ನೂರು ಡಿ ಕೆ ಶಿವಕುಮಾರ್‌ ಹೆಗ್ಗಡೆಯವರೊಂದಿಗಿದ್ದಾರೆ- ಹಳೆಯ ಹೇಳಿಕೆಗೆ ಬದ್ಧರಾಗಿಯೇ ಎಸ್‌ಐಟಿ ರಚನೆ ಮಾಡಿದರೇ ಸಿಎಂ?

Date:

ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಎಂದು ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದಾಗ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು “ಧರ್ಮಸ್ಥಳದ ವಿರುದ್ಧ ಯಾರೆಲ್ಲ ಷಡ್ಯಂತ್ರ ಮಾಡಿದ್ದಾರೆ ಎಂಬುದು ಗೊತ್ತಿದೆ. ಅವರಿಗೆ ಸರಿಯಾದ ಪಾಠ ಕಲಿಸುತ್ತೇವೆ” ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಅಷ್ಟೇ ಅಲ್ಲ “ನನ್ನಂತ ನೂರಾರು ಡಿ.ಕೆ. ಶಿವಕುಮಾರ್ ಅವರು ಡಾ. ವೀರೇಂದ್ರ ಹೆಗ್ಗಡೆಯವರ ಜೊತೆಗಿದ್ದಾರೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿದ್ದಾರೆ”ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತಂದಿದ್ದರು.

- Advertisement -

ಸುಪ್ರೀಂ ಕೋರ್ಟ್‌ ಆದೇಶದ ನಂತರ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ರಚಿಸಿದ SITಯ ಬಗ್ಗೆ ಈಗ ಬಹಳ ದೊಡ್ಡ ಅಸಮಾಧಾನ ಎದ್ದಿದೆ. ಇದು ಅತ್ಯಾಚಾರಿಗಳನ್ನು ರಕ್ಷಿಸಲು ರಚನೆಗೊಂಡ ತಂಡವೇ ಎಂಬ ಅನುಮಾನ ಸಹಜವಾಗಿಯೇ ಬಂದಿದೆ. ಯಾಕೆಂದರೆ ಕಳೆದ ವರ್ಷ ಅಕ್ರಮ ಶವ ಹೂತ ಪ್ರಕ್ರಣದ ತನಿಖೆ ಎಸ್‌ಐಟಿ ನಡೆಯುತ್ತಿರುವಾಗ ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್‌ “ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಗೊತ್ತಿದೆ” ಎಂಬ ಹೇಳಿಕೆ ಬಹಿರಂಗವಾಗಿಯೇ ನೀಡಿದ್ದರು. ಅಷ್ಟೇ ಅಲ್ಲ ಧರ್ಮಸ್ಥಕ್ಕೆ ಭೇಟಿ ನೀಡಿ, “ನನ್ನಂತ ನೂರಾರು ಡಿ.ಕೆ. ಶಿವಕುಮಾರ್ ಅವರು ಡಾ. ವೀರೇಂದ್ರ ಹೆಗ್ಗಡೆಯವರ ಜೊತೆಗಿದ್ದಾರೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿದ್ದಾರೆ” ಎಂದು ಹೇಳಿದ್ದರು. ಈಗ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಅವರೇ ಕಳಪೆ ಅಧಿಕಾರಿಗಳ ಎಸ್‌ಐಟಿ ರಚನೆ ಮಾಡಿದ ರೀತಿ ಅನುಮಾನಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ರಾಜ್ಯದ 34 ಜಿಲ್ಲಾ ಮತ್ತು ನಗರ ಆಡಳಿತ ಘಟಕಗಳ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್:...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ...

