ಜಂತರ್ ಮಂತರ್ ಪ್ರವೇಶಿಸಲು ಯತ್ನ: ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ವಶಕ್ಕೆ

Date:

‘ಜಂತರ್ ಮಂತರ್’ ಅನ್ನು ಪ್ರತಿಭಟನಾ ತಾಣವಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ನಿರ್ಬಂಧಿತ ಪ್ರದೇಶದೊಳಗೆ ನುಗ್ಗಲು ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿಯ (CJP) ಮುಖ್ಯ ವಕ್ತಾರ ಸೌರವ್ ದಾಸ್, ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಹಾಗೂ ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಈ ನಡುವೆ, ತಮ್ಮ ಪಕ್ಷದ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಿಡಿದು ಜಂತರ್ ಮಂತರ್ ಒಳಗೆ ನುಗ್ಗುವಲ್ಲಿ ಯಶಸ್ವಿಯಾಗಿದ್ದರು, ತದನಂತರ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ಎಕ್ಸ್’ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

- Advertisement -

​ಪಿಟಿಐ ಸುದ್ದಿ ಸಂಸ್ಥೆಯ ಮೂಲಗಳ ಪ್ರಕಾರ, ಜಂತರ್ ಮಂತರ್‌ನತ್ತ ತೆರಳುತ್ತಿದ್ದಾಗ ಪೊಲೀಸರು ದಾಸ್ ಮತ್ತು ರಾಂಕಾ ಅವರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸೌರವ್ ದಾಸ್, “ನಾವು ಜಂತರ್ ಮಂತರ್ ಅನ್ನು ಮರಳಿ ಪಡೆದಿದ್ದೇವೆ! ನಾವು ಅದರೊಳಗೆ ಪ್ರವೇಶಿಸಿದ್ದು, ಈಗ ನಮ್ಮನ್ನು ವಶಕ್ಕೆ ಪಡೆಯಲಾಗುತ್ತಿದೆ. ಆದರೆ, ಇದು ನಮ್ಮ ಯುವ ಪೀಳಿಗೆಗೆ ನೀಡುತ್ತಿರುವ ಸ್ಪಷ್ಟ ಸಂದೇಶ; ನಮ್ಮಿಂದ ಇದು ಸಾಧ್ಯ! ಗ್ಯಾನು (ಗ್ಯಾನೇಶ್ ಕುಮಾರ್), ನಿನ್ನ ಆಟ ಮುಗಿಯಿತು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಪಕ್ಷದ ಮತ್ತೋರ್ವ ಮುಖಂಡ ಅಶುತೋಷ್ ರಾಂಕಾ “ಜಂತರ್ ಮಂತರ್‌ನಿಂದ ದೂರವಿರಿ” ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

​ಈ ಬೆಳವಣಿಗೆಗಳ ಕುರಿತು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ನರೇಂದ್ರ ಮೋದಿ ಅವರೇ, ನೀವು ಜನರ ಪ್ರತಿರೋಧವನ್ನು ಡಿ-ನೋಟಿಫೈ ಮಾಡಲು (ರದ್ದುಗೊಳಿಸಲು) ಸಾಧ್ಯವಿಲ್ಲ,” ಎಂದು ಗುಡುಗಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಪ್ರತಿಭಟನೆಗಳ ಕುರಿತು ಮಾತನಾಡಿದ ಅವರು, “ಜಂತರ್ ಮಂತರ್ ಅನ್ನು ಪ್ರತಿಭಟನಾ ತಾಣವಾಗಿ ಕೈಬಿಟ್ಟಿರುವುದೇ ನರೇಂದ್ರ ಮೋದಿ ಅವರ ಭಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ನಿರ್ಧಾರದಿಂದ ಪ್ರತಿಭಟನೆಗಳು ನಿಲ್ಲುತ್ತವೆ ಎಂದು ಅವರು ಭಾವಿಸಿದ್ದರೆ ಅದು ಭ್ರಮೆ. ಇನ್ಮುಂದೆ ದೇಶಾದ್ಯಂತ ಇಂತಹ ಹಲವು ಜಂತರ್ ಮಂತರ್‌ಗಳು ಹುಟ್ಟಿಕೊಳ್ಳಲಿವೆ. ಮೋದಿಯವರ ಅಸಲಿ ಸಮಸ್ಯೆ ಇರುವುದು ಜಂತರ್ ಮಂತರ್ ಎಂಬ ಸ್ಥಳದೊಂದಿಗಲ್ಲ, ಬದಲಾಗಿ ಪ್ರತಿಭಟನೆಗಳೊಂದಿಗೆ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು,” ಎಂದಿದ್ದಾರೆ.

​ಕೇಂದ್ರ ಗೃಹ ಸಚಿವಾಲಯವು (MHA) ಸಾರ್ವಜನಿಕರು ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸಲು ಪರ್ಯಾಯ ಸ್ಥಳಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿಯ ಶಿಫಾರಸಿನ ಆಧಾರದ ಮೇಲೆ, ದೆಹಲಿ ಪೊಲೀಸರು ಸೋಮವಾರ ಅಧಿಕೃತ ಆದೇಶ ಹೊರಡಿಸಿ, ಐತಿಹಾಸಿಕ ಜಂತರ್ ಮಂತರ್ ಅನ್ನು ‘ಪ್ರತಿಭಟನಾ ತಾಣ’ದ ಪಟ್ಟಿಯಿಂದ ಕೈಬಿಟ್ಟಿದ್ದಾರೆ (ಡಿ-ನೋಟಿಫೈ). ಬದಲಾಗಿ ಪೂರ್ವ ದೆಹಲಿಯ ರಾಮ್‌ಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ (CBD) ಮೈದಾನಗಳನ್ನು ಹೊಸ ಪ್ರತಿಭಟನಾ ಸ್ಥಳಗಳನ್ನಾಗಿ ನಿಯೋಜಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಹಿಯಾ ಚಿಂತನೆಗಳನ್ನು ಜಾರಿಗೆ ತರಲು ಗ್ಯಾರಂಟಿ ಯೋಜನೆಗಳ ಮೂಲಕ ಪ್ರಯತ್ನಿಸಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ

ಸಮಾಜದಲ್ಲಿನ ಅಸಮಾನತೆ ಮತ್ತು ಜಾತೀಯತೆಯನ್ನು ತೊಡೆದುಹಾಕದೆ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ....

ಬೀದರ್ | ಅಲಿಯಂಬರ್‌ ಬಳಿ ಸೇತುವೆ ಕುಸಿತ: ಸಂಚಾರ ಸ್ಥಗಿತ

ಬೀದರ್ ತಾಲೂಕಿನ ಅಲಿಯಂಬರ್ ಮಾರ್ಗವಾಗಿ ಚಂದಾಪೂರ, ನಿಟ್ಟೂರು(ಬಿ) ಇತರೆ ಗ್ರಾಮಗಳಿಗೆ ಸಂಪರ್ಕಿಸುವ...

6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್

ರಾಷ್ಟ್ರಪತಿ ಭವನವು ಸೋಮವಾರ ಹೊರಡಿಸಿದ ಅಧಿಕೃತ ಪ್ರಕಟಣೆಯ ಪ್ರಕಾರ, ರಾಷ್ಟ್ರಪತಿಯವರು ಕರ್ನಾಟಕ...

ಹಿರಿಯ ನಾಗರಿಕರಿಗೆ ಮಾನಸಿಕ ಕಿರುಕುಳ ನೀಡಿದರೆ 3 ವರ್ಷ ಜೈಲು: ಕೇರಳಂನಲ್ಲಿ ಹೊಸ ಕಾನೂನು

ವಯೋವೃದ್ಧರ ರಕ್ಷಣೆಗೆ ಮುಂದಾಗಿರುವ ಕೇರಳಂ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು,...