ತೀರ್ಥಹಳ್ಳಿ | ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? ತಹಶೀಲ್ದಾರ್‌ಗೆ ಪತ್ರ ಬರೆದಿದ್ದ ಬಿಜೆಪಿ ಮುಖಂಡ

Date:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತೀರ್ಥಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಸುರಳಿ ಬಾಳೆಬೈಲು ಗ್ರಾಮದ ಮತಗಟ್ಟೆ ಸಂಖ್ಯೆ 186ರ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಸಲ್ಲಿಸಿದ ದೂರು ಪತ್ರವನ್ನು ಆಧರಿಸಿ ಆಡಳಿತ ಯಂತ್ರ ಕ್ರಮ ಕೈಗೊಳ್ಳಲು ಮುಂದಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

- Advertisement -

ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸತೀಶ್ ಅವರು ತಾಲೂಕು ತಹಶೀಲ್ದಾರ್‌ಗೆ ಪತ್ರ ಬರೆದಿದ್ದು, “ಸುರಳಿ ಬಾಳೆಬೈಲು ಗ್ರಾಮದ ಮತಗಟ್ಟೆ 186ರಲ್ಲಿರುವ ಕರಡು ಮತದಾರರ ಪಟ್ಟಿಯಲ್ಲಿ ನಮೂದಾಗಿರುವ 81 ಮತದಾರರು ಗ್ರಾಮದಲ್ಲಿ ವಾಸವಾಗಿಲ್ಲ. ಬೇರೆ ಬೇರೆ ವಾರ್ಡ್‌/ಊರುಗಳಿಗೆ ಶಿಫ್ಟ್‌ ಆಗಿದ್ದಾರೆ. ಈ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯ ಸೂಕ್ತ ಪರಿಶೀಲನೆ ನಡೆಸಿ, ವಾಸವಿಲ್ಲದ ಮತದಾರರ ಹೆಸರುಗಳನ್ನು ಅಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಆದರೆ, ಅವರು ಹೆಸರಿಸಿರುವ ಈ 81 ಮತದಾರರಲ್ಲಿ ಬರೋಬ್ಬರಿ 78 ಮಂದಿ ಮುಸ್ಲಿಂ ಸಮುದಾಯದ ಮತದಾರರೇ ಆಗಿದ್ದಾರೆ. ತೀರ್ಥಹಳ್ಳಿಯಲ್ಲಿ ಬಿಜೆಪಿ ವಿರೋಧಿ ಮತದಾರರ ಹೆಸರುಗಳನ್ನು ಅಳಿಸಲು ಈ ಸಂಚು ನಡೆದಿದೆ ಎಂದು ಆರೋಪಿಸಲಾಗಿದೆ.

WhatsApp Image 2026 10 05 at 1.13.23 PM

ಗಮನಾರ್ಹವೆಂದರೆ, ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಮತದಾರರ ಪಟ್ಟಿಯಿಂದ ಯಾರದ್ದೇ ಹೆಸರನ್ನು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ನಿಗದಿತ ‘ಫಾರ್ಮ್-7’ ಮೂಲಕವೇ ಅಧಿಕೃತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ. ಅದನ್ನು ಹೊರತುಪಡಿಸಿ, ಕೇವಲ ಬಿಳಿ ಹಾಳೆಯ ಮೇಲೆ ಸಾಮಾನ್ಯ ಪತ್ರ ಬರೆದು ಸಂಪೂರ್ಣ ಪಟ್ಟಿಯ ಪರಿಶೀಲನೆಗೆ ಮತ್ತು ಹೆಸರುಗಳ ಅಳಿಸುವಿಕೆಗೆ ಒತ್ತಾಯಿಸುವುದು ಕಾನೂನುಬಾಹಿರ.

ವಿಶೇಷವೆಂದರೆ, ಈ ನಿಯಮಬಾಹಿರ ಮನವಿ ಪತ್ರವನ್ನು ಸ್ವೀಕರಿಸಿದ ತೀರ್ಥಹಳ್ಳಿ ತಹಶೀಲ್ದಾರ್ ರಂಜಿತ್‌ ಅವರು, ಅದರ ಆಧಾರದ ಮೇಲೆಯೇ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರಿಗೆ ಪತ್ರ ಬರೆದು ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ. ಬಿಜೆಪಿ ಮುಖಂಡ ಸತೀಶ್ ನೀಡಿದ 81 ಜನರ ಪಟ್ಟಿಯನ್ನು ಲಗತ್ತಿಸಿ, ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶದ ವರದಿಯನ್ನು ತುರ್ತಾಗಿ ನೀಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಇದು ಚುನಾವಣಾ ಪ್ರಕ್ರಿಯೆಯಲ್ಲಿ ಕಾನೂನು ಚೌಕಟ್ಟನ್ನು ಮೀರಿದ ಕ್ರಮವೆಂದು ತಜ್ಞರು ಹೇಳಿದ್ದಾರೆ.

