ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್ ಪ್ರವೇಶಿಸುವ ಮುನ್ನ ಯಾಕೆ ಸಹಿ ಮಾಡಬೇಕು?

Date:

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ 'ಮತಾಂತರದ ಆಮಿಷ' ಎಂಬ ಬಣ್ಣ ಕಟ್ಟುವ ಹುನ್ನಾರದಂತೆ ಕಂಡುಬರುತ್ತಿದೆ. ಚರ್ಚ್‌ಗಳು ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಿವೆ.

ಭಾರತೀಯ ಸಂವಿಧಾನದ 25ನೇ ಅನುಚ್ಛೇದವು ನಮಗೆ ಇಷ್ಟವಾದ ಧರ್ಮವನ್ನು ನಾವು ಆಚರಿಸುವ, ಪ್ರಚಾರ ಮಾಡುವ ಮತ್ತು ಪಾಲಿಸುವ ಮೂಲಭೂತ ಹಕ್ಕನ್ನು ನೀಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹಕ್ಕನ್ನು ನಿರಂತರವಾಗಿ ಕಸಿಯುವ ಯತ್ನಗಳು ನಡೆಯುತ್ತಿವೆ. ಅದರಲ್ಲೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಧಾರ್ಮಿಕ ಆಚರಣೆಗಳು ಮತ್ತು ಕಾನೂನಿನ ನಿಯಂತ್ರಣಗಳ ನಡುವೆ ಸಂಘರ್ಷಗಳು ಹೆಚ್ಚಾಗುತ್ತಿವೆ. ಈ ಎಲ್ಲ ಗೊಂದಲ, ಸಂಘರ್ಷಗಳ ನಡುವೆ ಈ ಕಾನೂನಿನ ದುರುಪಯೋಗ ಮತ್ತು ಅನಗತ್ಯ ಕಾನೂನು ಸಂಕಷ್ಟಗಳಿಂದ ಬಚಾವಾಗಲು ಮಹಾರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯವು ‘ಸಮ್ಮತಿ ಪತ್ರ’ದ ಮೊರೆ ಹೋಗಿದೆ.

- Advertisement -

ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ನೂತನ ಮತಾಂತರ ವಿರೋಧ ಕಾಯ್ದೆ ಬಲವಂತದ ಮತಾಂತರ ಸಾಬೀತಾದರೆ 7ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲು ಅವಕಾಶ ನೀಡುತ್ತದೆ. ಅದಕ್ಕೂ ಮುಖ್ಯವಾಗಿ ಸಾಮಾನ್ಯವಾಗಿ ಅಪರಾಧ ಸಾಬೀತುಪಡಿಸುವ ಹೊಣೆ ಪೋಲೀಸರ ಮೇಲಿರುತ್ತದೆ. ಆದರೆ ಈ ಕಾಯ್ದೆಯಡಿ, ಆರೋಪಕ್ಕೊಳಗಾದ ವ್ಯಕ್ತಿಯೇ ತಾನು ಯಾವುದೇ ಬಲವಂತ ಅಥವಾ ಆಮಿಷ ಒಡ್ಡಿಲ್ಲ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕಾಗುತ್ತದೆ. ಈ ಕಾಯ್ದೆ ಜಾರಿ ಬೆನ್ನಲ್ಲೇ ಪ್ರಾರ್ಥನೆಗಾಗಿ ಚರ್ಚ್‌ಗಳನ್ನು ಪ್ರವೇಶಿಸುವ ಭಕ್ತರಿಂದ ‘ಸ್ವಯಂ-ಘೋಷಣಾ ಪತ್ರ’ ಅಥವಾ ‘ಸಮ್ಮತಿ ಪತ್ರ’ಕ್ಕೆ ಸಹಿ ಪಡೆಯಲಾಗುತ್ತಿದೆ. ಪ್ರಾರ್ಥನಾ ಮಂದಿರದ ಬಾಗಿಲಲ್ಲಿ ಇಂತಹ ಲಿಖಿತ ದಾಖಲೆ ನೀಡುವ ಪರಿಸ್ಥಿತಿ ಉಂಟಾಗಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾದ ಹುಬ್ಬಳ್ಳಿ! ಆಕ್ರೋಶದ ನಡುವೆಯೂ...

ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ...

ಇದನ್ನೂ ಓದಿ: ಪಶ್ಚಿಮ ಬಂಗಾಳ: ಕ್ರೈಸ್ತರ ಪ್ರಾರ್ಥನಾ ಸಭೆಗಳ ಮೇಲೆ ನಿರಂತರ ದಾಳಿ, ಸಮಾಧಿಯಿಂದ ಶವ ಹೊರಗೆಳೆದು ವಿಕೃತಿ