ಸೆ.24ರಂದು (ಬುಧವಾರ) ಸರ್ಕಾರ ರಚಿಸಿದ ಎಸ್‌ಐಟಿಯ ಮುಖ್ಯಸ್ಥರಾಗಿ ಹಿಂದೆ ಮಂಗಳೂರಿನಲ್ಲಿ ಕಮಿಷನರ್‌ ಆಗಿ ಕಾರ್ಯ ನಿರ್ವಹಿಸಿ ಸ್ಥಳೀಯವಾಗಿ ಭಾರೀ ವಿರೋಧ ಎದುರಿಸಿದ್ದ ಅಷ್ಟೇ ಅಲ್ಲ ಸೌಜನ್ಯಪರ ಹೋರಾಟಗಾರರನ್ನು ಯಾವುದೇ ಎಫ್‌ಐಆರ್‌ ಇಲ್ಲದಿದ್ದರೂ ವಿವಚಾರಣೆಗೆ ಒಳಪಡಿಸಿದ್ದ ಎನ್‌ ಶಶಿಕುಮಾರ್‌ ನೇಮಕ ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಎರಡೆರಡು ತನಿಖಾ ಸಂಸ್ಥೆಗಳು ತನಿಖೆ ನಡೆಸಿಯೂ ಅತ್ಯಾಚಾರಿಗಳ ಪತ್ತೆ ಹಚ್ಚಲಾಗದ ಈ ಪ್ರಕರಣ ಸುಪ್ರೀಂ ಕೋರ್ಟಿನವರೆಗೂ ಹೋಗಿ ಮರುತನಿಖೆಗೆ ಆದೇಶ ಪಡೆಯುವಂತಾಗಿದೆ. ಅಷ್ಟಾಗಿಯೂ ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಮುಂದಾಗದೇ ಇರುವುದು ನಾಚಿಕೆಗೇಡಿನ ಸಂಗತಿ.

ಕಳೆದ ವರ್ಷ ಧರ್ಮಸ್ಥಳದ ಪರಿಸರದಲ್ಲಿ ಹೂತು ಹಾಕಲಾಗಿದ್ದ ಅನಾಥ ಶವಗಳ ಪ್ರಕರಣದ ತನಿಖೆಗೆ ಸಿದ್ಧರಾಮಯ್ಯ ಅವರು ಎಸ್‌ಐಟಿ ರಚನೆ ಮಾಡಿದ್ದರು. ದಕ್ಷ ಹಿರಿಯ ಅಧಿಕಾರಿ ಪ್ರಣವ್‌ ಮೊಹಾಂತಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ನೇತ್ರಾವತಿ ದಡದಲ್ಲಿ ಉತ್ಖನನ ನಡೆಸಿ, ಸಂಗ್ರಹಿಸಿದ ತಲೆಬುರುಡೆ, ಮೂಳೆಯ ಎಫ್‌ಎಸ್‌ಎಲ್‌ ವರದಿ ಸಹಿತ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸಾಕ್ಷಿದಾರ ಚಿನ್ನಯ್ಯ ತನಿಖೆಯ ಅರ್ಧದಲ್ಲಿಯೇ ಉಲ್ಟಾ ಹೇಳಿಕೆ ನೀಡಿ ತಪ್ಪು ಜಾಗಗಳನ್ನು ತೋರಿಸಿ ಎಸ್‌ಐಟಿ, ಮತ್ತು ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿದ್ದ. ಈ ಬೆಳವಣಿಗೆಯಿಂದಾಗಿ ಒಂದು ಹಂತದಲ್ಲಿ ಸೌಜನ್ಯ ಹೋರಾಟಗಾರರ ಮೇಲೆ ಇಡೀ ರಾಜ್ಯದಲ್ಲಿ ಅಪನಂಬಿಕೆ, ಅನುಮಾನ ಬರುವಂತೆ ಮಾಡುವಲ್ಲಿ ಧರ್ಮಸ್ಥಳದ ಅನ್ಯಾಯದ ಪರ ಇರುವವರು ಮತ್ತು ಮಾರಿಕೊಂಡ ಎಂದು ಹೇಳಬಹುದಾದ ಮಾಧ್ಯಮಗಳು ಯಶಸ್ವಿಯಾಗಿದ್ದವು. ಆದರೆ, ಸೌಜನ್ಯ ತಾಯಿ ಕುಸುಮಾವತಿ ಮತ್ತು ಹೋರಾಟಗಾರರು ಸುಮ್ಮನಿರಲಿಲ್ಲ. ಸೌಜನ್ಯ ತಾಯಿ ಮತ್ತು ಅದಕ್ಕೂ ಹಿಂದೆ ಅನುಮಾನಾಸ್ಪದವಾಗಿ ಕೊಲೆಯಾದ ಹಲವು ಹೆಣ್ಣುಮಕ್ಕಳ ಕುಟುಂಬದವರು ಮೊಹಾಂತಿ ಅವರ ಮುಂದೆ ದೂರು ದಾಖಲಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ರಚನೆ ಮಾಡಿ ನೀಡಿದ ಆದೇಶದಲ್ಲಿ ಸ್ಪಷ್ಟವಾಗಿ ಇಪ್ಪತ್ತು ವರ್ಷಗಳಲ್ಲಿ ನಡೆದ ಅನುಮಾನಾಸ್ಪದ ಸಾವುಗಳ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದರು. ಆದರೆ, ಆ ನಿಟ್ಟಿನಲ್ಲಿ ಎಸ್‌ಐಟಿ ಯಾವುದೇ ಪೂರಕ ಕ್ರಮ ಕೈಗೊಳ್ಳದಿದ್ದಾಗ ಕೊನೆಯದಾಗಿ ಕುಸುಮಾವತಿ ಅವರ ಮುಂದೆ ಉಳಿದ ಆಯ್ಕೆ ಸುಪ್ರೀಂ ಕೋರ್ಟ್‌ ಆಗಿತ್ತು. ಸೌಜನ್ಯ ಪ್ರಕರಣದಲ್ಲಿ ಸುಪ್ರೀ ಕೋರ್ಟ್‌ಗೆ ಮನವರಿಕೆ ಮಾಡುವುದು ವಕೀಲರ ತಂಡಕ್ಕೆ ಕಷ್ಟವೇನೂ ಆಗಿರಲ್ಲ. ಯಾಕೆಂದರೆ ಇಡೀ ಪ್ರಕರಣದ ತನಿಖೆಯ ಲೋಪವನ್ನು ಸಿಬಿಐ ಕೋರ್ಟ್‌ನ ತೀರ್ಪಿನ ಪ್ರತಿ ಸಾಲುಗಳು ಎತ್ತಿ ತೋರಿಸುವಂತಿವೆ. ಹಾಗಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಯಾವುದೇ ವಿಳಂಬ ಮಾಡದೇ ಮರುತನಿಖೆಗೆ ಆದೇಶಿಸಿದೆ. ಎಸ್‌ಐಟಿ ತನಿಖೆಗೂ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

ಆದರೆ, ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ಸರ್ಕಾರದ ನಡೆ!

ಸಿಬಿಐ ತೀರ್ಪು ಬಂದ ನಂತರ ನಡೆದ ಸುದೀರ್ಘ ಕಾಲದ ಪ್ರತಿಭಟನೆ ರಾಜ್ಯದ ಮೂಲೆ ಮೂಲೆಗೂ ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣದ ಜೊತೆಗೆ ಪದ್ಮಲತಾ, ವೇದವಲ್ಲಿ ಅನ್ಯಾಯದ ಸಾವುಗಳ ಕರಾಳ ದರ್ಶನ ಮಾಡಿತ್ತು. ಚಿನ್ನಯ್ಯನ ಪ್ರವೇಶದೊಂದಿದೆ ರಾಷ್ಟ್ರಮಟ್ಟದ ಸುದ್ದಿವಾಹಿನಿಗಳೂ ಧರ್ಮಸ್ಥಳದ ಸುತ್ತಮುತ್ತಲಿನ ಕರಾಳ ಇತಿಹಾಸದ ದರ್ಶನ ಮಾಡಿಸುವ ವರದಿ ಬಿತ್ತರಿಸಿದ್ದವು. ರಾಜ್ಯದ ಎಲ್ಲ ಮಹಿಳಾಪರ ಹೋರಾಟಗಾರರು, ಪ್ರಗತಿಪರ ಸಂಘಟನೆಗಳು ಒಂದಾಗಿ ಹೋರಾಟ ನಡೆಸಿದ್ದವು. ಕೊಂದವರು ಯಾರು ಎಂಬ ಆಂದೋಲನ ಧರ್ಮಸ್ಥಳದಲ್ಲಿ ಅಕ್ರಮ ಶವ ಹೂತ ಪ್ರಕರಣದ ಎಸ್‌ಐಟಿ ತನಿಖೆ ನಡೆಯುತ್ತಿರುವಾಗ ಅದರೊಳಗೆ ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ ಮತ್ತು ಆಕೆಯ ಸಹೋದರಿಯ ಜೋಡಿಕೊಲೆ ಪ್ರಕರಣವನ್ನೂ ತನಿಖೆಗೆ ಎತ್ತಿಕೊಳ್ಳುವಂತೆ ಒತ್ತಾಯಿಸಿತ್ತು. ಅಷ್ಟೇ ಅಲ್ಲ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಚೌಧರಿ ಅವರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು.

ಕಳೆದ ವರ್ಷ ಜುಲೈನಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಬೆಳ್ತಂಗಡಿಯ ನೇತ್ರಾವತಿ ನದಿ ದಡ, ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಶುರು ಮಾಡಿತ್ತು ಎಸ್‌ಐಟಿ. ಅದೇ ಸಮಯದಲ್ಲಿ ವಿಧಾನಮಂಡಲಗಳ ಮಳೆಗಾಲದ ಅಧಿವೇಶನ ಶುರುವಾಗುತ್ತಿದ್ದಂತೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಇದು ಹಿಂದೂ ಧಾರ್ಮಿಕ ಕ್ಷೇತ್ರದ ಮೇಲಿನ ದಾಳಿ, ಧರ್ಮಸ್ಥಳದ ಮೇಲೆ ಜಿಹಾದಿಗಳ ದಾಳಿ, ಎಡಪಕ್ಷಗಳ ಕುತಂತ್ರ ಎಂದು ದಕ್ಷಿಣ ಕನ್ನಡದ ಬಿಜೆಪಿ ಶಾಸಕರು ಹೇಳುತ್ತಾ ಮೆರವಣಿಗೆ ಮಾಡಿದರು. ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಾ ಬಂದಿರುವ ಹಿಂದುತ್ವವಾದಿ ಸಂಘಟನೆಗಳು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸಿ ಯಾರದ್ದೋ ಷಡ್ಯಂತ್ರ ಎಂದು ಹೇಳಿದ್ದರೇ ವಿನಹ ಆ ಪರಿಸರದಲ್ಲಿ ಕ್ರೈಮ್‌ ನಡೆದಾಗ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚುತ್ತಿಲ್ಲ ಯಾಕೆ? ಯಾರ ಒತ್ತಡ, ಆಮಿಷಕ್ಕೆ ಬಲಿಯಾಗಿ ತನಿಖಾ ಸಂಸ್ಥೆಗಳು ಸಾಕ್ಷಿ ಸಂಗ್ರಹಿಸದೇ ಅಪರಾಧಿ ಪತ್ತೆಯಾಗಿಲ್ಲ ಎಂದಷ್ಟೇ ಷರಾ ಬರೆಯುವ ಕೆಲಸ ಮಾಡುತ್ತಾ ಬಂದಿವೆ ಎಂದು ಪ್ರಶ್ನಿಸುವ ಕೆಲಸ ಮಾಡಿಲ್ಲ.

ಸೌಜನ್ಯ, ಪದ್ಮಲತಾ, ವೇದವಲ್ಲಿ ಹಿಂದೂ ಹೆಣ್ಣುಮಕ್ಕಳಲ್ಲವೇ? ಸೌಜನ್ಯ ಯಾರು? ಆಕೆ ದಕ್ಷಿಣ ಕನ್ನಡದ ಪ್ರಭಾವಿ ಗೌಡ (ಒಕ್ಕಲಿಗ)ಸಮುದಾಯದ ಹೆಣ್ಣುಮಗಳು. ಆಕೆಯ ಕೊಲೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ಡಿ ವಿ ಸದಾನಂದ ಗೌಡ, ಇಂಧನ ಸಚಿವೆಯಾಗಿದ್ದ, ಈಗ ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ, ಗೃಹಸಚಿವರಾಗಿದ್ದ ಆರ್‌ ಅಶೋಕ್‌ ಕೂಡ ಇದೇ ಒಕ್ಕಲಿಗರೇ! ಡಿಕೆ ಶಿವಕುಮಾರ್‌ ಕೂಡ ಅದೇ ಸಮುದಾಯದವರು. ಸಮುದಾಯದ ಯುವತಿ ಎಂದಲ್ಲ, ಒಬ್ಬ ಅಮಾಯಕ ಹುಡಿಗಿಯ ಭೀಕರ ಸಾವಾಗಿದೆ, ಆಕೆಯ ಹಂತಕರು ಯಾರು ಎಂದು ಪತ್ತೆಯಾಗಿಲ್ಲ. ಹದಿನಾಲ್ಕು ವರ್ಷಗಳಿಂದ ಆ ಕುಟುಂಬ ಬೀದಿ ಹೋರಾಟದಲ್ಲೇ ಕಳೆದಿದೆ. ಸಂತೋಷ್‌ ರಾವ್‌ ನಿರಪರಾಧಿ ಎಂದು ಸಿಬಿಐ ಕೋರ್ಟ್‌ ಘೋಷಿಸಿದ ನಂತರ ರಾಜ್ಯದೆಲ್ಲೆಡೆ ಮರುತನಿಖೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಾಗಲೂ ಇವರಾರೂ ಸೌಜನ್ಯಳ ಕುಟುಂಬದ ಜೊತೆಗೆ ನಿಂತಿಲ್ಲ. ಆ ಪ್ರಭಾವಿ ಕುಟುಂಬದ ಪಾತ್ರ ಈ ಪ್ರಕರಣದಲ್ಲಿ ಇಲ್ಲ ಎಂದಾದರೆ ಇವರೆಲ್ಲ ಯಾಕೆ ಸುಮ್ಮನಿದ್ದಾರೆ? ಅಥವಾ ಇವರಿಗೆ ಅಪರಾಧಿಗಳು ಯಾರು ಎಂದು ಗೊತ್ತೆಯೆ ಎಂದು ಅರ್ಥವೇ? ಡಿ ಕೆ ಶಿವಕುಮಾರ್‌ ಕೂಡ ಸೌಜನ್ಯಳ ಪ್ರಕರಣ ನ್ಯಾಯಯುತ ತನಿಖೆಗೆ ಒತ್ತಾಯಿಸಿದರೆ ಅದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಎಂದು ಯಾಕೆ ಭಾವಿಸಿದ್ದಾರೆ?