WhatsApp Image 2026 10 05 at 1.13.23 PM 1

ಸ್ಥಳೀಯರ ಮಾಹಿತಿಯ ಪ್ರಕಾರ, ಬಿಜೆಪಿ ಮುಖಂಡ ಸತೀಶ್‌ ನೀಡಿದ ಪಟ್ಟಿಯಲ್ಲಿರುವ ಬಹುತೇಕ ಜನರು ನಿಜವಾಗಿಯೂ ಅದೇ ಗ್ರಾಮದ ಖಾಯಂ ನಿವಾಸಿಗಳಾಗಿದ್ದು, ಅರ್ಹ ಮತದಾರರಾಗಿದ್ದಾರೆ. ಆದರೂ ರಾಜಕೀಯ ದುರುದ್ದೇಶದಿಂದ ಅವರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿಹಾಕಲು ಯೋಜಿತ ಸಂಚು ರೂಪಿಸಲಾಗಿದೆ.

ನಿಯಮಗಳನ್ನು ಗಾಳಿಗೆ ತೂರಿ ಪತ್ರದ ಆಧಾರದಲ್ಲೇ ಮತದಾರರ ಹೆಸರು ಅಳಿಸುವಿಕೆಗೆ ತಹಶೀಲ್ದಾರ್ ಹಂತದಲ್ಲೇ ಪ್ರಕ್ರಿಯೆ ಆರಂಭವಾಗಿರುವುದು ಸಾರ್ವಜನಿಕರು ಮತ್ತು ವಿಪಕ್ಷಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಲೇಖನ ಓದಿದ್ದೀರಾ?: ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಈ ವಿಚಾರವಾಗಿ ಈದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ‘ಸೋಲಿಡಾರಿಟಿ ಯೂತ್ ಮೂವ್ಮೆಂಟ್’ ತೀರ್ಥಹಳ್ಳಿಯ ಮುಖಂಡ ಫಾರೂಕ್ ತೀರ್ಥಹಳ್ಳಿ, “ಬಿಜೆಪಿ ಮುಖಂಡ ಸತೀಶ್‌ ಸಲ್ಲಿಸಿರುವ ಪಟ್ಟಿಯಲ್ಲಿರುವವರು ಗ್ರಾಮದಲ್ಲೇ ವಾಸಿಸುತ್ತಿರುವ ಅರ್ಹ ಮತದಾರರಾಗಿದ್ದಾರೆ. ಯಾವುದೇ ಕಾರಣಕ್ಕೂ ಅರ್ಹ ನಾಗರಿಕರ ಹಕ್ಕು ಕಸಿಯಲು ಬಿಡುವುದಿಲ್ಲ. ಈ ಬಗ್ಗೆ ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳನ್ನು (ERO) ಭೇಟಿ ಮಾಡಿ ಚರ್ಚಿಸಲಾಗಿದೆ. ತಮ್ಮ ಬಳಿ ಇರುವ ಎನ್ಯುಮರೇಷನ್‌ ಫಾರ್ಮ್‌ ಮತ್ತು ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಯಾವೊಬ್ಬ ಅರ್ಹ ಮತದಾರನ ಹೆಸರೂ ಪಟ್ಟಿಯಿಂದ ಅಳಿಸಿಹೋಗದಂತೆ ಎಚ್ಚರ ವಹಿಸುವುದಾಗಿ ಇಆರ್‌ಒಗಳು ಭರವಸೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಇನ್ನು, ಮತದಾರರ ಡಿಲೀಷನ್‌ಗೆ ಅರ್ಜಿ ಸಲ್ಲಿಸಿರುವ ಬಿಜೆಪಿ ಮುಖಂಡ ಸತೀಶ್ ಈದಿನ.ಕಾಮ್ ಜೊತೆ ಮಾತನಾಡಿದ್ದು, “ಅವರೆಲ್ಲರೂ ತಮ್ಮ ಮನೆಗಳನ್ನು ಮಾರಿ ಅಥವಾ ಬಾಡಿಗೆಗಿದ್ದವರು ಮನೆಯನ್ನು ಖಾಲಿ ಮಾಡಿ ಬೇರೆ ಊರುಗಳಿಗೆ ಅಥವಾ ಬೇರೆ ವಾರ್ಡ್‌ಗಳಿಗೆ ಹೋಗಿದ್ದಾರೆ. ಅವರು ತಮ್ಮ ಹಾಲಿ ನಿವಾಸ ಇರುವಲ್ಲಿಯೇ ಮತಪಟ್ಟಿಗೆ ನೋಂದಣಿ ಆಗಿರಬಹುದು ಎಂಬ ಸಂದೇಹವಿದೆ. ಅದ್ದರಿಂದ, ಫಾರ್ಮ್-7 ಸಲ್ಲಿಸಲು ನಿರ್ಧರಿಸಿದ್ದೆವು. ಆದರೆ, ವಿಲೇಜ್ ಅಕೌಂಟೆಂಟ್ ‘ಫಾರ್ಮ್-7 ಬೇಡ, ಅದನ್ನು ಸಲ್ಲಿಸಿದರೆ, ಅವರ ಹೆಸರುಗಳೇ ಡಿಲೀಟ್ ಆಗಿಬಿಡುತ್ತವೆ, ಸ್ಥಳಾಂತರ ಆಗಲ್ಲ. ಆದ್ದರಿಂದ, ಹಾಗೆಯೇ ಪತ್ರ ಬರೆಯಿರಿ. ಹಾಗೇನಾದರೂ ಅವರು ಸ್ಥಳಾಂತರಗೊಂಡಿದ್ದರೆ, ಅವರಿರುವ ಬೂತ್‌ನಲ್ಲಿ ಅವರ ಹೆಸರು ಇದೆಯೇ ಎಂದು ಪರಿಶೀಲಿಸಬಹುದು ಎಂಬುದಾಗಿ ಸಲಹೆ ನೀಡಿದರು. ಅದರಂತೆ, ತಹಶೀಲ್ದಾರ್‌ಗೆ ಮನವಿ ಕೊಟ್ಟಿದ್ದೇವೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಪತ್ರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಪಡೆಯಲು ತಹಶೀಲ್ದಾರ್ ರಂಜಿತ್ ಅವರನ್ನು ಸಂಪರ್ಕಿಸಲು ಈದಿನ.ಕಾಮ್ ಪ್ರಯತ್ನಿಸಿತು. ಆದರೆ, ಅವರು ಕರೆ ಉತ್ತರಿಸಿಲ್ಲ. ಅವರ ಪ್ರತಿಕ್ರಿಯೆ ಬಂದ ನಂತರ, ಸುದ್ದಿಯನ್ನು ಅಪ್ಡೇಟ್ ಮಾಡಲಾಗುವುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಲ್ಲಿ ನ್ಯುಮೋನಿಕ್ ಪ್ಲೇಗ್ ಭೀತಿ: ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿ ಮೇಲೆ ನಿಗಾ