ಈ ಹೊಸ ನಿಯಮವು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ. ಬದಲಾಗಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಅಸುರಕ್ಷತೆ ಮತ್ತು ಕಾನೂನಾತ್ಮಕ ಸಂಕಷ್ಟದ ಸಂಕೇತ. ಯಾವುದೇ ವ್ಯಕ್ತಿ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗುವುದು ಆ ವ್ಯಕ್ತಿಯ ವೈಯಕ್ತಿಕ ನಿರ್ಧಾರ. ಆದರೆ ಅಲ್ಲಿ ಮತಾಂತರದ ಬಣ್ಣ ಹಚ್ಚುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಬಲವಂತ ಅಥವಾ ಆಮಿಷವಿಲ್ಲ ಎಂಬುದನ್ನು ಸಾಬೀತುಪಡಿಸಲು ಈಗ ಚರ್ಚ್‌ಗಳು ‘ಸಮ್ಮತಿ ಪತ್ರ’ದ ಮಾರ್ಗವನ್ನು ಕಂಡುಕೊಂಡಿದೆ. ಅಷ್ಟಕ್ಕೂ ಪ್ರಾರ್ಥನೆಯಂತಹ ವೈಯಕ್ತಿಕ ನಿರ್ಧಾರಕ್ಕೂ ಮುನ್ನ ಸಾಕ್ಷ್ಯ ಆಧಾರಿತ ಸಹಿಗಳನ್ನು ಸಂಗ್ರಹಿಸುವುದು ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಪ್ರತ್ಯಕ್ಷ ಒತ್ತಡವಲ್ಲವೇ? ಆದರೆ ಅಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದು ಈ ವ್ಯವಸ್ಥೆಯಲ್ಲವೇ?

ಚರ್ಚ್ ಪ್ರವೇಶಿಸುವ ಮುನ್ನ ಸಹಿ ಯಾಕೆ ಮಾಡಬೇಕು?

ಮಹಾರಾಷ್ಟ್ರದ ಮುಂಬೈ, ವಸಾಯಿ, ವಿರಾರ್ ಹಾಗೂ ತಾಣೆ ಸೇರಿದಂತೆ ವಿವಿಧ ಭಾಗಗಳಲ್ಲಿರುವ ಚರ್ಚ್‌ಗಳು ತಮ್ಮಲ್ಲಿಗೆ ಬರುವ ಭಕ್ತರಿಂದ ಅದರಲ್ಲೂ ವಿಶೇಷವಾಗಿ ಕ್ರೈಸ್ತ ಧರ್ಮಕ್ಕೆ ಸೇರದ ಅಥವಾ ಹೊಸದಾಗಿ ಪ್ರಾರ್ಥನೆಗೆ ಆಗಮಿಸುವ ವ್ಯಕ್ತಿಗಳಿಂದ ಸ್ವಯಂ-ಸಮ್ಮತಿ ಪತ್ರಗಳನ್ನು ಸಂಗ್ರಹಿಸುತ್ತಿವೆ. ಈ ಪತ್ರದಲ್ಲಿ, “ನಾನು ಸ್ವಇಚ್ಛೆಯಿಂದ, ಯಾವುದೇ ಬಲವಂತ, ಆಮಿಷ, ಬೆದರಿಕೆ ಅಥವಾ ಹಣಕಾಸಿನ ಲಾಭವಿಲ್ಲದೆ ಕೇವಲ ಶಾಂತಿ ಮತ್ತು ಪ್ರಾರ್ಥನೆಗಾಗಿ ಇಲ್ಲಿಗೆ ಆಗಮಿಸಿದ್ದೇನೆ. ನನ್ನನ್ನು ಯಾರೂ ಮತಾಂತರಗೊಳಿಸುತ್ತಿಲ್ಲ” ಎಂದು ಸ್ಪಷ್ಟವಾಗಿ ಬರೆದು ಸಹಿ ಮಾಡಿಸಿಕೊಳ್ಳಲಾಗುತ್ತಿದೆ.

ಈ ಪ್ರಕ್ರಿಯೆ ಹಿಂದೆ ಅಡಗಿರುವುದು ‘ಆತ್ಮರಕ್ಷಣೆ’ ಮತ್ತು ‘ಖಾಸಗಿ ಭದ್ರತೆ’ಯ ಉದ್ದೇಶ. ಇತ್ತೀಚಿನ ವರ್ಷಗಳಲ್ಲಿ ಸಂಘಪರಿವಾರವು ಹಲವು ಚರ್ಚ್‌ಗಳಲ್ಲಿ ಪ್ರಾರ್ಥನಾ ಸಭೆಗಳು ನಡೆಯುವಾಗ ಇದ್ದಕ್ಕಿದ್ದಂತೆ ನುಗ್ಗಿವೆ. ‘ಕಾನೂನುಬಾಹಿರ ಹಾಗೂ ಬಲವಂತದ ಮತಾಂತರ’ ನಡೆಯುತ್ತಿದೆ ಎಂದು ಆರೋಪಿಸಿ ಗಲಾಟೆ ಮಾಡಿವೆ. ಪೊಲೀಸರಿಗೆ ದೂರು ನೀಡುವ ಪ್ರಕರಣಗಳೂ ಹೆಚ್ಚಾಗಿವೆ. ಇಂತಹ ಘಟನೆಗಳು ಸಂಭವಿಸಿದಾಗೆಲ್ಲ ಕಾನೂನಾತ್ಮಕವಾಗಿ ತೊಂದರೆಗೆ ಸಿಲುಕುವುದು ಚರ್ಚ್‌ನ ಆಡಳಿತ ಮಂಡಳಿ. ಇದೀಗ ಆ ತಾಪತ್ರಯದಿಂದ ತಪ್ಪಿಸಿಕೊಳ್ಳಲು ಚರ್ಚ್‌ಗಳಲ್ಲಿ ಸಹಿಗಳನ್ನು ಸಾಕ್ಷಿಯಾಗಿ ಕಾಯ್ದಿರಿಸಿಕೊಳ್ಳಲಾಗುತ್ತಿದೆ. ಪೋಲೀಸರು ಅಥವಾ ಸರ್ಕಾರಿ ಅಧಿಕಾರಿಗಳು ತನಿಖೆಗೆ ಬಂದಾಗ ಈ ಸಹಿ ಮಾಡಿದ ಪತ್ರಗಳನ್ನು ತೋರಿಸಿ, ಯಾರನ್ನೂ ಬಲವಂತವಾಗಿ ಕರೆತಂದಿಲ್ಲ ಎಂದು ನಿರೂಪಿಸಲು ಚರ್ಚ್‌ಗಳು ಇದನ್ನು ಖಾತರಿ ಪತ್ರವಾಗಿ ಬಳಸುತ್ತಿವೆ.

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. ಆದರೆ ಮಹಾರಾಷ್ಟ್ರದಲ್ಲಿ ಈ ಕಾನೂನು ಜಾರಿಗೆ ಬಂದ ನಂತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಪೆಟ್ಟಾಗಿದೆ. ಸಣ್ಣ ಸಣ್ಣ ಚರ್ಚ್‌ಗಳು ಹಾಗೂ ಪ್ರಾರ್ಥನಾ ಮಂದಿರಗಳು ತೀವ್ರ ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಈಗ ಈ ಹೊಸ ಕಾಯ್ದೆಯ ಮೂಲಕ ಈ ಸಾಮಾಜಿಕ ಕಾರ್ಯಗಳಿಗೂ ‘ಮತಾಂತರದ ಆಮಿಷ’ ಎಂಬ ಬಣ್ಣ ಕಟ್ಟುವ ಹುನ್ನಾರದಂತೆ ಕಂಡುಬರುತ್ತಿದೆ. ಇದರಿಂದಾಗಿ ಚರ್ಚ್‌ಗಳು ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಿವೆ. ಇದರಿಂದಾಗಿಯೇ ಭಕ್ತರಿಂದ ಸಹಿ ಪಡೆಯುವ ಪದ್ಧತಿ ವ್ಯಾಪಕವಾಗಿ ಜಾರಿಗೆ ಬಂದಿದೆ.

ಅಷ್ಟಕ್ಕೂ ಈ ಹೊಸ ಕಾಯ್ದೆಯು ವ್ಯಕ್ತಿಯ ಖಾಸಗಿತನದ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವಂತದ್ದು. ವಂಚನೆ ಅಥವಾ ಅಪರಾಧಗಳನ್ನು ತಡೆಯಲು ಈಗಾಗಲೇ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್‌) ಸೂಕ್ತ ಕಾನೂನುಗಳಿರುವಾಗ, ಧರ್ಮವನ್ನು ಗುರಿಯಾಗಿಸಿಕೊಂಡು ಇಂತಹ ಕಟ್ಟುನಿಟ್ಟಿನ ಕಾಯ್ದೆಗಳನ್ನು ತರುವುದು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರಬಹುದು. ಮುಖ್ಯವಾಗಿ ಚರ್ಚ್ ಪ್ರವೇಶಿಸಲು ಸಹಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ನಂಬಿಕೆಯು ಎದುರಿಸುತ್ತಿರುವ ಅಭದ್ರತೆಯನ್ನು ಎತ್ತಿಹಿಡಿಯುತ್ತದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವ್ಯವಸ್ಥೆಗಳ ಕೂಪವಾದ ಶಿರವಾಡ ತ್ಯಾಜ್ಯ ಘಟಕ; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಉಪಲೋಕಾಯುಕ್ತ

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕಕ್ಕೆ...

ವಿಟಿಯು ವಾರ್ಷಿಕ ಘಟಿಕೋತ್ಸವ: ಉತ್ತರ ಕನ್ನಡದ ಪ್ರತಿಭೆಗಳಿಗೆ ರಾಜ್ಯಮಟ್ಟದ ಗರಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ...

ಬೀದರ್‌ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟ ಅ.4ರಂದು

ಕಾವ್ಯ ರಚನೆಯಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಜನಪರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಜಿಲ್ಲಾ...

‘ನಾವು ಹೋದಾಗ ನೀವು ಬರ್ತೀರಿ’ ಎಂದಿದ್ದ ಮೋದಿ ಮಾತಿನ ಮರ್ಮವೇನು? ರಾಹುಲ್ ಈ ಘಟನೆ ನೆನೆದದ್ದು ಯಾಕೆ?

ಚುನಾವಣಾ ಆಯೋಗದ ಪಾರದರ್ಶಕತೆ ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ನಿರ್ಣಾಯಕ...