ಬೆಳ್ತಂಗಡಿಯಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿರುವ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಡಿ ಕೆ ಶಿವಕುಮಾರ್‌ ಅವರನ್ನು ಸೌಜನ್ಯ ತಾಯಿ ಭೇಟಿಯಾಗಿ “ನನ್ನ ಮಗಳಿಗೆ ನ್ಯಾಯ ಕೊಡಿಸಿ” ಎಂದು ಬೇಡಿಕೊಂಡಿದ್ದರು. ಆ ಕುಟುಂಬ ನೋವು, ಮಾತುಗಳನ್ನು ಒಬ್ಬ ಮನುಷ್ಯನಾಗಿ ಆಲಿಸುವ ಸೌಜನ್ಯವನ್ನು ಡಿ ಕೆ ಶಿವಕುಮಾರ್‌ ತೋರಿಸಿರಲಿಲ್ಲ. ಕುಸುಮಾವತಿಯವರು ಮನವಿ ಪತ್ರ ಕೊಟ್ಟಾಗ ನಿರ್ಲಕ್ಷ್ಯದ ಮುಖಭಾವ ಹೊತ್ತುಕೊಂಡಿದ್ದರು. ಈಗ ಸುಪ್ರೀಂ ಕೋರ್ಟ್‌ ಮುರುತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ತರಾತುರಿಯಲ್ಲಿ ಕಳಂಕಿತರನ್ನೊಳಗೊಂಡ ಎಸ್‌ಐಟಿ ತಂಡ ರಚನೆ ಮಾಡಿದ್ದು ಅನುಮಾನ ಮೂಡಿಸುತ್ತಿದೆ. “ಹೆಗ್ಗಡೆಯವರೊಂದಿಗೆ ನೂರು ಡಿ ಕೆ ಶಿವಕುಮಾರ್‌ ಇದ್ದಾರೆ” ಎಂಬ ತಮ್ಮ ವರ್ಷದ ಹಿಂದಿನ ಹೇಳಿಕೆಯನ್ನು ನಿಜ ಮಾಡಲು ಹೊರಟಿದ್ದಾರೆಯೇ ಸಿಎಂ? ಶಾಶ್ವತವಾಗಿ ಸೌಜನ್ಯಳ ಪ್ರಕರಣವನ್ನು ನೇತ್ರಾವತಿಯ ದಡದಲ್ಲಿಯೇ ಮುಚ್ಚಿ ಹಾಕುವ ದುಷ್ಟ ಸಾಹಸಕ್ಕೆ ಸ್ವತಃ ಕೈ ಹಾಕಿದರೇ? ಎಂಬ ಅನುಮಾನ ಸಹಜವಾಗಿಯೇ ಹುಟ್ಟುಕೊಂಡಿದೆ.