ರಷ್ಯಾದ ಇರ್ಕುಟ್ಸ್ಕ್ (Irkutsk) ಪ್ರದೇಶದಲ್ಲಿ ಶಂಕಿತ ನ್ಯುಮೋನಿಕ್ ಪ್ಲೇಗ್‌ಗೆ ಲ್ಯಾಬ್ ಉದ್ಯೋಗಿಯೊಬ್ಬರು...

ದೀಪ್ಕೆ, ಇತರೆ ಸಿಜೆಪಿ ನಾಯಕರ ಬಂಧನಕ್ಕೆ ಸರ್ಕಾರ ಸಂಚು: ಜೈಲಿಗೆ ಹೋಗಲು ಹೆದರಲ್ಲ ಎಂದ ಸೌರವ್ ದಾಸ್

ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೂ...

ಕುಮಟಾ | ಖೋ-ಖೋದಲ್ಲಿ ಸತತ 5ನೇ ಬಾರಿ ವಿಭಾಗ ಮಟ್ಟಕ್ಕೆ ಆಯ್ಕೆ; 3 ಕಿ.ಮೀ. ನಡಿಗೆಯಲ್ಲಿ ವಿನುತಾ ರಾಜ್ಯ ಮಟ್ಟಕ್ಕೆ

ಕುಮಟಾ: ಭಟ್ಕಳದಲ್ಲಿ ನಡೆದ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಕುಮಟಾ...

ರಾಜ್ಯದಲ್ಲಿ ಹೆಚ್ಚುತ್ತಿದೆ ಮಳೆ ಆರ್ಭಟ; 19 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಇಂದು...