುಮಾರು 1.5 ಕಿ.ಮೀ. ದಕ್ಷಿಣದಲ್ಲಿರುವ ಪ್ರದೇಶವೆಂದು ದಾಖಲಿಸಲಾಗಿದೆ. ಪ್ರಕರಣದ FIR ನ್ಯಾಯಾಲಯಕ್ಕೆ 1-10-2026ರ ಬೆಳಗ್ಗೆ 8.15ಕ್ಕೆ ಕಳುಹಿಸಲಾಗಿದೆ.

ಈಗ ತನಿಖೆಯಲ್ಲಿ ಪ್ರಮುಖವಾಗುವ ದಾಖಲೆಗಳು:

ಈ ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು Form-7ಗಳ ಮೂಲ ಪ್ರತಿಗಳು, ಅರ್ಜಿದಾರರ EPIC ವಿವರಗಳು, ಮೊಬೈಲ್ ಸಂಖ್ಯೆಗಳು, ಸಲ್ಲಿಕೆಯ ದಿನಾಂಕ ಮತ್ತು ಸಮಯ, ECI ಪೋರ್ಟಲ್‌ನ submission records, ಅರ್ಜಿಗಳಲ್ಲಿನ ಘೋಷಣೆಗಳು, BLO/ERO ಪರಿಶೀಲನಾ ದಾಖಲೆಗಳು ಹಾಗೂ ಸಂಬಂಧಿಸಿದ ಮತದಾರರ ನೈಜ ವಾಸಸ್ಥಳದ ದಾಖಲೆಗಳು ಪ್ರಮುಖ ಸಾಕ್ಷ್ಯಗಳಾಗಬಹುದು. ಅಂತೆಯೇ, ಆರೋಪಿಗಳು ಸಲ್ಲಿಸಿದ್ದಾರೆ ಎನ್ನಲಾದ 28, 27 ಮತ್ತು 36 Form-7 ಅರ್ಜಿಗಳನ್ನೂ ಪ್ರತ್ಯೇಕವಾಗಿ ಪರಿಶೀಲಿಸುವ ಅಗತ್ಯವಿದೆ.

ಈ ವಿಶೇಷ ವರದಿ ಓದಿದ್ದೀರಾ? SIR: ಕೊಡಗಿನ ಬ್ಯಾಡಗೊಟ್ಟದಲ್ಲಿ 66 ಮುಸ್ಲಿಂ ಮತಗಳ ಅಳಿಸುವಿಕೆಗೆ Form-7 ಅರ್ಜಿ

ಒಟ್ಟಿನಲ್ಲಿ, ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ FIR, SIR ಸಂದರ್ಭದಲ್ಲಿ Form-7 ಅರ್ಜಿಗಳ ಬಳಕೆ, ಅವುಗಳ ಪರಿಶೀಲನಾ ವ್ಯವಸ್ಥೆ ಮತ್ತು ಮತದಾರರ ಹೆಸರನ್ನು ಅಳಿಸುವ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತು ಮಹತ್ವದ ತನಿಖಾ ಪ್ರಶ್ನೆಗಳನ್ನು ಮುಂದಿಟ್ಟಿದೆ. ಆದರೆ, FIRನಲ್ಲಿ ದಾಖಲಾಗಿರುವ ಆರೋಪಗಳು ಇನ್ನೂ ತನಿಖೆಯಲ್ಲಿರುವುದರಿಂದ, ಆರೋಪಿಗಳ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಅವುಗಳನ್ನು ಆರೋಪಗಳೆಂದೇ ಪರಿಗಣಿಸಬೇಕಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸಿಇಒ ಹೇಮಂತ್‌ಗೆ ಬೀಳ್ಕೊಡುಗೆ; ನೂತನ ಸಿಇಒ ರಿಷಿ ಆನಂದ್‌ ಸ್ವಾಗತಿಸಿದ ಜಿ.ಪಂ

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ನಿಕಟಪೂರ್ವ...

ಅಭಿಮಾನಿಗಳ ಆಸೆಯಂತೆ ದಸರೆಗೆ ಮರಳಿದ ಅಭಿಮನ್ಯು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು...

ದೆಹಲಿಯಲ್ಲಿ ಪತ್ರಕರ್ತೆಯರ ಮೇಲೆ ಪೊಲೀಸ್ ದೌರ್ಜನ್ಯ: ಕ್ರಮಕ್ಕೆ ಶಿವಮೊಗ್ಗ ಕಾನಿಪಸ ಆಗ್ರಹ

ದೆಹಲಿಯ ಜಂತರ್‌ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ...

ತೀರ್ಥಹಳ್ಳಿ | ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? ತಹಶೀಲ್ದಾರ್‌ಗೆ ಪತ್ರ ಬರೆದಿದ್ದ ಬಿಜೆಪಿ ಮುಖಂಡ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...