ಎರಡು ವಾರದ ಹಿಂದೆಯಷ್ಟೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸಾವಿರಾರು ಕೋಟಿ ರೂಪಾಯಿಯ ಯೋಜನೆಗಳನ್ನು ಘೋಷಿಸಿ ಅಲ್ಲಿನ ಮತಬ್ಯಾಂಕ್‌ಗೆ ಕೈ ಹಾಕುವ ಹಮ್ಮಸ್ಸಿನಲ್ಲಿರುವ ಡಿ ಕೆ ಶಿವಕುಮಾರ್‌ ಅದೇ ಜಿಲ್ಲೆಯ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸುವ ಪುಣ್ಯದ ಕಾರ್ಯ ಮಾಡಬೇಕು. ಇಂತಹ ಐತಿಹಾಸಿಕ ಪ್ರಕರಣವನ್ನು ಭೇದಿಸಿದ ಹೆಗ್ಗಳಿಕೆಗೆ ಪಾತ್ರರಾಗುವ ಉತ್ತಮ ಅವಕಾಶ ಬಂದಿದೆ ಎಂದು ಭಾವಿಸಿ ಸಮರ್ಥ ಪೊಲೀಸ್‌ ಅಧಿಕಾರಿಯ ಮುಂದಾಳತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದರೆ ಡಿ ಕೆ ಶಿವಕುಮಾರ್‌ ಹೆಸರು ದಾಖಲೆಯ ಪುಟ ಸೇರಲಿದೆ.

ರಾಜ್ಯದಲ್ಲಿ ಹಲವು ದಕ್ಷ, ನಿಷ್ಠಾವಂತ ಪೊಲೀಸ್‌ ಅಧಿಕಾರಿಗಳಿದ್ದರೂ ಸರ್ಕಾರ ಅಸಮರ್ಥ ಅಧಿಕಾರಿಗಳನ್ನು ನೇಮಕ ಮಾಡಿರುವುದು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಆಶಯಕ್ಕೆ ವಿರುದ್ಧವಾಗಿದೆ. ನಿಷ್ಪಕ್ಷಪಾತ, ಪಾರದರ್ಶಕ ತನಿಖೆ ನಡೆದು ಸೌಜನ್ಯ ಹಂತಕರಿಗೆ ಶಿಕ್ಷೆಯಾಗಬೇಕು ಎಂಬ ಸೌಜನ್ಯ ಪರ ಹೋರಾಟಗಾರರ ಹಲವು ವರ್ಷಗಳ ಹೋರಾಟಕ್ಕೆ ಮನ್ನಣೆ ಸಿಗಬೇಕು. ಸೌಜನ್ಯ ತಾಯಿ ಕುಸುಮಾವತಿಯವರ ಹದಿನಾಲ್ಕು ವರ್ಷಗಳ ಈ ಕಾನೂನು ಸಮರಕ್ಕೆ ಜಯ ಸಿಗಬೇಕು. ಅದಕ್ಕಾಗಿ ಈಗ ರಚನೆ ಮಾಡಿರುವ ಎಸ್‌ಐಟಿಯನ್ನು ಪುನರ್‌ ರಚನೆ ಮಾಡಬೇಕು. ಹಿರಿಯ ರ್ಯಾಂಕ್‌ನ ಅಧಿಕಾರಿಯನ್ನು ನೇಮಿಸಬೇಕು. ಕಳಂಕಿತ ಸದಸ್ಯರನ್ನು ತಂಡದಿಂದ ಕೈ ಬಿಡಬೇಕು. ಎಸ್‌ಐಟಿ ತನಿಖೆಯಲ್ಲಿ ಯಾವುದೇ ಪ್ರಭಾವ, ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು. ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರೆ ಅದರ ಹೆಗ್ಗಳಿಕೆ ಡಿ ಕೆ ಶಿವಕುಮಾರ್‌ ಸರ್ಕಾರಕ್ಕೆ ಸಲ್ಲಲಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧದ ಕರಾಳ ನೆರಳು: ರಷ್ಯಾ ಕನಸು ನಚ್ಚುನೂರಾಗಿ ಉಕ್ರೇನ್‌ನಲ್ಲಿ ಬಂಧಿಯಾದ ಭಾರತೀಯ ಯುವಕ!

ಉತ್ತಮ ಜೀವನ ರೂಪಿಸಿಕೊಳ್ಳಬೇಕು, ದೇಶ ವಿದೇಶ ಸುತ್ತಿ ಆರ್ಥಿಕವಾಗಿ ಕುಟುಂಬವನ್ನು ಬೆಂಬಲಿಸಬೇಕು...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಮುಳುಗುತ್ತಿರುವ ಬ್ಯಾಂಕಾಕ್: 50 ಜಿಲ್ಲೆಗಳಲ್ಲಿ ‘ವಿಪತ್ತು’ ಘೋಷಣೆ, ಸ್ತಬ್ಧಗೊಂಡ ಜನಜೀವನ

ಸತತ ಮಳೆಯಿಂದಾಗಿ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಅಕ್ಷರಶಃ ಜಲಾವೃತಗೊಂಡಿದ್ದು, ನಗರದ ಎಲ್ಲಾ...