ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಜಾಮಿಯಾ ಮಸೀದಿಯ ಮಹಾಸಭೆಯು ಅ.4ರಂದು ಜಾಮಿಯಾ ಮಸೀದಿ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಹಳೆಯ ಕಮಿಟಿಯನ್ನು ವಿಸರ್ಜಿಸಿ, ನೂತನ ಕಮಿಟಿಯನ್ನು ಸರ್ವಾನುಮತದಿಂದ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ತಾಜುದ್ದೀನ್ ಇಬ್ರಾಹಿಂ, ಉಪಾಧ್ಯಕ್ಷರಾಗಿ ಸಿಕಂದರ್ ಸಾಹೇಬ್, ಕಾರ್ಯದರ್ಶಿಯಾಗಿ ನಾಸೀರ್ ಖಾನ್ ಹಾಗೂ ಕೋಶಾಧಿಕಾರಿಯಾಗಿ ಮಹಮ್ಮದ್ ಶರಾಜ್ ಆಯ್ಕೆಯಾದರು.
ಸದಸ್ಯರಾಗಿ ಮುಕ್ತಾರ್ ಅಹಮದ್, ಇಮ್ರಾನ್, ಸಮೀರ್ ಖಾದರ್, ಅಫ್ತಾಬ್ ರಜಾಕ್, ರಿಯಾಜ್ ಹಂದಾಡಿ, ಅಕ್ಬರ್ ರಜಾಕ್ ಹಾಗೂ ಮಹಮ್ಮದ್ ಫರಾಜ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






